Saturday , January 19 2019
ಕೇಳ್ರಪ್ಪೋ ಕೇಳಿ
Home / Earth (page 2)

Earth

ಸೆಲ್ಫಿ ತೆಗೆದಿದ್ದ ಮಂಗ : ಫೋಟೋದ ಹಕ್ಕು ಯಾರದ್ದು…? : ವಿವಾದ 6 ವರ್ಷಗಳ ಬಳಿಕ ಕೋರ್ಟ್​ನಲ್ಲಿ ಇತ್ಯರ್ಥ!

ಸ್ಯಾನ್​ಫ್ರಾನ್ಸಿಸ್ಕೋ : ಇದೊಂದು ವಿಚಿತ್ರ ಮತ್ತು ಅಷ್ಟೇ ಆಸಕ್ತಿದಾಯಕ ಸುದ್ದಿ. ಮಂಗನ ಸೆಲ್ಫಿ ಕತೆಯಿದು. ಈ ಸೆಲ್ಫಿ ವಿಚಾರ ದೊಡ್ಡ ವಿವಾದವೇ ಆಗಿತ್ತು. ಬರೋಬ್ಬರಿ ಆರು ವರ್ಷಗಳ ಕಾಲ ನಡೆದ ಈ ವಿವಾದ ಈಗ ಇತ್ಯರ್ಥವಾಗಿದೆ. ಅದೂ ಕೋರ್ಟ್​ನಲ್ಲಿ ಈ ಸಮಸ್ಯೆ ಬಗೆಹರಿದಿದೆ…! ಏನಿದು ಸೆಲ್ಫಿ ಕತೆ…? : ಬ್ರಿಟನ್​ನ ಫೋಟೋಗ್ರಾಫರ್​ ಡೇವಿಡ್​ ಸ್ಲೇಟರ್​ ಎಂಬುವವರು 2011ರಲ್ಲಿ ಇಂಡೋನೇಷ್ಯಾಕ್ಕೆ ಹೋಗಿದ್ದರು. ಅಲ್ಲಿ ಇವರು ಫೋಟೋಗಳನ್ನು ಸೆರೆ ಹಿಡಿಯುತ್ತಿರುವಾಗ ನರುಟೋ ಎಂಬ …

Read More »

ಕರ್ನಾಟಕದಲ್ಲಿ ಪ್ರತೀ ತಿಂಗಳು ಕನಿಷ್ಠ ಮೂವರು ಹುಲಿ- ಆನೆಗೆ ಬಲಿ…!

ಬೆಂಗಳೂರು : ಕರ್ನಾಟಕದಲ್ಲಿ ಪ್ರಾಣಿ ಮತ್ತು ಮನುಷ್ಯರ ನಡುವಣ ಸಂಘರ್ಷ ಅಧಿಕವಾಗುತ್ತಿದೆ. ಒಂದು ಲೆಕ್ಕಾಚಾರದ ಪ್ರಕಾರ ಪ್ರತಿ ತಿಂಗಳು ಕನಿಷ್ಠ ಮೂವರು ಹುಲಿ ಮತ್ತು ಆನೆಗೆ ಬಲಿಯಾಗಿದ್ದಾರಂತೆ. ಕಳೆದ ನಾಲ್ಕು ವರ್ಷದಿಂದ ಇದುವರಗೆ ಸುಮಾರು 146 ಮಂದಿ ಹುಲಿ ಮತ್ತು ಆನೆಗೆ ಬಲಿಯಾಗಿದ್ದಾಗಿ ಅಂಕಿ ಅಂಶಗಳು ಹೇಳುತ್ತವೆ. ಈ ಅಂಕಿ ಅಂಶಗಳು ನಿಜವಾಗಿಯೂ ಭೀತಿ ಮೂಡಿಸುವಂತಿದೆ. ಆದರೆ, ಪಶ್ಚಿಮ ಬಂಗಾಳ ಮತ್ತು ಅಸ್ಸಾಂ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಆಗಿರುವ ಸಾವು …

Read More »

