Saturday , December 15 2018
ಕೇಳ್ರಪ್ಪೋ ಕೇಳಿ
Home / Film News (page 20)

Film News

ತುಳು, ಕನ್ನಡ ನಟ ಸದಾಶಿವ ಸಾಲಿಯಾನ್ ಇನ್ನಿಲ್ಲ…

ಮುಂಬೈ : ತುಳು ಚಿತ್ರರಂಗದಲ್ಲಿ `ಪೆಟ್ಟಾಯಿ ಪಿಲಿ’ ಚಿತ್ರದ ಮೂಲಕ ಖ್ಯಾತಿ ಗಳಿಸಿದ್ದ ನಟ ಸದಾಶಿವ ಸಾಲಿಯಾನ್ ವಿಧಿವಶರಾಗಿದ್ದಾರೆ. ಮುಂಬೈಯಲ್ಲಿ ಸದಾಶಿವ ಸಾಲಿಯಾನ್ ಕೊನೆಯುಸಿರೆಳೆದಿದ್ದಾರೆ. ಮೀರಾ ರೋಡ್‍ನಲ್ಲಿ ವಾಸವಾಗಿದ್ದ ಸದಾಶಿವ ಸಾಲಿಯಾನ್ ಅನಾರೋಗ್ಯದ ಕಾರಣದಿಂದ ಕಳೆದ ಒಂದೂವರೆ ದಶಕದಿಂದ ಚಿತ್ರರಂಗದಿಂದ ದೂರವೇ ಉಳಿದಿದ್ದರು. ತುಳುವಿನಲ್ಲಿ ಸೂಪರ್ ಹಿಟ್ ಚಿತ್ರಗಳಾದ ಪೆಟ್ಟಾಯಿ ಪಿಲಿ, ಭಾಗ್ಯವಂತೆದಿ, ಬದುಕೆರೆ ಬುಡ್ಲೆ, ದಾರೆದ ಸೀರೆ, ಒಂತೆ ಅಡ್ಜೆಸ್ಟ್ ಮಲ್ಪಿ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿದ್ದರು. ಇನ್ನು, …

Read More »

ಪಾರ್ಮ್‍ಹೌಸ್‍ನಲ್ಲಿ ಅಕ್ರಮ ನಿರ್ಮಾಣ : ಸಲ್ಮಾನ್ ಖಾನ್‍ಗೆ ಮತ್ತೆ ಸಂಕಷ್ಟ

ಮುಂಬೈ : ಬಾಲಿವುಡ್ ನಟ ಸಲ್ಮಾನ್‍ಗೆ ಮತ್ತೆ ಸಂಕಷ್ಟ ಎದುರಾಗಿದೆ. ಪನ್ವೇಲ್‍ನಲ್ಲಿರುವ ಫಾರ್ಮ್‍ಹೌಸ್‍ನಲ್ಲಿ ಅಕ್ರಮ ನಿರ್ಮಾಣ ಕಾರ್ಯ ನಡೆಸಿರುವುದಕ್ಕೆ ಸಲ್ಮಾನ್ ಖಾನ್‍ಗೆ ನೊಟೀಸ್ ಜಾರಿ ಆಗಿದೆ. ಸಲ್ಲೂ ಸೇರಿದಂತೆ ಅವರ ಕುಟುಂಬದ ಐವರು ಸದಸ್ಯರಿಗೆ ಮಹಾರಾಷ್ಟ್ರ ಅರಣ್ಯ ಇಲಾಖೆ ಈ ನೊಟೀಸ್ ನೀಡಿದೆ. ಪನ್ವೇಲ್‍ನಲ್ಲಿ ಆಸ್ತಿ ಹೊಂದಿರುವ ನೆರೆಯ ರಾಯ್‍ಗಢ ಜಿಲ್ಲೆಯ ಎನ್‍ಆರ್‍ಐ ಒಬ್ಬರು ನೀಡಿದ ದೂರಿನ ಹಿನ್ನೆಲೆಯಲ್ಲಿ ಈ ನೊಟೀಸ್ ಜಾರಿ ಮಾಡಲಾಗಿದೆ. ಸಲ್ಮಾನ್ ತಂದೆ ಸಲೀಂ ಖಾನ್ …

Read More »

ಹೈದರಾಬಾದ್‍ನಲ್ಲಿ ಹೈಟೆಕ್ ವೇಶ್ಯಾವಾಟಿಕೆ : ಸಿಕ್ಕಿಬಿದ್ದ ಭೋಜ್‍ಪುರಿ ನಟಿ : ಲಕ್ಷ ಲಕ್ಷದಲ್ಲಿ ವ್ಯವಹಾರ…!

