Thursday , October 18 2018
ಕೇಳ್ರಪ್ಪೋ ಕೇಳಿ
Home / Film News / ಮತ್ತೆ ಬ್ರೂಸ್ಲಿ ವೈಭವ : ಕನ್ನಡಿಗ ಯಜ್ಞೇಶ್ ಶೆಟ್ಟಿ ಕೈಯಲ್ಲಿ ಅರಳುತ್ತಿದೆ ಹಾಲಿವುಡ್ ಫಿಲಂ…

ಮತ್ತೆ ಬ್ರೂಸ್ಲಿ ವೈಭವ : ಕನ್ನಡಿಗ ಯಜ್ಞೇಶ್ ಶೆಟ್ಟಿ ಕೈಯಲ್ಲಿ ಅರಳುತ್ತಿದೆ ಹಾಲಿವುಡ್ ಫಿಲಂ…

ಮಂಗಳೂರು : ಸಮರಕಲೆಗಳ ವೀರ ಬ್ರೂಸ್ಲಿ ಅಂದರೆ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ…? 60 -70ರ ದಶಕದಲ್ಲಿ ಮಾರ್ಷಲ್ ಆಟ್ರ್ಸ್ ಮೂಲಕವೇ ಮನೋರಂಜನೆ ಮಹಾಪೂರವನ್ನು ಹರಿಸಿದವರು ಬ್ರೂಸ್ಲಿ. ಇವರು ಬದುಕಿದ್ದು ಬರೀ 32 ವರ್ಷ. ಇವರು ಕೊನೆಯುಸಿರೆಳೆದೇ 45 ವರ್ಷ ಆಗಿದೆ. ಆದರೂ ಇಂದಿಗೂ ಬ್ರೂಸ್ಲಿ ಅವ್ರನ್ನ ನೆನೆಯುವವರು ಇದ್ದಾರೆ. ಇದೇ ಇವರು ಗಳಿಸಿದ ಖ್ಯಾತಿಗೆ ಸಾಕ್ಷಿ… ಇದೀಗ, ಮತ್ತೆ ಬ್ರೂಸ್ಲಿ ವೈಭವ ತೆರೆಗೆ ಬರಲು ಸಜ್ಜಾಗಿದೆ. ಕನ್ನಡಿಗ ಚೀತಾ ಯಜ್ಞೇಶ್ ಶೆಟ್ಟಿ ಈಗ ದೊಡ್ಡ ಪ್ರಾಜೆಕ್ಟ್ ಅನ್ನು ಕೈಗೆತ್ತಿಕೊಂಡಿದ್ದಾರೆ. ಈಗಾಗಲೇ ಬಾಲಿವುಡ್, ಹಾಲಿವುಡ್‍ನಲ್ಲಿ ಸಾಧನೆ ಮಾಡಿರುವ ಯಜ್ಞೇಶ್ ಶೆಟ್ಟಿ ಈ ಬಾರಿ ತಮ್ಮದೇ ಮಾರ್ಷಲ್ ಆಟ್ರ್ಸ್ ಕ್ಷೇತ್ರದ ಕತೆಯನ್ನೇ ಕೈಗೆತ್ತಿಕೊಂಡು ಸಿನೆಮಾ ಮಾಡುತ್ತಿದ್ದಾರೆ. ಅದಕ್ಕೆ ಬ್ರೂಸ್ಲಿ ಅವರನ್ನೇ ಹೋಲುವ ಪಾತ್ರಧಾರಿಯನ್ನು ಯಜ್ಞೇಶ್ ಶೆಟ್ಟಿ ಹುಡುಕಿದ್ದಾರೆ. ಅಫ್ಘಾನಿಸ್ತಾನದ ಅಬ್ಬಾಸ್ ಅಲಿ ಎಂಬಾತ ಈ ಚಿತ್ರದಲ್ಲಿ ಪಾತ್ರ ನಿರ್ವಹಿಸುತ್ತಿದ್ದಾರೆ. ಅಬ್ಬಾಸ್ ಕೂಡಾ ಬ್ರೂಸ್ಲಿಯ ಪರಮ ಅಭಿಮಾನಿ. ಅವರನ್ನೇ ಹೋಲುವ ಇವರು ತಮ್ಮ ಹೆಸರನ್ನೂ ಅಬ್ ಲೀ ಎಂದು ಬದಲಾಯಿಸಿಕೊಂಡಿದ್ದಾರೆ. ಇನ್ನು, ರಷ್ಯಾದ ಅಲೀನಾ ಈ ಚಿತ್ರದ ನಾಯಕಿಯಾಗಿದ್ದಾರೆ. ಸೆಪ್ಟೆಂಬರ್ 19 ರಂದು ಈ ಚಿತ್ರದ ಮುಹೂರ್ತ ದುಬೈನ ಬುರ್ಜ್ ಖಲೀಫಾದಲ್ಲಿ ನಡೆದಿದೆ. ಈ ವೇಳೆ, ನಿರ್ಮಾಪಕ ರಾಕ್‍ಲೈನ್ ವೆಂಕಟೇಶ್ ಅವರೂ ಅತಿಥಿಯಾಗಿ ಪಾಲ್ಗೊಂಡಿದ್ದರು. 2019ರ ಫೆಬ್ರವರಿಯಲ್ಲಿ ಚಿತ್ರದ ಶೂಟಿಂಗ್ ಆರಂಭವಾಗಲಿದ್ದು, ವರ್ಷಾಂತ್ಯದಲ್ಲಿ ಚಿತ್ರ ರಿಲೀಸ್ ಆಗಲಿದೆ. 80 ರಿಂದ 100 ಕೋಟಿ ವೆಚ್ಚದಲ್ಲಿ ಈ ಚಿತ್ರ ನಿರ್ಮಿಸಲು ನಿರ್ಮಾಪಕರು ಸಿದ್ಧತೆ ಮಾಡಿಕೊಂಡಿದ್ದಾರೆ.

About sudina

Check Also

ಮೀ ಟೂ ಬಿಸಿ : ಗಾಯಕ ರಘು ದೀಕ್ಷಿತ್ ವಿರುದ್ಧ ಆರೋಪ : ರಘು ಕ್ಷಮೆಯಾಚನೆ…!

ಬೆಂಗಳೂರು : ಮೀ ಟೂ ಅಭಿಯಾನದ ಬಿಸಿ ಈಗ ಖ್ಯಾತ ಗಾಯಕ ರಘು ದೀಕ್ಷಿತ್ ಅವರಿಗೂ ತಟ್ಟಿದೆ. ಗಾಯಕಿ ಚಿನ್ಮಯಿ …

Leave a Reply

Your email address will not be published. Required fields are marked *

error: Content is protected !!