Thursday , October 18 2018
ಕೇಳ್ರಪ್ಪೋ ಕೇಳಿ
Home / Film News / `ಸೈರಾ’ದಲ್ಲಿ ಹೀಗೆ ಕಾಣಿಸಲಿದ್ದಾರೆ ಕಿಚ್ಚ ಮತ್ತು ಬಿಗ್ ಬಿ…

`ಸೈರಾ’ದಲ್ಲಿ ಹೀಗೆ ಕಾಣಿಸಲಿದ್ದಾರೆ ಕಿಚ್ಚ ಮತ್ತು ಬಿಗ್ ಬಿ…

ಹೈದರಾಬಾದ್ : ಮೆಗಾಸ್ಟಾರ್ ಚಿರಂಜೀವಿ ಅಭಿನಯದ ಬಹುನಿರೀಕ್ಷಿತ `ಸೈರಾ’ ಚಿತ್ರ ಈಗಾಗಲೇ ಅಭಿಮಾನಿಗಳನ್ನು ತುದಿಗಾಲಲ್ಲಿ ನಿಲ್ಲಿಸಿದೆ. ಬಹುತಾರಾಗಣದ ಬಿಗ್‍ಬಜೆಟ್ ಚಿತ್ರ ಇದಾಗಿದೆ. ಈ ಚಿತ್ರದಲ್ಲಿ ಕಿಚ್ಚ ಸುದೀಪ್ ಕೂಡಾ ಅಭಿನಯಿಸಿದ್ದಾರೆ. ಇದರಲ್ಲಿ ಸುದೀಪ್ ಲುಕ್ ಈಗ ರಿವೀಲ್ ಆಗಿದೆ.
ತಮಿಳಿನ ಖ್ಯಾತ ನಟ ವಿಜಯ್ ಸೇತುಪತಿ ಜೊತೆಗಿನ ಕಿಚ್ಚ ಫೋಟೋ ಅಭಿಮಾನಿಗಳ ಗಮನ ಸೆಳೆದಿದೆ. ರಜನಿಕಾಂತ್ ಜೊತೆಗಿನ ಪೆಟ್ಟಾ ಚಿತ್ರ ಮುಗಿಸಿರುವ ವಿಜಯ್ ಈಗ ಸೈರಾ ಟೀಮ್ ಸೇರಿದ್ದಾರೆ. ಇದೀಗ ಸುದೀಪ್ ಮತ್ತು ವಿಜಯ್ ಪಾತ್ರದ ತುಂಬಾ ಸೂಕ್ಷ್ಮವಾದ ಚಿತ್ರೀಕರಣ ನಡೆಯುತ್ತಿದೆ. ದೇಶಪ್ರೇಮಿ ನರಸಿಂಹ ರೆಡ್ಡಿಯ ಆಪ್ತನ ಪಾತ್ರವನ್ನು ವಿಜಯ್ ನಿರ್ವಹಿಸುತ್ತಿದ್ದಾರೆ. ಕಿಚ್ಚ ಸುದೀಪ್ ಅಕುವ ರಾಜಾನ ಪಾತ್ರದಲ್ಲಿ ಮಿಂಚುತ್ತಿದ್ದಾರೆ. ಇನ್ನು, ಈ ಚಿತ್ರದಲ್ಲಿ ಬಿಗ್ ಬಿ ಅಮಿತಾಭ್ ಅವರು ಕೋಸಾಯಿ ವೆಂಕಣ್ಣ ಎಂಬ ರಾಜಗುರುವಿನ ಪಾತ್ರದಲ್ಲಿ ಮಿಂಚುತ್ತಿದ್ದಾರೆ. ಉಯ್ಯಾಲವಾಡ ನರಸಿಂಹ ರೆಡ್ಡಿ ಎಂಬ ಸಾಹಸಿಯ ಪರಮಗುರುವಿನ ಪಾತ್ರವಿದು. ಅಮಿತಾಭ್ ಅವರ 76ನೇ ವರ್ಷದ ಹುಟ್ಟುಹಬ್ಬದ ಖುಷಿಯಲ್ಲಿ ಈ ಚಿತ್ರದ ಫಸ್ಟ್‍ಲುಕ್ ರಿಲೀಸ್ ಆಗಿದೆ.

About sudina

Check Also

`ನಾನೇನಾದರೂ ಹೊಡೆದಿದ್ದರೆ ಐಶ್ವರ್ಯ ಬದುಕುತ್ತಲೇ ಇರಲಿಲ್ಲ…!’ : ಸಲ್ಲೂ ಹಳೇ ವೀಡಿಯೋ ಈಗ ವೈರಲ್

ಮುಂಬೈ : ಈಗ ಎಲ್ಲೆಲ್ಲೂ ಮೀಟೂ ಕ್ಯಾಂಪೇನ್ ಹಲ್‍ಚಲ್ ಎಬ್ಬಿಸಿದೆ. ಲೈಂಗಿಕ ದೌರ್ಜನ್ಯ, ಮಾನಸಿಕ ಕಿರುಕುಳದ ಪ್ರಕರಣಗಳಿಗೆ ಈಗ ಈ …

Leave a Reply

Your email address will not be published. Required fields are marked *

error: Content is protected !!