Thursday , December 14 2017
Home / Coastalwood

Coastalwood

‘ಅಮ್ಮೇರ್ ಪೊಲೀಸಾ’ ಚಿತ್ರದ ಶೂಟಿಂಗ್ ಶುರು

ಮಂಗಳೂರು : ಕೋಸ್ಟಲ್​ವುಡ್​​ನ ಸ್ಟಾರ್ ಡೈರೆಕ್ಟರ್​ ಕೆ.ಸೂರಜ್ ಶೆಟ್ಟಿ ನಿರ್ದೇಶನದ ‘ಅಮ್ಮೇರ್ ಪೊಲೀಸಾ’ ಚಿತ್ರದ ಶೂಟಿಂಗ್ ಭರದಿಂದ ಸಾಗಿದೆ. ಮುಡಿಪು, ಇರಾ ಸೇರಿದಂತೆ ದಕ್ಷಿಣ ಕನ್ನಡದ ಪ್ರಮುಖ ಜಾಗದಲ್ಲಿ ಚಿತ್ರದ ಶೂಟಿಂಗ್ ಸಾಗುತ್ತಿದೆ. ಇತ್ತೀಚೆಗಷ್ಟೇ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ‘ಅಮ್ಮೇರ್ ಪೊಲೀಸಾ’ ಚಿತ್ರದ ಮುಹೂರ್ತ ನಡೆದಿತ್ತು. ಈ ವೇಳೆ, ಕೋಸ್ಟಲ್​ವುಡ್​ನ ಹಲವು ಗಣ್ಯರು ಉಪಸ್ಥಿತರಿದ್ದರು. ಎಕ್ಕಸಕ, ಪಿಲಿಬೈಲ್ ಯಮುನಕ್ಕ ಚಿತ್ರಗಳ ಬಳಿಕ ‘ಅಮ್ಮೇರ್ ಪೊಲೀಸಾ’ ಚಿತ್ರವನ್ನು ಸೂರಜ್​ ಶೆಟ್ಟಿ …

Read More »

‘ಮೈ ನೇಮ್ ಇಸ್ ಅಣ್ಣಪ್ಪ’ ಚಿತ್ರಕ್ಕೆ ಮುಹೂರ್ತ

ಮಂಗಳೂರು : ತುಳುವಿನ ‘ಮೈ ನೇಮ್ ಇಸ್ ಅಣ್ಣಪ್ಪ’ ಚಿತ್ರದ ಮುಹೂರ್ತ ಕಟೀಲು ಶ್ರೀದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನಡೆದಿದೆ. ಅಕ್ಟೋಬರ್ 6 ರಂದು ಈ ಚಿತ್ರ ಸೆಟ್ಟೇರಿದೆ. ಮಯೂರ್ ಶೆಟ್ಟಿ ನಿರ್ದೇಶನದ ಈ ಚಿತ್ರವನ್ನು ರೋಹನ್ ಶೆಟ್ಟಿ ನಿರ್ಮಾಣ ಮಾಡುತ್ತಿದ್ದಾರೆ. ಮುಹೂರ್ತದ ಸಂದರ್ಭದಲ್ಲಿ ಚಿತ್ರತಂಡ ಮತ್ತು ಹಲವು ಗಣ್ಯರು ಉಪಸ್ಥಿತರಿದ್ದರು. ಮಂಜು ರೈ, ಶುಭಾ ಶೆಟ್ಟಿ, ನವೀನ್ ಡಿ ಪಡೀಲ್, ಭೋಜರಾಜ್ ವಾಮಂಜೂರ್​, ಅರವಿಂದ ಬೋಳಾರ್​, ಸತೀಶ್​ ಬಂದಲೆ, ರಂಗಾಯಣ ರಘು, …

Read More »

