Tuesday , May 22 2018
Home / Film News / Coastalwood (page 2)

Coastalwood

ಆಗಸ್ಟ್​ 17ಕ್ಕೆ ಜುಗಾರಿ ಆಡಿಯೋ ರಿಲೀಸ್​

ಮಂಗಳೂರು : ತುಳು ಚಿತ್ರ ಜುಗಾರಿಯ ಆಡಿಯೋ ರಿಲೀಸ್​ಗೆ ದಿನಗಣನೆ ಶುರುವಾಗಿದೆ. ಇದೇ ತಿಂಗಳ 17 ರಂದು ಚಿತ್ರದ ಆಡಿಯೋ ರಿಲೀಸ್ ಆಗಲಿದೆ. ಟೌನ್ ಹಾಲ್​ನಲ್ಲಿ ಈ ಕಾರ್ಯಕ್ರಮ ನಡೆಯಲಿದೆ. ಪಮ್ಮಿ ಕೊಡಿಯಾಲ್​ ಬೈಲ್ ಮತ್ತು ಆರ್ ಧನರಾಜ್ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದು, ಆನಂದ್ ಪಿ ರಾಜು ನಿರ್ದೇಶಿಸುತ್ತಿದ್ದಾರೆ. ಜುಗಾರಿ ಕುರಿತ ಇದೊಂದು ಆಕ್ಷನ್ ಕಾಮಿಡಿ ಚಿತ್ರ ಎಂದು ಸಿನಿತಂಡ ಹೇಳುತ್ತಿದೆ. ಕಾರ್ತಿಕ್ ಬಂಜನ್​​​ ಮತ್ತು ಎಸ್ತಾರ್ ನೊರೊನ್ಹಾ …

Read More »

ತೆರೆಗೆ ಬಂದಿದ್ದಾರೆ ‘ಅರೆ ಮರ್ಲೆರ್​​’

ಮಂಗಳೂರು : ಬೊಳ್ಳಿ ಮೂವಿಸ್​ನ ಹಾಸ್ಯಮಯ ತುಳು ಚಿತ್ರ ಅರೆ ಮರ್ಲೆರ್​ ಇಂದು ತೆರೆಗೆ ಬಂದಿದೆ. ಚಿತ್ರ ಬಿಡುಗಡೆಗೂ ಮುನ್ನ ಪ್ರಭಾತ್ ಚಿತ್ರಮಂದಿರದ ಎದುರು ಉದ್ಘಾಟನೆ ಕಾರ್ಯಕ್ರಮ ಕೂಡಾ ನಡೆಯಿತು. ಈ ಸಂದರ್ಭದಲ್ಲಿ ಕರಾವಳಿ ಕಾಲೇಜಿನ ನಿರ್ದೇಶಕ ಗಣೇಶ್​ ರಾವ್​, ಫಾದರ್​ ಡೇನಿಸ್ ಡೇಸಾ​, ಸಚ್ಚಿದಾನಂದ ಶೆಟ್ಟಿ, ಕಿಶೋರ್ ಶೆಟ್ಟಿ ಮತ್ತು ಚಿತ್ರತಂಡದ ಸದಸ್ಯರು ಪಾಲ್ಗೊಂಡಿದ್ದರು. ಅರ್ಜುನ್ ಕಾಪಿಕಾಡ್ ಈ ಚಿತ್ರದಲ್ಲಿ ನಾಯಕನಾಗಿ ಕಾಣಿಸಿಕೊಂಡಿದ್ದು, ನವನಾಯಕಿ ನಿಶ್ಮಿತಾ ಹಿರೋಯಿನ್​ ಆಗಿ …

Read More »

ಸೆಪ್ಟೆಂಬರ್​ಗೆ ತೊಟ್ಟಿಲ್​ ರಿಲೀಸ್​…?

