Tuesday , November 13 2018
ಕೇಳ್ರಪ್ಪೋ ಕೇಳಿ
Home / sudina (page 10)

sudina

ಮಗಳನ್ನು ನೋಡದ ಕೊರಗು : ಬಾಲಿವುಡ್‍ನ ಖ್ಯಾತ ಕೊರಿಯೋಗ್ರಾಫರ್ ಆತ್ಮಹತ್ಯೆ…!

ಮುಂಬೈ : ಬಾಲಿವುಡ್‍ನಲ್ಲಿ ಖ್ಯಾತ ಡ್ಯಾನ್ಸರ್, ಕೊರಿಯೋಗ್ರಾಫರ್ ಅಭಿಜಿತ್ ಶಿಂಧೆ ಆತ್ಮಹತ್ಯೆಗೆ ಶರಣಾಗಿದ್ದಾರೆ. ರಣಬೀರ್ ಕಪೂರ್, ರಣವೀರ್ ಸಿಂಗ್ ಜೊತೆ ಕೆಲಸ ಮಾಡಿದ್ದ ಅಭಿಜಿತ್ ತಮ್ಮ ಮನೆಯ ಫ್ಯಾನ್‍ಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಇನ್ನು, ಪೊಲೀಸರಿಗೆ ಶವದ ಬಳಿ ಡೆತ್‍ನೋಟ್ ಸಿಕ್ಕಿದ್ದು, ತನ್ನ ಬ್ಯಾಂಕ್ ಅಕೌಂಟ್ ಅನ್ನು ಮಗಳ ಹೆಸರಿಗೆ ಮಾಡಿ ಎಂದು ಅದರಲ್ಲಿ ಬರೆಯಲಾಗಿದೆ. ಸದ್ಯ ಆತ್ಮಹತ್ಯೆಗೆ ನಿಖರ ಕಾರಣ ಏನು ಎಂದು ಗೊತ್ತಾಗಿಲ್ಲ. ಆದರೆ, ಅಭಿಜಿತ್ …

Read More »

ದಂಪತಿ ಬೈಕ್‍ನಿಂದ ಬಿದ್ದಿದ್ದರು, ಯಾರೂ ಇಲ್ಲದೆ ಮಗುವೊಂದೇ ಬೈಕ್‍ನಲ್ಲಿ ಹೋಗಿತ್ತು…! : ಇಲ್ಲಿದೆ ಎದೆಯೇ ಝಲ್ ಅನ್ನೋ ದೃಶ್ಯ…!

ಬೆಂಗಳೂರು : ಇದೊಂದು ಭೀಕರ ದೃಶ್ಯ. ಬೈಕ್‍ನಲ್ಲಿ ಐದು ವರ್ಷದ ಮಗುವಿನ್ನೊಟ್ಟಿಗೆ ದಂಪತಿ ಹೋಗ್ತಿದ್ದರು. ಈ ವೇಳೆ, ಬೇರೊಂದು ಬೈಕ್ ಅಡ್ಡ ಬಂದು ಡಿಕ್ಕಿಯಾಗಿತ್ತು. ಹೀಗೆ ಬೈಕ್ ಡಿಕ್ಕಿಯಾಗಿದ್ದರಿಂದ ದಂಪತಿ ಬೈಕ್‍ನಿಂದ ಬಿದ್ದಿದ್ದರು. ಆದರೆ, ಬೈಕ್‍ನಲ್ಲಿ ಮಗು ಮಾತ್ರ ಇತ್ತು. ಅಪಘಾತದ ತೀವ್ರತೆಗೆ ಬೈಕ್ 300 ಮೀಟರ್‍ನಷ್ಟು ದೂರ ಹಾಗೆಯೇ ಸಾಗಿತ್ತು…! ಈ ದೃಶ್ಯವೇ ಭೀಕರವಾಗಿತ್ತು… ಆದರೆ, ಅದೃಷ್ಟವಶಾತ್ ಮಗು ದೂರ ಹೋಗಿ ಬಿದ್ದಿದ್ದು ತಕ್ಷಣ ಸ್ಥಳೀಯರು ಕಂದನನ್ನು ರಕ್ಷಿಸಿದ್ದಾರೆ. …