ಈ ಮುದ್ದು ಮುದ್ದು ಸಿಂಹದ ಮರಿಗಳಿಗೆ ಒಂದು ಹೆಸರಿಡಿ…

ರಾಹುಲ್​ ರೋಷನ್​ ಸಿಕ್ವೇರಾ, ಗಲ್ಫ್ ಬ್ಯುರೋ ದುಬೈ : ದುಬೈ ಸಫಾರಿಗೆ ಇಬ್ಬರು ಮುದ್ದು ಮುದ್ದು ಅತಿಥಿಗಳ ಆಗಮನವಾಗಿದೆ. ಅಪರೂಪದ ಸಿಂಹಣಿಯೊಂದು ಎರಡು ಮುದ್ದಾದ ಮರಿಗಳಿಗೆ ಜನ್ಮ ನೀಡಿದ್ದು ಸಫಾರಿಯ ಪ್ರಮುಖ ಆಕರ್ಷಣೆಯಾಗಿದೆ. ಅದೂ ಅಲ್ಲದೆ, ಮಕ್ಕಳಿಗೆ ಈ ಮುದ್ದು ಮರಿಗಳಿಗೆ ಹೆಸರಿಡುವ ಅವಕಾಶ ನೀಡಲಾಗಿದೆ. ದಕ್ಷಿಣ ಆಫ್ರಿಕಾದ ಅಪರೂಪದ ಬಿಳಿ ಸಿಂಹದ ಮರಿಗಳು ಇವು. ದುಬೈಯ ಮೊದಲ ಬಿಳಿ ಸಿಂಹದ ಮರಿಗಳು ಇವುಗಳಾಗಿದ್ದು, ಝೂನ ಪ್ರಮುಖ ಆಕರ್ಷಣೆಯಾಗಿವೆ. ಅದೂ …

Read More »

cc tvಯಲ್ಲಿ ಸೆರೆಸಿಕ್ಕ ಸಿಂಹಗಳು ; ಹಳ್ಳಿಯೊಂದರಲ್ಲಿ ರಾತ್ರಿಯಿಡೀ ಓಡಾಟ..!

ವಡೋದರ : ಗುಜರಾತ್​ನ ಗಿರ್ ವನ್ಯಧಾಮ ಸಿಂಹಗಳಿಗೆ ಬಹಳ ಪ್ರಸಿದ್ಧ. ಆದರೆ ಅರಣ್ಯ ನಾಶದಿಂದಾಗಿ ಈಗ ಇಲ್ಲಿ ಕಾಡು ಪ್ರಾಣಿಗಳಿಗೆ ಆಹಾರ ಸಿಗದಂತಹ ಸ್ಥಿತಿ ಇದೆ. ಜನರು ಸೌದೆಗೆಂದು ಕಾಡುಗಳನ್ನು ಕಡಿಯುತ್ತಿದ್ದಾರೆ. ಗುಡ್ಡಕ್ಕೆ ಬೆಂಕಿಯಿಟ್ಟು ಗಿಡಗಳನ್ನು ಹಾಳು ಮಾಡುತ್ತಿದ್ದಾರೆ. ಹೀಗಾಗಿ ಕಾಡುಪ್ರಾಣಿಗಳು ನಾಡಿಗೆ ಬರುವುದು ಹೆಚ್ಚಾಗಿದೆ. ಗಿರ್ ಅರಣ್ಯಧಾಮದ ತಪ್ಪಲಲ್ಲೇ ವಾಸಿಸುವ ಹಲವಾರು ಕುಟುಂಬಗಳು ದಿನನಿತ್ಯವೂ ಕಾಡುಪ್ರಾಣಿಗಳ ಯಾವಾಗ ದಾಳಇ ಮಾಡುತ್ತವೆಯೋ ಎಂಬ ಆತಂಕದಲ್ಲೇ ಬದುಕಬೇಕಾಗಿದೆ. ಯಾಕೆಂದರೆ ಪ್ರತಿನಿತ್ಯವೂ ಒಂದಿಲ್ಲೊಂದು …

Read More »

ರಷ್ಯಾ ಸಫಾರಿಯಲ್ಲಿ ಹುಲಿ ಮೇಕೆಯ ಗೆಳೆತನ…! : ಇಲ್ಲಿದೆ ವೀಡಿಯೋ

ಮಾಸ್ಕೋ : ರಷ್ಯಾದ ಪ್ರಿಮೊರ್ಸ್ಕಿ ಸಫಾರಿ ಪಾರ್ಕ್​ನಲ್ಲಿ ಹುಲಿ ಮತ್ತು ಮೇಕೆಯ ಸ್ನೇಹಕ್ಕೆ ಸಾಕ್ಷಿಯಾಗಿದೆ. ಎಲ್ಲರೂ ಅಚ್ಚರಿ ಪಡುವ ರೀತಿಯಲ್ಲಿ ಈ ಎರಡು ಜೀವಗಳು ಬಾಳುತ್ತಿವೆ. ಹಾಗೆ ನೋಡಿದರೆ ಈ ಮೇಕೆ ಹುಲಿಗೆ ಆಹಾರವಾಗಬೇಕಾಗಿತ್ತು… ಯಾಕೆಂದರೆ, 2015ರಲ್ಲಿ ಈ ಹುಲಿಗೆ ಆಹಾರವೆಂಬ ಕಾರಣಕ್ಕೆ ಮೇಕೆಯಲ್ಲಿ ಇಲ್ಲಿ ಬಿಡಲಾಗಿತ್ತು. ಆದರೆ, ಅಂದು ಈ ಮೇಕೆಯನ್ನು ತಿನ್ನದ ಹುಲಿ ಬಳಿಕ ಅದರೊಂದಿಗೆ ಸ್ನೇಹವನ್ನು ಬೆಳೆಸಿತ್ತು. ಇವುಗಳ ಬದುಕು ಎಲ್ಲರಿಗೂ ಅಚ್ಚರಿ ಮುಡಿಸಿದ್ದಲ್ಲದೆ, ಈ …

