Saturday , February 16 2019
ಕೇಳ್ರಪ್ಪೋ ಕೇಳಿ
Home / sudina (page 235)

sudina

ಹೈದರಾಬಾದ್‍ನ ಫಿಲಂ ನಗರ್‍ನಲ್ಲಿ ಕಟ್ಟಡ ಕುಸಿತ : ಇಬ್ಬರ ದುರ್ಮರಣ

ಹೈದರಾಬಾದ್ : ಫಿಲಂ ನಗರ್ ಕಲ್ಚರಲ್ ಸೆಂಟರ್‍ನಲ್ಲಿ ಹೊಸದಾಗಿ ನಿರ್ಮಾಣವಾಗುತ್ತಿದ್ದ ಕಟ್ಟಡ ಕುಸಿದಿದೆ. ಈ ದುರಂತದಲ್ಲಿ ಇಬ್ಬರು ಕಾರ್ಮಿಕರು ಸಾವನ್ನಪ್ಪಿದ್ದಾರೆ. ಭಾನುವಾರ ಬೆಳಗ್ಗೆ ಈ ದುರಂತ ಸಂಭವಿಸಿದೆ. ಮೃತರನ್ನು ಕೋಲ್ಕತ್ತಾದ ಅನ್ಸರ್ ಸಾಧಿಕ್ ಮತ್ತು ಹೈದರಾಬಾದ್‍ನ ಆನಂದ್ ಎಂದು ಗುರುತಿಸಲಾಗಿದೆ. ಗಾಯಾಳುಗಳನ್ನು ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿದೆ. ಸುದ್ದಿ ತಿಳಿದ ತಕ್ಷಣ ಸ್ಥಳಕ್ಕೆ ಬಂದ ಅಗ್ನಿಶಾಮಕ ದಳ ರಕ್ಷಣಾ ಕಾರ್ಯದಲ್ಲಿ ತೊಡಗಿ ಕಟ್ಟಡದಲ್ಲಿ ಸಿಲುಕಿದ್ದ ಹಲವು ಕಾರ್ಮಿಕರನ್ನು ರಕ್ಷಿಸಿದೆ. video courtesy …

Read More »

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಲಾ ಕಾಲೇಜಿಗೆ ಇಲ್ಲ ರಜೆ

ಮಂಗಳೂರು : ಸಾರಿಗೆ ಇಲಾಖೆ ಸಿಬ್ಬಂದಿ ಮುಷ್ಕರ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಶಾಲಾ ಕಾಲೇಜುಗಳಿಗೆ ಸರ್ಕಾರ ರಜೆ ಘೋಷಣೆ ಮಾಡಿದೆ. ಆದರೆ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ರಜೆ ಇರುವುದಿಲ್ಲ. ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ಈ ಆದೇಶ ಹೊರಡಿಸಿದ್ದಾರೆ. ಹೇಳಿಕೇಳಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಖಾಸಗಿ ಬಸ್‍ಗಳೇ ಪಾರಮ್ಯ ಹೊಂದಿವೆ. ಇಲ್ಲಿ ಕೆಎಸ್‍ಆರ್‍ಟಿಸಿ ಬಸ್ ಓಡಾಟ ಕಡಿಮೆ. ಹೀಗಾಗಿ, ಜಿಲ್ಲಾಧಿಕಾರಿಗಳು ಈ ಆದೇಶ ಹೊರಡಿಸಿದ್ದಾರೆ. ಇನ್ನು, ಬೆಳಗಾವಿಯಲ್ಲೂ ನಾಳೆ ಒಂದು ದಿನ ಶಾಲಾ …

Read More »

