Saturday , February 16 2019
ಕೇಳ್ರಪ್ಪೋ ಕೇಳಿ
Home / sudina (page 3)

sudina

ಕೆಲಸ ಮಾಡದ ಸ್ಟಾರ್ ಡಮ್… : 2018ರಲ್ಲಿ ಖಾನ್‍ತ್ರಯದ ಕಳಪೆ ಸಾಧನೆ…

ಮುಂಬೈ : ವರ್ಷ 50 ದಾಟಿದರೂ ಬಾಲಿವುಡ್‍ನಲ್ಲಿ ಖಾನ್‍ತ್ರಯರದ್ದೇ ಕಾರುಬಾರು… ಇವರ ಸ್ಟಾರ್ ಡಮ್ ಎಳ್ಳಷ್ಟೂ ಕಡಿಮೆ ಆಗಿಲ್ಲ. ಕಳೆದ 25 ವರ್ಷಗಳಿಂದ ಈ ಮೂವರು ಬಾಲಿವುಡ್‍ನಲ್ಲಿ ಪಾರುಪತ್ಯ ನಡೆಸುತ್ತಿದ್ದರು. ಆದರೆ, ಈ ವರ್ಷ ಅದ್ಯಾಕೋ ಖಾನ್‍ತ್ರಯರ ಪಾಲಿಗೆ ಅಷ್ಟು ಅದೃಷ್ಟ ತಂದಿಲ್ಲ. ಯಾಕೆಂದರೆ, ಈ ಮೂವರ ಚಿತ್ರಗಳೂ ಈ ವರ್ಷ ಹೇಳಿಕೊಳ್ಳುವ ಸಾಧನೆಯನ್ನೇನು ಮಾಡಿಲ್ಲ. ಚಿತ್ರರಂಗದಲ್ಲಿ ಸೋಲು ಗೆಲುವು ಸಾಮಾನ್ಯ. ಒಂದು ಚಿತ್ರ ಸೋಲುಂಡರು ಮತ್ತೊಂದು ಚಿತ್ರದ ಮೂಲಕ …

Read More »

ಮಾವ ಅಳಿಯನ ರಜಾ ಮಜಾ…

ಚೆನ್ನೈ : ಸೂಪರ್ ಸ್ಟಾರ್ ರಜನಿಕಾಂತ್ ಮತ್ತು ಅಳಿಯ ಧನುಷ್ ಈಗ ರಜಾ ಮಜಾದಲ್ಲಿದ್ದಾರೆ. ಕ್ರಿಸ್ಮಸ್ ಮತ್ತು ಹೊಸ ವರ್ಷದ ಖುಷಿಯನ್ನು ಅಳಿಯ ಮಾವ ಜೋಡಿ ಒಟ್ಟಾಗಿ ಅನುಭವಿಸುತ್ತಿದ್ದಾರೆ. ಈ ಸುಂದರ ಕ್ಷಣಗಳ ಬಗ್ಗೆ ನಟ ಧನುಷ್ ತಮ್ಮ ಸಾಮಾಜಿಕ ಜಾಲತಾಣದ ಅಕೌಂಟ್‍ನಲ್ಲಿ ಹಂಚಿಕೊಂಡಿದ್ದಾರೆ. ಕ್ರಿಸ್ಮಸ್ ಬ್ಯಾಕ್ ಗ್ರೌಂಡ್ ನಲ್ಲಿ ಅಳಿಯ ಮಾವ ಫೋಟೋಗೆ ಪೋಸ್ ಕೊಟ್ಟಿದ್ದಾರೆ. ಧನುಷ್ ಸ್ಟೈಲಿಶ್ ಲುಕ್‍ನಲ್ಲಿ ಮಿಂಚಿದ್ರೆ ರಜನಿಕಾಂತ್ ಎಂದಿನಂತೆ ತಮ್ಮ ಕೂಲ್ ಸ್ಟೈಲ್‍ನಲ್ಲಿ …

Read More »

