Tuesday , February 19 2019
ಕೇಳ್ರಪ್ಪೋ ಕೇಳಿ
Home / Film News / ಇಂದಿರಾ ಗಾಂಧಿ ಪಾತ್ರ ಮಾಡುತ್ತಿದ್ದಾರಾ ತ್ರಿಷಾ…?

ಇಂದಿರಾ ಗಾಂಧಿ ಪಾತ್ರ ಮಾಡುತ್ತಿದ್ದಾರಾ ತ್ರಿಷಾ…?

ಚೆನ್ನೈ : ದಕ್ಷಿಣ ಭಾರತದ ಖ್ಯಾತ ನಟಿ ತ್ರಿಷಾ ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಲಲಿತಾ ಪಾತ್ರ ಮಾಡಲಿದ್ದಾರೆ ಎಂಬ ಸುದ್ದಿ ಇತ್ತೀಚೆಗೆ ಬಹಳ ದೊಡ್ಡ ಮಟ್ಟದಲ್ಲೇ ಹಬ್ಬಿತ್ತು. ಆದರೆ, ಇದೀಗ ತ್ರಿಷಾ ಇನ್ನೊಬ್ಬರು ಪ್ರಭಾವಿಯ ಪಾತ್ರವನ್ನು ನಿರ್ವಹಿಸಲು ರೆಡಿಯಾಗಿದ್ದಾರಾ ಎಂಬ ಅನುಮಾನ ಶುರುವಾಗಿದೆ. ಈ ಅನುಮಾನಕ್ಕೆ ಕಾರಣ ಸದ್ಯ ಇಂಟರ್‍ನೆಟ್‍ನಲ್ಲಿ ವೈರಲ್ ಆಗಿರುವ ತ್ರಿಷಾ ಅವರು ಪೈಂಟಿಂಗ್.

ಈ ಚಿತ್ರದಲ್ಲಿ ತ್ರಿಷಾ ಭಾರತದ ಉಕ್ಕಿನ ಮಹಿಳೆ ಎಂದೇ ಖ್ಯಾತರಾಗಿರುವ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರಂತೆ ಕಾಣುತ್ತಿದ್ದಾರೆ. ಹೀಗಾಗಿ, ತ್ರಿಷಾ ಇಂದಿರಾ ಅವರ ಪಾತ್ರ ನಿರ್ವಹಿಸಲಿದ್ದಾರಾ ಎಂಬ ಚರ್ಚೆ ಶುರುವಾಗಿದೆ. ತಮಿಳಿನ ಖ್ಯಾತ ಮ್ಯಾಗಝೀನ್ ತ್ರಿಷಾ ಅವರ ಈ ಚಿತ್ರವನ್ನು ಪ್ರಕಟಿಸಿದೆ. ಇಲ್ಲಿ ತ್ರಿಷಾ ಥೇಟ್ ಇಂದಿರಾ ಅವರಂತೆ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಹಲವು ವಿಭಿನ್ನ ಪಾತ್ರಗಳ ಮೂಲಕ ಗಮನ ಸೆಳೆದಿರುವ ತ್ರಿಷಾ ಈ ಪಾತ್ರಕ್ಕೂ ಹೇಳಿ ಮಾಡಿಸಿದ ಕಲಾವಿದೆಯೇ ಹೌದು.

About sudina

Check Also

ಹಿರಿಯ ನಟ ಲೋಕನಾಥ್ ವಿಧಿವಶ

ಬೆಂಗಳೂರು : ಕನ್ನಡ ಚಿತ್ರರಂಗದ ಹಿರಿಯ ನಟ ಲೋಕನಾಥ್ ವಿಧಿವಶರಾಗಿದ್ದಾರೆ. ಅಂಕಲ್ ಲೋಕನಾಥ್ ಎಂದೇ ಖ್ಯಾತರಾಗಿದ್ದ ಲೋಕನಾಥ್ ವಯೋಸಹಜ ಅನಾರೋಗ್ಯದಿಂದ …

Leave a Reply

Your email address will not be published. Required fields are marked *

error: Content is protected !!