Tuesday , April 23 2019
ಕೇಳ್ರಪ್ಪೋ ಕೇಳಿ
Home / Film News / ಮತ್ತೆ ಒಂದೇ ಚಿತ್ರದಲ್ಲಿ ಶಾರೂಖ್, ಸಲ್ಮಾನ್…?

ಮತ್ತೆ ಒಂದೇ ಚಿತ್ರದಲ್ಲಿ ಶಾರೂಖ್, ಸಲ್ಮಾನ್…?

ಮುಂಬೈ : ಬಾಲಿವುಡ್ ನಟರಾದ ಸಲ್ಮಾನ್ ಖಾನ್ ಮತ್ತು ಶಾರೂಖ್ ಖಾನ್ ಅಭಿಮಾನಿಗಳಿಗೆ ಸಿಹಿ ಸುದ್ದಿಯೊಂದು ಬಂದಿದೆ. ಮತ್ತೆ ಕರಣ್ ಅರ್ಜುನ್ ದಿನಗಳು ಮರುಕಳಿಸೋ ಕಾಲ ಸನಿಹಿತವಾಗಿದೆ. ಎಲ್ಲಾ ಅಂದುಕೊಂಡಂತೆ ಆದರೆ ಶಾರೂಖ್ ಮತ್ತು ಸಲ್ಮಾನ್ ಒಂದೇ ಚಿತ್ರದಲ್ಲಿ ನಟಿಸಲಿದ್ದಾರಂತೆ. ಸದ್ಯ ಹರಿದಾಡುತ್ತಿರುವ ಸುದ್ದಿ ಪ್ರಕಾರ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಅವರ ಮುಂದಿನ ಚಿತ್ರದಲ್ಲಿ ಈ ಇಬ್ಬರು ಒಟ್ಟಾಗಿ ನಟಿಸಲಿದ್ದಾರಂತೆ. ಹಾಗೊಂದು ವೇಳೆ ನಡೆದರೆ ಕರಣ್ ಅರ್ಜುನ್‍ನಂತಹ ಸುಂದರ ದಿನಗಳು ಮತ್ತೆ ಮರುಕಳಿಸಲಿದೆ. ಯಾಕೆಂದರೆ, ಕರಣ್ ಅರ್ಜುನ್ ನಲ್ಲಿ ಶಾರೂಖ್ ಮತ್ತು ಸಲ್ಮಾನ್ ಜೊತೆಯಾಗಿ ನಟಿಸಿದ್ದರು. ಈ ಚಿತ್ರ ಸೂಪರ್ ಡೂಪರ್ ಹಿಟ್ ಆಗಿತ್ತು. ಆದರೆ, ಇದಾದ ಬಳಿಕ ಈ ಇಬ್ಬರು ಜೊತೆಯಾಗಿ ಯಾವುದೇ ಚಿತ್ರದಲ್ಲಿ ಕಾಣಿಸಿಕೊಂಡಿರಲಿಲ್ಲ.

1991ರ ಸೌದಾಗರ್ ಚಿತ್ರದಂತೆಯೇ ಈ ಚಿತ್ರವನ್ನೂ ಮಾಡಲು ಸಂಜಯ್ ನಿರ್ಧರಿಸಿದ್ದಾರಂತೆ. ಸೌದಾಗರ್ ಚಿತ್ರದ ಪ್ರೇರಣೆಯಿಂದ ಈ ಚಿತ್ರ ರೆಡಿ ಆಗಲಿದ್ಯಂತೆ.

About sudina

Check Also

ಬಾಂಬ್ ಬ್ಲಾಸ್ಟ್ ಆದ ಹೊಟೇಲ್‍ನಲ್ಲೇ ಇದ್ದರು ಈ ಖ್ಯಾತ ನಟಿ…!

ಕೊಲೊಂಬೋ : ಶ್ರೀಲಂಕಾದಲ್ಲಿ ಭೀಕರ ಬಾಂಬ್ ಸ್ಫೋಟ ಸಂಭವಿಸಿದೆ… ಮೂರು ಪವಿತ್ರ ಚರ್ಚ್‍ಗಳು ಹಾಗೂ ಮೂರು ಫೈವ್ ಸ್ಟಾರ್ ಹೊಟೇಲ್‍ನಲ್ಲಿ …

Leave a Reply

Your email address will not be published. Required fields are marked *

error: Content is protected !!