Read More »

`ಯಶೋಮಾರ್ಗ’ ಹೆಸರಲ್ಲಿ ದೇಣಿಗೆ ಸಂಗ್ರಹಿಸಬೇಡಿ… : ಯಶ್ ಮನವಿ

ಬೆಂಗಳೂರು : ಕೊಡಗು ನೆರೆ ಸಂತ್ರಸ್ತರಿಗಾಗಿ `ಯಶೋಮಾರ್ಗ’ ಹೆಸರಿನಲ್ಲಿ ಕೆಲವರು ದೇಣಿಗೆ ಸಂಗ್ರಹಿಸುತ್ತಿದ್ದಾರೆ. ಇದಕ್ಕೆ ರಾಕಿಂಗ್ ಸ್ಟಾರ್ ಯಶ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ರೀತಿ ಯಶೋಮಾರ್ಗ ಹೆಸರಿನಲ್ಲಿ ಯಾರಾದರೂ ದೇಣಿಗೆ ಕೇಳಿದರೆ ಕೊಡಬೇಡಿ ಎಂದೂ ಕಿವಿಮಾತು ಹೇಳಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಬರೆದುಕೊಂಡಿರುವ ಯಶ್, ನನ್ನ ಸಂಪಾದನೆಯಲ್ಲಿ ಬಂದ ಹಣದಲ್ಲಿ ನನ್ನ ಆತ್ಮತೃಪ್ತಿಗೆ ಕೈಲಾದ ಸಹಾಯ ಮಾಡುತ್ತಿದ್ದೇನೆ. ಆದರೆ, ಇದಕ್ಕಾಗಿ ಯಾರಿಂದಲೂ ದೇಣಿಗೆ ಸಂಗ್ರಹಿಸುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. …

Read More »

ಶೀರೂರು ಶ್ರೀಗಳದ್ದು ಕೊಲೆ ಅಲ್ಲ… ಸಹಜ ಸಾವು

ಉಡುಪಿ : ತೀವ್ರ ಕುತೂಹಲ ಮತ್ತು ಚರ್ಚೆಗೆ ಗ್ರಾಸವಾಗಿದ್ದ ಉಡುಪಿ ಅಷ್ಟಮಠಗಳಲ್ಲಿ ಒಂದಾದ ಶೀರೂರು ಮಠದ ಲಕ್ಷ್ಮೀವರ ತೀರ್ಥರ ಸಾವಿನ ಪ್ರಕರಣದ ತನಿಖೆ ತಾರ್ಕಿಕ ಅಂತ್ಯಕ್ಕೆ ಬಂದಿದೆ. ಶ್ರೀಗಳದ್ದು ಸಹಜ ಸಾವು ಎಂಬುದು ತನಿಖೆಯಿಂದ ಸ್ಪಷ್ಟವಾಗಿದೆ. ಶ್ರೀಗಳಿಗೆ ಯಾವುದೇ ವಿಷ ಪ್ರಾಶನವಾಗಿಲ್ಲ ಎಂಬ ಅಂಶ ಮರಣೋತ್ತರ ಪರೀಕ್ಷೆ ಹಾಗೂ ಎಫ್‍ಎಸ್‍ಎಲ್ ವರದಿಯಿಂದ ದೃಢಪಟ್ಟಿದೆ. ಲಕ್ಷ್ಮೀವರ ತೀರ್ಥರು ಲಿವರ್ ಸಿರೋಸಿಸ್ ಎಂಬ ಸಮಸ್ಯೆಯಿಂದ ಬಳಲುತ್ತಿದ್ದರು. ಈ ಸಮಸ್ಯೆ ಉದ್ಭಣಿಸಿ ಸ್ವಾಮೀಜಿ ಸಾವನ್ನಪ್ಪಿದ್ದಾರೆ …

Read More »

ಸಂಭಾವನೆ ಹೆಚ್ಚಿಸಿಕೊಂಡರಾ ನಟಿ ರಶ್ಮಿಕಾ ಮಂದಣ್ಣ…?