Read More »

ಸ್ವೀಡನ್​ನಲ್ಲಿ ಅಪರೂಪದ ಬಿಳಿ ಕಡವೆ ಪತ್ತೆ

ಸ್ವೀಡನ್​ : ಪಶ್ಚಿಮ ಸ್ವೀಡನ್​ನಲ್ಲಿ ಅಪರೂಪದ ಕಡವೆಯೊಂದು ಪತ್ತೆಯಾಗಿದೆ. ಬಳಿ ಬಣ್ಣದ ಈ ಕಡವೆ ಈಗ ಎಲ್ಲರಲ್ಲಿ ಕುತೂಹಲ ಮೂಡಿಸಿದೆ. ಇಲ್ಲಿನ ವರ್ಮಲ್ಯಾಂಡ್​ನಲ್ಲಿ ಈ ಕಡವೆ ಪತ್ತೆಯಾಗಿದೆ. ಒಂದು ಅಂದಾಜಿನ ಪ್ರಕಾರ ಸ್ವೀಡನ್​ ಇಡೀ ದೇಶದಲ್ಲಿ ಬರೀ ನೂರರಷ್ಟು ಬಿಳಿ ಕಡಿಮೆಗಳಿವೆಯಂತೆ. Rare white moose spotted in Sweden pic.twitter.com/jwPayHmzmC — BBC News (World) (@BBCWorld) August 13, 2017 courtesy : bbcnews

Read More »

ಜೋರ್ಡನ್​ನಲ್ಲಿ ಮರಿಗೆ ಜನ್ಮ ನೀಡಿದ ಸಿರಿಯಾದಿಂದ ರಕ್ಷಿಸಲ್ಪಟ್ಟ ಸಿಂಹಿಣಿ

ಜೋರ್ಡನ್​ : ಯುದ್ಧಗ್ರಸ್ಥ ಸಿರಿಯಾದ ಝೂನಿಂದ ರಕ್ಷಿಸಲ್ಪ ಸಿಂಹಿಣಿಯೊಂದು ಜೋರ್ಡನ್​ನಲ್ಲಿ ಮುದ್ದಾದ ಮರಿಗಳಿಗೆ ಜನ್ಮ ನೀಡಿದೆ. ಸಿರಿಯಾ ಅಲೆಪೋ ಸಿಟಿಯಿಂದ ಜೋರ್ಡನ್​ಗೆ ಬಂದ ಒಂದೇ ಗಂಟೆಯೊಳಗೆ ಈ ಸಿಂಹಿಣಿ ಮರಿಗೆ ಜನ್ಮ ಕೊಟ್ಟಿದ್ದು, ತಾಯಿ ಮತ್ತು ಮರಿ ಆರೋಗ್ಯವಾಗಿದೆ. ಡಾನಾ ಎಂಬ ಈ ಹೆಣ್ಣು ಸಿಂಹವನ್ನು ಟರ್ಕಿ ಮೂಲಕ ಇಲ್ಲಿಗೆ ತರಲಾಗಿದೆ. ಇದರೊಂದಿಗೆ ನಾಲ್ಕು ಸಿಂಹ, ಎರಡು ಕರಡಿ ಮತ್ತು ಎರಡು ಹುಲಿಗಳನ್ನೂ ರಕ್ಷಿಸಲಾಗಿದೆ. ಇವುಗಳ ರಕ್ಷಣೆಗೆ ಮೂರು ತಿಂಗಳ …

Read More »

ಸಾರ್ವಜನಿಕ ಶೌಚಾಲಯಕ್ಕೆ ಬಂದು ನೀರು ಕುಡಿದ ಹುಲಿ…!

