Tuesday , February 19 2019
ಕೇಳ್ರಪ್ಪೋ ಕೇಳಿ
Home / Film News / `ನಾನೇನಾದರೂ ಹೊಡೆದಿದ್ದರೆ ಐಶ್ವರ್ಯ ಬದುಕುತ್ತಲೇ ಇರಲಿಲ್ಲ…!’ : ಸಲ್ಲೂ ಹಳೇ ವೀಡಿಯೋ ಈಗ ವೈರಲ್

`ನಾನೇನಾದರೂ ಹೊಡೆದಿದ್ದರೆ ಐಶ್ವರ್ಯ ಬದುಕುತ್ತಲೇ ಇರಲಿಲ್ಲ…!’ : ಸಲ್ಲೂ ಹಳೇ ವೀಡಿಯೋ ಈಗ ವೈರಲ್

ಮುಂಬೈ : ಈಗ ಎಲ್ಲೆಲ್ಲೂ ಮೀಟೂ ಕ್ಯಾಂಪೇನ್ ಹಲ್‍ಚಲ್ ಎಬ್ಬಿಸಿದೆ. ಲೈಂಗಿಕ ದೌರ್ಜನ್ಯ, ಮಾನಸಿಕ ಕಿರುಕುಳದ ಪ್ರಕರಣಗಳಿಗೆ ಈಗ ಈ ಅಭಿಯಾನದ ಮೂಲಕ ಮತ್ತೆ ಜೀವ ಬರುತ್ತಿದೆ. ಈ ನಡುವೆ, ಸಲ್ಮಾನ್ ಖಾನ್ ಅವರ ಹಳೇ ವೀಡಿಯೋ ಕೂಡಾ ಈಗ ವೈರಲ್ ಆಗುತ್ತಿದೆ. ಸಲ್ಮಾನ್ ಐಶ್ವರ್ಯ ಬಚ್ಚನ್ (ಆಗಿನ ಐಶ್ವರ್ಯ ರೈ) ಬಗ್ಗೆ ಮಾತನಾಡಿರುವ ಈ ವೀಡಿಯೋ ಈಗ ಸಖತ್ ಸೌಂಡ್ ಮಾಡುತ್ತಿದೆ.

ಅದು ಸಲ್ಮಾನ್ ಮತ್ತು ಐಶ್ವರ್ಯ ಡೇಟಿಂಗ್ ಮಾಡುತ್ತಿದ್ದ ಸಂದರ್ಭದಲ್ಲಿ. ಇದಾದ ಬಳಿಕ ಈ ಜೋಡಿ ದೂರವಾಗಿತ್ತು. ಈ ವೇಳೆ, ಸಲ್ಮಾನ್ ಐಶ್ವರ್ಯ ಮೇಲೆ ಹಲ್ಲೆ ಮಾಡಿದ್ದರು ಎಂದು ಹೇಳಲಾಗುತ್ತಿತ್ತು. ಈ ಬಗ್ಗೆ ಮಾಧ್ಯಮದಲ್ಲಿ ಸಂದರ್ಶಕಿಯೊಬ್ಬರು ಸಲ್ಮಾನ್ ಬಳಿ ಕೇಳಿದ್ದರು. ಆಗ ಸಲ್ಮಾನ್ ನೀಡಿದ್ದ ಉತ್ತರ ಅಚ್ಚರಿ ಮೂಡಿಸುವಂತಿತ್ತು.


