Saturday , February 16 2019
ಕೇಳ್ರಪ್ಪೋ ಕೇಳಿ
Home / sudina (page 4)

sudina

ನಟಿ ಆಸೀನ್ ಮಗಳಿಗೆ ಈಗ ಒಂದು ವರ್ಷ

ಮುಂಬೈ : ಬಾಲಿವುಡ್ ಮತ್ತು ದಕ್ಷಿಣ ಭಾರತದ ಖ್ಯಾತ ನಟಿ ಆಸೀನ್ ಪುತ್ರಿ ಆರಿನ್ ಈಗ ಎರಡನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಇದೇ ತಿಂಗಳ 24 ರಂದು ಆರಿನ್‍ಗೆ ಒಂದು ವರ್ಷ ಆಗಿದ್ದು, ಈ ಖುಷಿಯ ಕ್ಷಣಗಳನ್ನು ಆಸಿನ್ ತನ್ನ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ಈ ಫೋಟೋಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದು, ಕಂದ ಆರಿನ್‍ಗೂ ಶುಭ ಹಾರೈಸಿದ್ದಾರೆ. 2016ರಲ್ಲಿ ಆಸೀನ್ ಉದ್ಯಮಿ ರಾಹುಲ್ ಶರ್ಮಾರನ್ನು ವರಿಸಿದ್ದರು. View this post on Instagram …

Read More »

ಪಟಾಕಿ ಫ್ಯಾಕ್ಟರಿಯಲ್ಲಿ ಸ್ಫೋಟ : 8 ಮಂದಿ ಸಾವು

ಬದೌನ್ : ದೀಪಾವಳಿ ಸನಿಹದಲ್ಲಿ ಇರುವಂತೆ ಉತ್ತರ ಪ್ರದೇಶದಲ್ಲಿ ದೊಡ್ಡ ಪಟಾಕಿ ದುರಂತ ಸಂಭವಿಸಿದೆ. ಇಲ್ಲಿನ ಪಟಾಕಿ ಫ್ಯಾಕ್ಟರಿಯಲ್ಲಿ ಸ್ಫೋಟ ಸಂಭವಿಸಿದ್ದು, ಕನಿಷ್ಟ ಏಳು ಮಂದಿ ಸಾವನ್ನಪ್ಪಿದ್ದಾರೆ ಎಂದು ವರದಿ ಆಗಿದೆ. ಈ ಘಟನೆಯಲ್ಲಿ ಮೂವರು ಗಾಯಗೊಂಡಿದ್ದಾರೆ. ಉತ್ತರ ಪ್ರದೇಶದ ಬದೌನ್ ಜಿಲ್ಲೆಯ ಪಟಾಕಿ ಕಾರ್ಖಾನೆಯಲ್ಲಿ ಈ ದುರಂತ ಸಂಭವಿಸಿದೆ. ಬದೌನ್‍ನಿಂದ ಸುಮಾರು ಆರು ಕಿಲೋ ಮೀಟರ್ ದೂರ ಇರುವ ರಸೂಲ್‍ಪುರದ ಫ್ಯಾಕ್ಟರಿಯಲ್ಲಿ ಈ ಘಟನೆ ನಡೆದಿದ್ದು, ತಕ್ಷಣ ಸ್ಥಳಕ್ಕೆ …

Read More »

ಮೀ ಟೂ : ಸೋಮವಾರ ಮಾನನಷ್ಟ ಮೊಕದ್ದಮೆ ಕೇಸ್‍ನ ವಿಚಾರಣೆ

ಬೆಂಗಳೂರು : ಸ್ಯಾಂಡಲ್‍ವುಡ್ ಸ್ಟಾರ್‍ಗಳಾದ ಅರ್ಜುನ್ ಸರ್ಜಾ ಮತ್ತು ಶ್ರುತಿ ಹರಿಹರನ್ ನಡುವಣ ಮೀ ಟೂ ಜಟಾಪಟಿ ಕೋರ್ಟ್ ಮೆಟ್ಟಿಲೇರಿದೆ. ನಟ ಅರ್ಜುನ್ ಸರ್ಜಾ ಹಾಕಿರುವ 5 ಕೋಟಿ ಮಾನನಷ್ಟ ಮೊಕದ್ದಮೆ ಕೇಸ್‍ನ ವಿಚಾರಣೆ ಕೈಗೆತ್ತಿಕೊಂಡಿರುವ ನ್ಯಾಯಾಲಯ ವಿಚಾರಣೆಯನ್ನು ಸೋಮವಾರಕ್ಕೆ ಮುಂದೂಡಿದೆ. ಅಲ್ಲದೆ, ನಟಿ ಶ್ರುತಿ ಹರಿಹರನ್‍ಗೂ ನೊಟೀಸ್ ಜಾರಿ ಮಾಡಿದೆ. ಸರ್ಜಾ ಸಲ್ಲಿಸಿರುವ ಮಾನನಷ್ಟ ಮೊಕದ್ದಮೆ ಕುರಿತಂತೆ ಪ್ರತಿಕ್ರಿಯೆ ನೀಡುವಂತೆ ಸೆಷನ್ಸ್ ಕೋರ್ಟ್ ಶ್ರುತಿಗೆ ನೊಟೀಸ್ ನೀಡಿದ್ದು, ವಿಚಾರಣೆಯನ್ನು …