ಹೈದರಾಬಾದ್ : ಸಿನಿಮಾ ನಟಿಯರನ್ನು ಬಳಸಿಕೊಂಡು ಅಮೇರಿಕಾದ ಚಿಕಾಗೋದಲ್ಲಿ ನಡೆಯುತ್ತಿದ್ದ ವೇಶ್ಯಾವಾಟಿಕೆ ದಂಧೆ ಟಾಲಿವುಡ್‍ನಲ್ಲಿ ಸಾಕಷ್ಟು ಸಂಚಲನ ಮೂಡಿಸಿತ್ತು. ಇದೀಗ ಮುತ್ತಿನ ನಗರಿ ಹೈದರಾಬಾದ್‍ನಲ್ಲೇ ಇಂತಹ ಮತ್ತೊಂದು ಹೈಟೆಕ್ ವೇಶ್ಯಾವಾಟಿಕೆ ದಂಧೆಯ ಸುದ್ದಿ ಹೊರಬಿದ್ದಿದೆ. ಭಾನುವಾರ ರಾತ್ರಿ ಹೈದರಾಬಾದ್ ಪೊಲೀಸರು ಫೈವ್ ಸ್ಟಾರ್ ಹೊಟೇಲ್ ಮೇಲೆ ದಾಳಿ ಮಾಡಿ ಈ ಹೈಟೆಕ್ ವೇಶ್ಯಾವಾಟಿಕೆಯನ್ನು ಬಯಲು ಮಾಡಿದ್ದಾರೆ. ಈ ವೇಳೆ, ಭೋಜ್‍ಪುರಿ ನಟಿಯೊಬ್ಬಳು ಸಿಕ್ಕಿಬಿದ್ದಿದ್ದಾಗಿ ಗೊತ್ತಾಗಿದೆ. ಲಕ್ಷ ಲಕ್ಷದಲ್ಲಿ ಈ ವ್ಯವಹಾರ …

Read More »

ಆಲಿಯಾ ಮನೆಯಲ್ಲಿ ರಣಬೀರ್…! : ನಡೆಯುತ್ತಿದೆಯಾ ಮದುವೆ ಮಾತುಕತೆ…?

ಮುಂಬೈ : ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ಸದ್ಯ ಬಾಲಿವುಡ್‍ನಲ್ಲಿ ಸಖತ್ ಸೌಂಡ್ ಮಾಡುತ್ತಿರುವ ಜೋಡಿ. ಇವರಿಬ್ಬರು ಪ್ರೇಮ ಲೋಕದಲ್ಲಿ ವಿಹರಿಸುತ್ತಿದ್ದಾರೆ ಎಂದು ಸುದ್ದಿ ಹಬ್ಬಿ ಬಹಳ ದಿನ ಆಯ್ತು. ಇದೀಗ, ಇವರಿಬ್ಬರ ಸಂಬಂಧ ಇನ್ನೊಂದು ಘಟ್ಟಕ್ಕೆ ಸಾಗುವ ಹಾದಿಯಲ್ಲಿದೆ. ಅದು ಮದುವೆ… ಹೌದು, ಇಬ್ಬರು ಶೀಘ್ರದಲ್ಲೇ ದಾಂಪತ್ಯಕ್ಕೆ ಕಾಲಿಡಲಿದ್ದಾರೆ ಎಂಬ ಸುದ್ದಿಯೂ ಹಬ್ಬಿದೆ. ಇದಕ್ಕೆ ಸಾಕ್ಷಿ ಎಂಬಂತೆ ರಣಬೀರ್ ಅಲಿಯಾ ಭಟ್ ಮನೆಯಲ್ಲಿ ಕಾಣಿಸಿಕೊಂಡಿದ್ದಾರೆ. ಈ ಭೇಟಿಯ …

