Tuesday , November 13 2018
ಕೇಳ್ರಪ್ಪೋ ಕೇಳಿ
Home / sudina (page 30)

sudina

ಆಲಿಯಾ ಮನೆಯಲ್ಲಿ ರಣಬೀರ್…! : ನಡೆಯುತ್ತಿದೆಯಾ ಮದುವೆ ಮಾತುಕತೆ…?

ಮುಂಬೈ : ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ಸದ್ಯ ಬಾಲಿವುಡ್‍ನಲ್ಲಿ ಸಖತ್ ಸೌಂಡ್ ಮಾಡುತ್ತಿರುವ ಜೋಡಿ. ಇವರಿಬ್ಬರು ಪ್ರೇಮ ಲೋಕದಲ್ಲಿ ವಿಹರಿಸುತ್ತಿದ್ದಾರೆ ಎಂದು ಸುದ್ದಿ ಹಬ್ಬಿ ಬಹಳ ದಿನ ಆಯ್ತು. ಇದೀಗ, ಇವರಿಬ್ಬರ ಸಂಬಂಧ ಇನ್ನೊಂದು ಘಟ್ಟಕ್ಕೆ ಸಾಗುವ ಹಾದಿಯಲ್ಲಿದೆ. ಅದು ಮದುವೆ… ಹೌದು, ಇಬ್ಬರು ಶೀಘ್ರದಲ್ಲೇ ದಾಂಪತ್ಯಕ್ಕೆ ಕಾಲಿಡಲಿದ್ದಾರೆ ಎಂಬ ಸುದ್ದಿಯೂ ಹಬ್ಬಿದೆ. ಇದಕ್ಕೆ ಸಾಕ್ಷಿ ಎಂಬಂತೆ ರಣಬೀರ್ ಅಲಿಯಾ ಭಟ್ ಮನೆಯಲ್ಲಿ ಕಾಣಿಸಿಕೊಂಡಿದ್ದಾರೆ. ಈ ಭೇಟಿಯ …

Read More »

ಬನ್ನಂಜೆ ರಾಜಾಗೆ ಒಂದು ದಿನದ ರಿಲೀಫ್

ಉಡುಪಿ : ಭೂಗತ ಲೋಕದಲ್ಲಿ ಡಾನ್ ಆಗಿ ಮೆರೆದಾಡಿದ್ದ ಬನ್ನಂಜೆ ರಾಜಾಗೆ ಒಂದು ದಿನದ ಜಾಮೀನು ಸಿಕ್ಕಿದೆ. ಅನಾರೋಗ್ಯಕ್ಕೀಡಾಗಿರುವ ತಾಯಿಯನ್ನು ಭೇಟಿಯಾಗುವ ಸಲುವಾಗಿ ಬನ್ನಂಜೆ ರಾಜಾಗೆ ನ್ಯಾಯಾಧೀಶರು ಒಂದು ದಿನದ ಜಾಮೀನು ನೀಡಿದ್ದಾರೆ. ಜುಲೈ 8ಕ್ಕೆ ಬನ್ನಂಜೆ ರಾಜಾ ಉಡುಪಿಯಲ್ಲಿರುವ ಬನ್ನಂಜೆಗೆ ತೆರಳಿ ತಾಯಿಯನ್ನು ಭೇಟಿಯಾಗಲು ನ್ಯಾಯಾಲಯ ಅವಕಾಶ ನೀಡಿದೆ. ಬಿಗಿ ಭದ್ರತೆಯಲ್ಲಿ ಪೊಲೀಸರು ಗ್ರಾಮಕ್ಕೆ ಕರೆದುಕೊಂಡು ಹೋಗಲಿದ್ದಾರೆ. 2015ರಂದು ಮೊರಕ್ಕಾದಲ್ಲಿ ಪೊಲೀಸರು ರಾಜಾನನ್ನು ಬಂಧಿಸಿದ್ದರು. ರಾಜಾ ವಿರುದ್ಧ ಶೂಟೌಟ್, …

Read More »

