Monday , January 21 2019
ಕೇಳ್ರಪ್ಪೋ ಕೇಳಿ
Home / Film News / ಮೀ ಟೂ ಬಿಸಿ : ಟ್ಯಾಲೆಂಟ್ ಮ್ಯಾನೇಜರ್ ಆತ್ಮಹತ್ಯೆಗೆ ಯತ್ನ…!

ಮೀ ಟೂ ಬಿಸಿ : ಟ್ಯಾಲೆಂಟ್ ಮ್ಯಾನೇಜರ್ ಆತ್ಮಹತ್ಯೆಗೆ ಯತ್ನ…!

ಮುಂಬೈ : ಮೀ ಟೂ ಬಿಸಿ ಈಗ ಜೋರಾಗುತ್ತಿದೆ. ಈ ಆಂದೋಲನದ ಮೂಲಕ ಹಲವರ ಬಣ್ಣ ಬಯಲಾಗಿದೆ. ಈ ನಡುವೆ, ಲೈಂಗಿಕ ಕಿರುಕುಳ ಆರೋಪಕ್ಕೆ ಗುರಿಯಾಗಿರುವ ಬಾಲಿವುಡ್ ನ ಟ್ಯಾಲೆಂಟ್ ಮ್ಯಾನೇಜರ್ ಅನಿರ್ಬನ್ ದಾಸ್ ಬ್ಲಾಹ್ ಆತ್ಮಹತ್ಯೆಗೆ ಯತ್ನಿಸಿದ್ದಾರೆ…! ಕೆಡಬ್ಲೂಎಎನ್ ಎಂಟಟೇನ್‍ಮೆಂಟ್ ಸಂಸ್ಥೆಯ ಸಂಸ್ಥಾಪಕರಾದ ಅನಿರ್ಬನ್ ವಿರುದ್ಧ ಹಲವು ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಇತ್ತು. ಇವರು ನಿನ್ನೆ ಮುಂಬೈನ ವಾಸಿ ಬ್ರಿಡ್ಜ್‍ನಲ್ಲಿ ಆತ್ಮಹತ್ಯೆ ಯತ್ನಿಸಿದ್ದಾರೆ. ಈ ವೇಳೆ, ಅಲ್ಲೇ ಇದ್ದ ಟ್ರಾಫಿಕ್ ಪೊಲೀಸ್ ಇವರನ್ನು ರಕ್ಷಿಸಿ ಠಾಣೆಗೆ ಕರೆದುಕೊಂಡು ಹೋಗಿದ್ದಾರೆ.

ಈ ವೇಳೆ, ಠಾಣೆಯಲ್ಲಿ ಇವರಿಗೆ ಪೊಲೀಸರು ಉಪಚರಿಸಿದ್ದು, ಹಲವಾರು ಮೀ ಟೂ ಆರೋಪಗಳಿಂದಾಗಿ ತಾನು ಖಿನ್ನತೆ ಮತ್ತು ಮಾನಸಿಕವಾಗಿ ನೊಂದ ಕಾರಣದಿಂದ ಆತ್ಮಹತ್ಯೆಗೆ ಯತ್ನಿಸುತ್ತಿದ್ದೇನೆ ಎಂದು ಇವರು ಪೊಲೀಸರ ಮುಂದೆ ಹೇಳಿಕೊಂಡಿದ್ದಾರೆ ಎಂದು ಗೊತ್ತಾಗಿದೆ. ವಿಚಾರಣೆ ಬಳಿಕ ಪೊಲೀಸ್ರು ಇವರನ್ನು ಸಂಬಂಧಿಕರೊಂದಿಗೆ ಮನೆಗೆ ಕಳುಹಿಸಿದ್ದಾರೆ.

About sudina

Check Also

ಹಿರಿಯ ನಟ ಲೋಕನಾಥ್ ವಿಧಿವಶ

ಬೆಂಗಳೂರು : ಕನ್ನಡ ಚಿತ್ರರಂಗದ ಹಿರಿಯ ನಟ ಲೋಕನಾಥ್ ವಿಧಿವಶರಾಗಿದ್ದಾರೆ. ಅಂಕಲ್ ಲೋಕನಾಥ್ ಎಂದೇ ಖ್ಯಾತರಾಗಿದ್ದ ಲೋಕನಾಥ್ ವಯೋಸಹಜ ಅನಾರೋಗ್ಯದಿಂದ …

Leave a Reply

Your email address will not be published. Required fields are marked *

error: Content is protected !!