Sunday , July 22 2018
ಕೇಳ್ರಪ್ಪೋ ಕೇಳಿ
Home / sudina (page 5)

sudina

ಸೋಲಾರ್ ಬೇಲಿಗೆ ಸಿಲುಕಿ ಹೆಣ್ಣಾನೆ ಸಾವು

ಮಡಿಕೇರಿ : ಸೋಲಾರ್ ಬೇಲಿಗೆ ಸಿಲುಕಿ ಹೆಣ್ಣು ಕಾಡಾನೆ ಸಾವನ್ನಪ್ಪಿರುವ ಘಟನೆ ಸೋಮವಾರಪೇಟೆಗೆ ಸಮೀಪದ ಅಬ್ಬೂರುಕಟ್ಟೆ ಬಳಿಯ ಕಾಡ್ನೂರು ಬಳಿ ನಡೆದ ಘಟನೆ. ತೋಟಕ್ಕೆ ಅಳವಡಿಸಿದ್ದ ಸೋಲರ್ ಬೇಲಿ ದಾಟಿ ಆನೆ ಅರಣ್ಯಕ್ಕೆ ಹೋಗುವ ಸಂದರ್ಭದಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ. ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Read More »

ಅಕ್ಷಯ್ ಕುಮಾರ್ 18 ತಿಂಗಳು ಲೈಟ್ ಮನ್ ಆಗಿದ್ದರು…! : ಸ್ಟಾರ್ ಗಳ  ಫೋಟೋ ತೆಗೆದಿದ್ದರು…!

ಅದು ಅಕ್ಷಯ್ ಕುಮಾರ್ ಕಷ್ಟದಲ್ಲಿದ್ದ ದಿನಗಳು.. ಬಾಂಕಾಂಕ್, ಥೈಲ್ಯಾಂಡ್‍ನಲ್ಲಿ ಮಾರ್ಷಲ್ ಆರ್ಟ್ ಕಲಿಯುತ್ತಿದ್ದ ಸಮಯವದು. ಆಗ ಬದುಕಿಗಾಗಿ ಅಕ್ಕಿ ಅನಿವಾರ್ಯವಾಗಿ ಶೆಫ್ ಮತ್ತು ವೇಟರ್ ಆಗಿ ಕೆಲಸ ಮಾಡುತ್ತಿದ್ದರು. ಇದಾದ ಬಳಿಕ ಮುಂಬೈಗೆ ಬಂದ ಅಕ್ಷಯ್ ಇಲ್ಲಿ ಮಾರ್ಷಲ್ ಆರ್ಟ್ ಕಲಿಸುತ್ತಿದ್ದರು. ಈ ನಡುವೆ, ಇವರ ವಿದ್ಯಾರ್ಥಿಗಳು ಮಾಡೆಲಿಂಗ್ ಕ್ಷೇತ್ರಕ್ಕೆ ಹೋಗಲು ಅಕ್ಷಯ್‍ಗೆ ಸಲಹೆ ನೀಡಿದ್ದರು. ಅದರಂತೆ ಅಕ್ಕಿ ಗಮನ ಮಾಡೆಲಿಂಗ್ ಕ್ಷೇತ್ರದತ್ತ ಹರಿದಿತ್ತು. ಛಾನ್ಸ್ ಸಿಗುವುದಕ್ಕೆ ಅದ್ಭುತ ಫೋಟೋಗಳು …

Read More »

ಯುಎಇನಲ್ಲಿದ್ದ ಭಾರತೀಯ ರೆಸ್ಟೋರೆಂಟ್‍ಗೆ ಬೀಗ…!

ಅಬುದಾಭಿ : ಯುಎಇನ ಪ್ರಸಿದ್ಧ ಭಾರತೀಯ ರೆಸ್ಟೋರೆಂಟ್ ಅಂಜಪ್ಪರ್ ಚೆಟ್ಟಿನಾಡ್ ರೆಸ್ಟೋರೆಂಟ್‍ಗೆ ತಾತ್ಕಾಲಿಕ ಬೀಗ ಮುದ್ರೆ ಬಿದ್ದಿದೆ. ಆರೋಗ್ಯ ಮತ್ತು ಸುರಕ್ಷತಾ ನಿಯಮವನ್ನು ಪದೇ ಪದೇ ಉಲ್ಲಂಘಿಸಿದ ಆರೋಪದ ಮೇಲೆ ಆಹಾರ ನಿಯಂತ್ರಣ ಇಲಾಖೆ ಈ ಕ್ರಮ ಕೈಗೊಂಡಿದೆ. #أبوظبي_للرقابة_الغذائية يغلق مطعم انجبار شيتيناد الأصيل في أبوظبي pic.twitter.com/lrMzlul565 — الرقابة الغذائية (@ADFCA) July 12, 2018 ಅಲ್ಲದೆ, ನೊಟೀಸ್ ಕೂಡಾ ಕೊಟ್ಟಿದ್ದು, ತಾನು ಸೂಚಿಸುವ …

Read More »

ಮಂಗಳೂರಿನಿಂದ ಬೆಂಗಳೂರಿನ ಮೆಜೆಸ್ಟಿಕ್‍ಗೆ ಬಂದ ಮಹಿಳೆಯ ಅತ್ಯಾಚಾರಕ್ಕೆ ಯತ್ನ…!

