Tuesday , April 23 2019
ಕೇಳ್ರಪ್ಪೋ ಕೇಳಿ
Home / Earth / ಬೋನ್‍ನಿಂದ ಹೊರ ಬಂದು 22 ವರ್ಷದ ಯುವತಿಯನ್ನು ಕೊಂದ ಸಿಂಹ…!

ಬೋನ್‍ನಿಂದ ಹೊರ ಬಂದು 22 ವರ್ಷದ ಯುವತಿಯನ್ನು ಕೊಂದ ಸಿಂಹ…!

ನ್ಯೂಯಾರ್ಕ್ : 22 ವರ್ಷದ ಯುವತಿಯೊಬ್ಬಳು ಸಿಂಹಕ್ಕೆ ಬಲಿಯಾದ ಘಟನೆ ಅಮೇರಿಕಾದ ಜಿಯಾಲಾಜಿಕಲ್ ಪಾರ್ಕ್‍ನಲ್ಲಿ ನಡೆದಿದೆ. ಉತ್ತರ ಕರೋಲಿನಾದ ಪಾರ್ಕ್‍ನಲ್ಲಿ ಈ ಘಟನೆ ಸಂಭವಿಸಿದೆ. ಬೋನ್‍ನಿಂದ ತಪ್ಪಿಸಿಕೊಂಡು ಬಂದಿದ್ದ ಸಿಂಹ ಅಲ್ಲೇ ಸ್ವಚ್ಛತೆಯಲ್ಲಿ ತೊಡಗಿದ್ದ ಜನರ ಮೇಲೆ ದಾಳಿ ಮಾಡಿದೆ. ಈ ವೇಳೆ, 22 ವರ್ಷದ ಯುವತಿ ಸಿಂಹದ ಬಾಯಿಗೆ ಸಿಕ್ಕಿ ಕೊನೆಯುಸಿರೆಳೆದಿದ್ದಾರೆ. ಈ ಘಟನೆ ಬಳಿಕ ಸಿಂಹವನ್ನು ಶೂಟ್ ಮಾಡಿ ಕೊಲ್ಲಲಾಗಿದೆ. ಪ್ಯಾಲಿಸ್ತೇನ್ ಮೂಲದ ಈ ಯುವತಿ ಇಂಟರ್ನ್ ಶಿಪ್‍ಗಾಗಿ ಪಾರ್ಕ್‍ಗೆ ಬಂದಿದ್ದಳು. ಈಕೆ ಇಲ್ಲಿ ಇಂಟರ್ನ್‍ಶಿಪ್‍ಗೆ ಸೇರಿ ಬರೀ ಎರಡು ವಾರಗಳಷ್ಟೇ ಆಗಿತ್ತು.. ಆದರೆ, ಈ ಸಿಂಹ ಬೋನಿನಿಂದ ಹೇಗೆ ತಪ್ಪಿಸಿಕೊಂಡಿತು ಎಂಬ ಬಗ್ಗೆ ಅಧಿಕಾರಿಗಳಿಗೂ ಸ್ಪಷ್ಟ ಮಾಹಿತಿ ಇಲ್ಲ.

About sudina

Check Also

ಸೋಲಾರ್ ಬೇಲಿಗೆ ಸಿಲುಕಿ ಹೆಣ್ಣಾನೆ ಸಾವು

ಮಡಿಕೇರಿ : ಸೋಲಾರ್ ಬೇಲಿಗೆ ಸಿಲುಕಿ ಹೆಣ್ಣು ಕಾಡಾನೆ ಸಾವನ್ನಪ್ಪಿರುವ ಘಟನೆ ಸೋಮವಾರಪೇಟೆಗೆ ಸಮೀಪದ ಅಬ್ಬೂರುಕಟ್ಟೆ ಬಳಿಯ ಕಾಡ್ನೂರು ಬಳಿ …

Leave a Reply

Your email address will not be published. Required fields are marked *

error: Content is protected !!