Sunday , July 22 2018
ಕೇಳ್ರಪ್ಪೋ ಕೇಳಿ
Home / sudina (page 20)

sudina

`ಅಮ್ಮೆರ್ ಪೊಲೀಸ’ ತುಳು ಚಿತ್ರಕ್ಕೆ ಕ್ರಿಕೆಟಿಗ ಶ್ರೀಶಾಂತ್, ಒಳ್ಳೆ ಹುಡುಗ ಪ್ರಥಮ್ ಸಪೋರ್ಟ್

ಮಂಗಳೂರು : ಕೋಸ್ಟಲ್‍ವುಡ್‍ನಲ್ಲಿ ಸಾಕಷ್ಟು ನಿರೀಕ್ಷೆ ಹುಟ್ಟಿಸಿರುವ `ಅಮ್ಮೆರ್ ಪೊಲೀಸ’ ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ. ಜೂನ್ 22ಕ್ಕೆ ಈ ಚಿತ್ರ ತೆರೆಗೆ ಬರುತ್ತಿದೆ. ಚಿತ್ರತಂಡವೂ ಫಿಲಂನ ಪ್ರಮೋಷನ್‍ನಲ್ಲಿ ಬ್ಯುಸಿ ಇದೆ. ಈ ನಡುವೆ, ಹಲವು ಪ್ರಮುಖರು ಚಿತ್ರಕ್ಕೆ ಶುಭಕೋರಿದ್ದಾರೆ. ಕ್ರಿಕೆಟಿಗ ಶ್ರೀಶಾಂತ್ ಈ ಚಿತ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಜೊತೆಗೆ, ತನ್ನ ಸ್ನೇಹಿತ ರೂಪೇಶ್ ಶೆಟ್ಟಿ ಚಿತ್ರ ಬೆಂಬಲಿಸುವಂತೆ ಕೇಳಿಕೊಂಡಿದ್ದಾರೆ. ಇನ್ನೊಂದ್ಕಡೆ, ಬಿಗ್‍ಬಾಸ್ ಖ್ಯಾತಿಯ ಒಳ್ಳೆಯ ಹುಡುಗ ಪ್ರಥಮ್ ಕೂಡಾ …

Read More »

ಅಪೂರ್ವ ಸಂಗಮ… : ಇಬ್ಬರು `ರಾಜ’ ರತ್ನಗಳ ಸಮಾಗಮ…

ಬೆಂಗಳೂರು : ವರನಟ ರಾಜ್‍ಕುಮಾರ್ ಅಂದರೇನೆ ಒಂದು ಶಕ್ತಿ. ರಾಜ್ ಬರೀ ನಟನಲ್ಲ. ಅವರು ಕನ್ನಡದ ಸಾಕ್ಷಿಪ್ರಜ್ಞೆ… ಕರುನಾಡ ದೊಡ್ಡ ಆಸ್ತಿ. ಸರಳ ಸಜ್ಜನಿಕೆಗೆ ರಾಜ್ ಮತ್ತೊಂದು ಹೆಸರು. ಇಂತಹ ಅಪೂರ್ವ ನಟರಿಗೆ ಎಲ್ಲಾ ಭಾಷೆಯ ಚಿತ್ರರಂಗದ ದಿಗ್ಗಜರೂ ಸ್ನೇಹಿತರು. ಎಲ್ಲರೂ ರಾಜ್ ಅವರನ್ನು ಕೊಂಡಾಡುವವರೇ. ಇಂತಹ ಮಹಾನ್ ನಟನ ಬದುಕಿನ ಅಪರೂಪದ ಫೋಟೋಗಳಲ್ಲಿ ಇದೂ ಒಂದು. ಡಾ.ರಾಜ್ ಪುತ್ರ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಈ ಅಪರೂಪದ ಫೋಟೋವನ್ನು …

Read More »