ಮತ್ತೆ ಬಣ್ಣದ ಲೋಕದಲ್ಲಿ ರೇಣು ಬ್ಯುಸಿ…

ಹೈದರಾಬಾದ್ : ಪವರ್ ಸ್ಟಾರ್ ಪವನ್ ಕಲ್ಯಾಣ್ ಪತ್ನಿ ರೇಣು ದೇಸಾಯಿ ನಟಿಯಾಗಿಯೂ ಖ್ಯಾತಿ ಪಡೆದಿದ್ದವರು. ನಟನೆ ಮತ್ತು ಮಾಡೆಲಿಂಗ್ ಕ್ಷೇತ್ರದಲ್ಲಿ ಛಾಪು ಮೂಡಿಸಿದ್ದ ರೇಣು ಬಳಿಕ ಪವನ್‍ರನ್ನು ವರಿಸಿ ಬಣ್ಣದ ಲೋಕದಿಂದ ಸ್ವಲ್ಪ ಬ್ರೇಕ್ ಪಡೆದಿದ್ದರು. ಈ ನಡುವೆ, ಇವರ ದಾಂಪತ್ಯದಲ್ಲೂ ಬಿರುಕುಂಟಾಗಿ ಸತಿ ಪತಿ ಇಬ್ಬರೂ ದೂರವಾಗಿದ್ದರು. ಇಬ್ಬರೂ ಪ್ರತ್ಯೇಕವಾಗಿ ಜೀವನ ಆರಂಭಿಸಿದ್ದರು. ಇದಾದ ಬಳಿಕ ಮತ್ತೆ ಸ್ವಲ್ಪ ದಿನ ಬಣ್ಣದ ಲೋಕದಿಂದ ದೂರವೇ ಇದ್ದ ರೇಣು ಈಗ …

Read More »

ಇನ್ನು ಮುಂದೆ ವಿಮಾನ ನಿಲ್ದಾಣಗಳಲ್ಲಿ ಸ್ಥಳೀಯ ಭಾಷೆಗೆ ಮೊದಲ ಆದ್ಯತೆ…

ನವದೆಹಲಿ : ವಿಮಾನ ನಿಲ್ದಾಣಗಳಲ್ಲಿ ಸಾಮಾನ್ಯವಾಗಿ ಇಂಗ್ಲೀಷ್ ಮತ್ತು ಹಿಂದಿ ಭಾಷೆಯಲ್ಲಿ ಪ್ರಕಟಣೆ ನೀಡಲಾಗುತ್ತಿತ್ತು. ಆದರೆ, ಇನ್ನು ಮುಂದೆ ಇದಕ್ಕೆ ಬ್ರೇಕ್ ಬೀಳಲಿದೆ. ರಾಷ್ಟ್ರದ ಎಲ್ಲಾ ವಿಮಾನ ನಿಲ್ದಾಣಗಳಲ್ಲಿ ಸಾರ್ವಜನಿಕ ಪ್ರಕಟಣೆಯನ್ನು ಮೊದಲು ಸ್ಥಳೀಯ ಭಾಷೆಯಲ್ಲೇ ನೀಡಬೇಕು ಎಂದು ಸರ್ಕಾರ ಆದೇಶಿಸಿದೆ. ಸ್ಥಳೀಯ ಭಾಷೆ ಬಳಿಕ ಕ್ರಮವಾಗಿ ಹಿಂದಿ ಮತ್ತು ಇಂಗ್ಲೀಷ್‍ನಲ್ಲಿ ಪ್ರಕಟಣೆ ನೀಡುವ ಅವಕಾಶ ಇದೆ. ಈ ಬಗ್ಗೆ ನಾಗರಿಕ ವಿಮಾನಯಾನ ಸಚಿವ ಸುರೇಶ್ ಪ್ರಭು ಆದೇಶ ಹೊರಡಿಸಿದ್ದಾರೆ. …

Read More »

ಯಶ್‍ಗಾಗಿ ವಿಶಾಲ್ `ಸ್ಪೆಷಲ್’ ಗಿಫ್ಟ್…

ಚೆನ್ನೈ : ಕೆಜಿಎಫ್ ಚಿತ್ರ ಯಶ್ ಬದುಕಿನಲ್ಲಿ ಹೊಸ ಕಳೆ ತಂದಿದೆ. ಯಶ್ ವ್ಯಾಪ್ತಿಯೂ ವಿಸ್ತಾರವಾಗಿದೆ. ಹೊಸ ಅಭಿಮಾನಿಗಳು, ಹೊಸ ಗೆಳೆಯರು ಹುಟ್ಟಿಕೊಂಡಿದ್ದಾರೆ. ಈ ನಡುವೆ, ಯಶ್ ಸ್ನೇಹಿತ ಮತ್ತು ತಮಿಳಿನ ಖ್ಯಾತ ನಟ ವಿಶಾಲ್ ಹೊಸ ವೀಡಿಯೋ ಮೂಲಕ ಯಶ್‍ಗೆ ಸ್ಪೆಷಲ್ ಗಿಫ್ಟ್ ಕೊಟ್ಟಿದ್ದಾರೆ. Here is a special video of my dear friend @TheNameIsYash https://t.co/XFyVVECxMD#UntoldStoryOfYash #KGF #KGFMonsterHit #KGFTamil @prashanth_neel @bhuvangowda84 @VKiragandur @VishalKOfficial …

Read More »

