Tuesday , October 16 2018
ಕೇಳ್ರಪ್ಪೋ ಕೇಳಿ
Home / Film News (page 10)

Film News

ಮನಿಷಾ ಬದುಕಿಗೆ ಅಕ್ಷರ ರೂಪ : ಇಲ್ಲಿದೆ ಪುಸ್ತಕದ ಪುಟ…

ಮುಂಬೈ : ಬಾಲಿವುಡ್ ನಟಿ, ಕ್ಯಾನ್ಸರ್ ಗೆದ್ದು ಬದುಕುತ್ತಿರುವ ಸಾಧಕಿ ಮನಿಷಾ ಕೊಯಿರಾಲ ಈಗ ತಮ್ಮ ಜೀವನದ ಅನುಭವಕ್ಕೆ ಅಕ್ಷರ ರೂಪ ಕೊಡುತ್ತಿದ್ದಾರೆ. ಹೀಗಾಗಿ, ಈ ಪುಸ್ತಕಕ್ಕೆ `ದಿ ಬುಕ್ ಆಫ್ ಅನ್‍ಟೋಲ್ಡ್ ಸ್ಟೋರೀಸ್’ ಎಂದು ಹೆಸರಿಟ್ಟಿದ್ದಾರೆ. ಈ ಬಗ್ಗೆ ಮನಿಷಾ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. Thank you #penguinindia @gurveenchadha for encouraging me to tell stories.. #untoldstories .my first book.. hopefully many …

Read More »

ಸೆಲ್ಫಿಗೆ ಮುಗಿಬಿದ್ದ ಫೀಮೇಲ್ ಫ್ಯಾನ್ಸ್… : ರಣವೀರ್ ಸ್ಥಿತಿ ಅಯ್ಯೋ ಪಾಪ… : ಇಲ್ಲಿದೆ ವೀಡಿಯೋ

ಮುಂಬೈ : ಸೆಲ್ಫಿ ಅನ್ನೋದು ಈಗೊಂದು ಲೈಫ್‍ನ ಅವಿಭಾಜ್ಯ ಅಂಗವಾಗಿದೆ ಹೋಗಿದೆ. ಅದರಲ್ಲೂ ಸೆಲೆಬ್ರಿಟಿಗಳನ್ನು ಕಂಡರಂತೂ ಕೇಳೋದೇ ಬೇಡ. ಎಲ್ಲರೂ ಸೆಲ್ಫಿಗೆ ಮುಗಿಬೀಳ್ತಾರೆ. ಈಗ ಬಾಲಿವುಡ್ ನಟ ರಣಬೀರ್ ಸಿಂಗ್‍ಗೆ ಇಂತಹದ್ದೊಂದು ಅನುಭವ ಆಗಿದೆ. ಈ ಅನುಭವ ಬಹುಶಃ ರಣವೀರ್‍ಗೆ ಖುಷಿಗಿಂತ ಸಂಕಟ ಕೊಟ್ಟದ್ದೇ ಹೆಚ್ಚೇನೋ… Ranveer Singh At JACK & JONES Store | Ranveer Singh Out For Shopping A post shared by …

Read More »

`ಗೀತಾ ಗೋವಿಂದಮ್’ ಗಾಗಿ 8 ತಿಂಗಳು ನಾಯಕಿಯನ್ನು ಹುಡುಕಿದ್ದರಂತೆ ಡೈರೆಕ್ಟರ್…!

ಹೈದರಾಬಾದ್ : ಟಾಲಿವುಡ್‍ನಲ್ಲಿ ಈಗ `ಗೀತಾ ಗೋವಿಂದಂ’ ಚಿತ್ರ ಸಾಕಷ್ಟು ನಿರೀಕ್ಷೆ ಮೂಡಿಸಿದೆ. ಕನ್ನಡದ ಸುಂದರಿ ರಶ್ಮಿಕಾ ಮಂದಣ್ಣ ಈ ಚಿತ್ರದಲ್ಲಿ ನಾಯಕಿಯಾಗಿ ಅಭಿನಯಿಸುತ್ತಿದ್ದು, ಈಗಾಗಲೇ ಟಾಲಿವುಡ್ ಸಿನಿಪ್ರಿಯರಿಗೆ ರಶ್ಮಿಕಾ ಹತ್ತಿರವಾಗಿದ್ದಾರೆ. ವಿಜಯ್ ದೇವರಕೊಂಡ ಕೂಡಾ ಗಮನ ಸೆಳೆದಿದ್ದಾರೆ. ಆದರೆ, ಇತ್ತೀಚಿಗೆ ಈ ಚಿತ್ರದ ಬಗ್ಗೆ ಇಂಟ್ರೆಸ್ಟಿಂಗ್ ವಿಷಯವನ್ನು ನಿರ್ದೇಶಕ ಪರಶುರಾಮ್ ಬಿಚ್ಚಿಟ್ಟಿದ್ದಾರೆ. ಪರಶುರಾಮ್ ಅವರು ಅತ್ಯಂತ ಸೂಕ್ಷ್ಮ ನಿರ್ದೇಶಕ. ಇವರು ಸೆಲೆಕ್ಟೆಡ್ ಸಿನೆಮಾ ಮಾಡಿ ಗಮನ ಸೆಳೆದವರು. ಇದೇ ಸೂತ್ರದಿಂದ …