ಮಂಗಳೂರು : ಪ್ರದೀಪ್ ಆಗ್ರಾರ್​ ನಿರ್ಮಾಣದ ಪ್ರಜ್ವಲ್ ಕುಮಾರ್ ಅತ್ತಾವರ್ ನಿರ್ದೇಶನದ ತೊಟ್ಟಿಲ್​ ಚಿತ್ರ ಕೋಸ್ಟಲ್​ವುಡ್​ನಲ್ಲಿ ಭಾರೀ ನಿರೀಕ್ಷೆ ಮೂಡಿಸಿದೆ, ಈ ಚಿತ್ರ ಈಗಾಗಲೇ ಸೆನ್ಸಾರ್​ ಸರ್ಟಿಫಿಕೇಟ್​ಗಾಗಿ ಕಾಯುತ್ತಿದ್ದು, ಸೆಪ್ಟೆಂಬರ್​ ವೇಳೆಗೆ ಚಿತ್ರ ಬಿಡುಗಡೆ ಮಾಡಲು ಚಿತ್ರ ತಂಡ ನಿರ್ಧರಿಸಿದೆ ಎನ್ನಲಾಗಿದೆ. ತಾಯಿ ಸೆಂಟಿಮೆಂಟ್​ ಇರುವ ಫ್ಯಾಮಿಲಿ ಎಂಟಟೈನರ್ ಈ ಚಿತ್ರ,

Read More »

ಪತ್ತನಾಜೆ ಚಿತ್ರದ ಆಡಿಯೋ, ಟ್ರೇಲರ್​, ಪೋಸ್ಟರ್​ ಲಾಂಚ್​

ಮಂಗಳೂರು : ಕೋಸ್ಟಲ್​ವುಡ್​ನಲ್ಲಿ ಭಾರೀ ನಿರೀಕ್ಷೆ ಮೂಡಿಸಿರುವ ಪತ್ತನಾಜೆ ಚಿತ್ರದ ಆಡಿಯೋ, ಟ್ರೇಲರ್​, ಪೋಸ್ಟರ್​ ರಿಲೀಸ್​ ಆಗಿದೆ. ತೋನ್ಸೆ ವಿಜಯ್​ ಕುಮಾರ್​ ಶೆಟ್ಟಿ ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದು, ಮಂಗಳೂರಿನ ಪುರಭವನದಲ್ಲಿ ಇತ್ತೀಚೆಗೆ ಈ ಕಾರ್ಯಕ್ರಮ ನಡೆಯಿತು. ಸೂರ್ಯ ರಾವ್​, ರೇಷ್ಮಾ ಶೆಟ್ಟಿ, ಶಿವಧ್ವಜ್​ ಶೆಟ್ಟಿ, ಪ್ರತೀಕ್ ಶೆಟ್ಟಿ ಮತ್ತು ಇತರರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. ದಕ್ಷಿಣ ಕನ್ನಡದ ಬಂಟರ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ, ಶ್ರೀದೇವಿ ಎಜ್ಯುಕೇಷನ್​ …

Read More »

ಬರುತ್ತಿದ್ದಾರೆ ‘ಗಂಟ್​ ಕಲ್ವೇರ್​​’

ಮಂಗಳೂರು : ಕೋಸ್ಟಲ್​ವುಡ್​ನಲ್ಲಿ ಮತ್ತೊಂದು ಕಾಮಿಡಿ ಚಿತ್ರ ಸಿದ್ಧವಾಗುತ್ತಿದೆ. ಸುಧಾಕರ್ ಬನ್ನಂಜೆ ನಿರ್ದೇಶನದಲ್ಲಿ ‘ಗಂಟ್​ ಕಲ್ವೇರ್​​’ ಎಂಬ ಸಿದ್ಧವಾಗುತ್ತಿದೆ. ಈ ಚಿತ್ರದ ಎರಡು ಹಾಡುಗಳ ಶೂಟಿಂಗ್ ಇನ್ನು ಬಾಕಿ ಇದ್ದು, ಚಿತ್ರ ಸದ್ಯ ಸಂಕಲನ ಹಂತ ತಲುಪಿದೆ. ಇದೊಂದು ಸಂಪೂರ್ಣ ಕಾಮಿಡಿ ಚಿತ್ರ ಎನ್ನುತ್ತಾರೆ ನಿರ್ದೇಶಕ ಸುಧಾಕರ್ ಬನ್ನಂಜೆ. ಹೊಸ ಕತೆಯೊಂದಿಗೆ ನಾವು ಬರುತ್ತಿದ್ದೇವೆ ಎಂಬುದು ಬನ್ನಂಜೆ ಮಾತು. ನವೀನ್ ಡಿ ಪಡೀಲ್ ಈ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, …

Read More »