ಬೆಂಗಳೂರು : ರಾಜಧಾನಿಯಲ್ಲಿ ಪದೇ ಪದೇ ಅತ್ಯಾಚಾರದಂತಹ ಪ್ರಕರಣಗಳೂ ಮರುಕಳಿಸುತ್ತಲೇ ಇದೆ. ಬೆಂಗಳೂರಿನಲ್ಲಿ ಹೆಣ್ಮಕ್ಕಳು ಎಷ್ಟು ಸೇಫ್ ಎಂಬ ಪ್ರಶ್ನೆ ಸದಾ ಕೇಳಿ ಬರುತ್ತಲೇ ಇರುತ್ತದೆ. ಇದೀಗ ಮತ್ತೆ ಇಂತಹದ್ದೇ ಕಿರುಕುಳದಂತಹ ಪ್ರಕರಣ ವರದಿಯಾಗಿದೆ. ಮಂಗಳೂರಿನಿಂದ ಬೆಂಗಳೂರಿಗೆ ಬಂದು ರಾತ್ರಿ ಮೆಜೆಸ್ಟಿಕ್‍ನಲ್ಲಿ ಇಳಿದಿದ್ದ ಮಹಿಳೆಯನ್ನು ಬೈಕ್‍ನಲ್ಲಿ ಬಂದ ಇಬ್ಬರು ಕಾಡಿದ್ದಾರೆ. ಈ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಸೋಮವಾರ ಈ ಘಟನೆ ನಡೆದಿದೆ. ಮಂಗಳೂರಿನಿಂದ ಈ ಮಹಿಳೆ ಬಸ್‍ನಲ್ಲಿ ಬೆಂಗಳೂರಿಗೆ …

Read More »

ಮಳೆಯಲ್ಲಿ ನೆನೆದು ಹರಿಪ್ರಿಯಾ ಖುಷಿ…

ಬೆಂಗಳೂರು : ಸ್ಯಾಂಡಲ್‍ವುಡ್ ನಟಿ ಹರಿಪ್ರಿಯಾ ಈಗಷ್ಟೇ ತಮ್ಮ `ಡಾಟರ್ ಆಫ್ ಪಾರ್ವತಮ್ಮ’ ಚಿತ್ರವನ್ನು ಮುಗಿಸಿದ್ದಾರೆ. ಹೀಗಾಗಿ, ಈ ಬ್ಯುಸಿ ಲೈಫ್‍ನ ನಡುವೆ ಸಣ್ಣ ಬ್ರೇಕ್ ತೆಗೆದುಕೊಂಡ ಹರಿಪ್ರಿಯಾ ಒಂದಷ್ಟು ಹೊತ್ತು ಕುಟುಂಬದೊಂದಿಗೆ ಕಳೆಯುತ್ತಿದ್ದಾರೆ. ಅದೂ ಅಲ್ಲದೆ, ಸಿಟಿ ಜಂಜಾಟದಿಂದ ದೂರವಾಗಿ ಸ್ವಚ್ಛಂದ ಹಸಿರ ವಾತಾವರಣದಲ್ಲಿ ವಿಹರಿಸುತ್ತಿದ್ದಾರೆ. ಇವರ ಈ ಖುಷಿಗೆ ಮಳೆಯೂ ಜೊತೆಯಾಗಿದೆ. ಈ ಮಳೆಯಲ್ಲಿ ನೆನೆಯುತ್ತಾ ಹರಿಪ್ರಿಯಾ ಕುಣಿದಾಡಿದ್ದು, ಈ ವೀಡಿಯೋವನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲೂ ಹಂಚಿಕೊಂಡಿದ್ದಾರೆ. …

Read More »

