Tuesday , April 23 2019
ಕೇಳ್ರಪ್ಪೋ ಕೇಳಿ
Home / Film News / ರಾಜಮೌಳಿ ಪುತ್ರನ ವಿವಾಹದಲ್ಲಿ ಮಿಂಚಿದ ಪ್ರಭಾಸ್ ಮತ್ತು ಅನುಷ್ಕಾ…

ರಾಜಮೌಳಿ ಪುತ್ರನ ವಿವಾಹದಲ್ಲಿ ಮಿಂಚಿದ ಪ್ರಭಾಸ್ ಮತ್ತು ಅನುಷ್ಕಾ…

ಜೈಪುರ : ಖ್ಯಾತ ನಿರ್ದೇಶಕ ಎಸ್.ಎಸ್. ರಾಜಮೌಳಿ ಪುತ್ರ ಕಾರ್ತಿಕೇಯನ್ ತನ್ನ ಬಹುಕಾಲದ ಗೆಳತಿ ಪೂಜಾ ಪ್ರಸಾದ್ ಅವರ ಕೈ ಹಿಡಿದಿದ್ದಾರೆ. ಜೈಪುರದಲ್ಲಿ ಇವರಿಬ್ಬರ ಕಲ್ಯಾಣ ನಡೆದಿದೆ. ಇವರ ಮದುವೆಯ ವೀಡಿಯೋ ಮತ್ತು ಫೋಟೋ ಈಗ ಇಂಟರ್‍ನೆಟ್‍ನಲ್ಲಿ ಹರಿದಾಡುತ್ತಿದೆ. ಹಲವಾರು ಸ್ಟಾರ್‍ಗಳು ಮದುವೆಯಲ್ಲಿ ಪಾಲ್ಗೊಂಡು ನವಜೋಡಿಗೆ ಶುಭ ಹಾರೈಸಿದ ಫೋಟೋ ಸಖತ್ ಆಗಿಯೇ ಅಟ್ರ್ಯಾಕ್ಟ್ ಮಾಡ್ತಿವೆ. ಈ ನಡುವೆ, ನವ ಜೋಡಿಯ ನಡುವೆ ಎಲ್ಲರ ಗಮನ ಸೆಳೆದ ಮತ್ತೊಂದು ಜೋಡಿ ಇದೆ. ಅದೇ ಪ್ರಭಾಸ್ ಮತ್ತು ಅನುಷ್ಕಾ ಶೆಟ್ಟಿ. ಪ್ರಭಾಸ್ ಮತ್ತು ಅನುಷ್ಕಾ ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದಾರೆ ಎಂಬ ಸುದ್ದಿ ಬಹಳ ದಿನಗಳಿಂದ ಹಬ್ಬಿದೆ. ಆನ್ ಸ್ಕ್ರೀನ್‍ನಲ್ಲಿ ಮೋಡಿ ಮಾಡಿದ್ದ ಈ ಜೋಡಿ ನಿಜ ಜೀವನದಲ್ಲೂ ಒಂದಾಗಲಿದ್ದಾರೆ ಎಂದೇ ಜನ ಮಾತನಾಡಿಕೊಳ್ಳುತ್ತಿದ್ದರು. ಇದಾದ ಬಳಿಕ ನಾವಿಬ್ಬರು ಸ್ನೇಹಿತರು ಎಂದೂ ಪ್ರಭಾಸ್ ಈ ಹಿಂದೆ ಹೇಳಿದ್ದರು. ಅಲ್ಲದೆ, ಮದುವೆಯ ಸುದ್ದಿಯನ್ನೂ ಅಲ್ಲಗಳೆದಿದ್ದರು. ಆಗೊಮ್ಮೆ ಈಗೊಮ್ಮೆ ಈ ಸುದ್ದಿ ಮುನ್ನೆಲೆಗೆ ಬರುತ್ತಲೇ ಇರುತ್ತದೆ.

ಈ ನಡುವೆ, ಕಾರ್ತಿಕೇಯನ್ ಮದುವೆಯಲ್ಲೂ ಇವರಿಬ್ಬರು ಜೊತೆಯಾಗಿ ಕಾಣಿಸಿಕೊಂಡಿದ್ದಾರೆ. ಈ ಫೋಟೋ ಕೂಡಾ ವೈರಲ್ ಆಗುತ್ತಿದೆ. ಸ್ನೇಹಿತರಾಗಿಯೇ ಇವರಿಬ್ಬರು ಒಟ್ಟಾಗಿ ಇಲ್ಲಿ ಕಾಣಿಸಿಕೊಂಡಿದ್ದರೂ ಹರಿದಾಡುವ ಫೋಟೋ ಮತ್ತೆ ಪ್ರೀತಿಯ ವಿಷಯದ ಕಾರಣಕ್ಕೇ ಸುದ್ದಿಯಾಗ್ತಿದೆ.

About sudina

Check Also

ಬಾಂಬ್ ಬ್ಲಾಸ್ಟ್ ಆದ ಹೊಟೇಲ್‍ನಲ್ಲೇ ಇದ್ದರು ಈ ಖ್ಯಾತ ನಟಿ…!

ಕೊಲೊಂಬೋ : ಶ್ರೀಲಂಕಾದಲ್ಲಿ ಭೀಕರ ಬಾಂಬ್ ಸ್ಫೋಟ ಸಂಭವಿಸಿದೆ… ಮೂರು ಪವಿತ್ರ ಚರ್ಚ್‍ಗಳು ಹಾಗೂ ಮೂರು ಫೈವ್ ಸ್ಟಾರ್ ಹೊಟೇಲ್‍ನಲ್ಲಿ …

Leave a Reply

Your email address will not be published. Required fields are marked *

error: Content is protected !!