Wednesday , December 12 2018
ಕೇಳ್ರಪ್ಪೋ ಕೇಳಿ
Home / Film News / ಸುತ್ತಿ ಬಳಸಿ ಕೊನೆಗೆ ರವೀನಾ ಬೈದದ್ದು ಅಕ್ಷಯ್‍ಗಾ…?

ಸುತ್ತಿ ಬಳಸಿ ಕೊನೆಗೆ ರವೀನಾ ಬೈದದ್ದು ಅಕ್ಷಯ್‍ಗಾ…?

ಮುಂಬೈ : ಕಳೆದ ವಾರ ನಟಿ ತನುಶ್ರೀ ದತ್ತಾ ನಟ ನಾನಾ ಪಟೇಕರ್ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದರು. ಇದು ಈಗಲೂ ಚರ್ಚೆ ಆಗ್ತಿದ್ದು, ಕೆಲವರು ತನುಶ್ರೀ ಪರವಾಗಿ ಮಾತನಾಡಿದರೆ, ಇನ್ನು ಅಮಿತಾಭ್, ಸಲ್ಮಾನ್ ಖಾನ್‍ರಂತಹ ನಟರು ಈ ಬಗ್ಗೆ ಪ್ರಕ್ರಿಯೆ ನೀಡೋದಕ್ಕೆ ನಿರಾಕರಿಸಿದ್ದಾರೆ. ಆದರೆ, ಫರಾನ್ ಅಖ್ತರ್, ಸೋನಂ ಕಪೂರ್, ಟ್ವಿಂಕಲ್ ಖನ್ನಾ ಸೇರಿದಂತೆ ಕೆಲವರು ಈ ಬಗ್ಗೆ ಮಾತನಾಡಿದ್ದಾರೆ. ಇದೀಗ ರವೀನಾ ಟಂಡನ್ ಕೂಡಾ ಟ್ವಿಟರ್‍ನಲ್ಲಿ ಈ ಬಗ್ಗೆ ಪ್ರತಿಕ್ರಿಯೆ ಕೊಟ್ಟಿದ್ದಾರೆ. ಆದರೆ, ರವೀನಾ ಕೊಟ್ಟ ಪ್ರತ್ರಿಕೆ ಈಗ ಟ್ರೋಲ್‍ಗೆ ಗುರಿಯಾಗಿದೆ.


ರವೀನಾ ಹೇಳಿದ್ದು : ಕೆಲಸದ ಜಾಗದಲ್ಲಿ ಕಿರುಕುಳವನ್ನು ವ್ಯಾಖ್ಯಾನಿಸುವುದು ಯಾವುದು…? ಬಹುತೇಕ ಸಂದರ್ಭದಲ್ಲಿ ಹಲವು ಇಂಟಸ್ಟ್ರಿಯಲ್ಲಿ ಪತ್ನಿ ಅಥವಾ ಗರ್ಲ್‍ಫ್ರೆಂಡ್ಸ್ ಇಂತಹ ಸಂದರ್ಭದಲ್ಲಿ ಮೂಕಪ್ರೇಕ್ಷಕರಾಗಿರುತ್ತಾರೆ ಎಂಬುದು ಸತ್ಯ. ಕೆಲವೊಮ್ಮೆ ನಟನಾಗಿರುವ ಗಂಡಂದಿರು ನಟಿ ಹಿಂದೆ ಬಿದ್ದು ಎಲ್ಲಾ ಮುಗಿದ ಮೇಲೆ ಕೆರಿಯರ್ ಅನ್ನೇ ಹಾಳು ಮಾಡಿರುತ್ತಾರೆ. ಬಳಿಕ ಇವರಿಂದ ದೂರವಾಗಿ ಇನ್ನೊಬ್ಬರನ್ನು ಟಾರ್ಗೆಟ್ ಮಾಡ್ತಾರೆ ಎಂಬ ಅರ್ಥದಲ್ಲಿ ರವೀನಾ ಟ್ವೀಟ್ ಮಾಡಿದ್ದರು.