Read More »

ಅತ್ಯಾಚಾರ ಆರೋಪ : ಮಿಥುನ್ ಚಕ್ರವರ್ತಿ ಪುತ್ರ, ಪತ್ನಿಗೆ ಇಲ್ಲ ರಿಲೀಫ್

ಮುಂಬೈ : ಬಾಲಿವುಡ್‍ನ ಖ್ಯಾತ ನಟ ಮಿಥುನ್ ಚಕ್ರವರ್ತಿ ಪುತ್ರ ಮಹಾಕ್ಷಯ್ ಚಕ್ರವರ್ತಿಗೆ ಸದ್ಯಕ್ಕೆ ರಿಲೀಫ್ ಇಲ್ಲ. ಅತ್ಯಾಚಾರ ಆರೋಪದ ಹಿನ್ನೆಲೆಯಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಮಹಾಕ್ಷಯ್‍ಗೆ ಬಂಧನಕ್ಕೆ ತಡೆ ನೀಡಲು ಮುಂಬೈ ಹೈಕೋರ್ಟ್ ನಿರಾಕರಿಸಿದೆ. ಜೊತೆಗೆ, ಮಿಥುನ್ ಪತ್ನಿ ಮಹಾಕ್ಷಯ್ ತಾಯಿ ಯೋಗಿತಾ ಬಾಲಿ ಕೂಡಾ ಇದೇ ಪ್ರಕರಣದ ಆರೋಪಿಯಾಗಿದ್ದು, ಇವರಿಗೂ ರಿಲೀಫ್ ಸಿಕ್ಕಿಲ್ಲ. ಮೊನ್ನೆಯಷ್ಟೇ ಯುವತಿಯೊಬ್ಬಳು ಮಹಾಕ್ಷಯ್ ವಿರುದ್ಧ ಅತ್ಯಾಚಾರ ಆರೋಪ ಮಾಡಿದ್ದಳು. ಮದುವೆಯಾಗಿ ನಂಬಿಸಿ ದೈಹಿಕ ಸಂಬಂಧ …

Read More »

ಅಪರೂಪದ ಫೋಟೋ : 7ನೇ ಕ್ಲಾಸ್‍ನಲ್ಲಿ ಪವನ್ ಕಲ್ಯಾಣ್ ಹೇಗಿದ್ದರು ನೋಡಿ…

ಹೈದರಾಬಾದ್ : ಪವನ್ ಕಲ್ಯಾಣ್ ಈಗ ಟಾಲಿವುಡ್‍ನಲ್ಲಿ ಪವರ್ ಸ್ಟಾರ್. ರಾಜಕೀಯದಲ್ಲೂ ಮಿಂಚುವ ನಾಯಕ… ಅಪಾರ ಅಭಿಮಾನಿಗಳನ್ನು ಸಂಪಾದಿಸಿರುವ ನಟ. ಇಂತಹ ಪವನ್ ಅವರ ಅಪರೂಪದ ಫೋಟೋ ಇಲ್ಲಿದೆ ನೋಡಿ… ಇದು ಪವನ್ ಅವರು 7ನೇ ಕ್ಲಾಸ್‍ನಲ್ಲಿ ಇರುವಾಗ ತೆಗೆದಿರುವ ಫೋಟೋ. ಆಗ ನೆಲ್ಲೂರಿನ ಶಾಲೆಯಲ್ಲಿ ಪವನ್ ಓದುತ್ತಿದ್ದರು. ಮೆಗಾ ಸ್ಟಾರ್ ಚಿರಂಜೀವಿ ಕುಟುಂಬದ ಅಪರೂಪದ ಫೋಟೋ ಇದು. ಈ ಫೋಟೋದಲ್ಲಿ ಚಿರು ಕೂಡಾ ಇದ್ದಾರೆ.