ನವೀಕರಣದತ್ತ ಬ್ರಹ್ಮರಕೂಟ್ಲು ಟೋಲ್ ಪ್ಲಾಝಾ : ಕಾಮಗಾರಿಗೆ ಅಡ್ಡಿಯಾಗಿದೆ ವಿದ್ಯುತ್ ಕಂಬ

ಬಿ.ಸಿ.ರೋಡು : ಬ್ರಹ್ಮರಕೂಟ್ಲುನಲ್ಲಿ ದಿನವೂ ಇಲ್ಲಿ ವಾಹನ ದಟ್ಟಣೆ ಹೆಚ್ಚಾಗುತ್ತಿದ್ದರಿಂದ ಟ್ರಾಫಿಕ್ ಜಾಮ್ ಉಂಟಾಗುತ್ತಿದೆ. ಈಗ ಇಲ್ಲಿ ಎರಡು ಟೋಲ್ ಬೂತ್‍ಗಳಿದ್ದರೂ ವಾಹನಗಳ ಸಂಖ್ಯೆ ಹೆಚ್ಚಳದಿಂದ ಸಮಸ್ಯೆಯಾಗುತ್ತಿದೆ. ಹೀಗಾಗಿ, ಮತ್ತೊಂದು ಟೋಲ್ ಬೂತ್ ಆರಂಭಗೊಳ್ಳುತ್ತಿದೆ. ಆದರೆ, ಈ ಕಾಮಗಾರಿಗೆ ಈಗ ವಿದ್ಯುತ್ ಕಂಬಗಳು ಅಡ್ಡಿಯಾಗುತ್ತಿವೆ. ಸುಮಾರು 540 ಮೀಟರ್ ಉದ್ದದ ನೂತನ ರಸ್ತೆಯನ್ನು ನೆಲದಿಂದ ರಸ್ತೆ ಮಟ್ಟದವರೆಗೆ ಮಣ್ಣು ತುಂಬಿಸಿ ಜಲ್ಲಿಗಳನ್ನು ಹಾಕಿ ಇನ್ನೇನು ಡಾಮರ್ ಹಾಕಬೇಕೆನ್ನುಷ್ಟರಲ್ಲಿ ಮೆಸ್ಕಾಂನವರ ಕಂಬ …

Read More »

ಅತ್ಯಾಚಾರ ಆರೋಪ : ಮಿಥುನ್ ಚಕ್ರವರ್ತಿ ಪುತ್ರ, ಪತ್ನಿಗೆ ಇಲ್ಲ ರಿಲೀಫ್

ಮುಂಬೈ : ಬಾಲಿವುಡ್‍ನ ಖ್ಯಾತ ನಟ ಮಿಥುನ್ ಚಕ್ರವರ್ತಿ ಪುತ್ರ ಮಹಾಕ್ಷಯ್ ಚಕ್ರವರ್ತಿಗೆ ಸದ್ಯಕ್ಕೆ ರಿಲೀಫ್ ಇಲ್ಲ. ಅತ್ಯಾಚಾರ ಆರೋಪದ ಹಿನ್ನೆಲೆಯಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಮಹಾಕ್ಷಯ್‍ಗೆ ಬಂಧನಕ್ಕೆ ತಡೆ ನೀಡಲು ಮುಂಬೈ ಹೈಕೋರ್ಟ್ ನಿರಾಕರಿಸಿದೆ. ಜೊತೆಗೆ, ಮಿಥುನ್ ಪತ್ನಿ ಮಹಾಕ್ಷಯ್ ತಾಯಿ ಯೋಗಿತಾ ಬಾಲಿ ಕೂಡಾ ಇದೇ ಪ್ರಕರಣದ ಆರೋಪಿಯಾಗಿದ್ದು, ಇವರಿಗೂ ರಿಲೀಫ್ ಸಿಕ್ಕಿಲ್ಲ. ಮೊನ್ನೆಯಷ್ಟೇ ಯುವತಿಯೊಬ್ಬಳು ಮಹಾಕ್ಷಯ್ ವಿರುದ್ಧ ಅತ್ಯಾಚಾರ ಆರೋಪ ಮಾಡಿದ್ದಳು. ಮದುವೆಯಾಗಿ ನಂಬಿಸಿ ದೈಹಿಕ ಸಂಬಂಧ …