ರವೀನಾ ಹೀಗೆ ಟ್ವೀಟ್ ಮಾಡಿದ ಸ್ವಲ್ಪ ಹೊತ್ತರಲ್ಲೇ ಇದು ಹಲ್‍ಚಲ್ ಎಬ್ಬಿಸಿತ್ತು. ಯಾಕೆಂದರೆ, ರವೀನಾ ಅಕ್ಷಯ್ ಕುಮಾರ್ ಮತ್ತು ಟ್ವಿಂಕಲ್ ಖನ್ನಾರನ್ನು ಗುರಿಯಾಗಿಸಿಯೇ ಈ ಟ್ವೀಟ್ ಮಾಡಿದ್ದಾರೆ ಎಂಬರ್ಥದಲ್ಲಿ ಕೆಲ ನೆಟ್ಟಿಗರು ಪ್ರತಿಕ್ರಿಯಿಸಿದ್ದರು. ಯಾಕೆಂದರೆ, ಅಕ್ಷಯ್ ಟ್ವಿಂಕಲ್‍ರನ್ನು ಮದ್ವೆಯಾಗೋ ಮುಂಚೆ ರವೀನಾ ಜೊತೆ ಡೇಟಿಂಗ್ ಮಾಡುತ್ತಿದ್ದರು. ಹೀಗಾಗಿ, ಹಲವರು ರವೀನಾರನ್ನು ಟ್ವೀಟ್ ಮೂಲಕವೇ ಕಾಲೆಳೆದಿದ್ದಾರೆ. (Read Also : ಅಕ್ಷಯ್‍ಗಾಗಿ ಜೀವವನ್ನೇ ಕೊಡಲು ಸಿದ್ಧವಾಗಿದ್ದ ರವೀನಾ ಆ ಒಂದು ಕಾರಣಕ್ಕೆ ದೂರವಾಗಿದ್ದರು. ಅಕ್ಕಿ ವಿರುದ್ಧವೇ ಸಿಡಿದೆದ್ದರು…)


ಇದಾದ ಬಳಿಕ ಮತ್ತೆ ಟ್ವಿಟರ್‍ನಲ್ಲಿ ರವೀನಾ ಇದಕ್ಕೆ ಖಾರವಾಗಿಯೇ ಪ್ರಕ್ರಿಯೆ ಕೊಟ್ಟಿದ್ದು, ಕೆಲವರು ನಾನು ಏನು ಹೇಳಿದ್ದೇನೆ ಎಂಬುದನ್ನು ಸರಿಯಾಗಿ ಅರ್ಥ ಮಾಡಿಕೊಂಡಿಲ್ಲ. ನನ್ನ ಮಾತು ಬರೀ ನನ್ನ ಬದುಕಿಗೆ ಸೀಮಿತವಾಗಿದ್ದಲ್ಲ. ನನ್ನ ಕ್ಷೇತ್ರದಲ್ಲಿ ಮಹಿಳೆಯರ ಮೇಲೆ ಏನೇನಾಗಿದೆ ಎಂಬುದನ್ನು ನೋಡಿದ ಆಧಾರದ ಮೇಲೆ ನಾನು ಹೇಳಿದ್ದು. ಹೀಗಾಗಿ, ವೈಯಕ್ತಿಕವಾಗಿ ಯಾರೋ ಒಬ್ಬರನ್ನು ಟಾರ್ಗೆಟ್ ಮಾಡ್ಬೇಡಿ ಎಂದು ರವೀನಾ ಹೇಳಿಕೊಂಡಿದ್ದಾರೆ.

About sudina

Check Also

ಕಾಂಪ್ರಮೈಸ್ ಪ್ರಶ್ನೆಯೇ ಇಲ್ಲ : ಅರ್ಜುನ್ – ಕ್ಷಮೆ ಕೇಳೋಲ್ಲ : ಶ್ರುತಿ…

ಬೆಂಗಳೂರು : ಸ್ಯಾಂಡಲ್‍ವುಡ್‍ನಲ್ಲಿ ಎದ್ದಿರುವ ಮೀ ಟೂ ಬಿರುಗಾಳಿ ಸದ್ಯಕ್ಕೆ ತಣ್ಣಗಾಗುವ ಲಕ್ಷಣ ಕಾಣುತ್ತಿಲ್ಲ. ಆ್ಯಕ್ಷನ್ ಕಿಂಗ್ ಅರ್ಜುನ್ ಸರ್ಜಾ …

Leave a Reply

Your email address will not be published. Required fields are marked *

error: Content is protected !!