Sunday , February 17 2019
ಕೇಳ್ರಪ್ಪೋ ಕೇಳಿ
Home / Film News / ದೇವರೇ… ಈ ಸ್ಥಿತಿ ಶತ್ರುಗೂ ಬರಬಾರದು…

ದೇವರೇ… ಈ ಸ್ಥಿತಿ ಶತ್ರುಗೂ ಬರಬಾರದು…

ತಿರುವನಂತಪುರಂ : ಮದ್ವೆಯಾಗಿ 16 ವರ್ಷದ ಬಳಿಕ ಮಗಳು ಹುಟ್ಟಿದಳು… ಆ ಕಂದನೀಗ ಬದುಕಿಲ್ಲ… ನೆಚ್ಚಿದ ಪತಿಯೂ ಸಾವಿಗೀಡಾಗಿದ್ದಾರೆ… ಆದರೆ, ಆ ಅಮಾಯಕ ಗೃಹಿಣಿಗೆ ಇದ್ಯಾವುದೂ ಗೊತ್ತಿಲ್ಲ. ಕಾರಣ, ಅವರೂ ಪ್ರಜ್ಞೆ ಕಳೆದುಕೊಂಡಿದ್ದಾರೆ…! ಇಬ್ಬರ ಅಂತ್ಯಕ್ರಿಯೆಯೂ ಮುಗಿದ್ದರೂ ಆ ಜೀವಕ್ಕೆ ವಿಷಯ ಗೊತ್ತಿಲ್ಲ…! ಅಯ್ಯೋ… ದೇವರೇ…

ಮೊನ್ನೆ ಖ್ಯಾತ ಸಂಗೀತ ಸಂಯೋಜಕ ಹಾಗೂ ಗಾಯಕ ಬಾಲಭಾಸ್ಕರ್ ಅವರು ಪ್ರಯಾಣಿಸುತ್ತಿದ್ದ ಕಾರು ಅಪಘಾತಕ್ಕೀಡಾಗಿತ್ತು. ಈ ಅಪಘಾತದಲ್ಲಿ ಅವರ 2 ವರ್ಷದ ಮುದ್ದು ಕಂದಮ್ಮ ತೇಜಸ್ವಿನಿ ಸ್ಥಳದಲ್ಲೇ ಸಾವನ್ನಪ್ಪಿದ್ದಳು. ಬಾಲಭಾಸ್ಕರ್ ಮತ್ತು ಪತ್ನಿ ಲಕ್ಷ್ಮೀ ಗಂಭೀರ ಸ್ಥಿತಿಯಲ್ಲಿದ್ದು ಆಸ್ಪತ್ರೆ ಸೇರಿದ್ದರು. ಆದರೆ, ಇದಾದ ಬಳಿಕ ಬಾಲಭಾಸ್ಕರ್ ಕೂಡಾ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದರು. ಆದರೆ, ಪಾಪದ ಲಕ್ಷ್ಮೀಗೆ ಮಗಳು ತೇಜಸ್ವಿನಿ ಮತ್ತು ಗಂಡ ಮೃತಪಟ್ಟ ವಿಷಯವೂ ಗೊತ್ತಿಲ್ಲ. ಇನ್ನು, ಕೊಂಚ ಪ್ರಜ್ಞೆ ಬಂದ ಬಳಿಕ ಲಕ್ಷ್ಮೀ ಮಗಳು ತೇಜಸ್ವಿನಿ ಬಗ್ಗೆಗೂ ವಿಚಾರಿಸಿದ್ದಾರೆ. ಆದರೆ, ಡಾಕ್ಟರ್ ಮಗಳು ಇನ್ನೊಂದು ಕೋಣೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ ಎಂದು ಹೇಳಿದ್ದರು. ಇದಾದ ಬಳಿಕ ಕೊಂಚ ಹೊತ್ತಲ್ಲೇ ಲಕ್ಷ್ಮಿ ಮತ್ತೆ ಪ್ರಜ್ಞೆ ಕಳೆದುಕೊಂಡಿದ್ದಾರೆ.

ತ್ರಿಶೂರ್ ದೇವಸ್ಥಾನದಿಂದ ಮರಳುತ್ತಿದ್ದ ವೇಳೆ ಇವರು ಪ್ರಯಾಣಿಸುತ್ತಿದ್ದ ಕಾರು ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿಯಾಗಿತ್ತು. ಇನ್ನು, ಮಗಳು ತೇಜಸ್ವಿನಿ ಈ ದಂಪತಿಗೆ 16 ವರ್ಷದ ಬಳಿಕ ಹುಟ್ಟಿದ್ದಳು… ಇನ್ನು, ಗಂಡ ಮತ್ತು ಮಗಳು ಸಾವನ್ನಪ್ಪಿರುವ ವಿಷಯ ಈಗಲೇ ತಿಳಿದರೆ ಲಕ್ಷ್ಮೀಗೆ ಇನ್ನಷ್ಟು ಆಘಾತ ಆಗಬಹುದೆಂಬ ಕಾರಣಕ್ಕೆ ಇದನ್ನು ಮುಚ್ಚಿಟ್ಟಿದ್ದಾರೆ. ಸದ್ಯ ಇವರ ಆರೋಗ್ಯ ಸುಧಾರಣೆ ಆಗ್ತಿದೆ ಎಂದು ವೈದ್ಯರು ಹೇಳಿದ್ದಾರೆ.

About sudina

Check Also

ಹಿರಿಯ ನಟ ಲೋಕನಾಥ್ ವಿಧಿವಶ

ಬೆಂಗಳೂರು : ಕನ್ನಡ ಚಿತ್ರರಂಗದ ಹಿರಿಯ ನಟ ಲೋಕನಾಥ್ ವಿಧಿವಶರಾಗಿದ್ದಾರೆ. ಅಂಕಲ್ ಲೋಕನಾಥ್ ಎಂದೇ ಖ್ಯಾತರಾಗಿದ್ದ ಲೋಕನಾಥ್ ವಯೋಸಹಜ ಅನಾರೋಗ್ಯದಿಂದ …

Leave a Reply

Your email address will not be published. Required fields are marked *

error: Content is protected !!