Sunday , April 22 2018
Home / Film News / Bollywood (page 20)

Bollywood

ಹೆಣ್ಮಕ್ಕಳನ್ನು ಗೌರವದಿಂದ ಕಾಣುವಂತೆ ಹೆತ್ತವರು ಗಂಡು ಮಕ್ಕಳಿಗೆ ಬುದ್ಧಿ ಕೇಳಬೇಕು : ಶಾರೂಖ್ ಖಾನ್

ಮುಂಬೈ : ಹೊಸವರ್ಷಾಚರಣೆ ನೆಪದಲ್ಲಿ ಬೆಂಗಳೂರಿನಲ್ಲಿ ಯುವತಿಯರ ಮೇಲೆ ನಡೆದಿದ್ದ ಸರಣಿ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ಕಿಂಗ್‍ಖಾನ್ ಶಾರೂಖ್ ಕಳವಳ ವ್ಯಕ್ತಪಡಿಸಿದ್ದಾರೆ. ಮಹಿಳೆಯರನ್ನು ಗೌರವದಿಂದ ಕಾಣುವಂತೆ ಪ್ರತೀ ಹೆತ್ತವರು ತಮ್ಮ ಗಂಡು ಮಕ್ಕಳಿಗೆ ಚಿಕ್ಕಂದಿನಿಂದಲೇ ತಿಳಿಹೇಳಬೇಕು ಎಂದು ಶಾರೂಖ್ ಹೇಳಿದ್ದಾರೆ. ಶನಿವಾರ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡ ಶಾರೂಖ್ ಬಳಿಕ ಮಾಧ್ಯಮದವರು ಬೆಂಗಳೂರಿನಲ್ಲಾದ ಘಟನೆ ಬಗ್ಗೆ ಪ್ರಶ್ನೆ ಕೇಳಿದರು. ಈ ಪ್ರಶ್ನೆಗೆ ಉತ್ತರಿಸಿದ ಶಾರೂಖ್, ಹೊಸವರ್ಷಾಚರಣೆ ಸಂದರ್ಭದಲ್ಲಿ ಬೆಂಗಳೂರಿನಲ್ಲಿ ನಡೆದ …

Read More »

ದಂಗಲ್ ಗೆಲುವಿನ ನಾಗಾಲೋಟ : 15 ದಿನಗಳಲ್ಲಿ 320.16 ಕೋಟಿ ಗಳಿಕೆ

ಮುಂಬೈ : ಅಮೀರ್ ಖಾನ್ ಅಭಿನಯದ ದಂಗಲ್ ಚಿತ್ರ ಗಳಿಕೆಯ ನಾಗಾಲೋಟದಲ್ಲಿ ಓಡುತ್ತಿದೆ. 15 ದಿನಗಳಲ್ಲಿ ಚಿತ್ರ 320.16 ಕೋಟಿ ರೂಪಾಯಿ ಗಳಿಸಿದೆ. ಸದ್ಯದ ಗಳಿಕೆ ಅಮೀರ್‍ಗೆ ಆಲ್ ಟೈಮ್ ಅತೀ ಹೆಚ್ಚು ಗಳಿಸಿದ ನಟರಲ್ಲಿ ಅಮೀರ್ ಎರಡನೇ ಸ್ಥಾನವನ್ನು ಪಡೆದಿದ್ದಾರೆ. 2016ರಲ್ಲಿ ಅತೀ ಹೆಚ್ಚು ಗಳಿಕೆ ಮಾಡಿದ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಈ ಚಿತ್ರ ಪಿಕೆ ಮತ್ತು ಭಜರಂಗಿ ಭಾಯಿಜಾನ್ ಚಿತ್ರದ ದಾಖಲೆಯನ್ನು ಮುರಿದಿದೆ. ಅಮೀರ್ ಅಭಿನಯದ …

Read More »

ಓಂ ಪುರಿ ಸಾವಿಗೆ ಕಾರಣ ಹೃದಯಾಘಾತನಾ…? : ಬೇರೆಯದ್ದೇ ಹೇಳುತ್ತಿದೆ ಪೋಸ್ಟ್ ಮಾರ್ಟಮ್ ರಿಪೋರ್ಟ್…!