ಹೈದರಾಬಾದ್ : ಕಿರಿಕ್ ಪಾರ್ಟಿ ಬೆಡಗಿ, ಕನ್ನಡತಿ ರಶ್ಮಿಕಾ ಮಂದಣ್ಣ ಈಗ ಮುಟ್ಟಿದ್ದೆಲ್ಲಾ ಚಿನ್ನ. ಟಾಲಿವುಡ್‍ನಲ್ಲಿ ಇವರು ಈಗ ಸಖತ್ ಹೆಸರು ಮಾಡುತ್ತಿದ್ದಾರೆ. ಈ ಹಿಂದೆ `ಚಲೋ’ ಚಿತ್ರದಲ್ಲಿ ಅಭಿನಯಿಸಿ ಹೆಸರು ಮಾಡಿದ್ದ ರಶ್ಮಿಕಾಗೆ ಈಗ `ಗೀತಾ ಗೋವಿಂದಂ’ ಚಿತ್ರ ಮತ್ತೊಂದು ಸೂಪರ್ ಹಿಟ್‍ನ ಸಿಹಿ ನೀಡಿದೆ. ಇದು ಟಾಲಿವುಡ್‍ನಲ್ಲಿ ರಶ್ಮಿಕಾರನ್ನು ಇನ್ನಷ್ಟು ಭದ್ರವಾಗಿ ನೆಲೆಯೂರುವಂತೆ ಮಾಡಿದೆ. ಹೀಗೆ, ಯಶಸ್ಸಿನ ಹಾದಿಯಲ್ಲಿ ಸಾಗುತ್ತಿರುವ ರಶ್ಮಿಕಾ ಈಗ ತಮ್ಮ ಸಂಭಾವನೆಯನ್ನೂ ಹೆಚ್ಚಿಕೊಂಡಿದ್ದಾರೆ …

Read More »

ಜಯಲಲಿತಾ ಪಾತ್ರಕ್ಕೆ ಐಶ್ವರ್ಯ, ಅನುಷ್ಕಾ…?

ಚೆನ್ನೈ : ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಜೀವನ ಕತೆಯನ್ನು ಚಿತ್ರವಾಗಿಸುವ ಯತ್ನ ಈಗ ನಡೆಯುತ್ತಿದೆ. ಖ್ಯಾತ ನಿರ್ದೇಶಕ ಭಾರತೀರಾಜ ಈ ಚಿತ್ರವನ್ನು ಕೈಗೆತ್ತಿಕೊಳ್ಳುವ ಉತ್ಸುಕತೆಯಲ್ಲಿದ್ದು, ಎರಡು ಹೆಸರನ್ನೂ ರಿಜಿಸ್ಟರ್ ಮಾಡಿದ್ದಾರೆ. ಅಮ್ಮ ಮತ್ತು ಪುರಚ್ಚಿ ತಲೈವಿ ಎಂಬ ಎರಡು ಹೆಸರು ಈಗಾಗಲೇ ರಿಜಿಸ್ಟರ್ ಆಗಿದ್ದು, ಜಯ ಪಾತ್ರವನ್ನು ನಿರ್ವಹಿಸುವವರು ಯಾರು ಎಂಬ ಬಗ್ಗೆ ಶೋಧ ನಡೆಯುತ್ತಿದೆ. ಈ ಶೋಧದಲ್ಲಿ ಇಬ್ಬರ ಹೆಸರು ಸಖತ್ ಮುಂಚೂಣಿಗೆ ಬಂದಿದೆ. ಐಶ್ವರ್ಯ ಮತ್ತು …

Read More »

ತೆರೆಗೆ ಬರುತ್ತಿದೆ ಶ್ರೀರೆಡ್ಡಿ ಜೀವನ ಕತೆ…!