Read More »

ಅಪರೂಪದ ಫೋಟೋ : 7ನೇ ಕ್ಲಾಸ್‍ನಲ್ಲಿ ಪವನ್ ಕಲ್ಯಾಣ್ ಹೇಗಿದ್ದರು ನೋಡಿ…

ಹೈದರಾಬಾದ್ : ಪವನ್ ಕಲ್ಯಾಣ್ ಈಗ ಟಾಲಿವುಡ್‍ನಲ್ಲಿ ಪವರ್ ಸ್ಟಾರ್. ರಾಜಕೀಯದಲ್ಲೂ ಮಿಂಚುವ ನಾಯಕ… ಅಪಾರ ಅಭಿಮಾನಿಗಳನ್ನು ಸಂಪಾದಿಸಿರುವ ನಟ. ಇಂತಹ ಪವನ್ ಅವರ ಅಪರೂಪದ ಫೋಟೋ ಇಲ್ಲಿದೆ ನೋಡಿ… ಇದು ಪವನ್ ಅವರು 7ನೇ ಕ್ಲಾಸ್‍ನಲ್ಲಿ ಇರುವಾಗ ತೆಗೆದಿರುವ ಫೋಟೋ. ಆಗ ನೆಲ್ಲೂರಿನ ಶಾಲೆಯಲ್ಲಿ ಪವನ್ ಓದುತ್ತಿದ್ದರು. ಮೆಗಾ ಸ್ಟಾರ್ ಚಿರಂಜೀವಿ ಕುಟುಂಬದ ಅಪರೂಪದ ಫೋಟೋ ಇದು. ಈ ಫೋಟೋದಲ್ಲಿ ಚಿರು ಕೂಡಾ ಇದ್ದಾರೆ.

Read More »

ನ್ಯೂಯಾರ್ಕ್‍ನ ರಸ್ತೆಯಲ್ಲಿ ಪ್ರಣಯ ಪತಂಗಗಳ ಸೈಕಲ್ ಸವಾರಿ…

ಮುಂಬೈ : ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಮತ್ತು ಪಾಪ್ ಸಿಂಗರ್ ನಿಕ್ ಜೊಹಾನ್ಸ್ ನಡುವಣ ಪ್ರೀತಿ ಪ್ರೇಮದ ವಿಚಾರ ಈ ಬಿಟೌನ್‍ನಲ್ಲಿ ಹಾಟ್ ಸಬ್ಜೆಕ್ಟ್. ಶೀಘ್ರದಲ್ಲೇ ಇವರಿಬ್ಬರು ದಾಂಪತ್ಯಕ್ಕೂ ಕಾಲಿಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಅದೂ ಅಲ್ಲದೆ, ಮುಂಬೈಯಲ್ಲಿ ಇಬ್ಬರು ಒಟ್ಟಾಗಿ ಕಾಣಿಸಿಕೊಂಡಿದ್ದು, ಕಾರ್ಯಕ್ರಮದಲ್ಲೂ ಪಾಲ್ಗೊಂಡಿದ್ದರು. ಪ್ರಿಯಾಂಕಾ ಮನೆಯ ಸಂಭ್ರಮದಲ್ಲಿ ನಿಕ್ ಭಾಗಿಯಾಗಿದ್ದರು. ಹೀಗಾಗಿ, ಇವರಿಬ್ಬರ ಪ್ರೇಮದ ವಿಚಾರ ಈಗ ಸಖತ್ ಆಗಿಯೇ ಸುಳಿದಾಡುತ್ತಿದೆ. ಆದರೆ, ಇವರಿಬ್ಬರು ಈ ಪ್ರೀತಿಯ …

Read More »