ದುಬೈನಲ್ಲಿ ಅರೆ ಮರ್ಲೆರ್ ರೀ ರಿಲೀಸ್

ದುಬೈ : ಕೋಸ್ಟಲ್ ವುಡ್ ನ ಬ್ಲಾಕ್ ಬ್ಲಸ್ಟರ್ ಚಿತ್ರ ಅರೆ ಮರ್ಲೆರ್ ದುಬೈನಲ್ಲಿ ರೀರಿಲೀಸ್ ಆಗುತ್ತಿದೆ. ಪ್ರೇಕ್ಷಕರ ಒತ್ತಾಯದ ಮೇರೆಗೆ ಸೆಪ್ಟೆಂಬರ್ 28 ರಂದು ಈ ಚಿತ್ರ ರಿಲೀಸ್ ಮಾಡಲು ನಿರ್ಧರಿಸಲಾಗಿದೆ. ಅಕ್ಟೋಬರ್ 4 ರವರೆಗೆ ಪ್ರತಿದಿನ ಈ ಚಿತ್ರ ಪ್ರದರ್ಶನಗೊಳ್ಳಲಿದೆ. ಅರಬ್ ರಾಷ್ಟ್ರಗಳ 14 ಚಿತ್ರಮಂದಿರಗಳಲ್ಲಿ ಈ ಹಿಂದೆ ಈ ಚಿತ್ರ ರಿಲೀಸ್ ಆಗಿತ್ತು. ಆಗಲೂ ಚಿತ್ರಕ್ಕೆ ತುಂಬಾ ರೆಸ್ಪಾನ್ಸ್ ಸಿಕ್ಕಿತ್ತು.

Read More »

ನಾಳೆ ‘ನೇಮೋದ ಬೂಳ್ಯ’ ಸಿನೆಮಾ ರಿಲೀಸ್​

ಮಂಗಳೂರು : ಕೋಸ್ಟಲ್​ವುಡ್​ನಲ್ಲಿ ಬಹಳ ನಿರೀಕ್ಷೆ ಮೂಡಿಸಿರುವ ‘ನೇಮೋದ ಬೂಳ್ಯ’ ಸಿನೆಮಾ ಬಿಡುಗಡೆಗೆ ಕ್ಷಣಗಣನೆ ಶುರುವಾಗಿದೆ. ನಾಳೆ ಅಂದರೆ, ಸೆಪ್ಟೆಂಬರ್ 22 ರಂದು ಚಿತ್ರ ಕರಾವಳಿಯಾದ್ಯಂತ ತೆರೆಗೆ ಬರಲಿದೆ. ಭೂತಾರಾಧನೆಗೆ ಸಂಬಂಧಿಸಿದಂತೆ ಪರತಿ ಮಂಗಣೆ ಪಾಡ್ದನ ಆಧರಿಸಿ ಈ ಚಿತ್ರವನ್ನು ಮಾಡಲಾಗಿದೆ. ಕುದ್ರಾಡಿ ಗುತ್ತು ಚಂದ್ರಶೇಖರ ಮಾಡ ಈ ಚಿತ್ರ ನಿರ್ಮಿಸಿದ್ದಾರೆ. ಬಿ.ಕೆ. ಗಂಗಾಧರ ಕಿರೋಡಿಯನ್‌ ನಿರ್ದೇಶನ ಚಿತ್ರಕ್ಕಿದೆ. ಕನ್ನಡ ಮತ್ತು ತುಳು ಸಿನೆಮಾ ಲೋಕದಲ್ಲಿ ಗುರುತಿಸಿಕೊಂಡಿರುವ ವಿ. ಮನೋಹರ್‌ …

Read More »

‘ರಂಗ್​ ರಂಗ್​​ದ ದಿಬ್ಬಣ’ ಚಿತ್ರದ ವಿತರಣಾ ಹಕ್ಕು ಪಡೆದ ತೂಗುದೀಪ ಪ್ರೊಡಕ್ಷನ್ಸ್​

ಮಂಗಳೂರು : ಸ್ಯಾಂಡಲ್​ವುಡ್​ನ ಪ್ರಮುಖ ವಿತರಣಾ ಸಂಸ್ಥೆ ತೂಗುದೀಪ ಪ್ರೊಡಕ್ಷನ್ಸ್​ ಈಗ ತುಳು ಚಿತ್ರವೊಂದರ ವಿತರಣಾ ಹಕ್ಕು ಪಡೆದಿದೆ. ರಂಗ್​ ರಂಗ್​ದ ದಿಬ್ಬಣ ಚಿತ್ರವನ್ನು ಇದೇ ಸಂಸ್ಥೆ ಡಿಸ್ಟ್ರಿಬ್ಯೂಟ್​ ಮಾಡಲಿದೆ. ಶರತ್ ಕೋಟ್ಯಾನ್ ಈ ಚಿತ್ರದ ನಿರ್ಮಾಪಕ. ಅಕ್ಟೋಬರ್​ 20ಕ್ಕೆ ಈ ಚಿತ್ರ ತೆರೆ ಕಾಣಲಿದೆ.