`ನಿಜ ಈಗ ಆಕೆ ಈ ಆರೋಪ ಮಾಡುತ್ತಿದ್ದಾರೆ. ಆದರೆ, ಇದಕ್ಕಿಂತ ಮುಂಚೆಯೇ ಈ ಪ್ರಶ್ನೆಯನ್ನು ಪತ್ರಕರ್ತ ಪ್ರಭು ಚೌವ್ಹಾ ಕೇಳಿದ್ದರು. ಆಗ ನಾನು ಎದುರಿಗಿದ್ದ ಟೇಬಲ್ ಒಮ್ಮೆ ಬಡಿದೆ. ಇದನ್ನು ಕಂಡು ಪ್ರಭು ದಂಗಾಗಿದ್ದರು. ಯಾಕೆಂದರೆ, ನಾನು ಬಡಿದ ರಭಸಕ್ಕೆ ಟೇಬಲ್ ಮುರಿದಿತ್ತು. ಅಂದರೆ, ನಾನು ಯಾರಿಗಾದರೂ ಹೊಡೆದಿದ್ದರೆ ಅದು ದೊಡ್ಡ ಫೈಟೇ ಆಗುತ್ತಿತ್ತು. ನಾನು ಕೋಪ ಬಂದಾಗ ಚೆನ್ನಾಗಿಯೇ ಬಾರಿಸುತ್ತೇನೆ. ಒಂದೊಮ್ಮೆ ನಾನು ಹೊಡೆದಿದ್ದರೆ ಆಕೆ ಬದುಕುತ್ತಲೂ ಇರಲಿಲ್ಲ…’ ಎಂದು ಸಲ್ಮಾನ್ ಮಾಧ್ಯಮದ ಮುಂದೆ ಹೇಳಿದ್ದರು. ಈ ಮಾತು ಈಗ ವೈರಲ್ ಆಗಿದೆ.

ಸಲ್ಮಾನ್ ಈ ಹೇಳಿಕೆ ನೀಡುವ ಮೊದಲು ಟೈಮ್ಸ್ ಆಫ್ ಇಂಡಿಯಾ ಐಶ್ವರ್ಯರನ್ನು ಸಂದರ್ಶನ ಮಾಡಿತ್ತು. ಈ ವೇಳೆ, ಐಶ್ವರ್ಯ ಸಲ್ಮಾನ್ ಖಾನ್ ವಿರುದ್ಧ ದೈಹಿಕ ಹಲ್ಲೆ ಆರೋಪ ಮಾಡಿದ್ದರು. `ನಮ್ಮಿಬ್ಬರ ಸಂಬಂಧ ಮುರಿದು ಬಿದ್ದ ನಂತರ ಒಂದು ದಿನ ಅವರು ಕರೆದು ಅಸಭ್ಯವಾಗಿ ಮಾತನಾಡಿದ್ದರು. ಈ ವೇಳೆ ಅವರು ನನ್ನ ಮೇಲೆ ಹಲ್ಲೆ ಮಾಡಿದ್ದರು. ಆದರೆ, ನಮ್ಮಿಬ್ಬರ ಸಂಬಂಧದ ಬಗ್ಗೆ ದೊಡ್ಡ ಗುರುತುಗಳನ್ನು ಮಾಡದೆ ನಾನು ನನ್ನ ಕೆಲಸದತ್ತ ಗಮನ ಕೇಂದ್ರೀಕರಿಸಿದ್ದೆ’ ಎಂದು ಐಶ್ವರ್ಯ ಹೇಳಿದ್ದರು.

1999ರಲ್ಲಿ `ಹಮ್ ದಿಲ್ ದೇ ಚುಕೇ ಸನಮ್’ ಚಿತ್ರದ ಶೂಟಿಂಗ್ ಸಂದರ್ಭದಲ್ಲಿ ಐಶ್ವರ್ಯ ಮತ್ತು ಸಲ್ಮಾನ್ ಪ್ರೀತಿಗೆ ಬಿದ್ದಿದ್ದರು. ಇವರ ಪ್ರೀತಿಯ ಸುದ್ದಿ ಆಗ ಸಖತ್ ಸೌಂಡ್ ಮಾಡಿತ್ತು. ಇದಾದ ಬಳಿಕ 2002ರಲ್ಲಿ ಈ ಜೋಡಿ ದೂರವಾಗಿತ್ತು.

About sudina

Check Also

ಹಿರಿಯ ನಟ ಲೋಕನಾಥ್ ವಿಧಿವಶ

ಬೆಂಗಳೂರು : ಕನ್ನಡ ಚಿತ್ರರಂಗದ ಹಿರಿಯ ನಟ ಲೋಕನಾಥ್ ವಿಧಿವಶರಾಗಿದ್ದಾರೆ. ಅಂಕಲ್ ಲೋಕನಾಥ್ ಎಂದೇ ಖ್ಯಾತರಾಗಿದ್ದ ಲೋಕನಾಥ್ ವಯೋಸಹಜ ಅನಾರೋಗ್ಯದಿಂದ …

Leave a Reply

Your email address will not be published. Required fields are marked *

error: Content is protected !!