Read More »

ದೇವರೇ ಈ ಸ್ಥಿತಿ ಯಾರಿಗೂ ಬಾರದಿರಲಿ… : ಪತ್ನಿಯ ಹೆರಿಗೆಗೆ ಸ್ವಲ್ಪ ಹೊತ್ತಿಗೆ ಮುನ್ನ ವೀರ ಯೋಧ ಹುತಾತ್ಮ…!

ಜಮ್ಮು : ಇದು ಕಣ್ಣಂಚಿನಲ್ಲಿ ನೀರು ತರಿಸುವ ಸುದ್ದಿ.. ಶತ್ರುವಿಗೂ ಇಂತಹ ಸ್ಥಿತಿ ಬಾರದಿರಲಿ ದೇವರೇ… ವೀರ ಯೋಧ ಲ್ಯಾನ್ಸ್ ನಾಯಕ್ ರಂಜಿತ್ ಸಿಂಗ್ ಭೂತ್ಯಾಲ್ ಮತ್ತು ಅವರ ಪತ್ನಿ ಸೀಮು ದೇವಿ ಮದುವೆಯಾಗಿ 10 ವರ್ಷ ಸಂತಾನ ಭಾಗ್ಯಕ್ಕಾಗಿ ಕಾದಿದ್ದರು. ದೇವರು 10 ವರ್ಷಗಳ ಬಳಿಕ ಕಣ್ಣು ತೆರೆದಿದ್ದ. ಹೀಗಾಗಿ, ಸೀಮು ದೇವಿ ಗರ್ಭಿಣಿ ಆಗಿ ತಾಯ್ತನದ ಖುಷಿ ಅನುಭವಿಸುತ್ತಿದ್ದರು… ಆದರೆ, ಈ ಖುಷಿ ಅಲ್ಪಾಯುಷಿ… ಯಾಕೆಂದರೆ, ಇನ್ನೇನು …

Read More »

ಶಿರ್ವ ಮೂಲದ ವ್ಯಕ್ತಿ ದುಬೈಯಲ್ಲಿ ಆತ್ಮಹತ್ಯೆ

ಉಡುಪಿ : ಇಲ್ಲಿನ ಶಿರ್ವದ ಪಿಲರ್ ನಿವಾಸಿಯೊಬ್ಬರು ದುಬೈಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಆತ್ಮಹತ್ಯೆ ಮಾಡಿಕೊಂಡವರನ್ನು 54 ವರ್ಷದ ವಿಸೆಂಟ್ ಮೆಂಡೋನ್ಸಾ ಎಂದು ಗುರುತಿಸಲಾಗಿದೆ. ಅಕ್ಟೋಬರ್ 24 ರಂದು ಇವರು ಆತ್ಮಹತ್ಯೆಗೆ ಶರಣಾಗಿದ್ದಾಗಿ ಗೊತ್ತಾಗಿದೆ. ದುಬೈನ ಕೋಣೆಯಲ್ಲಿ ಇವರು ನೇಣು ಹಾಕಿಕೊಂಡು ಪ್ರಾಣ ಬಿಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಆದರೆ, ಆತ್ಮಹತ್ಯೆಗೆ ನಿಖರ ಕಾರಣ ಏನು ಎಂಬುದು ಗೊತ್ತಾಗಿಲ್ಲ. ಪ್ರಕರಣ ದಾಖಲಿಸಿಕೊಂಡಿರುವ ದುಬೈ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Read More »

ಇಂದಿರಾ ಗಾಂಧಿ ಪಾತ್ರ ಮಾಡುತ್ತಿದ್ದಾರಾ ತ್ರಿಷಾ…?