ಚೆನ್ನೈ: ಕಾಸ್ಟಿಂಗ್ ಕೌಚ್ ಮೂಲಕ ಧ್ವನಿ ಎತ್ತಿ, ಆಗೊಮ್ಮೆ ಈಗೊಮ್ಮೆ ವಿಚಿತ್ರವಾಗಿ ಪ್ರೊಟೆಸ್ಟ್ ಮಾಡಿ ಗಮನ ಸೆಳೆದಿದ್ದ ವಿವಾದಿತ ನಟಿ ಶ್ರೀರೆಡ್ಡಿ ಜೀವನ ಈಗ ತೆರೆಗೆ ಬರುತ್ತಿದೆ. `ಶ್ರೀರೆಡ್ಡಿ ಡೈರಿ’ ಎಂದು ಚಿತ್ರಕ್ಕೆ ಹೆಸರಿಡಲಾಗಿದ್ದು, ಟಾಲಿವುಡ್ ಮತ್ತು ಕಾಲಿವುಡ್‍ನಲ್ಲಿ ಸಖತ್ ಸೆನ್ಸೇಷನ್ ಕ್ರಿಯೇಟ್ ಮಾಡಿದೆ. ಚೆನ್ನೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಈ ವಿಷಯವನ್ನು ಚಿತ್ರತಂಡ ಸ್ಪಷ್ಟಪಡಿಸಿದೆ. ನಿರ್ದೇಶಕ ಅಲ್ಲಾವುದ್ದಿನ್ ಈ ಪ್ರಾಜೆಕ್ಟ್ ಅನ್ನು ಕೈಗೆತ್ತಿಕೊಂಡಿದ್ದಾರೆ. ಶ್ರೀರೆಡ್ಡಿ ಜೀವನ ಕತೆಯನ್ನೇ ಆಧರಿಸಿ ಈ …

Read More »

ಅಕ್ಷಯ್ ಕೈಗೆ ವಿಜಯ್ `ಕತ್ತಿ’…

ಮುಂಬೈ : ತಮಿಳಿನ ಖ್ಯಾತ ನಟ ವಿಜಯ್ ಅಭಿನಯದ `ಕತ್ತಿ’ ಚಿತ್ರ ಸಖತ್ ಹಿಟ್ ಆಗಿತ್ತು. ಎ.ಆರ್.ಮುರುಘಾದಾಸ್ ನಿರ್ದೇಶನದ ಈ ಚಿತ್ರ ರಿಲೀಸ್ ಟೈಮ್‍ನಲ್ಲಿ ಟಾಲಿವುಡ್‍ನಲ್ಲೂ ಸೆನ್ಸೇಷನ್ ಕ್ರಿಯೇಟ್ ಮಾಡಿತ್ತು. ಹೀಗಾಗಿ, ಡಬ್ ಆದ ಚಿತ್ರವನ್ನು ತೆಲುಗಿನಲ್ಲಿ ರಿಲೀಸ್ ಮಾಡಲು ನಿರ್ಮಾಕರು ನಿರ್ಧರಿಸಿದ್ದರು. ಆದರೆ, ಕಡೇ ಕ್ಷಣದಲ್ಲಿ ಈ ರಿಲೀಸ್ ನಿರ್ಧಾರಕ್ಕೆ ಬ್ರೇಕ್ ಹಾಕಿ ಚಿತ್ರದ ರಿಮೇಕ್ ರೈಟ್ಸ್ ಅನ್ನು ಸೇಲ್ ಮಾಡಲಾಗಿತ್ತು. ಬಳಿಕ ಮೆಗಾಸ್ಟಾರ್ ಚಿರಂಜೀವಿ ಈ ಚಿತ್ರವನ್ನು …

Read More »

ಫೋಟೋ ಶೂಟ್‍ನಲ್ಲಿ ಬ್ಯಾಲೆನ್ಸ್ ತಪ್ಪಿದ ನಟಿ…! : ತನ್ನಿಂದಾಗಿಯೇ ತನ್ನ ವೀಡಿಯೋ ವೈರಲ್…!