ಮುಂಬೈ : ಹಿರಿಯ ನಟ ಓಂ ಪುರಿ ಇವತ್ತು ವಿಧಿವಶರಾಗಿದ್ದಾರೆ. ಇಡೀ ಚಿತ್ರರಂಗ ಪುರಿ ನಿಧನಕ್ಕೆ ಕಂಬನಿ ಸುರಿಸುತ್ತಿದೆ. 66 ವರ್ಷದ ಓಂ ಪುರಿ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ ಎಂದು ಕುಟುಂಬ ಮೂಲಗಳು ತಿಳಿಸಿವೆ. ಆದರೆ, ಪೋಸ್ಟ್ ಮಾರ್ಟಮ್ ರಿಪೋರ್ಟ್ ಬೇರೆಯದ್ದೇ ಹೇಳುತ್ತಿದೆ…! ಪುರಿ ಅವರ ಮೃತದೇಹವನ್ನು ಮುಂಬೈನ ಕೋಪರ್ ಆಸ್ಪತ್ರೆಗೆ ಪೋಸ್ಟ್ ಮಾರ್ಟಮ್‍ಗೆಂದು ತರಲಾಗಿತ್ತು. ಆದರೆ, ಈ ವೇಳೆ, ಪುರಿ ತಲೆಯ ಭಾಗದಲ್ಲಿ ಗಾಯದ ಗುರುತು ಪತ್ತೆ ಆಗಿದೆ ಎಂದು …

Read More »

ಹಿರಿಯ ಬಾಲಿವುಡ್ ನಟ ಓಂ ಪುರಿ ವಿಧಿವಶ

ಮುಂಬೈ : ಬಾಲಿವುಡ್ ಹಿರಿಯ ನಟ ಓಂ ಪುರಿ ವಿಧಿವಶರಾಗಿದ್ದಾರೆ. ಹೃದಯಾಘಾತದಿಂದ ಇವರು ಕೊನೆಯುಸಿರೆಳೆದಿದ್ದಾರೆ. ಇವರಿಗೆ 66 ವರ್ಷ ವಯಸ್ಸಾಗಿತ್ತು. ಬಾಲಿವುಡ್‍ನಲ್ಲಿ ಖಳನಟ, ಪೋಷಕ ಪಾತ್ರ, ಹಾಸ್ಯ ಪಾತ್ರ ಸೇರಿದಂತೆ ಎಲ್ಲಾ ಪಾತ್ರಗಳಿಗೂ ಜೀವ ತುಂಬಿದ್ದ ಓಂ ಪುರಿ ದಕ್ಷಿಣ ಭಾರತದ ಹಲವು ಭಾಷೆಗಳಲ್ಲೂ ಗಮನ ಸೆಳೆದಿದ್ದಾರೆ. ಶಿವರಾಜ್‍ಕುಮಾರ್ ಅಭಿನಯದ `ಎ.ಕೆ.47′ ಚಿತ್ರದಲ್ಲಿ ಖಡಕ್ ಪೊಲೀಸ್ ಆಫೀಸರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಓಂ ಪುರಿ ತನ್ನ ಉರಿಗಣ್ಣಿನ ನೋಟದಿಂದಲೇ ವಿಶೇಷವಾಗಿ ಗಮನ …

Read More »

ಸರಬ್ಜಿತ್ ಚಿತ್ರದ ಅಭಿನಯಕ್ಕೆ ಐಶ್ವರ್ಯಗೆ ಉತ್ತಮ ನಟಿ ಪ್ರಶಸ್ತಿ

ಮುಂಬೈ : ಸರಬ್ಜಿತ್ ಚಿತ್ರದ ಅಭಿನಯಕ್ಕಾಗಿ ಐಶ್ವರ್ಯ ರೈ ಬಚ್ಚನ್ ಉತ್ತಮ ನಟಿ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಲಯನ್ಸ್ ಗೋಲ್ಡ್ ಅವಾರ್ಡ್‍ಗೆ ಐಶ್ವರ್ಯ ಭಾಜನರಾಗಿದ್ದಾರೆ. ಬುಧವಾರ ಸಬ್‍ಅರ್ಬನ್ ಆಡಿಟೋರಿಯಂನಲ್ಲಿ ನಡೆದ ಸಮಾರಂಭದಲ್ಲಿ ಐಶ್ವರ್ಯ ಈ ಪ್ರಶಸ್ತಿಯನ್ನು ಸ್ವೀಕರಿಸಿದ್ದಾರೆ. ಈ ಸಮಾರಂಭಕ್ಕೆ ಬಾಲಿವುಡ್‍ನ ಹಲವು ಗಣ್ಯರು ಸಾಕ್ಷಿಯಾದರು.