ತಾಯ್ತನದ ಖುಷಿಯಲ್ಲಿ ಸಾನಿಯಾ ಮಿರ್ಜಾ… : ಅಕ್ಟೋಬರ್ ಗೆ ಮನೆಗೆ ಹೊಸ ಅತಿಥಿ…

ಹೈದರಾಬಾದ್ : ಟೆನಿಸ್ ತಾರೆ ಸಾನಿಯಾ ಮಿರ್ಜಾ ಖ್ಯಾತಿಯಲ್ಲಿ ಯಾವುದೇ ಬಾಲಿವುಡ್ ತಾರೆಗಿಂತ ಕಡಿಮೆ ಇಲ್ಲ. ತನ್ನ ಪ್ರತಿಭೆಯ ಮೂಲಕವೇ ಹಲವು ಪ್ರಶಸ್ತಿ ಗೌರವಕ್ಕೆ ಮುತ್ತಿಟ್ಟಿರೋ ಹೈದರಾಬಾದ್‍ನ ಈ ಸುಂದರಿ ಈಗ ಬದುಕಿನ ಮತ್ತೊಂದು ಸುಂದರ ಕ್ಷಣಗಳನ್ನು ಕಳೆಯುತ್ತಿದ್ದಾರೆ. ಅದೇ ತಾಯ್ತನದ ಖುಷಿ. ಇದನ್ನು ಸ್ವತಃ ಸಾನಿಯಾ ಸ್ಪಷ್ಟಪಡಿಸಿದ್ದು, ಇದೇ ವರ್ಷದ ಅಕ್ಟೋಬರ್ ವೇಳೆಗೆ ಸಾನಿಯಾ ಮನೆಗೆ ಹೊಸ ಅತಿಥಿಯ ಆಗಮನವಾಗಲಿದೆ. Looking at my pre-pregnancy clothes like …

Read More »

ಚಿಕಾಗೋದಲ್ಲಿ ಟಾಲಿವುಡ್ ನಟಿಯರ ವೇಶ್ಯಾವಾಟಿಕೆ… : ಈ ದಂಧೆ ನಡೆಯುತ್ತಿದ್ದದ್ದು ಹೇಗೆ ಗೊತ್ತಾ…?

ಹೈದರಾಬಾದ್ : ಟಾಲಿವುಡ್ ಈಗ ಬೇಡದ ಕಾರಣಕ್ಕೇ ಸುದ್ದಿಯಾಗ್ತಿದೆ. ನಟಿ ಶ್ರೀರೆಡ್ಡಿ ಕಾಸ್ಟಿಂಗ್ ಕೌಚ್ ಬಗ್ಗೆ ಧ್ವನಿ ಎತ್ತಿದ ಬೆನ್ನಲ್ಲೇ ತೆಲುಗು ಫಿಲಂ ಇಂಡಸ್ಟ್ರಿಯ ಪ್ರಮುಖ ನಿರ್ಮಾಪಕ ಕೃಷ್ಣನ್ ಮುದುಗುಮುಡಿ ಮತ್ತು ಆತನ ಪತ್ನಿ ಚಂದ್ರಕಲಾ ಪೂರ್ಣಿಮಾ ಮುದುಗುಮುಡಿ ನಡೆಸುತ್ತಿದ್ದ ವೇಶ್ಯಾವಾಟಿಕೆ ದಂಧೆಯ ವಿಷಯ ಸಂಚಲನ ಮೂಡಿಸಿದೆ. ಈ ದಂಪತಿ ಅಮೇರಿಕಾದ ಚಿಕಾಗೋದಲ್ಲಿ ಈ ವೇಶ್ಯಾವಾಟಿಕಾ ವ್ಯವಹಾರ ನಡೆಸುತ್ತಿದ್ದು, ಬಂಧನಕ್ಕೊಳಗಾಗಿದ್ದಾರೆ. ಇವರ ವಿರುದ್ಧ ಸ್ಥಳೀಯ ನ್ಯಾಯಾಲಯದಲ್ಲಿ 42 ಪುಟಗಳ ಚಾರ್ಜ್‍ಶೀಟ್ …

Read More »