‘ಗೋಲ್​ಮಾಲ್​ ‘ ಚಿತ್ರದ ಮೊದಲ ಸೆಡ್ಯೂಲ್​​​ ಶೂಟಿಂಗ್​ ಪೂರ್ಣ

ಮಂಗಳೂರು : ತುಳು ಚಿತ್ರ ಗೋಲ್​ಮಾಲ್​ನ ಮೊದಲ ಸೆಡ್ಯೂಲ್​​ನ ಚಿತ್ರೀಕರಣ ಪೂರ್ಣಗೊಂಡಿದೆ. ರಮಾನಂದ್ ನಾಯಕ್ ಕಾರ್ಕಳ ನಿರ್ದೇಶನ ಮಾಡುತ್ತಿರುವ ಈ ಚಿತ್ರದ ಎರಡನೇ ಹಂತದ ಶೂಟಿಂಗ್ ಸೋಮವಾರದಿಂದ ಶುರುವಾಗಿದೆ. ಮೂರು ಹಂತದಲ್ಲಿ ಚಿತ್ರೀಕರಣ ಪೂರ್ಣಗೊಳಿಸಲು ಚಿತ್ರ ನಿರ್ಮಾಪಕರು ನಿರ್ಧರಿಸಿದೆ. ಸದ್ಯ ಕಾರ್ಕಳ ಆಸುಪಾಸು, ಕೋಟಿ ಚೆನ್ನಯ ಥೀಮ್​ ಪಾರ್ಕ್ ಮತ್ತು ಆನೆಕೆರೆ ಸೇರಿದಂತೆ ಕೆಲವು ಕಡೆ ಮೊದಲ ಹಂತದ ಚಿತ್ರೀಕರಣ ಮಾಡಲಾಗಿದೆ. ನಿರ್ದೇಶಕ ರಮಾನಂದ ನಾಯಕ್​ ಅವರೇ ಚಿತ್ರದ ಕತೆ …

Read More »

ಸ್ಯಾಂಡಲ್​ವುಡ್​ಗೆ ಕೋಸ್ಟಲ್​ವುಡ್​ ಸ್ಟಾರ್​

ಮಂಗಳೂರು : ಕೋಸ್ಟಲ್​ವುಡ್​ನಲ್ಲಿ ವಿಲನ್​ ಪಾತ್ರದಲ್ಲಿ ಮಿಂಚುತ್ತಿರುವ ಮನೋಜ್ ಪುತ್ತೂರು ಸ್ಯಾಂಡಲ್​ವುಡ್​ಗೆ ಕಾಲಿಡುತ್ತಿದ್ದಾರೆ. ತುಳು ಚಿತ್ರವಾದ ಕುಡ್ಲ ಕೆಫೆ ಮತ್ತು ಪವಿತ್ರ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ಮನೋಜ್​ ತಮ್ಮ ಪಾತ್ರ ಪೋಷಣೆ ಮೂಲಕವೇ ಗಮನ ಸೆಳೆದಿದ್ದರು. ತರ್ಲೆ ವಿಲೇಜ್ ಚಿತ್ರದ ನಿರ್ದೇಶಕ ಕೆ.ಎಂ.ರಘು ಅವರ ಚಿತ್ರದಲ್ಲಿ ಮನೋಜ್ ಅಭಿನಯಿಸಲಿದ್ದು, ಶೀಘ್ರದಲ್ಲೇ ಶೂಟಿಂಗ್ ಕೂಡಾ ಆರಂಭವಾಗಲಿದೆ. ಸದ್ಯ ಕೋಸ್ಟಲ್​ವುಡ್​ನಲ್ಲಿ ಬ್ಯುಸಿ ಇರುವ ಮನೋಜ್ ಕೈಯಲ್ಲಿ ಹಲವು ಚಿತ್ರಗಳು ಇವೆ. ಮೈಸೂರಿನ …

Read More »

ಚಿತ್ರವಾಗುತ್ತಿದೆ ಪ್ರಸಿದ್ಧ ತುಳು ನಾಟಕ ‘ಪುಂಡಿ ಪಣವು’

