Wednesday , December 12 2018
ಕೇಳ್ರಪ್ಪೋ ಕೇಳಿ
Home / News NOW / ಪತ್ನಿಯನ್ನು ಕೊಂದು ತಲೆಮರೆಸಿಕೊಂಡಿದ್ದ ಟೆಕ್ಕಿ 15 ವರ್ಷದ ಬಳಿಕ ಸೆರೆ…!

ಪತ್ನಿಯನ್ನು ಕೊಂದು ತಲೆಮರೆಸಿಕೊಂಡಿದ್ದ ಟೆಕ್ಕಿ 15 ವರ್ಷದ ಬಳಿಕ ಸೆರೆ…!

ಬೆಂಗಳೂರು : 2003ರಲ್ಲಿ ಗುಜರಾತ್‍ನಲ್ಲಿ ಪತ್ನಿಯನ್ನು ಕೊಂದು ಹೆಸರು ಬದಲಾಯಿಸಿಕೊಂಡು ಬೆಂಗಳೂರಿನ ಪ್ರತಿಷ್ಠಿತ ಐಟಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದ ಟೆಕ್ಕಿಯನ್ನು ಕೊನೆಗೂ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ತರುಣ್ ಜಿನ್ ರಾಜ್ ಅಲಿಯಾಸ್ ಪ್ರವೀಣ್ ಎಂದು ಗುರುತಿಸಲಾಗಿದೆ.

ಕೇರಳ ಮೂಲದ ಈತ 15 ವರ್ಷಗಳ ಹಿಂದೆ ಗುಜರಾತ್‍ನಲ್ಲಿ ತನ್ನ ಪತ್ನಿ ಸಜಿನಿಯನ್ನು ಕೊಂದು ಎಸ್ಕೇಪ್ ಆಗಿದ್ದ. ಬಳಿಕ ತನ್ನ ಹೆಸರನ್ನು ಪ್ರವೀಣ್ ಎಂದು ಬದಲಾಯಿಸಿಕೊಂಡಿದ್ದ. ಎಲ್ಲಾ ದಾಖಲೆಗಳಲ್ಲೂ ಇದೇ ಹೆಸರು ಇರುವಂತೆ ನೋಡಿಕೊಂಡಿದ್ದ. ಇದೇ ಹೆಸರಿನಲ್ಲಿ ಈತ ಬೆಂಗಳೂರಿನಲ್ಲೂ ಕೆಲಸ ಗಿಟ್ಟಿಸಿಕೊಂಡಿದ್ದ.

ಪತ್ನಿಯನ್ನು ಕೊಂದು ಈತ ದರೋಡೆಯ ಕತೆ ಕಟ್ಟಿದ್ದ. ಆದರೆ, ಇದಾದ ಬಳಿಕ ಈ ಕೊಲೆಯ ಹಿಂದೆ ಈತನ ಕೈವಾಡ ಇರೋದು ಪೊಲೀಸರಿಗೆ ಗೊತ್ತಾಗಿತ್ತು. ಪೊಲೀಸರು ಈತನ ಹಿಂದೆ ಬೀಳುತ್ತಿದ್ದಂತೆಯೇ ಈತ ತಲೆಮರೆಸಿಕೊಂಡಿದ್ದ. ಹೀಗಾಗಿ, ಗುಜರಾತ್ ಪೊಲೀಸರು ಬೆಂಗಳೂರಿನ ಸಿಸಿಬಿ ಪೊಲೀಸರ ನೆರವು ಕೇಳಿದ್ದರು. ಇದೀಗ, ಬೆಂಗಳೂರು ಪೊಲೀಸರು ಈ ಆರೋಪಿಯ ಕೈಗೆ ಕೋಳ ತೊಡಿಸಿದ್ದು, ಅಹಮದಾಬಾದ್ ಪೊಲೀಸರು ವಶಕ್ಕೆ ಪಡೆದಿದ್ದಾರೆ.

About sudina

Check Also

ಸಚಿವ ಸ್ಥಾನಕ್ಕೆ ಎನ್.ಮಹೇಶ್ ದಿಢೀರ್ ರಾಜೀನಾಮೆ…!

ಬೆಂಗಳೂರು : ಮುಖ್ಯಮಂತ್ರಿ ಕುಮಾರಸ್ವಾಮಿ ಸಂಪುಟದಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರಾಗಿದ್ದ ಎನ್.ಮಹೇಶ್ ದಿಢೀರ್ ತಮ್ಮ ಸಚಿವ ಸ್ಥಾನಕ್ಕೆ …

Leave a Reply

Your email address will not be published. Required fields are marked *

error: Content is protected !!