ರಿಷಬ್ `ಸಹಿಪಾ ಶಾಲೆ ಕಾಸರಗೋಡು’ ಚಿತ್ರ ಬಿಡುಗಡೆಗೆ ಗೆ ಮುಹೂರ್ತ ಫಿಕ್ಸ್…

ಬೆಂಗಳೂರು : ಸೂಪರ್ ಹಿಟ್ `ಕಿರಿಕ್ ಪಾರ್ಟಿ’ ಚಿತ್ರದ ಬಳಿಕ ನಿರ್ದೇಶಕ ರಿಷಬ್ ಶೆಟ್ಟಿ ತಮ್ಮ ಕನಸಿನ ಚಿತ್ರವನ್ನು ಕೈಗೆತ್ತಿಕೊಂಡಿದ್ದಾರೆ. ಗಡಿಜಿಲ್ಲೆ ಕಾಸರಗೋಡಿನ ಕನ್ನಡ ಶಾಲೆ ಮತ್ತು ಅಲ್ಲಿನ ಸ್ಥಿತಿಗತಿಗಳನ್ನೇ ಕತೆಯನ್ನಾಗಿಸಿ ರಿಷಬ್ `ಸಹಿಪಾ ಶಾಲೆ ಕಾಸರಗೋಡು ಕೊಡುಗೆ ರಾಮಣ್ಣ ರೈ’ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಈ ಚಿತ್ರ ಈಗಾಗಲೇ ಸಾಕಷ್ಟು ನಿರೀಕ್ಷೆ ಮೂಡಿಸಿದ್ದು, ಚಿತ್ರದ ಬಿಡುಗಡೆಗೆ ಮುಹೂರ್ತ ಕೂಡಾ ಫಿಕ್ಸ್ ಆಗಿದೆ. ಆಗಸ್ಟ್ 16 ರಂದು ಈ ಚಿತ್ರವನ್ನು ತೆರೆಗೆ …

Read More »

`ಮಾಣಿಕ್ಯ’ನ ಮಾತು ಕೇಳಿ ಮನೆಗೆ ಮರಳಿದ ಬಾಲಕ…

ಬೆಂಗಳೂರು : ಕಿಚ್ಚ ಸುದೀಪ್ ಅವರ ಒಂದು ವೀಡಿಯೋ ಈಗ ಮನೆಯೊಂದರಲ್ಲಿ ಸಂತಸ ಮೂಡಿಸಿದೆ. ಹೆತ್ತವರೊಂದಿಗೆ ಜಗಳ ಮಾಡಿಕೊಂಡು ಮನೆ ಬಿಟ್ಟು ಹೋಗಿದ್ದ ಬಾಲಕನೊಬ್ಬ ಈಗ ಮರಳಿ ಮನೆ ಸೇರಿದ್ದಾನೆ… ಕಳೆದ ತಿಂಗಳು ಬೆಂಗಳೂರಿನ ಮಣಿಕಂಠ ಎಂಬ ಬಾಲಕ ಹೆತ್ತವರೊಂದಿಗೆ ಜಗಳ ಮಾಡಿಕೊಂಡು ಮನೆ ಬಿಟ್ಟು ಹೋಗಿದ್ದ. ಈ ಮಣಿಕಂಠ ಕಿಚ್ಚ ಸುದೀಪ್ ಅವರ ಅಭಿಮಾನಿ. ಈ ವಿಷಯ ಗೊತ್ತಾಗಿ ಸುದೀಪ್ ತಮ್ಮ ಬ್ಯುಸಿ ಸೆಡ್ಯೂಲ್ಡ್ ನಡುವೆಯೂ ವೀಡಿಯೋ ಮಾಡಿ …

Read More »

