Thursday , October 18 2018
ಕೇಳ್ರಪ್ಪೋ ಕೇಳಿ
Home / Film News / ಕ್ಯಾನ್ಸರ್ ನಿಂದ ಬಳಲುತ್ತಿದ್ದಾರಾ ಈ ಹಿರಿಯ ನಟ…?

ಕ್ಯಾನ್ಸರ್ ನಿಂದ ಬಳಲುತ್ತಿದ್ದಾರಾ ಈ ಹಿರಿಯ ನಟ…?

ಮುಂಬೈ : ಬಾಲಿವುಡ್ ನಟಿ ಸೋನಾಲಿ ಬೇಂದ್ರೆ ಕ್ಯಾನ್ಸರ್‍ನಿಂದ ಬಳಲುತ್ತಿರುವ ವಿಷಯಕ್ಕೆ ಇಡೀ ಚಿತ್ರರಂಗವೇ ಶಾಕ್ ಆಗಿತ್ತು. ಇದೀಗ, ಮತ್ತೋರ್ವ ಹಿರಿಯ ನಟ ರಿಶಿ ಕಪೂರ್ ಕೂಡಾ ಕ್ಯಾನ್ಸರ್‍ನಿಂದ ಬಳಲುತ್ತಿದ್ದಾರೆ ಎಂದು ಹೇಳಲಾಗುತ್ತಿದೆ… ಅನಾರೋಗ್ಯದಿಂದ ಬಳಲುತ್ತಿರುವ ರಿಶಿ ಕಪೂರ್ ಸದ್ಯ ಅಮೇರಿಕಾದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೊನ್ನೆಯಷ್ಟೇ ರಿಶಿ ತಾನು ಚಿಕಿತ್ಸೆಗೆ ಅಮೇರಿಕಾಕ್ಕೆ ಹೋಗುತ್ತಿದ್ದು, ಶೀಘ್ರ ಮರಳುತ್ತೇನೆ ಎಂದು ಹೇಳಿದ್ದರು. ಆದರೆ, ಎರಡು ದಿನಗಳ ಹಿಂದಷ್ಟೇ ಇವರ ತಾಯಿ ಕೃಷ್ಣ ರಾಜ್ ಕಪೂರ್ ಕೊನೆಯುಸಿರೆಳೆದಿದ್ದರು. ಆದರೆ, ರಿಷಿ ಮತ್ತು ಅವರ ಪತ್ನಿ ನೀತೂ ಸಿಂಗ್ ಪುತ್ರ ರಣಬೀರ್ ಕಪೂರ್ ಇವರ ಅಂತ್ಯಕ್ರಿಯೆಗೆ ಬಂದಿರಲಿಲ್ಲ. ಇದು ಸಾಕಷ್ಟು ಚರ್ಚೆ ಹುಟ್ಟು ಹಾಕಿತ್ತು. ಈ ನಡುವೆ, ಆನ್‍ಲೈನ್ ಪೋರ್ಟಲ್ ಒಂದು ರಿಶಿ ಕ್ಯಾನ್ಸರ್‍ನ ಮೂರನೇ ಹಂತದಲ್ಲಿದ್ದಾರೆ ಎಂದು ವರದಿ ಮಾಡಿದೆ.

ರಿಷಿ ಆಪ್ತ ವಲಯದ ಹೇಳಿಕೆಯನ್ನೇ ಈ ಮಾಧ್ಯಮ ಪ್ರಕಟಿಸಿದೆ. ಇದರಲ್ಲಿ ರಿಷಿ ಕ್ಯಾನ್ಸರ್‍ನಿಂದ ಬಳಲುತ್ತಿದ್ದು, ಕಿಮೋಥೆರಪಿ ಸೇರಿದಂತೆ ವಿವಿಧ ಚಿಕಿತ್ಸೆಗಾಗಿ 45 ಕಾಲ ಇಲ್ಲೇ ಇರುವಂತೆ ವೈದ್ಯರು ಸೂಚಿಸಿದ್ದಾರೆ ಎಂದು ಉಲ್ಲೇಖಿಸಲಾಗಿದೆ. ಇನ್ನೊಂದ್ಕಡೆ, ರಿಷಿ ಮತ್ತು ಜುಹೂ ಚಾವ್ಲಾ ಅಭಿನಯದ ಚಿತ್ರವೂ ಸ್ಥಗಿತಗೊಂಡಿದೆ. ನಿರ್ಮಾಪಕರಿಗೆ ರಿಷಿ ಬಿಟ್ಟು ಬೇರೆ ನಟನನ್ನು ಈ ಪಾತ್ರಕ್ಕೆ ಹಾಕಿಕೊಳ್ಳಲು ಇಷ್ಟ ಇಲ್ಲ. ಹೀಗಾಗಿ, ಈ ಪ್ರಾಜೆಕ್ಟ್ ಕೂಡಾ ಈಗ ನಿಂತಿದೆ.

About sudina

Check Also

ಮೀ ಟೂ ಬಿಸಿ : ಗಾಯಕ ರಘು ದೀಕ್ಷಿತ್ ವಿರುದ್ಧ ಆರೋಪ : ರಘು ಕ್ಷಮೆಯಾಚನೆ…!

ಬೆಂಗಳೂರು : ಮೀ ಟೂ ಅಭಿಯಾನದ ಬಿಸಿ ಈಗ ಖ್ಯಾತ ಗಾಯಕ ರಘು ದೀಕ್ಷಿತ್ ಅವರಿಗೂ ತಟ್ಟಿದೆ. ಗಾಯಕಿ ಚಿನ್ಮಯಿ …

Leave a Reply

Your email address will not be published. Required fields are marked *

error: Content is protected !!