ಕಟ್ಟಡದಿಂದ ಜಿಗಿದು ಬಾಲಿವುಡ್ ಸ್ಕ್ರಿಪ್ಟ್ ರೈಟರ್ ಆತ್ಮಹತ್ಯೆ…

ಮುಂಬೈ : ತಾನು ವಾಸವಾಗಿರುವ ಅಪಾರ್ಟ್‍ಮೆಂಟ್‍ನಿಂದ ಜಿಗಿದು ಯುವಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮುಂಬೈಯಲ್ಲಿ ನಡೆದಿದೆ. 32 ವರ್ಷದ ರವಿಶಂಕರ್ ಅಲೋಕ್ ಆತ್ಮಹತ್ಯೆಗೆ ಶರಣಾದ ಯುವಕ. ಅಂಧೇರಿ ವೆಸ್ಟ್‍ನಲ್ಲಿರುವ ಅಪಾರ್ಟ್‍ಮೆಂಟ್‍ನಿಂದ ಜಿಗಿದು ಇವರು ಸಾವಿಗೆ ಶರಣಾಗಿದ್ದಾರೆ. ನಾನಾ ಪಟೇಕರ್ ಅಭಿನಯದ `ಅಬ್ ತಕ್ ಚಪ್ಪನ್’ ಚಿತ್ರದ ಬರವಣಿಗೆ ವಿಭಾಗದಲ್ಲಿ ಇವರು ಕೆಲಸ ಮಾಡಿದ್ದರು. ಇನ್ನು, ಆತ್ಮಹತ್ಯೆ ನಡೆದ ಸ್ಥಳದಲ್ಲಿ ಯಾವುದೇ ಡೆತ್‍ನೋಟ್‍ಗಳು ಸಿಕ್ಕಿಲ್ಲ. ಸದ್ಯದ ಮಾಹಿತಿ ಪ್ರಕಾರ ರವಿಶಂಕರ್ ಖಿನ್ನತೆಗೊಳಗಾಗಿದ್ದರು …

Read More »

ಸ್ಯಾಂಡಲ್‍ವುಡ್‍ಗೆ ಬರುತ್ತಿದ್ದಾರೆ ವಿವೇಕ್ ಒಬೇರಾಯ್

ಬೆಂಗಳೂರು : ಕರುನಾಡ ಚಕ್ರವರ್ತಿ ಶಿವರಾಜ್‍ಕುಮಾರ್ ಈಗ ಹಲವು ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. ಅದರಲ್ಲಿ `ರುಸ್ತುಂ’ ಕೂಡಾ ಒಂದು. ಸಾಹಸ ನಿರ್ದೇಶಕ ರವಿವರ್ಮಾ ಈ ಚಿತ್ರವನ್ನು ಡೈರೆಕ್ಟ್ ಮಾಡುತ್ತಿದ್ದಾರೆ. ಹಲವು ನಟರು ಈ ಚಿತ್ರದಲ್ಲಿ ಕಾಣಿಸಿಕೊಂಡಿದ್ದು, ತಮಿಳು, ತೆಲುಗಿನಲ್ಲಿ ಹೆಸರು ಮಾಡಿರುವ ಹರೀಶ್ ಉತ್ತಮ್ ಕೂಡಾ ಅಭಿನಯಿಸುತ್ತಿದ್ದಾರೆ. ಇದರ ನಡುವೆ ಬಾಲಿವುಡ್ ನಟ ವಿವೇಕ್ ಒಬೇರಾಯ್ ಅವರನ್ನೂ ಈ ಚಿತ್ರದ ಮೂಲಕ ಸ್ಯಾಂಡಲ್‍ವುಡ್‍ಗೆ ಕರೆತರಲು ರವಿವರ್ಮ ನಿರ್ಧರಿಸಿದ್ದಾರೆ. ಹೀಗಾಗಿ, ಶಿವಣ್ಣ ಸೇರಿದಂತೆ …

Read More »

56ನೇ ಹುಟ್ಟುಹಬ್ಬದ ಖುಷಿಯಲ್ಲಿ ಶಿವಣ್ಣ

ಬೆಂಗಳೂರು : ಸ್ಯಾಂಡಲ್‍ವುಡ್ ಹಿರಿಯ ನಟ, ಹ್ಯಾಟ್ರಿಕ್ ಹೀರೋ ಶಿವರಾಜ್‍ಕುಮಾರ್ ಹುಟ್ಟುಹಬ್ಬದ ಖುಷಿಯಲ್ಲಿದ್ದಾರೆ. 56ನೇ ಹುಟ್ಟುಹಬ್ಬವನ್ನು ಶಿವಣ್ಣ ಅಭಿಮಾನಿಗಳೊಂದಿಗೆ ಆಚರಿಸಿದ್ದಾರೆ. ನಿನ್ನೆಯಿಂದಲೇ ಅಭಿಮಾನಿಗಳು ಶಿವಣ್ಣನ ಹುಟ್ಟುಹಬ್ಬದ ಖುಷಿಯಲ್ಲಿ ತೇಲುತ್ತಿದ್ದರು. ಅಲ್ಲದೆ, ಬೃಹತ್ ಗಾತ್ರದ ಕೇಕ್ ತಂದು ಶಿವಣ್ಣನ ಹುಟ್ಟುಹಬ್ಬವನ್ನು ಅವರ ನಿವಾಸದೆದುರು ಆಚರಿಸಿದರು. ನಾಗವಾರ ಬಳಿಕ ಶಿವಣ್ಣ ಅವರ ಶ್ರೀಮುತ್ತು ನಿವಾಸದಲ್ಲಂತೂ ಹಬ್ಬದ ವಾತಾವರಣವೇ ಇತ್ತು. ರಾತ್ರಿ 12 ಗಂಟೆಗೆ ಜಮಾಯಿಸಿದ ಅಭಿಮಾನಿಗಳು ಕೇಕ್ ಕತ್ತರಿಸಿ ನೆಚ್ಚಿನ ನಟನ ಹುಟ್ಟುಹಬ್ಬವನ್ನು …