ಮುಂಬೈ : ಸಾಮಾಜಿಕ ಜಾಲತಾಣದಲ್ಲಿ ಸದಾ ಆಕ್ಟೀವ್ ಆಗಿರುವ ಬಾಲಿವುಡ್ ಬ್ಯೂಟಿ ಊರ್ವಶಿ ರಟೇಲಾ ಈಗ ತನ್ನದೇ ವೀಡಿಯೋವೊಂದನ್ನು ಶೇರ್ ಮಾಡಿದ್ದಾರೆ. ಈ ವೀಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಫೋಟೋ ಶೂಟ್ ವೇಳೆ ಊರ್ವಶಿ ಬ್ಯಾಲೆನ್ಸ್ ತಪ್ಪುವ ವೀಡಿಯೋವದು. ಈ ವೀಡಿಯೋವನ್ನು ಊರ್ವಶಿ ಸಾಮಾಜಿಕ ಜಾಲತಾಣಕ್ಕೆ ಹಾಕಿಕೊಂಡಿದ್ದಾರೆ. ತಕ್ಷಣ ಅವರ ಸ್ನೇಹಿತರು ಊರ್ವಶಿ ಅವ್ರನ್ನು ಮಾತಿನಲ್ಲಿಯೇ ಕಾಳೆಯುವುದಕ್ಕೆ ಆರಂಭಿಸಿದ್ದಾರೆ. ಊರ್ವಶಿ ಕೂಡಾ ಸಖತ್ ಮಸ್ತಿಯಿಂದಲೇ ರಿಪ್ಲೈ ಮಾಡುತ್ತಿದ್ದಾರೆ.

Read More »

ಮೂಡಬಿದಿರೆಯಲ್ಲಿ ನಾಪತ್ತೆಯಾದ ಯುವಕನ ಶವ ಪತ್ತೆ : ತಮ್ಮನಿಂದಲೇ ಕೊಲೆಯಾಗಿರುವ ಶಂಕೆ

ಮೂಡಬಿದಿರೆ : ಆಗಸ್ಟ್ 11 ರಿಂದ ನಾಪತ್ತೆಯಾಗಿದ್ದ ಮೂಡಬಿದಿರೆಯ ಸುದರ್ಶನ್ ಜೈನ್ ಎಂಬ ಯುವಕ ಶವವಾಗಿ ಪತ್ತೆಯಾಗಿದ್ದಾರೆ. ಸುದರ್ಶನ್‍ಗೆ 28 ವರ್ಷ ವಯಸ್ಸಾಗಿತ್ತು. ಇಲ್ಲಿನ ಪ್ರಭಾತ್ ಟೆಕ್ಸ್ ಟೈಲ್ಸ್ ನಲ್ಲಿ ಕೆಲಸ ಮಾಡುತ್ತಿದ್ದ ಸುದರ್ಶನ್ ಆಗಸ್ಟ್ 11 ರಿಂದ ನಾಪತ್ತೆಯಾಗಿದ್ದರು. ತಮ್ಮನೊಂದಿಗೆ ಬೈಕ್‍ನಲ್ಲಿ ಹೋಗಿದ್ದ ಸುದರ್ಶನ್ ನಂತರ ನಾಪತ್ತೆಯಾಗಿದ್ದರು. ಬಳಿಕ ತಮ್ಮನ ಬಳಿ ವಿಚಾರಿಸಿದಾಗ ಅಣ್ಣ ಅರ್ಧದಲ್ಲೇ ಬೈಕ್‍ನಿಂದ ಇಳಿದು ಜಗಳ ಮಾಡಿಕೊಂಡು ಹೋಗಿದ್ದಾಗಿ ಹೇಳಿದ್ದ. ಆದರೆ, ಇದೀಗ ಸುದರ್ಶನ್ …

Read More »
error: Content is protected !!