Tuesday , April 23 2019
ಕೇಳ್ರಪ್ಪೋ ಕೇಳಿ
Home / Film News / 850 ರೈತರ ಲೋನ್ ಪಾವತಿಸಲಿರುವ ಬಿಗ್‍ಬಿ : ಥ್ಯಾಂಕ್ಯೂ ಸಾರ್…

850 ರೈತರ ಲೋನ್ ಪಾವತಿಸಲಿರುವ ಬಿಗ್‍ಬಿ : ಥ್ಯಾಂಕ್ಯೂ ಸಾರ್…

ಮುಂಬೈ : ದೇಶಾದ್ಯಂತ ರೈತರು ಸಂಕಷ್ಟದಲ್ಲಿದ್ದಾರೆ. ಸಾಲ ಸೋಲ ಮಾಡಿ ಜೀವನ ನಿರ್ವಹಣೆ ಮಾಡುತ್ತಿದ್ದಾರೆ. ಇದೀಗ ಇಂತಹ ರೈತರ ಕಿಂಚಿತ್ತು ನೆರವಿಗೆ ಬಾಲಿವುಡ್ ನಟ ಅಮಿತಾಭ್ ಬಚ್ಚನ್ ಮುಂದೆ ಬಂದಿದ್ದಾರೆ. ಉತ್ತರ ಪ್ರದೇಶದ 850 ರೈತರ ಸಾಲ ತಾನು ತೀರಿಸೋದಾಗಿ ಅಮಿತಾಭ್ ಹೇಳಿಕೊಂಡಿದ್ದಾರೆ. ಈ ರೈತರನ್ನು ಗುರುತಿಸಲಾಗಿದ್ದು, ಇವರು ಸುಮಾರು 5.5 ಕೋಟಿ ರೂಪಾಯಿಯ ಸಾಲದ ಹೊರೆಯನ್ನು ತಾನು ಹೊರುವುದಾಗಿ ಬಾಲಿವುಡ್ ಸ್ಟಾರ್ ಹೇಳಿಕೊಂಡಿದ್ದಾರೆ. ರೈತರ ಕಷ್ಟದ ಬಗ್ಗೆ ತನ್ನ ಬ್ಲಾಗ್‍ನಲ್ಲಿ ಬರೆದುಕೊಂಡಿರುವ ಬಿಗ್ ಬಿ ತಾನು ರೈತರ ಸಾಲ ಪಾವತಿಗೆ ಮುಂದೆ ಬಂದಿರುವುದಾಗಿ ಹೇಳಿಕೊಂಡಿದ್ದಾರೆ. ಬಿಗ್‍ಬಿ ಈ ಕಾರ್ಯಕ್ಕೆ ಈಗ ವ್ಯಾಪಕ ಶ್ಲಾಘನೆ ವ್ಯಕ್ತವಾಗಿದೆ. ಎಲ್ಲಾ ಹಣವಂತೂ ಇಂತಹ ಉದಾರ ಕೊಡುಗೆಗೆ ಮುಂದಾಗಬೇಕೆಂಬುದು ಹಲವರು ಒತ್ತಾಯಿಸಿದ್ದಾರೆ.

About sudina

Check Also

ಬಾಂಬ್ ಬ್ಲಾಸ್ಟ್ ಆದ ಹೊಟೇಲ್‍ನಲ್ಲೇ ಇದ್ದರು ಈ ಖ್ಯಾತ ನಟಿ…!

ಕೊಲೊಂಬೋ : ಶ್ರೀಲಂಕಾದಲ್ಲಿ ಭೀಕರ ಬಾಂಬ್ ಸ್ಫೋಟ ಸಂಭವಿಸಿದೆ… ಮೂರು ಪವಿತ್ರ ಚರ್ಚ್‍ಗಳು ಹಾಗೂ ಮೂರು ಫೈವ್ ಸ್ಟಾರ್ ಹೊಟೇಲ್‍ನಲ್ಲಿ …

Leave a Reply

Your email address will not be published. Required fields are marked *

error: Content is protected !!