Read More »

ಕೆಜಿಎಫ್ ಶೂಟಿಂಗ್ ಯೂನಿಟ್‍ನಲ್ಲಿ ಮನೆಯಲ್ಲಿದ್ದ ಅನುಭವ : ಮಿಲ್ಕಿ ಬ್ಯೂಟಿ ಸಂತೃಪ್ತಿ

ಬೆಂಗಳೂರು : ಮಿಲ್ಕಿ ಬ್ಯೂಟಿ ತಮನ್ನಾ ರಾಕಿಂಗ್ ಸ್ಟಾರ್ ಯಶ್ ಜೊತೆಗೆ ಸ್ಪೆಷಲ್ ಸಾಂಗ್‍ನಲ್ಲಿ ಹೆಜ್ಜೆ ಹಾಕಿದ್ದಾರೆ. ಕೆಜಿಎಫ್ ಚಿತ್ರದ ಸ್ಪೆಷಲ್ ಸಾಂಗ್‍ನಲ್ಲಿ ಕಾಣಿಸಿಕೊಂಡಿದ್ದ ತಮನ್ನಾ ಶೂಟಿಂಗ್ ಮುಗಿಸಿದ್ದಾರೆ. ಅಲ್ಲದೆ, ಶೂಟಿಂಗ್ ಯೂನಿಟ್ ಜೊತೆಗಿನ ಸುಂದರ ಅನುಭವವನ್ನೂ ಬಿಚ್ಚಿಟ್ಟಿದ್ದಾರೆ. ತಮ್ಮ ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಬರೆದುಕೊಂಡಿರುವ ತಮನ್ನಾ, ಯಶ್ ಅವರೊಂದಿಗಿನ ಹಾಡಿನ ಶೂಟಿಂಗ್‍ನಲ್ಲಿ ಒಳ್ಳೆಯ ಅನುಭವವಾಗಿದೆ. ಇಡೀ ಶೂಟಿಂಗ್ ಯೂನಿಟ್‍ನಲ್ಲಿ ಒಂದು ಮನೆಯ ವಾತಾವರಣ ಇತ್ತು. ಇದಕ್ಕೆ ನನ್ನ …

Read More »

ಶಿವಣ್ಣ ಜೊತೆ ವಿವೇಕ್ ಆ್ಯಕ್ಟಿಂಗ್ : ಇಲ್ಲಿದೆ ಶೂಟಿಂಗ್ ಸೆಟ್‍ನ ಫೋಟೋಸ್

ಬೆಂಗಳೂರು : ಕರುನಾಡ ಚಕ್ರವರ್ತಿ ಶಿವರಾಜ್‍ಕುಮಾರ್ ಅಭಿನಯದ ಬಹುನಿರೀಕ್ಷಿತ `ರುಸ್ತುಂ’ ಚಿತ್ರದ ಶೂಟಿಂಗ್ ಭರದಿಂದ ಸಾಗುತ್ತಿದೆ. ಸಾಹಸ ನಿರ್ದೇಶಕ ರವಿವರ್ಮ ಆ್ಯಕ್ಷನ್ ಕಟ್ ಹೇಳುತ್ತಿರುವ ಈ ಚಿತ್ರದಲ್ಲಿ ಸ್ಟಾರ್‍ಗಳ ದಂಡೇ ಇದೆ. ಬಾಲಿವುಡ್ ನಟ ವಿವೇಕ್ ಒಬೇರಾಯ್ ಅವರು ಕೂಡಾ ಈ ಚಿತ್ರದ ಮೂಲಕ ಸ್ಯಾಂಡಲ್‍ವುಡ್‍ಗೆ ಕಾಲಿಟ್ಟಿದ್ದಾರೆ. ಸದ್ಯ ಶೂಟಿಂಗ್ ಟೀಮ್ ಸೇರಿರೋ ವಿವೇಕ್ ಶೂಟಿಂಗ್ ಮುಂದುವರಿಸಿದ್ದಾರೆ.