ಶರಣ್‍ಗೆ ಪುನೀತ್ ರಾಜ್‍ಕುಮಾರ್ ಧ್ವನಿ

ಬೆಂಗಳೂರು : ಪವರ್‍ಸ್ಟಾರ್ ಪುನೀತ್ ರಾಜ್‍ಕುಮಾರ್ `ನಟರಾಜ ಸರ್ವೀಸ್’ ಚಿತ್ರಕ್ಕೆ ಹಾಡು ಹೇಳಿದ್ದಾರೆ. ತನ್ನ ಬ್ಯುಸಿ ಸೆಡ್ಯೂಲ್ಡ್‍ನ ನಡುವೆ ಪುನೀತ್ ಬಂದು ಈ ಚಿತ್ರಕ್ಕೆ ಹಾಡು ಹೇಳಿದ್ದಾರೆ. ಪವನ್ ಒಡೆಯರ್ ನಿರ್ದೇಶನದ ಈ ಚಿತ್ರದಲ್ಲಿ ಶರಣ್ ನಾಯಕನಾಗಿದ್ದು, ಮಯೂರಿ ನಾಯಕಿಯಾಗಿದ್ದಾರೆ. ಅನೂಪ್ ಸಿಳೀನ್ ಈ ಚಿತ್ರಕ್ಕೆ ಸಂಗೀತ ನೀಡಿದ್ದು, ಟೈಟಲ್ ಟ್ರಾಕ್‍ಗೆ ಪುನೀತ್ ಧ್ವನಿಯಾಗಿದ್ದಾರೆ.

Read More »

ಇನ್ನೂ ಒಂದು ತಿಂಗಳ ವಿಶ್ರಾಂತಿ ಪಡೆಯಬೇಕು ಕಮಲ್ ಹಾಸನ್

ಚೆನ್ನೈ : ಕಾಲು ಮುರಿತಕ್ಕೊಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸೂಪರ್‍ಸ್ಟಾರ್ ಕಮಲ್ ಹಾಸನ್ ಇನ್ನೂ ಕೆಲವು ದಿನಗಳ ಕಾಲ ಆಸ್ಪತ್ರೆಯಲ್ಲೇ ಇರಬೇಕಾಗಿದೆ. ಅದೂ ಅಲ್ಲದೆ, ಒಂದು ತಿಂಗಳ ಕಾಲ ಸಂಪೂರ್ಣ ವಿಶ್ರಾಂತಿಗೆ ವೈದ್ಯರು ಕಮಲ್ ಸೂಚಿಸಿದ್ದಾರೆ. ಸದ್ಯ ಕಮಲ್ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಮಲ್ ತಮ್ಮ ಹೊಸ ಚಿತ್ರದ ಕೆಲಸದಲ್ಲಿ ತೊಡಗಿದ್ದರು. ಆದರೆ, ಈ ಘಟನೆಯ ಬಳಿಕ ಚಿತ್ರದ ಶೂಟಿಂಗ್ ಸೆಪ್ಟೆಂಬರ್‍ಗೆ ಮುಂದೂಡಿಕೆಯಾಗಿದೆ.

Read More »

ನಾಸಿರುದ್ದೀನ್ ಷಾ ವಿರುದ್ಧ ಟ್ವಿಂಕಲ್ ಖನ್ನಾ ಗರಂ

ಮುಂಬೈ : ನಟ ನಾಸಿರುದ್ದೀನ್ ಷಾ ವಿರುದ್ಧ ನಟಿ ಮತ್ತು ಅಕ್ಷಯ್ ಕುಮಾರ್ ಪತ್ನಿ ಟ್ವಿಂಕಲ್ ಖನ್ನಾ ಗರಂ ಆಗಿದ್ದಾರೆ. ತನ್ನ ತಂದೆ ರಾಜೇಶ್ ಖನ್ನಾರನ್ನು ನಾಸಿರುದ್ದೀನ್ ಷಾ `ಬಡ ನಟ’ ಎಂದು ಹೇಳಿರುವುದು ಟ್ವಿಂಕಲ್‍ಗೆ ಸಿಟ್ಟು ತರಿಸಿದೆ. ಸಂದರ್ಶನವೊಂದರಲ್ಲಿ ಬೇರೆ ಬೇರೆ ಘಟನೆಗಳನ್ನು ನೆನೆಯುತ್ತಾ ನಾಸಿರುದ್ದೀನ್ ಷಾ ಖನ್ನಾರನ್ನು ಬಡ ನಟ ಎಂದು ಹೇಳಿದ್ದರು. ಇದು ಟ್ವಿಂಕಲ್‍ಗೆ ಕೋಪ ತಂದಿದೆ. ಹೀಗಾಗಿ, ಅವರು ಟ್ವಿಟರ್‍ನಲ್ಲಿ ನಾಸಿರುದ್ದೀನ್ ಷಾರ ಮಾತನ್ನು …

