Thursday , October 18 2018
ಕೇಳ್ರಪ್ಪೋ ಕೇಳಿ
Home / News NOW / ಟೆನಿಸ್ ಆಟಗಾರ್ತಿ ಎತ್ತರಕ್ಕೆ ಸರಿಸಮಾನವಾಗಲು ವಿರಾಟ್ ಸರ್ಕಸ್ : ವೀಡಿಯೋ ವೈರಲ್

ಟೆನಿಸ್ ಆಟಗಾರ್ತಿ ಎತ್ತರಕ್ಕೆ ಸರಿಸಮಾನವಾಗಲು ವಿರಾಟ್ ಸರ್ಕಸ್ : ವೀಡಿಯೋ ವೈರಲ್

ಮುಂಬೈ : ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ವೀಡಿಯೋ ಒಂದು ಈಗ ಸಖತ್ ವೈರಲ್ ಆಗುತ್ತಿದೆ. ಸಮಾರಂಭವೊಂದರಲ್ಲಿ ಭಾರತೀಯ ಟೆನಿಸ್ ಆಟಗಾರ್ತಿ ಕರ್ಮನ್ ಕೌರ್ ತಂಡಿ ಅವರ ಎತ್ತರಕ್ಕೆ ಸರಿಸಮಾನವಾಗಿ ನಿಲ್ಲಲು ಕೊಹ್ಲಿ ಮಾಡಿದ ಸರ್ಕಸ್ ಈಗ ಎಲ್ಲರ ನಗೆಯುಕ್ಕಿಸುತ್ತಿದೆ. ಕರ್ಮನ್ ಅವರಿಗಿಂತ ಎತ್ತರದಲ್ಲಿ ನಿಂತು ವಿರಾಟ್ ಇಲ್ಲಿ ಫೋಟೋಗೆ ಪೋಸ್ ಕೊಟ್ಟಿದ್ದಾರೆ. ಈ ದೃಶ್ಯ ಕಂಡು ಅಲ್ಲಿದ್ದವರೆಲ್ಲಾ ಒಂದು ಕ್ಷಣ ನಗೆಗಡಲಲ್ಲಿ ತೇಲಿದ್ದಾರೆ. ಜೊತೆಗೆ, ಈ ವೀಡಿಯೋ ಕೂಡಾ ವೈರಲ್ ಆಗುತ್ತಿದೆ. ಅಲ್ಲದೆ, ಕರ್ಮನ್ ಕೂಡಾ ಈ ವೀಡಿಯೋ ಶೇರ್ ಮಾಡಿದ್ದು, ವಿರಾಟ್ ಅವರ ಬಗ್ಗೆ ಮೆಚ್ಚುಗೆಯ ನುಡಿಗಳನ್ನಾಡಿದ್ದಾರೆ.

ಇನ್ನು, ಕೆಲ ನೆಟ್ಟಿಗರು ವಿರಾಟ್ ಕಳೆದಿದ್ದಾರೆ. ವಿರಾಟ್ ಈ ನಡೆ ಈಗ ಟ್ರೋಲ್‍ಗೂ ಆಹಾರವಾಗಿದೆ.

About sudina

Check Also

ಗುಂಡಿನ ದಾಳಿಗೆ ವ್ಯಕ್ತಿ ಬಲಿ : ರಾಜಕೀಯ ವೈಷಮ್ಯ ಶಂಕೆ

ಮಡಿಕೇರಿ : ಇಲ್ಲಿನ ಮರಗೋಡು ಗ್ರಾಮದಲ್ಲಿ ವ್ಯಕ್ತಿ ಮೇಲೆ ಗುಂಡಿನ ದಾಳಿ ನಡೆದಿದೆ. ಈ ದಾಳಿಗೆ ಕಾನಡ್ಕ ತಿಲಕ್ ರಾಜ್(35) …

Leave a Reply

Your email address will not be published. Required fields are marked *

error: Content is protected !!