ಚೆನ್ನೈ : ದಕ್ಷಿಣ ಭಾರತದ ಖ್ಯಾತ ನಟಿ ತ್ರಿಷಾ ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಲಲಿತಾ ಪಾತ್ರ ಮಾಡಲಿದ್ದಾರೆ ಎಂಬ ಸುದ್ದಿ ಇತ್ತೀಚೆಗೆ ಬಹಳ ದೊಡ್ಡ ಮಟ್ಟದಲ್ಲೇ ಹಬ್ಬಿತ್ತು. ಆದರೆ, ಇದೀಗ ತ್ರಿಷಾ ಇನ್ನೊಬ್ಬರು ಪ್ರಭಾವಿಯ ಪಾತ್ರವನ್ನು ನಿರ್ವಹಿಸಲು ರೆಡಿಯಾಗಿದ್ದಾರಾ ಎಂಬ ಅನುಮಾನ ಶುರುವಾಗಿದೆ. ಈ ಅನುಮಾನಕ್ಕೆ ಕಾರಣ ಸದ್ಯ ಇಂಟರ್‍ನೆಟ್‍ನಲ್ಲಿ ವೈರಲ್ ಆಗಿರುವ ತ್ರಿಷಾ ಅವರು ಪೈಂಟಿಂಗ್. ಈ ಚಿತ್ರದಲ್ಲಿ ತ್ರಿಷಾ ಭಾರತದ ಉಕ್ಕಿನ ಮಹಿಳೆ ಎಂದೇ ಖ್ಯಾತರಾಗಿರುವ ಮಾಜಿ …

Read More »

ಪತ್ನಿಯನ್ನು ಕೊಂದು ತಲೆಮರೆಸಿಕೊಂಡಿದ್ದ ಟೆಕ್ಕಿ 15 ವರ್ಷದ ಬಳಿಕ ಸೆರೆ…!

ಬೆಂಗಳೂರು : 2003ರಲ್ಲಿ ಗುಜರಾತ್‍ನಲ್ಲಿ ಪತ್ನಿಯನ್ನು ಕೊಂದು ಹೆಸರು ಬದಲಾಯಿಸಿಕೊಂಡು ಬೆಂಗಳೂರಿನ ಪ್ರತಿಷ್ಠಿತ ಐಟಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದ ಟೆಕ್ಕಿಯನ್ನು ಕೊನೆಗೂ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ತರುಣ್ ಜಿನ್ ರಾಜ್ ಅಲಿಯಾಸ್ ಪ್ರವೀಣ್ ಎಂದು ಗುರುತಿಸಲಾಗಿದೆ. ಕೇರಳ ಮೂಲದ ಈತ 15 ವರ್ಷಗಳ ಹಿಂದೆ ಗುಜರಾತ್‍ನಲ್ಲಿ ತನ್ನ ಪತ್ನಿ ಸಜಿನಿಯನ್ನು ಕೊಂದು ಎಸ್ಕೇಪ್ ಆಗಿದ್ದ. ಬಳಿಕ ತನ್ನ ಹೆಸರನ್ನು ಪ್ರವೀಣ್ ಎಂದು ಬದಲಾಯಿಸಿಕೊಂಡಿದ್ದ. ಎಲ್ಲಾ ದಾಖಲೆಗಳಲ್ಲೂ ಇದೇ ಹೆಸರು …

Read More »