Read More »

ನಾಳೆ ಶಾಲಾ ಕಾಲೇಜುಗಳಿಗೆ ರಜೆ : ಪರೀಕ್ಷೆ ಕೂಡಾ ಮುಂದೂಡಿಕೆ

ಬೆಂಗಳೂರು : ರಾಜ್ಯ ಸಾರಿಗೆ ಸಂಸ್ಥೆ ನೌಕರರ ಪ್ರತಿಭಟನೆಯ ಬಿಸಿ ಈಗ ಶಾಲಾ ಕಾಲೇಜುಗಳಿಗೂ ತಟ್ಟಿದೆ. ಮುಷ್ಕರ ಹಿನ್ನೆಲೆಯಲ್ಲಿ ನಾಳೆ ಮತ್ತು ನಾಡಿದ್ದು ಎರಡು ದಿನ ಶಾಲಾ ಕಾಲೇಜುಗಳಿಗೆ ರಜೆ ನೀಡಲಾಗಿದೆ. ಸರ್ಕಾರ ಈ ಬಗ್ಗೆ ಅಧಿಕೃತ ಆದೇಶ ಹೊರಡಿಸಿದೆ. ಪರೀಕ್ಷೆ ಮುಂದೂಡಿಕೆ : ಇನ್ನು, ಮುಷ್ಕರದ ಹಿನ್ನೆಲೆಯಲ್ಲಿ ಬೆಂಗಳೂರು ವಿಶ್ವವಿದ್ಯಾಲಯದ ಪರೀಕ್ಷೆ ಮುಂದೂಡಿಕೆ ಮುಂದೂಡಲಾಗಿದೆ. ನಾಳೆ ನಡೆಯಬೇಕಾಗಿದ್ದ ಎಂಬಿಎ, ಎಂಸಿಎ ಪರೀಕ್ಷೆಗಳನ್ನು ವಿವಿ ಮುಂದೂಡಿದೆ. ವೇತನ ಹೆಚ್ಚಳ ಅಸಾಧ್ಯ …

Read More »

ಚಿತ್ರೀಕರಣ ವೇಳೆ ನಟ ಅನಿರುದ್ಧ್ ಗೆ ಗಾಯ

ಮೈಸೂರು : ನಟ ಅನಿರುದ್ಧ್ ಗೆ ಚಿತ್ರೀಕರಣದ ವೇಳೆ ಗಾಯಗೊಂಡಿದ್ದಾರೆ. ಫೈಟ್ ಸೀನ್ ಚಿತ್ರೀಕರಣದ ವೇಳೆ ಅನಿರುದ್ಧ್‍ಗೆ ಗಾಯಗಳಾಗಿದ್ದು ತಕ್ಷಣ ಅವರು ಕುಸಿದು ಬಿದ್ದರು. ಬಳಿಕ ಅವರಿಗೆ ಶೂಟಿಂಗ್ ಸ್ಪಾಟ್‍ನಲ್ಲೇ ಪ್ರಥಮ ಚಿಕಿತ್ಸೆ ನೀಡಲಾಗಿದೆ. ಅನಿರುದ್ಧ್ ಗಾಯಗೊಂಡ ಹಿನ್ನೆಲೆಯಲ್ಲಿ ಕೆಲಕಾಲ ಚಿತ್ರೀಕರಣವನ್ನು ಸ್ಥಗಿತಗೊಳಿಸಲಾಗಿತ್ತು. ಬಳಿಕ ಚಿತ್ರೀಕರಣ ಮುಂದುವರಿದಿತ್ತು. ಮೈಸೂರಿನ ದುದ್ದಗೆರೆಯಲ್ಲಿ `ರಾಜಸಿಂಹ’ ಸಿನೆಮಾದ ಶೂಟಿಂಗ್ ನಡೆಯುತ್ತಿತ್ತು. ರವಿರಾಮ `ರಾಜಸಿಂಹ’ ಚಿತ್ರ ನಿರ್ದೇಶಿಸುತ್ತಿದ್ದಾರೆ.

