Thursday , October 18 2018
ಕೇಳ್ರಪ್ಪೋ ಕೇಳಿ
Home / Film News / `ನಾನು ಮುಖ್ಯಮಂತ್ರಿ ಆದರೆ ನಟಿಸುವುದಿಲ್ಲ…’

`ನಾನು ಮುಖ್ಯಮಂತ್ರಿ ಆದರೆ ನಟಿಸುವುದಿಲ್ಲ…’

ಚೆನ್ನೈ : ತಮಿಳುನಾಡಿನಲ್ಲಿ ಈಗ ಸಿನಿಮಾ ನಟರು ರಾಜಕೀಯಕ್ಕೆ ಎಂಟ್ರಿ ಕೊಡುವ ಪರ್ವ ಶುರುವಾಗಿದೆ. ಈಗಾಗಲೇ ಹಲವು ನಟರು ಇಲ್ಲಿ ಸಕ್ರಿಯ ರಾಜಕಾರಣದಲ್ಲಿದ್ದಾರೆ. ಎಂಜಿಆರ್, ಕರುಣಾನಿಧಿ, ಜಯಲಲಿತಾ, ವಿಜಯ್ ಕಾಂತ್, ನೆಪೋಲಿಯನ್, ಶರತ್ ಕುಮಾರ್ ಹೀಗೆ ಪಟ್ಟಿ ಮಾಡುತ್ತಾ ಹೋದರೆ ಆ ಪಟ್ಟಿಯೇ ದೊಡ್ಡದಿದೆ… ಇತ್ತೀಚೆಗಷ್ಟೇ ಸೂಪರ್ ಸ್ಟಾರ್‍ಗಳಾದ ರಜನಿಕಾಂತ್ ಮತ್ತು ಕಮಲ್ ಹಾಸನ್ ಕೂಡಾ ರಾಜಕೀಯಕ್ಕೆ ಎಂಟ್ರಿ ಕೊಟ್ಟಿದ್ದರು. ಇದೀಗ ಇನ್ನೋರ್ವ ನಟನ ಸರದಿ… ನಟ ವಿಜಯ್ ಕೂಡಾ ತಾನು ರಾಜಕೀಯಕ್ಕೆ ಬರುವ ಸುಳಿವು ಕೊಟ್ಟಿದ್ದಾರೆ.

ತಮ್ಮ ಸರ್ಕಾರ್ ಚಿತ್ರದ ಆಡಿಯೋ ಲಾಂಚ್ ವೇಳೆ ಮಾತನಾಡಿದ ವಿಜಯ್, ತನಗೆ ಮುಖ್ಯಮಂತ್ರಿ ಆಗುವ ಆಸೆ ಇದೆ ಎಂದು ಹೇಳಿದ್ದಾರೆ. ನಾನು ಈ ಚಿತ್ರದಲ್ಲಿ ಮುಖ್ಯಮಂತ್ರಿ ಆಗಿ ನಟಿಸಿಲ್ಲ. ಆದರೆ, ನಿಜ ಜೀವನದಲ್ಲಿ ನಾನು ಮುಖ್ಯಮಂತ್ರಿ ಆದರೆ ಮತ್ತೆ ಎಂದೂ ನಟಿಸುವುದಿಲ್ಲ ಎಂದು ಇವರು ಹೇಳಿದ್ದು, ಈಗ ಹೊಸ ಚರ್ಚೆಯನ್ನು ಹುಟ್ಟುಹಾಕಿದೆ. ಸರ್ಕಾರ್ ಚಿತ್ರವನ್ನು ಮುರುಘಾದಾಸ್ ನಿರ್ದೇಶನ ಮಾಡುತ್ತಿದ್ದು, ಎ.ಆರ್.ರೆಹಮಾನ್ ಸಂಗೀತ ನೀಡಿದ್ದಾರೆ.

About sudina

Check Also

ಮೀ ಟೂ ಬಿಸಿ : ಗಾಯಕ ರಘು ದೀಕ್ಷಿತ್ ವಿರುದ್ಧ ಆರೋಪ : ರಘು ಕ್ಷಮೆಯಾಚನೆ…!

ಬೆಂಗಳೂರು : ಮೀ ಟೂ ಅಭಿಯಾನದ ಬಿಸಿ ಈಗ ಖ್ಯಾತ ಗಾಯಕ ರಘು ದೀಕ್ಷಿತ್ ಅವರಿಗೂ ತಟ್ಟಿದೆ. ಗಾಯಕಿ ಚಿನ್ಮಯಿ …

Leave a Reply

Your email address will not be published. Required fields are marked *

error: Content is protected !!