ಮಾಸ್ಕೋ : ಇದೊಂದು ಎಲ್ಲರೂ ಭೀತಿಗೊಳ್ಳುವಂತಹ ಸುದ್ದಿ… ಹುಲಿಯೊಂದು ಶೌಚಾಲಯಕ್ಕೆ ಬಂದು ನೀರು ಕುಡಿದ ದೃಶ್ಯ ಇದು… ಈ ವೀಡಿಯೋ ಈಗ ಸಖತ್ ವೈರಲ್ ಆಗಿದೆ. ರಷ್ಯಾದ ಸರ್ಕಸ್​ ಕಂಪೆನಿಯ ಹೆಣ್ಣು ಹುಲಿಯೊಂದು ತನ್ನ ಬಾಯಾರಿಕೆ ನೀಗಿಸಿಕೊಳ್ಳಲು ಶೌಚಾಲಯಕ್ಕೆ ಬಂದಿತ್ತು. ಅಲ್ಲದೆ, ಇಲ್ಲಿ ಟ್ಯಾಪ್​ಗೆ ಬಾಯಿ ಹಾಕಿ ತನ್ನ ನೀರಡಿಕೆಯನ್ನು ನೀಗಿಸಿಕೊಂಡಿತ್ತು ಈ ವ್ಯಾಘ್ರ. ಈ ಹೆಣ್ಣುಲಿಗೆ ಸುಮಾರು ಏಳು ವರ್ಷ. ಇದರ ಹೆಸರು ಚಾನೆಲ್ ಅಂತ. ಬ್ರೇಕ್​ ಟೈಮ್​ನಲ್ಲಿ …

Read More »

ಈ ಮೇಕೆ ಐರಿಷ್​​ನ ರಾಜ…!

ಕಿಲೋರ್ಗ್ಲೀನ್​​ : ಐರಿಷ್​​ ಲ್ಯಾಂಡ್​ಗೆ ಹೊಸ ರಾಜ ಸಿಕ್ಕಿದ್ದಾನೆ… ಆ ರಾಜ ಯಾರು ಗೊತ್ತಾ…? ಮೇಕೆ…! ಸ್ವತಃ ರಾಣಿಯೇ ಈ ರಾಜ್ಯಕ್ಕೆ ಮೇಕೆಯನ್ನು ರಾಜನಾಗಿ ಪಟ್ಟಾಭಿಷೇಕ ಮಾಡಿಕೊಂಡಿದ್ದಾರೆ…! ಒಂದು ವಾರದ ಮಟ್ಟಿಗೆ ಈ ಪಟ್ಟಣಕ್ಕೆ ಈ ಮೇಕೆಯೇ ರಾಜ…! ಮೇಕೆಗೆ ಪಟ್ಟಾಭಿಷೇಕ ಮಾಡುವುದು ಇಲ್ಲಿನ ಬಹಳ ಹಿಂದಿನ ಸಂಪ್ರದಾಯ. ಹೀಗೆ ಪಟ್ಟಾಭಿಷೇಕ ನಡೆಯುವ ಮುನ್ನ ಅದ್ಧೂರಿ ಮೆರವಣಿಗೆಯೂ ನಡೆಯುತ್ತದೆ. ಈ ಕಾರ್ಯಕ್ರಮ ಒಂದು ಹಬ್ಬದಂತೆ ನಡೆಯುತ್ತದೆ. ನೂರಾರು ಜನ ಈ …

Read More »

ಸಿಕ್ಕಿದೆ ಎರಡು ತಲೆಯ ತಿಮಿಂಗಿಲ!

ಮನುಷ್ಯರಲ್ಲಿ ಸಯಾಮಿಗಳ ಬಗ್ಗೆ ನೀವು ಕೇಳಿದ್ದೀರಿ. ಈಗ ಇತರ ಜೀವಿಗಳಲ್ಲೂ ಇಂತಹ ಸಯಾಮಿಗಳಿರುವುದು ಪತ್ತೆ ಆಗಿದೆ. ಅಟ್ಲಾಂಟಿಕ್ ಸಾಗರದಲ್ಲಿ ಎರಡು ತಲೆಯ ತಿಮಿಂಗಿಲದ ಮರಿಗಳು ಸಿಕ್ಕಿದ್ದು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ. ಆದರೆ, ಈ ನವಜಾತ ತಿಮಿಂಗಿಲಗಳು ಹುಟ್ಟಿದ ತಕ್ಷಣ ಸಾವನ್ನಪ್ಪಿವೆ. ಇದೇ ಮೊದಲ ಬಾರಿಗೆ ಇಂತಹದ್ದೊಂದು ತಿಮಿಂಗಿಲಗಳು ಪತ್ತೆಯಾಗಿವೆ. ಮೀನುಗಾರರ ಬಲೆಗೆ ಈ ತಿಮಿಂಗಿಲದ ಮರಿಗಳು ಬಿದ್ದಿದ್ದವು. ಆದರೆ, ಈ ತಿಮಿಂಗಿಲವನ್ನು ಇಟ್ಟುಕೊಳ್ಳುವುದು ಅಕ್ರಮ ಎಂದು ತಿಳಿದ ಮೀನುಗಾರರು ಭಯದಿಂದ …

Read More »
error: Content is protected !!