ಯುವರಾಜ್‍ಕುಮಾರ ನಿಶ್ಚಿತಾರ್ಥ… : ಡಾ.ರಾಜ್‍ಕುಮಾರ್ ಕುಟುಂಬದಲ್ಲಿ ಸಂಭ್ರಮ

ಮೈಸೂರು : ವರನಟ ಡಾ.ರಾಜ್‍ಕುಮಾರ್ ಕುಟುಂಬದಲ್ಲಿ ಈಗ ಸಂಭ್ರಮ ಮನೆ ಮಾಡಿದೆ. ರಾಘವೇಂದ್ರ ರಾಜ್‍ಕುಮಾರ್ ಅವರ ಪುತ್ರ ಯುವರಾಜ್ ಕುಮಾರ್ ದಾಂಪತ್ಯಕ್ಕೆ ಕಾಲಿಡುವ ಸಿದ್ಧತೆಯಲ್ಲಿದ್ದಾರೆ. ಗುರುವಾರ ಮೈಸೂರಿನಲ್ಲಿ ಯುವರಾಜ್‍ಕುಮಾರ್ ನಿಶ್ಚಿತಾರ್ಥ ನಡೆದಿದೆ. ಶ್ರೀದೇವಿ ಯುವರಾಜ್ ಅವರ ಬಾಳಸಂಗಾತಿಯಾಗಿ ಬರಲಿದ್ದಾರೆ. ಈ ಸಂಭ್ರಮದಲ್ಲಿ ಕುಟುಂಬದ ಎಲ್ಲಾ ಸದಸ್ಯರು ಭಾಗಿಯಾಗಿ ಸಂಭ್ರಮದಲ್ಲಿ ಕಳೆದರು. ಮೈಸೂರಿನ ಪ್ರತಿಷ್ಠಿತ ಖಾಸಗಿ ಹೊಟೇಲ್‍ನಲ್ಲಿ ಈ ನಿಶ್ಚಿತಾರ್ಥ ನಡೆದಿದ್ದು, ಸ್ಯಾಂಡಲ್‍ವುಡ್‍ನ ವಿವಿಧ ಗಣ್ಯರು ಕೂಡಾ ಹೊಸ ಜೋಡಿಗೆ ಶುಭ …

Read More »

ಮಾರಕ ಕ್ಯಾನ್ಸರ್ ಅನ್ನೇ ಸೋಲಿಸಿದ ಚೆಲುವೆಯರಿವರು…

ಮುಂಬೈ : ಬಾಲಿವುಡ್ ನಟಿ ಸೋನಾಲಿ ಬೇಂದ್ರೆ ಈಗ ಕ್ಯಾನ್ಸರ್​ನಿಂದ ಬಳಲುತ್ತಿದ್ದಾರೆ. ಈ ಸುದ್ದಿಗೆ ಇಡೀ ಚಿತ್ರರಂಗವೇ ಶಾಕ್ ಆಗಿದೆ. ಆದರೆ, ಚಿತ್ರರಂಗದ ಕೆಲವು ಚೆಲುವೆಯರು ತಮ್ಮ ಆತ್ಮಸ್ಥೈರ್ಯದಿಂದಲೇ ಮಾರಕ ಕ್ಯಾನ್ಸರ್​ ವಿರುದ್ಧವೇ ಜಯಗಳಿಸಿದ್ದಾರೆ. ದಕ್ಷಿಣ ಭಾರತದ ಹಿರಿಯ ನಟಿ ಗೌತಮಿ ಅನೇಕ ವರ್ಷದಿಂದ ಕ್ಯಾನ್ಸರ್​ನಿಂದ ಬಳಲುತ್ತಿದ್ದರು. ಆದರೆ, ತನಗೆ ಇಂತಹ ಆರೋಗ್ಯ ಸಮಸ್ಯೆ ಇದೆ ಎಂದು ಗೊತ್ತಾದ ಮೇಲೂ ಗೌತಮಿ ತನ್ನ ಮೇಲಿನ ನಂಬಿಕೆ, ಆತ್ಮಸ್ಥೈರ್ಯ, ವಿಶ್ವಾಸವನ್ನು ಕಳೆದುಕೊಂಡಿಲ್ಲ. …

Read More »

`ಕಮಲ್ ಹಾಸನ್ ಎಲ್​ಕೆಜಿ, ರಜನಿಕಾಂತ್ ಬೇಬಿ ಕ್ಲಾಸ್​’…!

