Tuesday , April 23 2019
ಕೇಳ್ರಪ್ಪೋ ಕೇಳಿ
Home / Film News / `ಅಮ್ಮ’ ಸಂಘಟನೆಯಿಂದ ದಿಲೀಪ್‍ಗೆ ಮತ್ತೆ ಔಟ್…

`ಅಮ್ಮ’ ಸಂಘಟನೆಯಿಂದ ದಿಲೀಪ್‍ಗೆ ಮತ್ತೆ ಔಟ್…

ತಿರುವನಂತಪುರಂ : ಮಲಯಾಳಂನ ಖ್ಯಾತ ನಟ ದಿಲೀಪ್ `ಅಮ್ಮ’ ಸಂಘಟನೆಯಿಂದ ಮತ್ತೆ ಹೊರಬಿದ್ದಿದ್ದಾರೆ. ಅಸೋಷಿಯೇಷನ್ ಆಫ್ ಮಲಯಾಳಂ ಮೂವಿ ಆರ್ಟಿಸ್ಟ್ ಮುಖ್ಯಸ್ಥ ಮೋಹನ್ ಲಾಲ್ ಈ ನಿರ್ಧಾರವನ್ನು ಪ್ರಕಟಿಸಿದ್ದಾರೆ. ಖ್ಯಾತ ನಟಿಯೊಬ್ಬರ ಅಪಹರಣ ಪ್ರಕರಣದಲ್ಲಿ ಭಾಗಿಯಾದ ಆರೋಪದಲ್ಲಿ ಜೈಲು ಸೇರಿ ಬಿಡುಗಡೆಯಾಗಿರುವ ದಿಲೀಪ್‍ರನ್ನು ಅಮ್ಮ ಸಂಘಟನೆಗೆ ಸೇರಿಕೊಳ್ಳಲಾಗಿತ್ತು. ಮೋಹನ್ ಲಾಲ್ ಸಂಘದ ಅಧ್ಯಕ್ಷರಾದ ಒಂದೇ ವಾರದಲ್ಲಿ ದಿಲೀಪ್ ಈ ಸಂಘಟನೆಗೆ ರೀ ಎಂಟ್ರಿ ಪಡೆದಿದ್ದರು. ಆದರೆ, ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು. ಹಲವಾರು ಕಲಾವಿದೆಯರು ಮೋಹನ್ ಲಾಲ್ ನಿರ್ಧಾರಕ್ಕೆ ವಿರೋಧ ವ್ಯಕ್ತಪಡಿಸಿ ಸಂಘದಿಂದಲೇ ಹೊರನಡೆದಿದ್ದರು. ಜೊತೆಗೆ, ಕಲಾವಿದೆಯರ ಹೊಸ ಸಂಘಟನೆ `ವುಮೆನ್ ಕಲೆಕ್ಟಿವ್ ಇನ್ ಸಿನೆಮಾ’ ವನ್ನೂ ಹುಟ್ಟು ಹಾಕಿದ್ದರು. ಬಹಳಷ್ಟು ದಿನಗಳಿಂದ ಈ ಹಗ್ಗಜಗ್ಗಾಟ ಮುಂದುವರಿದೇ ಇತ್ತು.

ಈ ಬಗ್ಗೆ ಮಾತನಾಡಿರುವ ಮೋಹನ್ ಲಾಲ್, ನಾನು ದಿಲೀಪ್‍ರನ್ನು ಕರೆದು ಸಂಘದ ನಿರ್ಧಾರವನ್ನು ತಿಳಿಸಿದ್ದೇನೆ. ಮತ್ತು ರಾಜೀನಾಮೆ ಕೊಡಲು ಸೂಚಿಸಿದ್ದೇನೆ. ಅದರಂತೆ, ದಿಲೀಪ್ ತನ್ನ ರಾಜೀನಾಮೆಯನ್ನು ಸಲ್ಲಿಸಿದ್ದಾರೆ ಎಂದು ಹೇಳಿದ್ದಾರೆ.

About sudina

Check Also

ಬಾಂಬ್ ಬ್ಲಾಸ್ಟ್ ಆದ ಹೊಟೇಲ್‍ನಲ್ಲೇ ಇದ್ದರು ಈ ಖ್ಯಾತ ನಟಿ…!

ಕೊಲೊಂಬೋ : ಶ್ರೀಲಂಕಾದಲ್ಲಿ ಭೀಕರ ಬಾಂಬ್ ಸ್ಫೋಟ ಸಂಭವಿಸಿದೆ… ಮೂರು ಪವಿತ್ರ ಚರ್ಚ್‍ಗಳು ಹಾಗೂ ಮೂರು ಫೈವ್ ಸ್ಟಾರ್ ಹೊಟೇಲ್‍ನಲ್ಲಿ …

Leave a Reply

Your email address will not be published. Required fields are marked *

error: Content is protected !!