ಬೆಂಗಳೂರು : ಮೀ ಟೂ ಅಭಿಯಾನದ ಬಿಸಿ ಈಗ ಖ್ಯಾತ ಗಾಯಕ ರಘು ದೀಕ್ಷಿತ್ ಅವರಿಗೂ ತಟ್ಟಿದೆ. ಗಾಯಕಿ ಚಿನ್ಮಯಿ ಶ್ರೀಪಾದ ಅವರು ಟ್ವಿಟರ್ನಲ್ಲಿ ರಘು ದೀಕ್ಷಿತ್ ಅವರ ಬಗ್ಗೆ ಆರೋಪ ಮಾಡಿದ್ದಾರೆ. ತನ್ನ ಸಹ ಗಾಯಕಿಗೆ ಆದ ಅನುಭವದ ಬರಹದ ಸ್ಕ್ರೀನ್ಶಾಟ್ ತೆಗೆದು ಹಾಕಿ ಚಿನ್ಮಯಿ ರಘು ವಿರುದ್ಧ ಆರೋಪದ ಸುರಿಮಳೆಗೈದಿದ್ದರು.
From a co-singer, a friend. I believe her.
Raghu Dixit – Your #TimesUP pic.twitter.com/gzgwy6Io9e— Chinmayi Sripaada (@Chinmayi) October 10, 2018
ಈ ಆರೋಪದಲ್ಲಿ ಸಹ ಗಾಯಕಿ ಹೇಳಿದ್ದ ಮಾತನ್ನು ಚಿನ್ಮಯಿ ಪುನರುಚ್ಛರಿಸಿದ್ದರು. `ನನ್ನ ಚೆಕ್ಗೆ ಸಹಿ ಹಾಕುವ ಸಂದರ್ಭದಲ್ಲಿ ರಘು ಅವರನ್ನು ನನ್ನನ್ನು ಬರಸೆಳೆದು ಕಿಸ್ ಕೊಡುವಂತೆ ಕೇಳಿದ್ದರು. ಅಲ್ಲದೆ, ನನ್ನನ್ನು ಮತ್ತೆ ಮತ್ತೆ ಹತ್ತಿರಕ್ಕೆ ಕರೆದಿದ್ದರು. ನಾನು ಅಳುತ್ತಾ ಅಲ್ಲಿಂದ ಹೋದೆ. ಇವರಿಂದ ಅನೇಕ ಹುಡುಗಿಯರು ಇಂತಹ ಕಷ್ಟ ಅನುಭವಿಸಿದ್ದಾರೆ’ ಎಂಬ ಬರಹವುಳ್ಳ ಸ್ಕ್ರೀನ್ ಶಾಟ್ ಅದಾಗಿತ್ತು.
Here is my detailed response to the anonymous statement against me. I apologise for any wrong doing on my part and will do what it takes to correct it.
I have complete faith in my integrity and I have been as true to myself as I can be with this response. pic.twitter.com/vHuNzQq6G0— Raghu Dixit (@Raghu_Dixit) October 10, 2018
ಈ ಆರೋಪದ ಬಗ್ಗೆ ರಘು ದೀಕ್ಷಿತ್ ಕ್ಷಮೆ ಕೇಳಿದ್ದಾರೆ. `ನನಗೆ ಆರೋಪ ಮಾಡಿದ ಮಹಿಳೆ ಯಾರೆಂದು ಗೊತ್ತಿದೆ. ನನ್ನ ಬಗ್ಗೆ ನನಗೆ ಗೊತ್ತಿದೆ. ಆದರೆ, ನನ್ನ ಕಡೆ ತಪ್ಪು ಆಗಿದ್ದರೆ ಅದಕ್ಕೆ ನಾನು ಕ್ಷಮೆ ಕೇಳುತ್ತೇನೆ ಮತ್ತು ಇನ್ನು ಮುಂದೆ ಹೀಗೆ ಆಗದಂತೆ ನೋಡಿಕೊಳ್ಳುತ್ತೇನೆ ಎಂದೂ ರಘು ದೀಕ್ಷಿತ್ ಹೇಳಿಕೊಂಡಿದ್ದಾರೆ.