Read More »

‘ಅಮ್ಮೆರ್ ಪೊಲೀಸಾ?’ ಚಿತ್ರಕ್ಕೆ ಸಿದ್ಧತೆ ಬಲು ಜೋರು

ಮಂಗಳೂರು : ಸೂರಜ್ ಕೆ ಶೆಟ್ಟಿ ನಿರ್ದೇಶನದ ‘ಅಮ್ಮೆರ್ ಪೊಲೀಸಾ?’ ಚಿತ್ರದ ಸಿದ್ಧತೆ ಬಲು ಜೋರಾಗಿದೆ. ಸೆಪ್ಟೆಂಬರ್ 29ರಿಂದ ಚಿತ್ರದ ಶೂಟಿಂಗ್ ಶುರುವಾಗಲಿದೆ. ದಕ್ಷಿಣ ಕನ್ನಡದ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇಗುಲದಲ್ಲಿ ಚಿತ್ರದ ಮುಹೂರ್ತ ಕೂಡಾ ನಡೆಯಲಿದೆ. ಈ ಹಿಂದೆ ಎಕ್ಕಸಕ್ಕ, ಪಿಲಿಬೈಲ್ ಯಮುನಕ್ಕ ಚಿತ್ರಗಳ ಮೂಲಕ ಸೂರಜ್ ಶೆಟ್ಟಿ ಗಮನ ಸೆಳೆದಿದ್ದರು. ಈ ಹೊಸ ಚಿತ್ರದಲ್ಲಿ ರೂಪೇಶ್​ ಶೆಟ್ಟಿ ಮತ್ತು ಪೂಜಾ ಶೆಟ್ಟಿ ನಾಯಕ …

Read More »

ಏಸ ಚಿತ್ರ ಬೆಂಗಳೂರಿನಲ್ಲಿ ರಿಲೀಸ್

ಬೆಂಗಳೂರು : ಕೋಸ್ಟಲ್ವುಡ್ನಲ್ಲಿ ಸಖತ್ ಜನ ಮನ್ನಣೆ ಗಳಿಸಿರುವ ಹಾಸ್ಯಮಯ ಏಸ ಚಿತ್ರ ಈಗ ರಾಜಧಾನಿ ಬೆಂಗಳೂರಿನಲ್ಲಿ ರಿಲೀಸ್ ಆಗಿದೆ. ಗಣೇಶ ಹಬ್ಬದ ದಿನ ಬೆಂಗಳೂರಿನಲ್ಲಿ ರಿಲೀಸ್ ಆಗಿರುವ ಈ ಚಿತ್ರ ಇಲ್ಲಿರುವ ತುಳುನಾಡಿಗರ ಮನ ತಣಿಸಲು ಮುಂದಾಗಿದೆ. ಕೋರಮಂಗಲದ ಫೋರಂ ಮಾಲ್ನಲ್ಲಿಚಿತ್ರ ರಿಲೀಸ್ ಆಗಿದ್ದು, ಬೆಂಗಳೂರಿನಲ್ಲೂ ಸಖತ್ ರೆಸ್ಪಾನ್ಸ್ ಸಿಕ್ಕಿದೆ. ಈಗಾಗಲೇ ಮುಂಬೈಯಲ್ಲೂ ಈ ಚಿತ್ರ ಜನರ ಮನಗೆದ್ದಿದೆ. ಕೋಸ್ಟಲ್ವುಡ್ನ ಹೆಸರಾಂತ ಕಲಾವಿದರೆಲ್ಲಾ ಈ ಚಿತ್ರದಲ್ಲಿ ಇದ್ದಾರೆ.

Read More »

ಉಮಿಲ್​ ಸಿನೆಮಾದಲ್ಲಿ ಏಳು ಗೆಟಪ್​ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಬೋಜರಾಜ್​ ವಾಮಂಜೂರು

ಮಂಗಳೂರು : ಇದು ಕೋಸ್ಟಲ್​ವುಡ್​ನಲ್ಲಿ ಹೊಸ ದಾಖಲೆ. ಬಹುನಿರೀಕ್ಷಿತ ಉಮಿಲ್ ಚಿತ್ರದಲ್ಲಿ ಬೋಜರಾಜ್ ವಾಮಂಜೂರು ಡಿಫ್ರೆಂಟ್ ಗೆಟಪ್​ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಏಳು ವಿವಿಧ ಪಾತ್ರಗಳಲ್ಲಿ ತುಳುನಾಡಿನ ಈ ಕಲಾವಿದ ಮಿಂಚುವ ಮೂಲಕ ದಾಖಲೆ ಬರೆಯಲಿದ್ದಾರೆ. ಸದ್ಯ ನಾಟಕ, ಯಕ್ಷಗಾನ ಮತ್ತು ಸಿನೆಮಾ ಕ್ಷೇತ್ರದಲ್ಲಿ ಬ್ಯುಸಿಯಾಗಿರುವ ಬೋಜರಾಜ್​ ಉಮಿಲ್ ಚಿತ್ರದ ಮೂಲಕ ಕೋಸ್ಟಲ್​ವುಡ್​ನಲ್ಲಿ ಹೊಸದೊಂದು ಪ್ರಯತ್ನಕ್ಕೆ ಕೈ ಹಾಕಿದ್ದಾರೆ. ಈ ಚಿತ್ರವನ್ನು ರಂಜಿತ್ ಸುವರ್ಣ ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ ಬೋಜರಾಜ್ ಅವರೇ …