ರಾಕಿ ಭಾಯ್ ಮೆಚ್ಚಿದ ರಾಮ್ ಗೋಪಾಲ್ ವರ್ಮಾ

ಹೈದರಾಬಾದ್ : ರಾಕಿಂಗ್ ಸ್ಟಾರ್ ಯಶ್ ಅಭಿನಯದ `ಕೆಜಿಎಫ್’ ಚಿತ್ರ ಬಾಕ್ಸ್ ಆಫೀಸ್‍ನಲ್ಲಿ ಚಿಂದಿ ಉಡಾಯಿಸ್ತಿದೆ. ಚಿತ್ರದ ಗಳಿಕೆ ನಾಗಾಲೋಟದಲ್ಲಿ ಸಾಗುತ್ತಿದೆ. ಬೇರೆ ಬೇರೆ ಚಿತ್ರರಂಗದ ಗಣ್ಯರೂ ಈ ಚಿತ್ರವನ್ನು ಮೆಚ್ಚಿಕೊಂಡಿದ್ದಾರೆ. ಇದೀಗ ಖ್ಯಾತ ನಿರ್ದೇಶಕ ರಾಮ್‍ಗೋಪಾಲ್ ವರ್ಮಾ ಅವರೂ ಚಿತ್ರಕ್ಕೆ ಶಹಬ್ಬಾಸ್ ಹೇಳಿದ್ದಾರೆ. ಬಾಹುಬಲಿ, 2.0 ಬಳಿಕ ಸ್ಥಳೀಯ ಅಡೆತಡೆಗಳನ್ನು ಮೀರಿ ಕೆಜಿಎಫ್ ಒಳ್ಳೆಯ ಸಾಧನೆ ಮಾಡುತ್ತಿದೆ. ಒಳ್ಳೆಯ ಚಿತ್ರವನ್ನು ಎಲ್ಲಿ ಬೇಕಾದರೂ ತಯಾರಿಸಿದರೂ ಅದು ಓಡುತ್ತದೆ ಎಂದು …

Read More »

ಇಲ್ಲಿ ಇಲಿ ಮಾಂಸಕ್ಕೆ ಎಲ್ಲಿಲ್ಲದ ಡಿಮ್ಯಾಂಡ್…!

ಕುಮಾರಿಕಟ : ಮನೆಯಲ್ಲಿ ಒಂದು ಇಲಿ ಇದ್ದರೂ ಮನೆಗೇ ಬೆಂಕಿ ಬಿದ್ದಷ್ಟು ಆತಂಕಗೊಳ್ಳುತ್ತೇವೆ ನಾವು. ವಿಷ ಇಟ್ಟಾದರೂ, ಬೋನ್ ಇಟ್ಟಾದರೂ, ಹೊಡೆದಾದರೂ ಇಲಿಯನ್ನು ಸಾಯಿಸಲು ಶತಪ್ರಯತ್ನ ಮಾಡುತ್ತೇವೆ. ಇಲಿ ಕೊಂದ ಬಳಿಕ ನೀಟಾಗಿ ಬಾಲದಲ್ಲಿ ಹಿಡಿದು ಹೊರಗೆ ಎಸೆದು `ಅಬ್ಬಾ’ ಬಚಾವ್ ಅಂತ ನಿಟ್ಟುಸಿರು ಬಿಡುತ್ತೇವೆ. ಆದರೆ, ಈಶಾನ್ಯ ರಾಜ್ಯ ಅಸ್ಸಾಂನಲ್ಲಿ ಮಾತ್ರ ಹೀಗಾಗುವುದಿಲ್ಲ. ಇಲ್ಲಿ ಇಲಿ ಇದ್ದರೆ ಇವರಿಗೆ ಎಲ್ಲಿಲ್ಲದ ಖುಷಿ… ಯಾಕೆಂದರೆ, ಇಲ್ಲಿ ಇಲಿಯ ಮಾಂಸಕ್ಕೆ ಎಲ್ಲಿಲ್ಲದ …

Read More »