Read More »

ಮೃತ ಕಲಾವಿದನ ಕುಟುಂಬಕ್ಕೆ ಮತ್ತೆ ಧನಸಹಾಯ ಮಾಡಿದ ಬನ್ಸಾಲಿ

ಮುಂಬೈ : ಪದ್ಮಾವತಿ ಚಿತ್ರದ ಶೂಟಿಂಗ್ ಸಂದರ್ಭದಲ್ಲಿ ಸೆಟ್‍ನಿಂದ ಬಿದ್ದು ಸಾವನ್ನಪ್ಪಿದ್ದ ವರ್ಣಚಿತ್ರಕಾರ ಮುಕೇಶ್ ದಾಕಿಯಾ ಕುಟುಂಬಕ್ಕೆ ನಿರ್ದೇಶಕ, ನಿರ್ಮಾಪಕ ಸಂಜಯ್ ಲೀಲಾ ಬನ್ಸಾಲಿ ಮತ್ತೆ 2 ಲಕ್ಷಕ್ಕೂ ಅಧಿಕ ಪರಿಹಾರ ನೀಡಿದ್ದಾರೆ. ಬನ್ಸಾಲಿ ಒಟ್ಟು 23 ಲಕ್ಷದಷ್ಟು ಹಣಕಾಸಿನ ನೆರವನ್ನು ನೀಡಿದ್ದಾರೆ. ಪದ್ಮಾವತಿ ಚಿತ್ರದ ಶೂಟಿಂಗ್ ಸಂದರ್ಭದಲ್ಲಿ ವರ್ಣಚಿತ್ರಕಾರ ಮೇಲಿನಿಂದ ಬಿದ್ದು ಸಾವನ್ನಪ್ಪಿದ್ದರು. ಚಿತ್ರಕ್ಕಾಗಿ ಸಮಾಧಿ ಕಟ್ಟುವ ಕೆಲಸದಲ್ಲಿ ತೊಡಗಿದ್ದ ವರ್ಣಚಿತ್ರಕಾರ ಮುಕೇಶ್ ದಾಕಿಯಾ 5 ಅಡಿ ಎತ್ತರದಿಂದ …

Read More »

ಬೆಂಗಳೂರಿನ ಯುವತಿಯ ದೌರ್ಜನ್ಯ ನೋಡಿದಾಗ ಅಪ್ಪನಾಗಿ ನನ್ನ ರಕ್ತ ಕುದಿಯುತ್ತಿದೆ : ಇಲ್ಲಿದೆ ಯುವತಿಯರಿಗೆ ಅಕ್ಷಯ್ ಸಂದೇಶ

ಬೆಂಗಳೂರು : ಹೊಸವರ್ಷಾಚರಣೆ ನೆಪದಲ್ಲಿ ಬೆಂಗಳೂರಿನ ಪ್ರತಿಷ್ಠಿತ ಪ್ರದೇಶ ಎಂದೇ ಕರೆಸಿಕೊಳ್ಳುವ ಎಂ.ಜಿ.ರಸ್ತೆ, ಬ್ರಿಗೇಡ್ ರಸ್ತೆಯಲ್ಲಿ ನಡೆದಿದ್ದ ಯುವತಿಯ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟ ಅಕ್ಷಯ್ ಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಘಟನೆ ನೋಡಿದಾಗ ಒಬ್ಬ ಅಪ್ಪನಾಗಿ ನನ್ನ ರಕ್ತ ಕುದಿಯುತ್ತಿದೆ ಎಂದು ಅಕ್ಕಿ ಸಿಟ್ಟು ಪ್ರದರ್ಶಿಸಿದ್ದಾರೆ. ಅಲ್ಲದೆ, ಯುವತಿಯರ ಸ್ವಾತಂತ್ರ್ಯದ ಬಗ್ಗೆ ಕೀಳಾಗಿ ಮಾತನಾಡುವವರ ಬಗ್ಗೆಯೂ ಆಕ್ರೋಶ ವ್ಯಕ್ತಪಡಿಸಿರುವ ಈ ಕರಾಟೆ ಕಿಂಗ್, ಯುವತಿಯರು ಆತ್ಮರಕ್ಷಣೆ …

Read More »

