Tuesday , August 14 2018
ಕೇಳ್ರಪ್ಪೋ ಕೇಳಿ
Home / Earth

Earth

ಘೇಂಡಾಮೃಗದ ಮರಿಗೆ ದಿಯಾ ಮಿರ್ಜಾ ಹೆಸರು…!

ನೈರೋಬಿ : ಬಾಲಿವುಡ್ ನಟಿ ದಿಯಾ ಮಿರ್ಜಾ ಹೆಸರನ್ನು ಕೀನ್ಯಾದಲ್ಲಿ ಘೇಂಡಾ ಮೃಗಕ್ಕೆ ಇಡಲಾಗಿದೆ…! ನೈರೋಬಿಯ ರಾಷ್ಟ್ರೀಯ ಉದ್ಯಾನವನದಲ್ಲಿರುವ ಈ ಘೇಂಡಾಮೃಗ ಈಗ ಹೆಸರಿನ ಕಾರಣಕ್ಕೇ ಗಮನ ಸೆಳೆದಿದೆ…! 2017ರ ಅಕ್ಟೋಬರ್ 15 ರಂದು ಈ ಮರಿ ಜನಿಸಿತ್ತು. ಇನ್ನು, ಈ ಮರಿಗೆ ದಿಯಾ ಹೆಸರು ಇಟ್ಟ ಹಿಂದೆಯೂ ಒಂದು ಇಂಟ್ರಸ್ಟಿಂಗ್ ಕತೆ ಇದೆ. Thank you @OlPejeta for naming this beautiful baby after me!!! It …

Read More »

ಮಾವುತ ಬಾರದ ನೋವು… ನೋವಲ್ಲೇ ಪ್ರಾಣ ತ್ಯಜಿಸಿದ ಆನೆ ಮರಿ…!

ಶಿವಮೊಗ್ಗ : ಇದು ಮೂಕ ಜೀವವೊಂದರ ಮನಕಲಕುವ ಸುದ್ದಿ… ನೋವಲ್ಲಿ ಪ್ರಾಣ ತ್ಯಜಿಸಿದ ಅಮಾಯಕ ಮರಿಯ ನೋವು…! ಇದು ನಡೆದದ್ದು ಶಿವಮೊಗ್ಗ ಜಿಲ್ಲೆಯ ಸಕ್ರೆಬೈಲಿನ ಆನೆ ಬಿಡಾರದಲ್ಲಿ… ಒಂದೂವರೆ ವರ್ಷದ ಹಿಂದೆ ದಾಂಡೇಲಿಯಲ್ಲಿ ಕೃಷಿ ಹೊಂಡದಲ್ಲಿ ಆನೆ ಮರಿಯೊಂದು ಬಿದ್ದಿತ್ತು. ಜೀವನ್ಮರಣ ಸ್ಥಿತಿಯಲ್ಲಿದ್ದ ಈ ಮರಿಯನ್ನು ರಕ್ಷಿಸಿ ಬಳಿಕ ಸಕ್ರೆಬೈಲಿಗೆ ತರಲಾಗಿತ್ತು. ಇದಕ್ಕೆ ಬಾಲಾಜಿ ಎಂದು ಹೆಸರಿಡಲಾಗಿತ್ತು. ಇಲ್ಲಿ ಮರಿಯ ಆರೈಕೆ ಮಾಡುತ್ತಿದ್ದವನು ಮುಬಾರಕ್. ಆನೆಯು ಮುಬಾರಕ್ ಜೊತೆ ತುಂಬಾ …

Read More »

ಸೋಲಾರ್ ಬೇಲಿಗೆ ಸಿಲುಕಿ ಹೆಣ್ಣಾನೆ ಸಾವು

ಮಡಿಕೇರಿ : ಸೋಲಾರ್ ಬೇಲಿಗೆ ಸಿಲುಕಿ ಹೆಣ್ಣು ಕಾಡಾನೆ ಸಾವನ್ನಪ್ಪಿರುವ ಘಟನೆ ಸೋಮವಾರಪೇಟೆಗೆ ಸಮೀಪದ ಅಬ್ಬೂರುಕಟ್ಟೆ ಬಳಿಯ ಕಾಡ್ನೂರು ಬಳಿ ನಡೆದ ಘಟನೆ. ತೋಟಕ್ಕೆ ಅಳವಡಿಸಿದ್ದ ಸೋಲರ್ ಬೇಲಿ ದಾಟಿ ಆನೆ ಅರಣ್ಯಕ್ಕೆ ಹೋಗುವ ಸಂದರ್ಭದಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ. ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Read More »

RIP : ಮಾತನಾಡುತ್ತಿದ್ದ ಗೊರಿಲ್ಲಾ ಇನ್ನಿಲ್ಲ…! : ಕೋಕೋ ಇನ್ನು ನೆನಪು ಮಾತ್ರ…!