ಚೆನ್ನೈ : ಸೂಪರ್​ ಸ್ಟಾರ್​ಗಳಾದ ರಜನಿಕಾಂತ್ ಮತ್ತು ಕಮಲ್ ಹಾಸನ್ ರಾಜಕೀಯಕ್ಕೆ ಧುಮುಕಿ ಆಗಿದೆ. ಇವರ ರಾಜಕೀಯ ಪ್ರವೇಶವನ್ನು ಅವರವರ ಅಭಿಮಾನಿಗಳು ಖುಷಿಯಿಂದಲೇ ಸ್ವಾಗತಿಸಿದರೆ ರಾಜಕೀಯ ವಲಯದಲ್ಲಿ ಟೀಕಿಸಿದವರೇ ಹೆಚ್ಚು. ಬಗೆಬಗೆಯಾಗಿ ಟೀಕೆಗಳು ಈ ಇಬ್ಬರ ವಿರುದ್ಧವೂ ಬೇರೆ ಬೇರೆ ಸಂದರ್ಭದಲ್ಲಿ ಬೇರೆ ಬೇರೆ ವ್ಯಕ್ತಿಗಳಿಂದ ಬಂದದ್ದೂ ಇದೆ. ಇದೀಗ ಮತ್ತೊಮ್ಮೆ ರಜನಿಕಾಂತ್ ಮತ್ತು ಕಮಲ್ ಹಾಸನ್ ಬಗ್ಗೆ ರಾಜಕಾರಣಿಯೊಬ್ಬರು ಟೀಕೆ ಮಾಡಿದ್ದಾರೆ. ‘ಪಟ್ಟಾಲಿ ಮಕ್ಕಳ್ ಕಚ್ಚಿ’ ನಾಯಕ ಅನ್ಬುಮಣಿ …

Read More »

`ಸಂಜು’ ಚಿತ್ರಕ್ಕೆ ದತ್ ಮೊದಲ ಪುತ್ರಿ ಅಸಮಾಧಾನ…?

ಮುಂಬೈ : ಬಾಲಿವುಡ್ ನಟ ಸಂಜಯ್ ದತ್ ಜೀವನಕತೆಯಾದ `ಸಂಜು’ ಚಿತ್ರ ಬಾಕ್ಸ್ ಆಫೀಸ್‍ನಲ್ಲಿ ಚಿಂದಿ ಉಡಾಯಿಸ್ತಿದೆ. ಎಲ್ಲಾ ಕಡೆ ಚಿತ್ರಕ್ಕೆ ಒಳ್ಳೆಯ ರೆಸ್ಪಾನ್ಸ್ ಸಿಕ್ಕಿದೆ. ರಣಬೀರ್ ನಟನೆಗೂ ಎಲ್ಲರೂ ಫಿದಾ ಆಗಿದ್ದಾರೆ. ಆದರೆ, ಎಲ್ಲರ ಮೆಚ್ಚುಗೆಗೆ ಪಾತ್ರವಾಗಿರುವ ಈ ಚಿತ್ರದ ಬಗ್ಗೆ ಸಂಜಯ್ ದತ್ ಮೊದಲ ಪತ್ನಿ ಪುತ್ರಿ ತ್ರಿಶಾಲಾ ಅಸಮಾಧಾನಗೊಂಡಿದ್ದಾರಂತೆ. ಸಾಮಾನ್ಯವಾಗಿ ತ್ರಿಶಾಲಾ ತಂದೆಯ ಎಲ್ಲಾ ಖುಷಿಯಲ್ಲಿ ಜೊತೆಯಾಗಿರುತ್ತಾರೆ. ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿ ಎಲ್ಲಾ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಾರೆ. …

Read More »
error: Content is protected !!