ಮಂಗಳೂರು : ತುಳುವಿನ ಖ್ಯಾತ ರಂಗಕರ್ಮಿ ಬಿ.ಕೆ.ಗಂಗಾಧರ ಕಿರೋಡಿಯನ್​ ಅವರ ಪ್ರಸಿದ್ಧ ನಾಟಕ ‘ಪುಂಡಿ ಪುಣವು’ ಚಿತ್ರವಾಗುತ್ತಿದೆ. ಗಂಗಾಧರ ಕಿರೋಡಿಯನ್​ ಅವರೇ ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದು, ತನ್ವಿತ್ ಶೆಟ್ಟಿ ನಿರ್ಮಿಸುತ್ತಿದ್ದಾರೆ. ಈಗಾಗಲೇ ಚಿತ್ರಕತೆ, ಸಂಭಾಷಣೆ ಬರೆಯುವ ಕಾರ್ಯದಲ್ಲಿ ಕಿರೋಡಿಯನ್ ತೊಡಗಿದ್ದು, ನವೆಂಬರ್ ವೇಳೆಗೆ ಶೂಟಿಂಗ್ ಆರಂಭವಾಗಲಿದೆ ಎಂದು ಹೇಳಲಾಗುತ್ತಿದೆ.

Read More »

ಸಾಮಾಜಿಕ ಕಾರ್ಯಕ್ಕೆ ‘ಸೋಫಿಯಾ’ ಚಿತ್ರ ತಂಡದ ಕೊಡುಗೆ

ಮಂಗಳೂರು : ಕೊಂಕಣಿ ಸಿನೆಮಾ ಲೋಕಕ್ಕೆ ಸೋಫಿಯಾ ಎಂಬ ಚಿತ್ರ ಉಸಿರು ನೀಡಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 50 ದಿನಕ್ಕೂ ಹೆಚ್ಚು ದಿನ ಪ್ರದರ್ಶನ ಕಂಡಿರುವ ಈ ಚಿತ್ರ ವಿದೇಶದಲ್ಲೂ ಹೆಸರು ಮಾಡುತ್ತಿದೆ. ಬಾಕ್ಸ್​ ಆಫೀಸ್​ನಲ್ಲೂ ಚಿತ್ರದ ಕಲೆಕ್ಷನ್ ಚೆನ್ನಾಗಿದೆ. ವಿದೇಶದಲ್ಲೂ ಚಿತ್ರ ಪ್ರದರ್ಶನ ಕಾಣುತ್ತಿದ್ದು, ಚಿತ್ರಕ್ಕೆ ಅಲ್ಲೂ ಒಳ್ಳೆಯ ರೆಸ್ಪಾನ್ಸ್​ ಸಿಕ್ಕಿದೆ. ಇತ್ತ, ಬೆಂಗಳೂರು, ಗೋವಾ, ಮುಂಬೈ, ಅರಬ್​ ರಾಷ್ಟ್ರಗಳಲ್ಲೂ ಈ ಚಿತ್ರ ಪ್ರದರ್ಶನ ಕಂಡಿದೆ, ಈ ನಡುವೆ, …

Read More »

ಹಸೆಮಣೆಯಲ್ಲಿ ನಿರೂಪಕಿ ಅನುಶ್ರೀ…!

ಉಡುಪಿ: ಕಿರುತೆರೆ ನಿರೂಪಕಿ ಅನುಶ್ರೀ ಮದುವೆ ಆಗಿದ್ದಾರೆ…! ಅರೇ ಅನುಶ್ರೀ ಯಾಕೆ ಗುಟ್ಟಾಗಿ ಮದುವೆ ಅದ್ರು ಅಂತ ಕೇಳ್ತೀದಿದ್ದಾರಾ.. ಸ್ವಲ್ಪ ತಡೆಯಿರಿ.. ಇದು ರಿಯಲ್ ಮದುವೆ ಅಲ್ಲ, ರೀಲ್ ಮದುವೆ.. ಅನುಶ್ರೀ ತುಳು ಚಿತ್ರವೊಂದರಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದ ಮದುವೆ ಸನ್ನಿವೇಶವನ್ನು ಉಡುಪಿಯ ಮಣಿಪಾಲದ ಆರ್‍ಎಸ್‍ಬಿ ಸಭಾ ಭವನದಲ್ಲಿ ಚಿತ್ರೀಕರಿಸಲಾಗಿದೆ.. ಕರಾವಳಿಯವರಾದರೂ ಇದೇ ಮೊದಲ ಬಾರಿಗೆ ಅನುಶ್ರೀ ಕೋಸ್ಟಲ್​ವುಡ್​​ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ‘ಕೋರಿ ರೊಟ್ಟಿ’ ಅನುಶ್ರೀ ಅಭಿನಯದ ತುಳು ಚಿತ್ರ. ಉಡುಪಿಯ …

Read More »
error: Content is protected !!