ಕರಾವಳಿ ಕುಂಬಾರರ ಯುವ ವೇದಿಕೆ ಪದಾಧಿಕಾರಿಗಳ ಆಯ್ಕೆ

ಬಂಟ್ವಾಳ : ಕರಾವಳಿ ಕುಂಬಾರರ ಯುವವೇದಿಕೆ ಬಂಟ್ವಾಳ ವಿಧಾನಸಭಾ ಕ್ಷೇತ್ರ ಇದರ ಕಾರ್ಯಕಾರಿ ಸಮಿತಿ ಸಭೆಯು ಪೊಸಳ್ಳಿ ಕುಲಾಲ ಸಮುದಾಯ ಭವನದಲ್ಲಿ ನಾರಾಯಣ ಸಿ ಪೆರ್ನೆಯವರ ಅಧ್ಯಕ್ಷತೆಯಲ್ಲಿ ಜರಗಿತು. ಸಭೆಯಲ್ಲಿ ಮುಂದಿನ ಸಾಲಿನ ನೂತನ ಅಧ್ಯಕ್ಷರಾಗಿ ಸುಕುಮಾರ್ ಬಂಟ್ವಾಳ ಅವಿರೋಧವಾಗಿ ಆಯ್ಕೆಯಾದರು. ಗೌರವಾಧ್ಯಕ್ಷರಾಗಿ ನಾರಾಯಣ ಸಿ.ಪೆರ್ನೆ, ಕಾರ್ಯದರ್ಶಿಯಾಗಿ ಹರಿಪ್ರಸಾದ್, ಉಪಾಧ್ಯಕ್ಷರಾಗಿ ಸತೀಶ್ ಜಕ್ರಿಬೆಟ್ಟು, ಸತೀಶ ಸಂಪಾಜೆ, ಖಜಾಂಚಿಯಾಗಿ ಕವಿರಾಜ್ , ಸಂತೋಷ್ ಮರ್ತಾಜೆ, ಕ್ರೀಡಾ ಕಾರ್ಯದರ್ಶಿ ಜಯರಾಜ್ ಬಂಗೇರ, ಸಾಂಸ್ಕøತಿಕ …

Read More »

ಹಳ್ಳಿಗಟ್ಟು ಚಮ್ಮಟೀರ ಕುಟುಂಬಸ್ಥರ ವೈಭವದ ಪಾಷಣ ಮೂರ್ತಿ ಕೋಲ

ಮಡಿಕೇರಿ : ಹಳ್ಳಿಗಟ್ಟು ಚಮ್ಮಟೀರ ಕುಟುಂಬಸ್ಥರ ಬಲ್ಯ ಮನೆಯಲ್ಲಿ 5 ವರ್ಷಗಳಿಗೊಮ್ಮೆ ನಡೆಯುವ ಪಾಷಣ ಮೂರ್ತಿ ಕೋಲ ಮೊನ್ನೆ ವೈಭವದಿಂದ ನಡೆಯಿತು. ನೂರಾರು ವರ್ಷಗಳ ಇತಿಹಾಸ ಇರುವ ಈ ಕೋಲಕ್ಕೆ ಚಮ್ಮಟೀರ ಕುಟುಂಬಸ್ಥರು, ತವರುಮನೆ ಹೆಣ್ಣುಮಕ್ಕಳು, ನೆಂಟರು, ಊರಿನವರು ಸಾಕ್ಷಿಯಾದರು. ತುಳುನಾಡಿನ ಸಂಸ್ಕೃತಿಯನ್ನು ಬಿಂಬಿಸುವ ಈ ಕೋಲವನ್ನು ಹಳ್ಳಿಗಟ್ಟು ಮೂಲದ ಚಮ್ಮಟೀರ ಕುಟುಂಬಸ್ಥರು ಒಟ್ಟು ಸೇರಿ ಪ್ರತಿ ಐದು ವರ್ಷಗಳಿಗೊಮ್ಮೆ ನಡೆಸಿಕೊಂಡು ಬರುತ್ತಿದ್ದಾರೆ. ಧರ್ಮ ದೇವತೆ, ಪಂಜುರ್ಲಿ, ಪಾಷಣಮೂರ್ತಿ, ಗುಳಿಗ …

Read More »