ವಿಧ್ವಂಸಕ ಕೃತ್ಯಕ್ಕೆ ಸಂಚು : ಐಸಿಸ್ ಪ್ರೇರಿತ ಶಂಕಿತ ಉಗ್ರರ ಬಂಧನ

ನವದೆಹಲಿ : ರಾಷ್ಟ್ರೀತ ತನಿಖಾ ಸಂಸ್ಥೆ (ಎನ್‍ಐಎ) ಭರ್ಜರಿ ಬೇಟೆಯಾಡಿದೆ. ಉತ್ತರ ಪ್ರದೇಶ ಹಾಗೂ ದೆಹಲಿಯಲ್ಲಿ ದಾಳಿ ನಡೆಸಿದ ಎನ್‍ಐಎ ವಿಧ್ವಂಸಕ ಕೃತ್ಯಕ್ಕೆ ಸಂಚು ರೂಪಿಸಿದ್ದ 10 ಶಂಕಿತ ಉಗ್ರರ ಕೈಗೆ ಕೋಳ ತೊಡಿಸಿದೆ. ಜೊತೆಗೆ, ಬಂಧಿತರಿಂದ ರಾಕೆಟ್ ಲಾಂಚರ್, 12 ಪಿಸ್ತೂಲ್, 120 ಅಲಾರ್ಮ್ ಹಾಗೂ 25 ಕೆಜಿ ಸ್ಪೋಟಕ ವಸ್ತುವನ್ನೂ ವಶಪಡಿಸಿಕೊಂಡಿದ್ದಾರೆ. 17 ಕ್ಕೂ ಹೆಚ್ಚು ಕಡೆ ಎನ್‍ಐಎ ಅಧಿಕಾರಿಗಳು ದಾಳಿ ಮಾಡಿದ್ದರು. ಹಲವರನ್ನು ವಿಚಾರಣೆ ನಡೆಸಿದ …

Read More »

ಸಿನೆಮಾ ಆಗುತ್ತಾ ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಜೀವನ…?

ಮುಂಬೈ : ಜೀವನಕತೆಯನ್ನು ಸಿನೆಮಾ ಮಾಡುವ ಟ್ರೆಂಡ್ ಈಗ ಎಲ್ಲಾ ಚಿತ್ರರಂಗದಲ್ಲೂ ಶುರುವಾಗಿದೆ. ಇದರಲ್ಲಿ ಬಾಲಿವುಡ್ ಕೂಡಾ ಹೊರತಾಗಿಲ್ಲ. ಈಗಾಗಲೇ ಹಲವು ಸಾಧಕರ ಜೀವನ ತೆರೆ ಮೇಲೆ ಬಂದಿದೆ. ಸದ್ಯ ಬಾಲಿವುಡ್‍ನಲ್ಲಿ ಮತ್ತೊಂದು ಪ್ರಯತ್ನ ನಡೆಯುತ್ತಿದೆ. ಅದು ಮಾಜಿ ರಾಷ್ಟ್ರಪತಿ, ದೇಶ ಕಂಡ ಅಪ್ರತಿಮ ವಿಜ್ಞಾನಿ ಡಾ.ಎ.ಪಿ.ಜೆ ಅಬ್ದುಲ್ ಕಲಾಂ ಅವರ ಜೀವನವನ್ನು ಸಿನೆಮಾ ಮಾಡುವ ಯತ್ನ… ಅಭಿಷೇಕ್ ಅಗರ್‍ವಾಲ್ ಮತ್ತು ಟಾಲಿವುಡ್ ಪ್ರೊಡ್ಯೂಸರ್ ಅನಿಲ್ ಸುಕರಾ ಈ ಪ್ರಯತ್ನಕ್ಕೆ …

Read More »

ಜನವರಿ 20ಕ್ಕೆ ಕಾರ್ಕಳ ಗೊಮಟೇಶ್ವರ ಬೆಟ್ಟದಲ್ಲಿ ಬೆಳದಿಂಗಳ ಸಾಹಿತ್ಯ ಸಮ್ಮೇಳನ

ಅಜೆಕಾರು: ಸಾಹಿತ್ಯ ಲೋಕದಲ್ಲಿ ಹೊಸ ಹೆಜ್ಜೆಯೆನಿಸಿರುವ ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನದ ಹತ್ತರ ಸಂಭ್ರಮ ಕಾರ್ಕಳದ ಐತಿಹಸಿಕ ಶ್ರೀ ಗೋಮಟೇಶ್ವರ ಬೆಟ್ಟದಲ್ಲಿ ಜನವರಿ 20, 2019 ರ ಭಾನುವಾರ ನಡೆಯಲಿದೆ ಎಂದು ಸಮ್ಮೇಳನದ ರೂವಾರಿ, ಸಮಿತಿಯ ಅಧ್ಯಕ್ಷ ಶೇಖರ ಅಜೆಕಾರು ತಿಳಿಸಿದ್ದಾರೆ. ವಿಶ್ವದ ಏಕೈಕ ಬೆಳದಿಂಗಳ ಸಾಹಿತ್ಯ ಸಮ್ಮೇಳನ ಎಂಬ ಖ್ಯಾತಿಗೆ ಪಾತ್ರವಾಗಿರುವ ಈ ಸಮ್ಮೇಳನದ ಹತ್ತರ ಸಂಭ್ರಮವನ್ನು ಪ್ರಸಿದ್ಧ ವಕೀಲ, ಕ್ಷೇತ್ರದ ಪ್ರಮುಖರಾಗಿರುವ ಎಂ.ಕೆ ವಿಜಯ ಕುಮಾರ್ …

Read More »
error: Content is protected !!