Read More »

ಮೊದಲ ವಾರದಲ್ಲೇ 50 ಲಕ್ಷ ಗಳಿಸಿದ ಅರೆ ಮರ್ಲೆರ್

ಮಂಗಳೂರು : ಕೋಸ್ಟಲ್​ವುಡ್​ನಲ್ಲಿ ಕಳೆದ ವಾರ ರಿಲೀಸ್ ಆದ ಕಾಮಿಡಿ ಚಿತ್ರ ಅರೆ ಮರ್ಲೆರ್ ಗೆಲುವಿನ ನಾಗಾಲೋಟವನ್ನು ಮುಂದುವರಿಸಿದೆ. ಸದ್ಯ ಸಿಕ್ಕಿರುವ ಬಾಕ್ಸ್​ ಆಫೀಸ್​ ಮಾಹಿತಿ ಪ್ರಕಾರ ಈ ಚಿತ್ರ ಮೊದಲ ವಾರದಲ್ಲಿ 50 ಲಕ್ಷ ರೂಪಾಯಿ ಗಳಿಸಿದೆಯಂತೆ. ಈ ಕಾಮಿಡಿ ಚಿತ್ರ ಪ್ರೇಕ್ಷಕರ ಮನ ಗೆದ್ದಿದೆ. ಬೋಜರಾಜ್ ವಾಮಂಜೂರು ಮತ್ತು ಅರವಿಂದ ಬೋಳಾರ್ ಅವರ ಕಾಮಿಡಿ ಪ್ರೇಕ್ಷಕರನ್ನು ಆರಂಭದಿಂದ ಕೊನೆಯ ವರೆಗೆ ನಗೆಗಡಲಲ್ಲಿ ತೇಲಿಸುತ್ತಿದೆ. ದೇವದಾಸ್ ಕಾಪಿಕಾಡ್​ ನಿರ್ದೇಶನದ …

Read More »

ಆಗಸ್ಟ್​ 20ಕ್ಕೆ ಗೋರೆವಾಂವ್​​ನಲ್ಲಿ ಅರೆಮರ್ಲೆರ್​ ಚಿತ್ರ ಪ್ರದರ್ಶನ

ಮುಂಬೈ : ಕೋಸ್ಟಲ್​ವುಡ್​ನಲ್ಲಿ ಸಾಕಷ್ಟು ಮೆಚ್ಚುಗೆ ಗಳಿಸಿ ಮುನ್ನಡೆಯುತ್ತಿರುವ ಅರೆ ಮರ್ಲೆರ್ ಚಿತ್ರ ಮುಂಬೈಯಲ್ಲೂ ಪ್ರದರ್ಶನಗೊಳ್ಳಲು ಸಜ್ಜಾಗಿದೆ. ಆಗಸ್ಟ್​ 20 ರಂದು ಗೋರೇಗಾಂವ್​​​ನ ಪಶ್ಚಿಮದ ಟೋಪಿವಾಲ ಚಿತ್ರಮಂದಿರಲ್ಲಿ ಅರೆ ಮರ್ಲೆರ್ ಪ್ರದರ್ಶನಗೊಳ್ಳಲಿದೆ. ಆಗಸ್ಟ್​ 20 ರಂದು ಬೆಳಗ್ಗೆ 9 ಗಂಟೆಯಿಂದ ಚಿತ್ರ ಪ್ರದರ್ಶನ ಆರಂಭಗೊಳ್ಳಲಿದೆ. ಅರ್ಜುನ್ ಕಾಪಿಕಾಡ್​ ನಾಯಕನಾಗಿ ನಟಿಸಿರುವ ಈ ಚಿತ್ರದಲ್ಲಿ ಕೋಸ್ಟಲ್​ವುಡ್​ನ ಪ್ರಮುಖ ಕಲಾವಿದರೆಲ್ಲಾ ಅಭಿನಯಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಕಾರ್ಯಕ್ರಮದ ವ್ಯವಸ್ಥಾಪಕರಾದ ಸುರೇಶ್ ಕಡಂದಲೆ : 9867276638 …

Read More »
error: Content is protected !!