Read More »

ನ್ಯೂಯಾರ್ಕ್‍ನ ರಸ್ತೆಯಲ್ಲಿ ಪ್ರಣಯ ಪತಂಗಗಳ ಸೈಕಲ್ ಸವಾರಿ…

ಮುಂಬೈ : ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಮತ್ತು ಪಾಪ್ ಸಿಂಗರ್ ನಿಕ್ ಜೊಹಾನ್ಸ್ ನಡುವಣ ಪ್ರೀತಿ ಪ್ರೇಮದ ವಿಚಾರ ಈ ಬಿಟೌನ್‍ನಲ್ಲಿ ಹಾಟ್ ಸಬ್ಜೆಕ್ಟ್. ಶೀಘ್ರದಲ್ಲೇ ಇವರಿಬ್ಬರು ದಾಂಪತ್ಯಕ್ಕೂ ಕಾಲಿಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಅದೂ ಅಲ್ಲದೆ, ಮುಂಬೈಯಲ್ಲಿ ಇಬ್ಬರು ಒಟ್ಟಾಗಿ ಕಾಣಿಸಿಕೊಂಡಿದ್ದು, ಕಾರ್ಯಕ್ರಮದಲ್ಲೂ ಪಾಲ್ಗೊಂಡಿದ್ದರು. ಪ್ರಿಯಾಂಕಾ ಮನೆಯ ಸಂಭ್ರಮದಲ್ಲಿ ನಿಕ್ ಭಾಗಿಯಾಗಿದ್ದರು. ಹೀಗಾಗಿ, ಇವರಿಬ್ಬರ ಪ್ರೇಮದ ವಿಚಾರ ಈಗ ಸಖತ್ ಆಗಿಯೇ ಸುಳಿದಾಡುತ್ತಿದೆ. ಆದರೆ, ಇವರಿಬ್ಬರು ಈ ಪ್ರೀತಿಯ …

Read More »

ಯುವರಾಜ್‍ಕುಮಾರ ನಿಶ್ಚಿತಾರ್ಥ… : ಡಾ.ರಾಜ್‍ಕುಮಾರ್ ಕುಟುಂಬದಲ್ಲಿ ಸಂಭ್ರಮ

ಮೈಸೂರು : ವರನಟ ಡಾ.ರಾಜ್‍ಕುಮಾರ್ ಕುಟುಂಬದಲ್ಲಿ ಈಗ ಸಂಭ್ರಮ ಮನೆ ಮಾಡಿದೆ. ರಾಘವೇಂದ್ರ ರಾಜ್‍ಕುಮಾರ್ ಅವರ ಪುತ್ರ ಯುವರಾಜ್ ಕುಮಾರ್ ದಾಂಪತ್ಯಕ್ಕೆ ಕಾಲಿಡುವ ಸಿದ್ಧತೆಯಲ್ಲಿದ್ದಾರೆ. ಗುರುವಾರ ಮೈಸೂರಿನಲ್ಲಿ ಯುವರಾಜ್‍ಕುಮಾರ್ ನಿಶ್ಚಿತಾರ್ಥ ನಡೆದಿದೆ. ಶ್ರೀದೇವಿ ಯುವರಾಜ್ ಅವರ ಬಾಳಸಂಗಾತಿಯಾಗಿ ಬರಲಿದ್ದಾರೆ. ಈ ಸಂಭ್ರಮದಲ್ಲಿ ಕುಟುಂಬದ ಎಲ್ಲಾ ಸದಸ್ಯರು ಭಾಗಿಯಾಗಿ ಸಂಭ್ರಮದಲ್ಲಿ ಕಳೆದರು. ಮೈಸೂರಿನ ಪ್ರತಿಷ್ಠಿತ ಖಾಸಗಿ ಹೊಟೇಲ್‍ನಲ್ಲಿ ಈ ನಿಶ್ಚಿತಾರ್ಥ ನಡೆದಿದ್ದು, ಸ್ಯಾಂಡಲ್‍ವುಡ್‍ನ ವಿವಿಧ ಗಣ್ಯರು ಕೂಡಾ ಹೊಸ ಜೋಡಿಗೆ ಶುಭ …