ಕೋಕೋ… ಅವಳು ಬರೀ ಗೊರಿಲ್ಲಾ ಅಲ್ಲ… ಇಡೀ ಗೊರಿಲ್ಲಾ ಸಂತತಿಯ ಪಾಲಿಗೆ ಇದ್ದ ಒಬ್ಬಳೇ ಒಬ್ಬಳು ರಾಯಭಾರಿ…! ಯಾಕೆಂದರೆ, ಈ ಕೋಕೋ ಮನುಷ್ಯನೊಂದಿಗೆ ಸುಲಭವಾಗಿ ಸಂವಹನ ಮಾಡ್ತಿದ್ದಳು. ಬರೋಬ್ಬರಿ 2000 ಕ್ಕೂ ಅಧಿಕ ಪದಗಳನ್ನು ಇವಳು ಅರ್ಥ ಮಾಡಿಕೊಳ್ಳುತ್ತಿದ್ದಳು ಮತ್ತು ಸುಲಭವಾಗಿ ಈ ಪದಗಳನ್ನು ಜನರೊಂದಿಗೆ ಸನ್ನೆಯ ಮೂಲಕ ಮಾತನಾಡಲು ಬಳಸುತ್ತಿದ್ದಳು. ಜೊತೆಗೆ, ಮಕ್ಕಳೊಂದಿಗೆ ಇರುವಾಗ ನಗುವ ರೀತಿಯ ಸನ್ನೆಯನ್ನೂ ಇವಳು ಕಲಿತ್ತಿದ್ದಳು. ಜನರೊಂದಿಗೆ ಬೆರೆಯುವಾಗ ಕೋಕೊ ಪ್ರಪಂಚವೇ ಬೇರೆಯಾಗಿತ್ತು… …

Read More »

ವಿಶ್ವದ ಕಡೆಯ ಗಂಡು ಖಡ್ಗಮೃಗ ಕೊನೆಯುಸಿರು…!

ನೈರೋಬಿ : ವಿಶ್ವದ ಕಡೆಯ ಬಿಳಿ ಗಂಡು ಖಡ್ಗಮೃಗ ಇನ್ನು ನೆನಪು ಮಾತ್ರ…! ಕೀನ್ಯಾದಲ್ಲಿ ಈ ಖಡ್ಗಮೃಗ ಕೊನೆಯುಸಿರೆಳೆದಿದೆ. ಸದ್ಯ ವಿಶ್ವದಲ್ಲಿ ಕೇವಲ ಎರಡು ಹೆಣ್ಣು ಖಡ್ಗಮೃಗಗಳಷ್ಟೇ ಉಳಿದಿವೆ. ಓಲ್ ಪೆಜೆಟಾ ರಕ್ಷಿತಾರಣ್ಯದಲ್ಲಿ ಈ ಖಡ್ಗಮೃಗಗಳಿವೆ. ಮೃತಪಟ್ಟ ಖಡ್ಗಮೃಗಕ್ಕೆ 45 ವರ್ಷಗಳಾಗಿತ್ತು. ಸುಡಾನ್ ಅನ್ನೋ ಹೆಸರಿನ ಈ ಖಡ್ಗಮೃಗ ಅನಾರೋಗ್ಯಕ್ಕೀಡಾಗಿತ್ತು. ವಯೋಸಹಜ ಸಮಸ್ಯೆಗಳು ಸುಡಾನ್​ನನ್ನು ಕಾಡುತ್ತಿತ್ತು.

Read More »