ಕಾಂಪ್ರಮೈಸ್ ಪ್ರಶ್ನೆಯೇ ಇಲ್ಲ : ಅರ್ಜುನ್ – ಕ್ಷಮೆ ಕೇಳೋಲ್ಲ : ಶ್ರುತಿ…

ಬೆಂಗಳೂರು : ಸ್ಯಾಂಡಲ್‍ವುಡ್‍ನಲ್ಲಿ ಎದ್ದಿರುವ ಮೀ ಟೂ ಬಿರುಗಾಳಿ ಸದ್ಯಕ್ಕೆ ತಣ್ಣಗಾಗುವ ಲಕ್ಷಣ ಕಾಣುತ್ತಿಲ್ಲ. ಆ್ಯಕ್ಷನ್ ಕಿಂಗ್ ಅರ್ಜುನ್ ಸರ್ಜಾ ಮತ್ತು ಅವರ ವಿರುದ್ಧ ಆರೋಪ ಮಾಡಿರುವ ನಟಿ ಶ್ರುತಿ ಹರಿಹರನ್ ನಡುವಣ ಸಮಸ್ಯೆ ಇನ್ನಷ್ಟು ಜಟಿಲವಾಗುತ್ತಿದೆ. ಈ ನಡುವೆ, ಫಿಲಂ ಛೇಂಬರ್‍ನಲ್ಲಿ ಹಿರಿಯ ನಟ ಅಂಬರೀಷ್ ನೇತೃತ್ವದಲ್ಲಿ ನಡೆದ ಮಾತುಕತೆಯೂ ವಿಫಲವಾಗಿದ್ದು ಪ್ರಕರಣ ಕೋರ್ಟ್ ಕಟಕಟೆ ಏರಿದೆ.. ಫಿಲಂ ಛೇಂಬರ್‍ನಲ್ಲಿ ನಡೆದ ಮಾತುಕತೆ ಬಳಿಕ ನಡೆದ ಸುದ್ದಿಗೋಷ್ಠಿಯಲ್ಲಿ ಪಾಲ್ಗೊಂಡ …

Read More »

100 ಕೋಟಿ ಗಡಿ ದಾಟಿದ ಗೀತಾಗೋವಿಂದಂ : ರಾಜ್ಯದಲ್ಲಿ ಚಿತ್ರ ಗಳಿಸಿದ್ದೆಷ್ಟು ಗೊತ್ತಾ…?

ಹೈದರಾಬಾದ್ : ತೆಲುಗು ಫಿಲಂ ಇಂಡಸ್ಟ್ರಿಯಲ್ಲಿ ತನ್ನದೇ ಆದ ಮೈಲುಗಲ್ಲನ್ನು ಸಾಧಿಸಿರೋ ಗೀತಾ ಗೋವಿಂದಂ ಈಗ 100 ಕೋಟಿ ಕ್ಲಬ್ ಸೇರಿದೆ. ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಅಭಿನಯದ ಈ ಚಿತ್ರಕ್ಕೆ ಪ್ರೇಕ್ಷಕರು ಫಿದಾ ಆಗಿದ್ದರು. ಪುರುಷೋತ್ತಮ್ ನಿರ್ದೇಶನ ಮಾಡಿರುವ ಈ ಚಿತ್ರ ಆಗಸ್ಟ್ 15ಕ್ಕೆ ರಿಲೀಸ್ ಆಗಿದ್ದು ಇದೀಗ ಈ ಚಿತ್ರ 100 ಕೋಟಿ ಕ್ಲಬ್ ಸೇರಿ ಮುನ್ನುಗ್ಗುತ್ತಿದೆ. ಆಂಧ್ರ ಪ್ರದೇಶ ಮತ್ತು ತೆಲಂಗಾಣದಲ್ಲಿ ಈ ಚಿತ್ರ …

Read More »

ರಾಖಿ ಸಾವಂತ್‍ರನ್ನು ರೇಪ್ ಮಾಡಿದ್ದಾರಂತೆ ತನುಶ್ರೀ ದತ್ತ…! : ಇಲ್ಲಿದೆ ರಾಖಿ ಹೇಳಿಕೆ ವೀಡಿಯೋ

ಮುಂಬೈ : ಸದ್ಯ ಬಾಲಿವುಡ್‍ನಲ್ಲಿ ಮೀ ಟೂ ಅಭಿಯಾನ ಸಖತ್ ಸೌಂಡ್ ಮಾಡುತ್ತಿದೆ. ಬಾಲಿವುಡ್ ನಟಿ ತನುಶ್ರೀ ದತ್ತ ಹಿರಿಯ ನಟ ನಾನಾ ಪಟೇಕರ್ ವಿರುದ್ಧ ಆರೋಪ ಮಾಡಿದ ಬಳಿಕವಂತೂ ಈ ಅಭಿಯಾನ ಇನ್ನಷ್ಟು ವ್ಯಾಪಕವಾಗಿದೆ. ಈ ನಡುವೆ, ಸದಾ ಒಂದಿಲ್ಲೊಂದು ವಿವಾದಗಳಿಂದಲೇ ಸುದ್ದಿಯಾಗುತ್ತಿದ್ದ ನಟಿ ರಾಖಿ ಸಾವಂತ್ ದೊಡ್ಡ ಬಾಂಬ್ ಅನ್ನೇ ಸಿಡಿಸಿದ್ದಾರೆ. “Woh LESBIAN hai aur usne mera RAPE kia: “ #RakhiSawant ’s …

Read More »
error: Content is protected !!