Read More »

ಮಾರಕ ಕ್ಯಾನ್ಸರ್ ಅನ್ನೇ ಸೋಲಿಸಿದ ಚೆಲುವೆಯರಿವರು…

ಮುಂಬೈ : ಬಾಲಿವುಡ್ ನಟಿ ಸೋನಾಲಿ ಬೇಂದ್ರೆ ಈಗ ಕ್ಯಾನ್ಸರ್​ನಿಂದ ಬಳಲುತ್ತಿದ್ದಾರೆ. ಈ ಸುದ್ದಿಗೆ ಇಡೀ ಚಿತ್ರರಂಗವೇ ಶಾಕ್ ಆಗಿದೆ. ಆದರೆ, ಚಿತ್ರರಂಗದ ಕೆಲವು ಚೆಲುವೆಯರು ತಮ್ಮ ಆತ್ಮಸ್ಥೈರ್ಯದಿಂದಲೇ ಮಾರಕ ಕ್ಯಾನ್ಸರ್​ ವಿರುದ್ಧವೇ ಜಯಗಳಿಸಿದ್ದಾರೆ. ದಕ್ಷಿಣ ಭಾರತದ ಹಿರಿಯ ನಟಿ ಗೌತಮಿ ಅನೇಕ ವರ್ಷದಿಂದ ಕ್ಯಾನ್ಸರ್​ನಿಂದ ಬಳಲುತ್ತಿದ್ದರು. ಆದರೆ, ತನಗೆ ಇಂತಹ ಆರೋಗ್ಯ ಸಮಸ್ಯೆ ಇದೆ ಎಂದು ಗೊತ್ತಾದ ಮೇಲೂ ಗೌತಮಿ ತನ್ನ ಮೇಲಿನ ನಂಬಿಕೆ, ಆತ್ಮಸ್ಥೈರ್ಯ, ವಿಶ್ವಾಸವನ್ನು ಕಳೆದುಕೊಂಡಿಲ್ಲ. …

Read More »

`ಕಮಲ್ ಹಾಸನ್ ಎಲ್​ಕೆಜಿ, ರಜನಿಕಾಂತ್ ಬೇಬಿ ಕ್ಲಾಸ್​’…!

ಚೆನ್ನೈ : ಸೂಪರ್​ ಸ್ಟಾರ್​ಗಳಾದ ರಜನಿಕಾಂತ್ ಮತ್ತು ಕಮಲ್ ಹಾಸನ್ ರಾಜಕೀಯಕ್ಕೆ ಧುಮುಕಿ ಆಗಿದೆ. ಇವರ ರಾಜಕೀಯ ಪ್ರವೇಶವನ್ನು ಅವರವರ ಅಭಿಮಾನಿಗಳು ಖುಷಿಯಿಂದಲೇ ಸ್ವಾಗತಿಸಿದರೆ ರಾಜಕೀಯ ವಲಯದಲ್ಲಿ ಟೀಕಿಸಿದವರೇ ಹೆಚ್ಚು. ಬಗೆಬಗೆಯಾಗಿ ಟೀಕೆಗಳು ಈ ಇಬ್ಬರ ವಿರುದ್ಧವೂ ಬೇರೆ ಬೇರೆ ಸಂದರ್ಭದಲ್ಲಿ ಬೇರೆ ಬೇರೆ ವ್ಯಕ್ತಿಗಳಿಂದ ಬಂದದ್ದೂ ಇದೆ. ಇದೀಗ ಮತ್ತೊಮ್ಮೆ ರಜನಿಕಾಂತ್ ಮತ್ತು ಕಮಲ್ ಹಾಸನ್ ಬಗ್ಗೆ ರಾಜಕಾರಣಿಯೊಬ್ಬರು ಟೀಕೆ ಮಾಡಿದ್ದಾರೆ. ‘ಪಟ್ಟಾಲಿ ಮಕ್ಕಳ್ ಕಚ್ಚಿ’ ನಾಯಕ ಅನ್ಬುಮಣಿ …

Read More »
error: Content is protected !!