ಜೆಸಿಬಿಯಲ್ಲಿ ವಧುವರರ ಮೆರವಣಿಗೆ : ವೈರಲ್ ಆಯ್ತು ವೀಡಿಯೋ

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ನಡೆದ ಮದುವೆ ವೀಡಿಯೋವೊಂದು ಈಗ ವೈರಲ್ ಆಗಿದೆ. ಸಾಮಾನ್ಯವಾಗಿ ಮದುಮಕ್ಕಳನ್ನು ಕಾರಿನಲ್ಲಿ ಕರೆದುಕೊಂಡು ಹೋಗ್ತಾರೆ. ಆದ್ರೆ, ಇಲ್ಲಿ ಒಬ್ಬರು ಡಿಫ್ರೆಂಟ್ ಆಗಿಯೇ ಮದುವೆಯ ಮೆರವಣಿಗೆ ಮಾಡಿಕೊಂಡಿದ್ದಾರೆ. ಅದೂ ಜೆಸಿಬಿ ಮೂಲಕ…! ಅಸಲಿಗೆ ವರ ಚೇತನ್ ಜೆಸಿಬಿ ಆಪರೇಟರ್. ಹೀಗಾಗಿ, ತನ್ನ ಕಾಯಕದ ಬಗೆಗಿನ ಹೆಮ್ಮೆಯಿಂದಲೇ ಚೇತನ್ ಹೀಗೆ ತನಗೆ ಅನ್ನ ಕೊಡುವ ಜೆಸಿಬಿಯಲ್ಲೇ ಮೆರವಣಿಗೆ ಮಾಡಿಕೊಂಡಿದ್ದಾರೆ. ಇದಕ್ಕೆ ಇವರ ಮಡದಿ ಮಮತಾ …

Read More »

ಟ್ಯಾಂಕರ್​ಗೆ ಬೆಂಕಿ : ಓರ್ವ ಸಜೀವ ದಹನ

ಚಿಕ್ಕಮಗಳೂರು : ಟ್ಯಾಂಕರ್​ ಪಲ್ಟಿಯಾಗಿ ಹೊತ್ತಿಕೊಂಡ ಬೆಂಕಿಯಿಂದ ವ್ಯಕ್ತಿ ಸಜೀವ ದಹನವಾಗಿ ಇನ್ನೋರ್ವ ತೀವ್ರವಾಗಿ ಗಾಯಗೊಂಡಿರುವ ಘಟನೆ ಚಿಕ್ಕಮಗಳೂರಿನ ಕಡೂರು ತಾಲೂಕಿನ ಅಜ್ಜಂಪುರ ಪೊಲೀಸ್ ಠಾಣಾ ವ್ಯಾಪ್ತಿಯ ಗಿರಿಯಾಪುರದಲ್ಲಿ ನಡೆದಿದೆ. ಪೆಟ್ರೋಲ್ ಮತ್ತು ಡೀಸೆಲ್ ತುಂಬಿ ಬರುತ್ತಿದ್ದ ಟ್ಯಾಂಕರ್ ಗಿರಿಯಾಪುರದಲ್ಲಿ ನಿಯಂತ್ರಣ ತಪ್ಪಿ ಬಸ್​ ನಿಲ್ದಾಣಕ್ಕೆ ಡಿಕ್ಕಿ ಹೊಡೆದು ಬಳಿಕ ಪಲ್ಟಿಯಾಗಿದೆ. ತಕ್ಷಣ ಬೆಂಕಿ ಹೊತ್ತಿಕೊಂಡಿದ್ದು ಟ್ಯಾಂಕರ್​ನಲ್ಲಿದ್ದ ಓರ್ವ ಸಜೀವ ದಹನವಾಗಿದ್ದಾರೆ. ಇನ್ನು, ಎರಡು ಟ್ಯಾಂಕರ್​ಗಳು ವೇಗವಾಗಿ ಬರುತ್ತಿದ್ದು, ಓವರ್​ಟೇಕ್ …

Read More »
error: Content is protected !!