Read More »

ಬಾಲಿವುಡ್ ಎಂಟ್ರಿಗೆ ಮಹಮ್ಮದ್ ಶಮಿ ಪತ್ನಿ ರೆಡಿ…

ಮುಂಬೈ : ಪತ್ನಿ ಕ್ರಿಕೆಟಿಗ ಮಹಮ್ಮದ್ ಶಮಿ ಅವರಿಂದ ದೂರವಾಗಿರುವ ಹಸಿನ್ ಜಹಾನ್ ಈಗ ಮಾಡೆಲಿಂಗ್ ಕ್ಷೇತ್ರದತ್ತ ಜಾಸ್ತಿ ಗಮನ ಕೇಂದ್ರೀಕರಿಸುತ್ತಿದ್ದಾರೆ. ಜೊತೆಗೆ, ಬಾಲಿವುಡ್ ಪ್ರವೇಶಿಸುವುದಕ್ಕೂ ಸಿದ್ಧತೆ ನಡೆಸಿದ್ದಾರೆ. ಸದ್ಯದ ಮಾಹಿತಿ ಪ್ರಕಾರ ನಿರ್ದೇಶಕ ಅಮ್ಜದ್ ಖಾನ್ ಅವರ ಮುಂದಿನ ಚಿತ್ರ `ಫತ್ವಾ’ದಲ್ಲಿ ನಟಿಸಲು ಹಸಿನ್ ಸೈನ್ ಮಾಡಿದ್ದಾರಂತೆ. `ಫತ್ವಾ’ ಚಿತ್ರದಲ್ಲಿ ಹಸಿನ್ ಅವರದ್ದು ಪತ್ರಕರ್ತೆಯ ಪಾತ್ರ. ಅಕ್ಟೋಬರ್ ವೇಳೆಗೆ ಈ ಚಿತ್ರದ ಶೂಟಿಂಗ್ ಆರಂಭವಾಗಲಿದೆ. Hasin jahan I …

Read More »

ತಿರುಪತಿಯಲ್ಲಿ ಜಾಹ್ನವಿ ಕಪೂರ್ : ಕುಟುಂಬದೊಂದಿಗೆ ಬಂದು ಪೂಜೆ

ಹೈದರಾಬಾದ್ : ಬಾಲಿವುಡ್ ನಟಿ ದಿವಂಗತ ಶ್ರೀದೇವಿ ಪುತ್ರಿ ಜಾಹ್ನವಿ ಕಪೂರ್ ತಿರುಪತಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ. ತಂದೆ ಬೋನಿ ಕಪೂರ್ ಸೇರಿದಂತೆ ಕುಟುಂಬದ ಸದಸ್ಯರೊಂದಿಗೆ ಜಾಹ್ನವಿ ಬಾಲಾಜಿ ದರ್ಶನಕ್ಕೆ ಬಂದಿದ್ದರು. ತಮ್ಮ ಮೊದಲ ಚಿತ್ರ `ದಡಕ್’ನ ಯಶಸ್ಸಿಗಾಗಿ ಜಾಹ್ನವಿ ಪ್ರಾರ್ಥಿಸಿದರು. `ದಡಕ್’ ಜಾಹ್ನವಿ ಮೊದಲ ಚಿತ್ರವಾಗಿದ್ದು, ಇಶಾನ್ ಕಟ್ಟರ್ ನಾಯಕನಾಗಿ ಅಭಿನಯಿಸಿದ್ದಾರೆ. ಸದ್ಯ ಈ ಚಿತ್ರದ ಪ್ರಮೋಷನ್‍ನಲ್ಲಿ ಇವರಿಬ್ಬರು ಬ್ಯುಸಿ ಇದ್ದಾರೆ. #boneykapoor ji with his …

Read More »
error: Content is protected !!