Read More »

ಕಲಾವಿದೆಯರಿಗೆ ಇಲ್ಲ ಭದ್ರತೆ…! : ಪಾಕಿಸ್ತಾನದಲ್ಲಿ ಗಂಡನಿಂದಲೇ ಗಾಯಕಿ, ನಟಿಯ ಹತ್ಯೆ…!

ಇಸ್ಲಾಮಾಬಾದ್ : ಪಾಕಿಸ್ತಾನದಲ್ಲಿ ಕಲಾವಿದೆಯರಿಗೆ ಭದ್ರತೆ ಇಲ್ವಾ…? ಇಂತಹದ್ದೊಂದು ಪ್ರಶ್ನೆ ಮತ್ತೆ ಉದ್ಭವಿಸಿದೆ. ಖ್ಯಾತ ಗಾಯಕಿಯೊಬ್ಬರ ಮೇಲೆ ಶೂಟೌಟ್ ನಡೆದಿದೆ. ಗಂಡನಿಂದಲೇ ಈ ಕೃತ್ಯ ನಡೆದಿದೆ. ಪಾಕಿಸ್ತಾನದ ಖ್ಯಾತ ಗಾಯಕಿ ಮತ್ತು ನಟಿ ರೇಷ್ಮಾ ಗಂಡನಿಂದಲೇ ಬಲಿಯಾದ ನತದೃಷ್ಟೆ. ಪಾಕಿಸ್ತಾನದ ಖೈಬರ್ ಪಖ್ತಾನ್ಖ್ವಾ ಪ್ರಾಂತ್ಯದಲ್ಲಿ ಗುರುವಾರ ಬೆಳಗ್ಗೆ ಈ ಘಟನೆ ನಡೆದಿದೆ. ಇನ್ನು, ರೇಷ್ಮಾ ಈತನ ನಾಲ್ಕನೇ ಹೆಂಡ್ತಿ ಎಂದು ಗೊತ್ತಾಗಿದ್ದು, ಇತ್ತೀಚೆಗೆ ಇವರು ತಮ್ಮ ಸಹೋದರನೊಂದಿಗೆ ವಾಸವಾಗಿದ್ದರು. ಗಂಡ …

Read More »

ಶೃದ್ಧಾಂಜಲಿ ವೇಳೆ ನಗು : ಟ್ರಾಲ್‍ಗೆ ಗುರಿಯಾದ ಅಭಿಷೇಕ್ ಬಚ್ಚನ್

ಮುಂಬೈ : ಬಾಲಿವುಡ್ ನಟ ಅಭಿಷೇಕ್ ಬಚ್ಚನ್ ಟ್ರೋಲ್‍ಗೆ ಆಹಾರವಾಗಿದ್ದಾರೆ. ಶೃದ್ಧಾಂಜಲಿ ವೇಳೆ ಹಸನ್ಮುಖಿಯಾಗಿ ಎಲ್ಲರನ್ನು ಸ್ವಾಗತಿಸಿದ್ದೇ ಈಗ ಅಭಿಷೇಕ್‍ಗೆ ಮುಳುವಾಗಿದೆ. ಅಭಿಷೇಕ್ ಅಕ್ಕ ಶ್ವೇತಾ ಅವರ ಮಾವ ರಾಜನ್ ನಂದಾ ಭಾನುವಾರ ಕೊನೆಯುಸಿರೆಳೆದಿದ್ದರು. ಈ ಸುದ್ದಿ ತಿಳಿದ ತಕ್ಷಣ ಬಲ್ಗೇರಿಯಾದಲ್ಲಿ ಶೂಟಿಂಗ್‍ನಲ್ಲಿದ್ದ ಅಮಿತಾಭ್ ಬಚ್ಚನ್ ತಕ್ಷಣ ಭಾರತಕ್ಕೆ ಮರಳಿದ್ದರು. ಇನ್ನು, ಮೊನ್ನೆ ಈ ಬಗ್ಗೆ ಶೃದ್ಧಾಂಜಲಿ ಸಭೆ ಇತ್ತು. ಈ ವೇಳೆ, ಬಚ್ಚನ್ ಕುಟುಂಬದ ಎಲ್ಲಾ ಸದಸ್ಯರು ಭಾಗಿಯಾಗಿದ್ದರು. …

Read More »