Read More »

ಹೆರಿಗೆ ರಜೆ ಕೇಳಿದ ಸಿಬ್ಬಂದಿಗೆ ಕಂಪೆನಿಯಿಂದಲೇ ಗೇಟ್‍ಪಾಸ್…!

ನೋಯ್ಡಾ : ಖಾಸಗಿ ಮತ್ತು ಸರ್ಕಾರಿ ಸಂಸ್ಥೆಗಳಲ್ಲಿ ಕೆಲಸ ಮಾಡುವ ಮಹಿಳೆಯರಿಗೆ 26 ವಾರಗಳ ಹೆರಿಗೆ ರಜೆ ಕಡ್ಡಾಯವಾಗಿ ನೀಡಬೇಕೆಂದು ಎಂದು ಕೇಂದ್ರ ಸರ್ಕಾರ ಆದೇಶ ನೀಡಿದೆ. ಆದರೆ, ದೆಹಲಿಯಲ್ಲಿ ನೋಯ್ಡಾ ಮೂಲದ ಕಂಪೆನಿಯೊಂದು ಹೆರಿಗೆ ರಜೆ ಕೇಳಿದ ಅಸಿಸ್ಟೆಂಟ್ ಎಚ್‍ಆರ್ ಮ್ಯಾನೇಜರ್‍ರನ್ನು ಕೆಲಸದಿಂದಲೇ ವಜಾ ಮಾಡಿದೆ…! 28 ವರ್ಷದ ರಾಧಿಕಾ ಗುಪ್ತ ಎಂಬುವವರು ರಾಡಿಯಸ್ ಸೈನೇರ್ಜೀಸ್ ಇಂಟರ್‍ನ್ಯಾಷನಲ್ ಪ್ರೈವೇಟ್ ಲಿಮಿಟೆಡ್‍ನಲ್ಲಿ ಕೆಲಸ ಮಾಡುತ್ತಿದ್ದರು. ಎಲ್ಲರಂತೆ ಇವರು ಕೂಡಾ ತಮ್ಮ …

Read More »

ದುಬೈನಲ್ಲಿ ಸಂಜಯ್ ದತ್ ಪತ್ನಿಯ ಬರ್ತ್‍ಡೇ ಪಾರ್ಟಿ

ದುಬೈ : ಬಾಲಿವುಡ್ ನಟ ಸಂಜಯ್ ದತ್ ಪತ್ನಿ ಮಾನ್ಯತಾ ಪತಿ ಮತ್ತು ಮಕ್ಕಳೊಂದಿಗೆ ದುಬೈನಲ್ಲಿ ತನ್ನ ಬರ್ತ್‍ಡೇ ಪಾರ್ಟಿ ಮಾಡಿಕೊಂಡಿದ್ದಾರೆ. ಕಳೆದ ಕೆಲವು ದಿನಗಳಿಂದ ಮಾನ್ಯತಾ ದುಬೈನಲ್ಲಿ ಮಕ್ಕಳೊಂದಿಗೆ ಕಾಲ ಕಳೆಯುತ್ತಿದ್ದಾರೆ. ಇವರೊಂದಿಗೆ ಕೆಲವು ದಿನಗಳ ಹಿಂದೆ ಸಂಜಯ್ ದತ್ ಕೂಡಾ ಸೇರಿಕೊಂಡಿದ್ದಾರೆ.

Read More »
error: Content is protected !!