ತಪ್ಪಿತಸ್ಥರಿಗೆ ಶಿಕ್ಷೆ ಜಾರಿಯಾದರೆ ಮಹಿಳಾ ದೌರ್ಜನ್ಯ ಕಡಿಮೆ ಆಗುತ್ತದೆ : ಅಮೀರ್ ಖಾನ್

ಮುಂಬೈ : ಹೊಸವರ್ಷಾಚರಣೆ ದಿನ ಬೆಂಗಳೂರಿನ ಪ್ರಮುಖ ರಸ್ತೆಯಲ್ಲಿ ಯುವತಿಯರ ಮೇಲೆ ಸಾಮೂಹಿಕ ಲೈಂಗಿಕ ದೌರ್ಜನ್ಯ ನಡೆದಿತ್ತು. ಈ ಪ್ರಕರಣದ ಬಗ್ಗೆ ಬಾಲಿವುಡ್ ನಟ ಅಮೀರ್ ಖಾನ್ ಪ್ರತಿಕ್ರಿಯೆ ಕೊಟ್ಟಿದ್ದಾರೆ. ತಪ್ಪಿತಸ್ಥರಿಗೆ ಶಿಕ್ಷೆ ಬಹುಬೇಗ ಜಾರಿ ಆದರೆ ಇಂತಹ ಕೃತ್ಯಗಳು ಕಡಿಮೆ ಆಗುತ್ತದೆ ಎಂದು ಅಮೀರ್ ಅಭಿಪ್ರಾಯಪಟ್ಟಿದ್ದಾರೆ.

Read More »

ನಟ ಅರ್ಜುನ್ ರಾಮ್ ಪಾಲ್ ಕಣ್ಣಿಗೆ ಗಾಯ

ಮುಂಬೈ : ಬಾಲಿವುಡ್ ನಟ ಅರ್ಜುನ್ ರಾಮ್‍ಪಾಲ್ ಕಣ್ಣಿಗೆ ಗಾಯ ಮಾಡಿಕೊಂಡಿದ್ದಾರೆ. ಆದರೆ, ಆತಂಕ ಪಡುವಂತಹದ್ದೇನಿಲ್ಲ ಎಂದು ಅರ್ಜುನ್ ಹೇಳಿಕೊಂಡಿದ್ದಾರೆ. ಆದರೆ, ಹೇಗೆ ಈ ಗಾಯ ಆಗಿದೆ ಎಂದು ಗೊತ್ತಿಲ್ಲ. ತನ್ನ ಇನ್ಸ್ಟೆಗ್ರಾಮ್‍ನಲ್ಲಿ ಅರ್ಜುನ್ ಈ ಫೋಟೋ ಪೋಸ್ಟ್ ಮಾಡಿದ್ದು, ಆದಷ್ಟು ಬೇಗ ನಿಮ್ಮೆಲ್ಲರನ್ನು ಕಾಣುತ್ತೇನೆ ಎಂದು ಕೂಡಾ ಹಾಕಿಕೊಂಡಿದ್ದಾರೆ.

Read More »

ಕರೀನಾ ಕಪೂರ್ ಐಟಿ ಅಕೌಂಟ್ ಹ್ಯಾಕ್ : ಪೇದೆಯಿಂದಲೇ ಕೃತ್ಯ

ಮುಂಬೈ : ಬಾಲಿವುಡ್ ನಟಿ ಕರೀನಾ ಕಪೂರ್ ಖಾನ್ ಆದಾಯ ತೆರಿಗೆ ಖಾತೆ ಹ್ಯಾಕ್ ಆಗಿದೆ. ಈ ಪ್ರಕರಣ ಭೇದಿಸಿರುವ ಪೊಲೀಸರು ಕೇಂದ್ರ ಮೀಸಲು ಪಡೆಯ ಪೊಲೀಸ್ ಪೇದೆ 26 ವರ್ಷದ ಮನೀಶ್ ಕುಮಾರ್‍ರನ್ನು ಬಂಧಿಸಿದ್ದಾರೆ. ಕರೀನಾ ಹೆಸರಲ್ಲಿ ಈತ ನಕಲಿ ಆದಾಯ ತೆರಿಗೆ ಪಾವತಿ ಮಾಡಿದ್ದ. ಮೂರು ವರ್ಷಗಳ ಹಿಂದೆ ಮನೀಶ್‍ಗೆ ಕರೀನಾರ ಪ್ಯಾನ್ ನಂಬರ್ ಸಿಕ್ಕಿತ್ತು. ಇದರ ಆಧಾರದ ಮೇಲೆಯೇ ಈತ ಈ ಕೃತ್ಯವೆಸಗಿದ್ದಾನೆ. ಯಾಕೆ ಮಾಡಿದ್ದು…? …

Read More »
error: Content is protected !!