ಮಗಳ ಬಗ್ಗೆ ಹೇಳಿಕೊಳ್ಳುವುದಕ್ಕೆ ಹೆದರಿದ್ದರಂತೆ ಗಾಯಕ ಕುಮಾರ್ ಸಾನು…

ಮುಂಬೈ : ಗಾಯಕ ಕುಮಾರ್ ಸಾನು ಅವರಿಗೆ ಒಬ್ಬಳು ಮಗಳಿದ್ದಾಳೆ. ಹೆಸರು ಶಾನೂನ್. ಆದರೆ, ಇವರು ಸಾನು ದತ್ತು ಪುತ್ರಿ. 2001ರಲ್ಲಿ ಸಾನು ಮಗಳನ್ನು ದತ್ತು ಪಡೆದಿದ್ದರು. ಆದರೆ, ತಾನು ದತ್ತು ಪಡೆದಿದ್ದಾಗಿ ಹೇಳಿಕೊಂಡರೆ ಸಮಾಜ ಮಗಳನ್ನು ಯಾವ ರೀತಿ ನೋಡುತ್ತೋ ಎಂಬ ಭಯ ಕುಮಾರ್ ಸಾನುಗಿತ್ತಂತೆ. ಹೀಗಾಗಿ, ಈ ವಿಷಯವನ್ನು ಬಹಿರಂಗ ಮಾಡುವುದಕ್ಕೇ ಇವರು ಹೆದರಿದ್ದರಂತೆ…! ಆದರೆ, ಸಾನು ಅವರಿಗೆ ಈಗ ಈ ಭಯ ಇಲ್ಲ. ಯಾಕೆಂದರೆ, ಮಗಳು …

Read More »

ಜೀವ ಉಳಿಸಿದ ಸಲ್ಮಾನ್… : ಯಾರೇನೆ ಅಂದರೂ ಸಲ್ಲೂ ಇಷ್ಟವಾಗುವುದು ಇದೇ ಕಾರಣಕ್ಕೆ…

ಮುಂಬೈ : ಅವರು ಸಲ್ಮಾನ್ ಜೊತೆ `ವೀರಗತಿ’ ಎಂಬ ಚಿತ್ರದಲ್ಲಿ ನಟಿಸಿದ್ದ ನಾಯಕಿ. ಹೆಸರು ಪೂಜಾ ದಡ್ವಾಲ್. 1995ರರಲ್ಲಿ ರಿಲೀಸ್ ಆದ ಚಿತ್ರ ಇದು. ಇದಾದ ಬಳಿಕ ಚಿತ್ರರಂಗದಿಂದ ದೂರ ಇದ್ದ ಪೂಜಾ ಗೋವಾದಲ್ಲಿ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಈ ವೇಳೆ, ಇವರನ್ನು ಮಾರಕ ಸಮಸ್ಯೆಯೊಂದು ಕಾಡಲಾರಂಭಿಸಿತ್ತು. ಅದೇ ಟಿಬಿ. ಈ ಸಮಸ್ಯೆ ಕಾಣಿಸಿಕೊಂಡಿದ್ದೇ ತಡ ಕುಟುಂಬ, ಸ್ನೇಹಿತರು ಸಮಾಜ ಎಲ್ಲರೂ ಪೂಜಾರನ್ನು ದೂರವೇ ಇಟ್ಟಿತು. ಇದರಿಂದ ತುಂಬಾ ನೊಂದಿದ್ದ …

Read More »

ಗಿಳಿಯೊಟ್ಟಿಗೆ ಆ್ಯಕ್ಷನ್ ಕಿಂಗ್ ಖುಷಿ…

ಚೆನ್ನೈ : ಆ್ಯಕ್ಷನ್ ಕಿಂಗ್ ಅರ್ಜುನ್ ಸರ್ಜಾ ತೆರೆ ಮೇಲೆ ರಫ್ ಆಂಡ್ ಟಫ್ ಕ್ಯಾರೆಕ್ಟರ್‍ಗಳಿಗೆ ಜೀವ ತುಂಬಿದವರು. ಆ್ಯಕ್ಷನ್ ಸೀನ್‍ಗಳಲ್ಲಂತೂ ಅರ್ಜುನ್ ಅವರಿಗೆ ಅರ್ಜುನ್ ಅವರೇ ಸಾಟಿ. ಹೀಗಾಗಿಯೇ ಸರ್ಜಾ ಈಗಲೂ ಕಿಂಗ್ ಆಗಿಯೇ ಮೆರೆಯುತ್ತಿದ್ದಾರೆ. ಇಂತಹ ಅರ್ಜುನ್ ಸರ್ಜಾ ಅವರಿಗೆ ಪ್ರಾಣಿ ಪಕ್ಷಿಗಳೆಂದರೂ ಬಲು ಪ್ರೀತಿ… ಅದಕ್ಕೆ ಸಾಕ್ಷಿ ಈ ವೀಡಿಯೋ. ತನ್ನ ಮುದ್ದಿನ ಗಿಳಿಯೊಂದಿಗೆ ಕಾಲ ಕಳೆಯುವ ಸರ್ಜಾ ಅವರ ಖುಷಿಯ ಕ್ಷಣಗಳನ್ನು ನೋಡುವುದೇ ಒಂಥರಾ …

Read More »
error: Content is protected !!