Sunday , February 17 2019
ಕೇಳ್ರಪ್ಪೋ ಕೇಳಿ
Home / Film News / ಹೆಬ್ಬಾವಿನೊಂದಿಗೆ ಕಾಜಲ್ ಸರಸ… : ಇಲ್ಲಿದೆ ವೀಡಿಯೋ

ಹೆಬ್ಬಾವಿನೊಂದಿಗೆ ಕಾಜಲ್ ಸರಸ… : ಇಲ್ಲಿದೆ ವೀಡಿಯೋ

ಹೈದರಾಬಾದ್ : ಹಾವು ಅಂದರೆ ಎಲ್ಲರೂ ಭಯಬೀಳ್ತಾರೆ. ಇದರಲ್ಲಿ ದೊಡ್ಡವರು ಚಿಕ್ಕವರು ಎಂಬ ಬೇಧ ಇಲ್ಲವೇ ಇಲ್ಲ. ಅದರಲ್ಲೂ 10 ರಿಂದ 25 ಮೀಟರ್ ಉದ್ದದ ಹಾವನ್ನು ಕಂಡಾಗಂತೂ ಹೃದಯಬಡಿತವೇ ನಿಂತಂತಾಗುತ್ತದೆ. ಆದರೆ, ವಾಸ್ತವವಾಗಿ ಹಾವುಗಳನ್ನು ಅವುಗಳ ಪಾಡಿಗೆ ಬಿಟ್ಟರೆ ಅವುಗಳು ಅಪಾಯಕಾರಿ ಅಲ್ಲ. ಆದರೆ, ಮನುಷ್ಯನ ಮಧ್ಯಪ್ರವೇಶದಿಂದಲೇ ಹಾವುಗಳು ಕೆಲವೊಂದು ಸಂದರ್ಭದಲ್ಲಿ ಅಪಾಯಕಾರಿಯಾಗಿ ಪರಿಣಮಿಸುತ್ತವೆ. ಹೆಬ್ಬಾವು, ನಾಗಹಾವು, ಕಾಳಿಂಗ ಹೀಗೆ ಯಾವ ಹಾವನ್ನೂ ಸರಿಯಾದ ರೀತಿಯಲ್ಲಿ ಮನುಷ್ಯ ಹಿಡಿದುಕೊಂಡರೆ ಅವುಗಳು ಏನೂ ಮಾಡೋದಿಲ್ಲ. ಹಾವನ್ನು ಹಿಡಿದುಕೊಂಡವರಿಗೆ ಇದರ ಅನುಭವ ಹೇಗಿರುತ್ತದೆ ಎಂದು ಗೊತ್ತಿರುತ್ತದೆ.

ಇದೀಗ ನಟಿ ಕಾಜಲ್ ಅಗರ್‍ವಾಲ್ ಹೆಬ್ಬಾವನ್ನು ಹಿಡಿದು ಎಂಜಾಯ್ ಮಾಡಿದ್ದಾರೆ. ಆರಂಭದಲ್ಲಿ ಹಾವಿನ ಬಗ್ಗೆ ಭೀತಿಗೊಂಡಿದ್ದ ಕಾಜಲ್ ಈಗ ಅದೇ ಹಾವನ್ನು ಹಿಡಿದುಕೊಂಡು ಖುಷಿ ಅನುಭವಿಸಿದ್ದಾರೆ. ಥೈಲ್ಯಾಂಡ್‍ನಲ್ಲಿ ಶೂಟಿಂಗ್ ವೇಳೆ ಕಾಜಲ್ ಹಾವಿನೊಂದಿಗೆ ಸರಸವಾಡಿದ್ದಾರೆ. ಸದ್ಯ ಈ ವೀಡಿಯೋ ಸಖತ್ ವೈರಲ್ ಆಗುತ್ತಿದೆ.

About sudina

Check Also

ಹಿರಿಯ ನಟ ಲೋಕನಾಥ್ ವಿಧಿವಶ

ಬೆಂಗಳೂರು : ಕನ್ನಡ ಚಿತ್ರರಂಗದ ಹಿರಿಯ ನಟ ಲೋಕನಾಥ್ ವಿಧಿವಶರಾಗಿದ್ದಾರೆ. ಅಂಕಲ್ ಲೋಕನಾಥ್ ಎಂದೇ ಖ್ಯಾತರಾಗಿದ್ದ ಲೋಕನಾಥ್ ವಯೋಸಹಜ ಅನಾರೋಗ್ಯದಿಂದ …

Leave a Reply

Your email address will not be published. Required fields are marked *

error: Content is protected !!