ಬೆಂಗಳೂರು : ವಾರದ ಹಿಂದಷ್ಟೇ ಬಿಬಿಎಂಪಿ ಉಪಮೇಯರ್ ಪಟ್ಟಕ್ಕೇರಿದ್ದ ರಮೀಳಾ ಉಮಾಶಂಕರ್ ವಿಧಿವಶರಾಗಿದ್ದಾರೆ. ನಿನ್ನೆಯಷ್ಟೇ ಚುರುಕು ಚುರುಕಾಗಿ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದ ರಮೀಳಾ ಅವರಿಗೆ ತಡರಾತ್ರಿ ಎದೆನೋವು ಕಾಣಿಸಿಕೊಂಡಿತ್ತು. ತಕ್ಷಣ ಇವರನ್ನು ಬೆಂಗಳೂರಿನ ಪಶ್ಚಿಮ ಕಾರ್ಡ್ ರಸ್ತೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯ್ತು. ಆದರೆ, ಇಲ್ಲಿ ಇವರು ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ.
2015ರ ಬಿಬಿಎಂಪಿ ಚುನಾವಣೆಯಲ್ಲಿ ಕಾವೇರಿಪುರ ವಾರ್ಡ್ನಿಂದ ಜೆಡಿಎಸ್ನಿಂದ ಸ್ಪರ್ಧಿಸಿ ಗೆದ್ದಿದ್ದ ರಮೀಳಾ ಕಳೆದ ವಾರವಷ್ಟೇ ಉಪ ಮೇಯರ್ ಸ್ಥಾನಕ್ಕೇರಿದ್ದರು. ಇನ್ನು, ರಮೀಳಾ ಅವರ ನಿಧನಕ್ಕೆ ಸಿಎಂ ಕುಮಾರಸ್ವಾಮಿ ಸೇರಿದಂತೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ. ಕುಟುಂಬಕ್ಕೂ ಸಾಂತ್ವಾನ ಹೇಳಿದ್ದಾರೆ.