ಇವತ್ತು ಗುಬ್ಬಚ್ಚಿಗಳ ದಿನ…

ಬೆಂಗಳೂರು : ಗುಬ್ಬಚ್ಚಿ… ಈ ಪುಟಾಣಿ ಪಕ್ಷಿಯನ್ನು ನೋಡೋದಕ್ಕೆಯೇ ಸುಂದರ… ಮನಸ್ಸಿಗೆ ಮುದ… ಆದ್ರೆ, ಆಧುನೀಕರಣ, ನಗರೀಕರಣದ ಹೊಡೆತಕ್ಕೆ ಈ ಸುಂದರ ಪಕ್ಷಿ ಸಂಕುಲವೇ ನಶಿಸುತ್ತಿದೆ. ಹಿಂದೆ ಎಲ್ಲೆಲ್ಲೂ ಕಾಣ ಸಿಗುತ್ತಿದ್ದ ಈ ಪುಟಾಣಿ ಪಕ್ಷಿಗಳು ಈಗ ಕಾಣಸಿಗೋದೇ ತುಂಬಾ ಅಪರೂಪ. ಮಾನವನ ಬದುಕಿನಲ್ಲಾದ ಆಧುನಿಕತೆಯ ಪ್ರಭಾವ, ಬದುಕಿನ ಶೈಲಿ ಗುಬ್ಬಚ್ಚಿಗಳ ಬದುಕನ್ನೇ ಕಸಿದುಕೊಂಡಿದೆ. ಈ ಸತ್ಯ ಗೊತ್ತಿದ್ದರೂ ಈ ಪಕ್ಷಿಗಳನ್ನು ಉಳಿಸುವ ನಿಟ್ಟಿನಲ್ಲಿ ಆದ ಕೆಲಸಗಳು ಬಹಳ ವಿರಳ. …

Read More »

100 ವರ್ಷ ಪ್ರಾಯದ ದೈತ್ಯ ಮೊಸಳೆಯನ್ನು ಗುಂಡಿಟ್ಟು ಕೊಂದ ಪಾಪಿಗಳು

ಸಿಡ್ನಿ : ಕೇಂದ್ರ ಕ್ವೀನ್​​ಲ್ಯಾಂಡ್​ನ ಫಿಟ್ಜ್ರಾಜ್ ನದಿಯಲ್ಲಿದ್ದ ದೈತ್ಯ ಮೊಸಳೆಯನ್ನು ದುಷ್ಕಮಿಗಳು ಗುಂಡಿಟ್ಟು ಕೊಂದಿದ್ದಾರೆ. ಹೀಗಾಗಿ, ಪೊಲೀಸರು ಈ ದುಷ್ಕರ್ಮಿಗಳ ಬೇಟೆ ಶುರು ಮಾಡಿದ್ದಾರೆ. ಅಲ್ಲದೆ, ಈ ಮೊಸಳೆಯನ್ನು ಕೊಂದಿದ್ದರಿಂದ ಇನ್ನೊಂದಷ್ಟು ದಿನ ಈ ನದಿಯಲ್ಲಿರುವ ಬೇರೆ ಮೊಸಳೆಗಳು ಇನ್ನಷ್ಟು ಆಕ್ರಮಣಕಾರಿಯಾಗಿರಲಿವೆ ಎಂಬ ಎಚ್ಚರಿಕೆಯನ್ನೂ ಕೊಟ್ಟಿದ್ದಾರೆ. ಸುಮಾರು 5.2 ಮೀಟರ್​ ಉದ್ದ ಇರುವ ಈ ಗಂಡು ಮೊಸಳೆಯ ತಲೆಗೆ ಒಂದೇ ಒಂದು ಗುಂಡಿಟ್ಟು ಹತ್ಯೆ ಮಾಡಲಾಗಿದೆ. ಈ ಕೃತ್ಯಕ್ಕೆ ಎಲ್ಲೆಲ್ಲೂ …

Read More »

ವಿಶ್ವದ ಅತೀ ದೊಡ್ಡ ಬೆಕ್ಕುಗಳನ್ನು ನೋಡಿದ್ದೀರಾ…?

ಫಾರ್ಮಿಂಗ್ಟನ್ ಹಿಲ್ಸ್ (ಓಕ್ಲ್ಯಾಂಡ್) : ಮಿಚಿಗನ್​ನಲ್ಲಿ ವಿಶ್ವದ ಅತೀ ದೊಡ್ಡ ಸಾಕು ಬೆಕ್ಕುಗಳಿವೆ. ಇಲ್ಲಿನ ಡೆಟ್ರಾಯಿಟ್​ನ ಒಂದೇ ಮನೆಯಲ್ಲಿ ದಾಖಲೆ ಬರೆದ ಎರಡು ಬೆಕ್ಕುಗಳಿವೆ. ಆರ್ಕ್ಟರುಸ್ ಅಲ್ಡೆಬರಾನ್ ಪವರ್ಸ್ ಅವರ ಸಾಕು ಬೆಕ್ಕು 19 ಇಂಚು ಅಂದರೆ 48 ಸೆಂಟಿಮೀಟರ್ ಉದ್ದ ಇದ್ದು ಗಿನ್ನಿಸ್​ ದಾಖಲೆ ಪುಟದಲ್ಲಿ ಸ್ಥಾನ ಪಡೆದರೆ, ಇದೇ ಮನೆಯಲ್ಲಿ ಇರುವ  ಸಿಗ್ನಸ್ ರೆಗ್ಯುಲಸ್ ಪವರ್ಸ್ ಅವರ ಬೆಕ್ಕು ಅತೀ ಉದ್ದ ಬಾಲ ಹೊಂದುವ ಮೂಲಕ ರೆಕಾರ್ಡ್ …

