Thursday , October 18 2018
ಕೇಳ್ರಪ್ಪೋ ಕೇಳಿ
Home / Sudina Special / ನನಗಿಂತ ಮೊದ್ಲು ನನ್ನ ಗೊಂಬೆಯ ಆಪರೇಷನ್ ಮಾಡಿ : ಬಾಲಕನ ಆಸೆಗೆ ಓಕೆ ಅಂದ ಡಾಕ್ಟರ್ ಈಗ ಹೀರೋ

ನನಗಿಂತ ಮೊದ್ಲು ನನ್ನ ಗೊಂಬೆಯ ಆಪರೇಷನ್ ಮಾಡಿ : ಬಾಲಕನ ಆಸೆಗೆ ಓಕೆ ಅಂದ ಡಾಕ್ಟರ್ ಈಗ ಹೀರೋ

ನವದೆಹಲಿ : ಇದೊಂದು ಹೃದಯಸ್ಪರ್ಶಿ ಘಟನೆ. ತಜ್ಞ ವೈದ್ಯರೊಬ್ಬರು ಪುಟಾಣಿ ಬಾಲಕನ ಆಸೆಯನ್ನು ನೆರವೇರಿಸಿದ ಕ್ಷಣವಿದು. ಈ ಘಟನೆ ನಡೆದಿದ್ದು ಕೆನಡಾದಲ್ಲಿ. ನರಸಂಬಂಧಿ ಸಮಸ್ಯೆಯಿಂದ ಬಳಲುತ್ತಿದ್ದ 8 ವರ್ಷದ ಜಾಕ್ಸನ್ ಎಂಬ ಬಾಲಕನ ಶಸ್ತ್ರಚಿಕಿತ್ಸೆ ಆಗಬೇಕಾಗಿತ್ತು. ಈ ವೇಳೆ, ಬಾಲಕ ತನ್ನ ಟೆಡ್ಡಿಬೇರ್ ಅನ್ನೂ ಆಪರೇಷನ್ ಥಿಯೇಟರ್‍ಗೆ ತಂದಿದ್ದ. ಆಗ ನನಗಿಂತ ಮೊದ್ಲು ತನ್ನ ಗೊಂಬೆಗೆ ಶಸ್ತ್ರಚಿಕಿತ್ಸೆ ಮಾಡಿ ಎಂದು ವೈದ್ಯರ ಬಳಿ ಬಾಲಕ ಕೇಳಿಕೊಂಡಿದ್ದ. ಇದಕ್ಕೆ ಒಪ್ಪಿದ್ದರು ಕೆನಡಾದ ಪ್ರಖ್ಯಾತ ತಜ್ಞ ಡಾ.ಡೇನಿಯಲ್ ಮ್ಯಾಕ್ನೀಲಿ.


ಹೀಗಾಗಿ, ಬಾಲಕನ ಎದುರೇ ಗೊಂಬೆಗೆ ಶಸ್ತ್ರಚಿಕಿತ್ಸೆ ಮಾಡಿದರು. ಈ ಫೋಟೋವನ್ನು ಡಾಕ್ಟರ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. `ರೋಗಿಯೊಬ್ಬನ ಆಸೆಗೆ ನಾನು ಹೇಗೆ ಇಲ್ಲ ಎನ್ನಲಿ?’ ಎಂದು ಅವರು ಬರೆದುಕೊಂಡಿದ್ದಾರೆ. ಈ ಫೋಟೋ ಸಾಮಾಜಿಕ ಜಾಲತಾಣಕ್ಕೆ ಅಪ್‍ಲೋಡ್ ಆದ ಕೆಲವೇ ಕ್ಷಣಗಳಲ್ಲಿ ವೈರಲ್ ಆಗಿದೆ. ಹಲವರು ಈ ಫೋಟೋ ಶೇರ್ ಮಾಡಿದ್ರೆ, ಹಲವರು ಮೆಚ್ಚುಗೆ ಸೂಚಿಸಿದ್ದಾರೆ.

About sudina

Check Also

ಆಟೋ ಚಾಲಕರೂ ಹೆಲ್ಮೆಟ್ ಹಾಕೋಬೇಕಾ…? : ಹಾಕಿಲ್ಲಂತ ಫೈನ್ ಹಾಕಿದ್ದಾರೆ ಪುತ್ತೂರು ಪೊಲೀಸ್ರು…!

ಪುತ್ತೂರು : ಇದೊಂದು ಅಚ್ಚರಿಯ ಘಟನೆ. ತಕ್ಷಣಕ್ಕೆ ನಂಬುವುದಕ್ಕೂ ಅಸಾಧ್ಯ. ಆದರೆ, ಈ ಘಟನೆ ನಡೆದಿರೋದಂತೂ ಸತ್ಯ. ಟೂವೀಲರ್ ಚಾಲಕರಿಗೆ …

Leave a Reply

Your email address will not be published. Required fields are marked *

error: Content is protected !!