Wednesday , December 12 2018
ಕೇಳ್ರಪ್ಪೋ ಕೇಳಿ
Home / News NOW / ದೇವರೇ ಈ ಸ್ಥಿತಿ ಯಾರಿಗೂ ಬಾರದಿರಲಿ… : ಪತ್ನಿಯ ಹೆರಿಗೆಗೆ ಸ್ವಲ್ಪ ಹೊತ್ತಿಗೆ ಮುನ್ನ ವೀರ ಯೋಧ ಹುತಾತ್ಮ…!

ದೇವರೇ ಈ ಸ್ಥಿತಿ ಯಾರಿಗೂ ಬಾರದಿರಲಿ… : ಪತ್ನಿಯ ಹೆರಿಗೆಗೆ ಸ್ವಲ್ಪ ಹೊತ್ತಿಗೆ ಮುನ್ನ ವೀರ ಯೋಧ ಹುತಾತ್ಮ…!

ಜಮ್ಮು : ಇದು ಕಣ್ಣಂಚಿನಲ್ಲಿ ನೀರು ತರಿಸುವ ಸುದ್ದಿ.. ಶತ್ರುವಿಗೂ ಇಂತಹ ಸ್ಥಿತಿ ಬಾರದಿರಲಿ ದೇವರೇ… ವೀರ ಯೋಧ ಲ್ಯಾನ್ಸ್ ನಾಯಕ್ ರಂಜಿತ್ ಸಿಂಗ್ ಭೂತ್ಯಾಲ್ ಮತ್ತು ಅವರ ಪತ್ನಿ ಸೀಮು ದೇವಿ ಮದುವೆಯಾಗಿ 10 ವರ್ಷ ಸಂತಾನ ಭಾಗ್ಯಕ್ಕಾಗಿ ಕಾದಿದ್ದರು. ದೇವರು 10 ವರ್ಷಗಳ ಬಳಿಕ ಕಣ್ಣು ತೆರೆದಿದ್ದ. ಹೀಗಾಗಿ, ಸೀಮು ದೇವಿ ಗರ್ಭಿಣಿ ಆಗಿ ತಾಯ್ತನದ ಖುಷಿ ಅನುಭವಿಸುತ್ತಿದ್ದರು… ಆದರೆ, ಈ ಖುಷಿ ಅಲ್ಪಾಯುಷಿ… ಯಾಕೆಂದರೆ, ಇನ್ನೇನು ಸೀಮುಗೆ ಹೆರಿಗೆ ಕ್ಷಣ ಹತ್ತಿರ ಬರಬೇಕು. ಆಗ ಬರಸಿಡಿಲಿನಂತಹ ಸುದ್ದಿಯೊಂದು ಬಂದಿತ್ತು. ಅದು ವೀರ ಯೋಧ ರಂಜಿತ್ ಅವರ ಸಾವು…!

ಜಮ್ಮು ಕಾಶ್ಮೀರದ ಗಡಿಯಲ್ಲಿ ಉಗ್ರರೊಂದಿಗೆ ಸೆಣಸಾಡುವಾಗ ರಂಜಿತ್ ವೀರ ಮರಣವನ್ನಪ್ಪಿದ್ದರು. ರಂಜಿತ್ ಅಂತ್ಯಕ್ರಿಯೆ ಮುಗಿಸಿದ ಕೆಲವೇ ಗಂಟೆಗಳಲ್ಲಿ ಸೀಮು ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.. ಇಂತಹ ಸ್ಥಿತಿಯಲ್ಲೂ ಆಂಬ್ಯುಲೆನ್ಸ್‍ನಲ್ಲಿ ಅಂತ್ಯಸಂಸ್ಕಾರ ಸ್ಥಳಕ್ಕೆ ಬಂದ ಸೀಮು ಪತಿಗೆ ಅಂತಿಮ ನಮನ ಸಲ್ಲಿಸಿದರು. ಅಲ್ಲದೆ, ತಂದೆಯಂತೆಯೇ ತನ್ನ ಮಗಳನ್ನೂ ಸೇನೆಗೆ ಸೇರಿಸುವ ಮಾತನಾಡುವ ಮೂಲಕ ತನ್ನ ದೇಶಪ್ರೇಮವನ್ನು ಮತ್ತು ಗಂಡನ ತ್ಯಾಗವನ್ನು ಕೊಂಡಾಡಿ ವೀರನಾರಿಗೆ ಉಚಿತವಾದ ಮಾತನ್ನೇ ಆಡಿದ್ದಾರೆ.

ಭಾನುವಾರ ರಜೌರಿ ಗಡಿ ಭಾಗದಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ರಂಜಿತ್ ಹುತಾತ್ಮರಾಗಿದ್ದರು. ಎಲ್ಲಾ ಅಂದುಕೊಂಡಂತೆ ಆಗಿದ್ದರೆ ಪತ್ನಿಯ ಹೆರಿಗೆ ಸಂದರ್ಭದಲ್ಲಿ ಜೊತೆಗಿರಲು ರಂಜಿತ್ ಅಕ್ಟೋಬರ್ 22ರಂದು ಊರಿಗೆ ಬರಬೇಕಾಗಿತ್ತು. ಆದರೆ, ಇವರ ಖುಷಿಯನ್ನು ನೋಡಿ ಆ ವಿಧಿಯೇ ಹೊಟ್ಟೆ ಉರಿ ಆಯ್ತೋ ಏನೋ ಅಕ್ಟೋಬರ್ 21 ರಂದೇ ರಂಜಿತ್ ಕೊನೆಯುಸಿರೆಳೆದಿದ್ದಾರೆ…!

About sudina

Check Also

ಸಚಿವ ಸ್ಥಾನಕ್ಕೆ ಎನ್.ಮಹೇಶ್ ದಿಢೀರ್ ರಾಜೀನಾಮೆ…!

ಬೆಂಗಳೂರು : ಮುಖ್ಯಮಂತ್ರಿ ಕುಮಾರಸ್ವಾಮಿ ಸಂಪುಟದಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರಾಗಿದ್ದ ಎನ್.ಮಹೇಶ್ ದಿಢೀರ್ ತಮ್ಮ ಸಚಿವ ಸ್ಥಾನಕ್ಕೆ …

Leave a Reply

Your email address will not be published. Required fields are marked *

error: Content is protected !!