Read More »

ಸೆಲ್ಫಿ ತೆಗೆದಿದ್ದ ಮಂಗ : ಫೋಟೋದ ಹಕ್ಕು ಯಾರದ್ದು…? : ವಿವಾದ 6 ವರ್ಷಗಳ ಬಳಿಕ ಕೋರ್ಟ್​ನಲ್ಲಿ ಇತ್ಯರ್ಥ!

ಸ್ಯಾನ್​ಫ್ರಾನ್ಸಿಸ್ಕೋ : ಇದೊಂದು ವಿಚಿತ್ರ ಮತ್ತು ಅಷ್ಟೇ ಆಸಕ್ತಿದಾಯಕ ಸುದ್ದಿ. ಮಂಗನ ಸೆಲ್ಫಿ ಕತೆಯಿದು. ಈ ಸೆಲ್ಫಿ ವಿಚಾರ ದೊಡ್ಡ ವಿವಾದವೇ ಆಗಿತ್ತು. ಬರೋಬ್ಬರಿ ಆರು ವರ್ಷಗಳ ಕಾಲ ನಡೆದ ಈ ವಿವಾದ ಈಗ ಇತ್ಯರ್ಥವಾಗಿದೆ. ಅದೂ ಕೋರ್ಟ್​ನಲ್ಲಿ ಈ ಸಮಸ್ಯೆ ಬಗೆಹರಿದಿದೆ…! ಏನಿದು ಸೆಲ್ಫಿ ಕತೆ…? : ಬ್ರಿಟನ್​ನ ಫೋಟೋಗ್ರಾಫರ್​ ಡೇವಿಡ್​ ಸ್ಲೇಟರ್​ ಎಂಬುವವರು 2011ರಲ್ಲಿ ಇಂಡೋನೇಷ್ಯಾಕ್ಕೆ ಹೋಗಿದ್ದರು. ಅಲ್ಲಿ ಇವರು ಫೋಟೋಗಳನ್ನು ಸೆರೆ ಹಿಡಿಯುತ್ತಿರುವಾಗ ನರುಟೋ ಎಂಬ …

Read More »

ಕರ್ನಾಟಕದಲ್ಲಿ ಪ್ರತೀ ತಿಂಗಳು ಕನಿಷ್ಠ ಮೂವರು ಹುಲಿ- ಆನೆಗೆ ಬಲಿ…!

ಬೆಂಗಳೂರು : ಕರ್ನಾಟಕದಲ್ಲಿ ಪ್ರಾಣಿ ಮತ್ತು ಮನುಷ್ಯರ ನಡುವಣ ಸಂಘರ್ಷ ಅಧಿಕವಾಗುತ್ತಿದೆ. ಒಂದು ಲೆಕ್ಕಾಚಾರದ ಪ್ರಕಾರ ಪ್ರತಿ ತಿಂಗಳು ಕನಿಷ್ಠ ಮೂವರು ಹುಲಿ ಮತ್ತು ಆನೆಗೆ ಬಲಿಯಾಗಿದ್ದಾರಂತೆ. ಕಳೆದ ನಾಲ್ಕು ವರ್ಷದಿಂದ ಇದುವರಗೆ ಸುಮಾರು 146 ಮಂದಿ ಹುಲಿ ಮತ್ತು ಆನೆಗೆ ಬಲಿಯಾಗಿದ್ದಾಗಿ ಅಂಕಿ ಅಂಶಗಳು ಹೇಳುತ್ತವೆ. ಈ ಅಂಕಿ ಅಂಶಗಳು ನಿಜವಾಗಿಯೂ ಭೀತಿ ಮೂಡಿಸುವಂತಿದೆ. ಆದರೆ, ಪಶ್ಚಿಮ ಬಂಗಾಳ ಮತ್ತು ಅಸ್ಸಾಂ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಆಗಿರುವ ಸಾವು …

Read More »
error: Content is protected !!