Monday , August 20 2018
ಕೇಳ್ರಪ್ಪೋ ಕೇಳಿ
Home / Film News (page 3)

Film News

ತಮಿಳು ನಟ ವಿಕ್ರಂ ಪುತ್ರನಿಂದ ಅಡ್ಡಾದಿಡ್ಡಿ ವಾಹನ ಚಾಲನೆ : ವ್ಯಕ್ತಿ ಗಂಭೀರ

ಚೆನ್ನೈ : ತಮಿಳಿನ ಸ್ಟಾರ್ ನಟ ವಿಕ್ರಂ ಪುತ್ರ ಧ್ರುವ ಕಾರು ಅಪಘಾತವಾಗಿದೆ ಚೆನ್ನೈನ ಪಾಂಡಿಬಜಾರ್‍ನಲ್ಲಿ ಈ ಘಟನೆ ನಡೆದಿದೆ. ಅಡ್ಡಾದಿಡ್ಡಿ ಕಾರು ಚಾಲನೆ ಮಾಡಿದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ. ಘಟನೆಯಲ್ಲಿ ಒಂದು ಆಟೋ ಜಖಂ ಆಗಿದ್ದು, ಚಾಲಕ ಗಂಭೀರವಾಗಿ ಗಾಯಗೊಂಡಿದ್ದಾರೆ. ಧ್ರುವ ಚಲಾಯಿಸುತ್ತಿದ್ದ ಕಾರು ನಿಯಂತ್ರಣ ತಪ್ಪಿ ನಿಂತಿದ್ದ ಆಟೋಗೆ ಡಿಕ್ಕಿ ಹೊಡೆದಿದೆ. ಈ ಸಂದರ್ಭದಲ್ಲಿ ಒಳಗಿದ್ದ ಚಾಲಕನಿಗೆ ಗಂಭೀರ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನು, ಘಟನೆಯಲ್ಲಿ …

Read More »

ಪೈಲಟ್ ಕೈ ಹಿಡಿಯಲಿರುವ ಸ್ವಾತಿ ರೆಡ್ಡಿ

ಚೆನ್ನೈ : ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ಸೂಪರ್ ಹಿಟ್ ಚಿತ್ರಗಳಲ್ಲಿ ಅಭಿನಯಿಸಿ ಗಮನ ಸೆಳೆದಿರುವ ಸ್ವಾತಿ ರೆಡ್ಡಿ ದಾಂಪತ್ಯಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಆಗಸ್ಟ್ 30 ರಂದು ಸ್ವಾತಿ ವಿವಾಹ ನಡೆಯಲಿದೆ. ವಿಕಾಸ್ ಸ್ವಾತಿ ಕೈ ಹಿಡಿಯಲಿದ್ದಾರೆ. ಹೈದರಾಬಾದ್‍ನಲ್ಲಿ ಇವರಿಬ್ಬರ ಮದುವೆ ನಡೆಯಲಿದ್ದುಯ, ಕೇರಳ ಕೊಚ್ಚಿನ್‍ನಲ್ಲಿ ಆರತಕ್ಷತೆ ಸಮಾರಂಭ ನಡೆಯಲಿದೆ. ವಿಕಾಸ್ ಮಲೇಶಿಯಾ ಏರ್‍ಲೈನ್ಸ್‍ನಲ್ಲಿ ಪೈಲಟ್ ಆಗಿದ್ದು, ಇಂಡೋನೇಷ್ಯಾದ ಜಕಾರ್ತದಲ್ಲಿ ನೆಲೆಸಿದ್ದಾರೆ. ಸ್ವಾತಿ ತಮಿಳು, ಮಲಯಾಳಂನಲ್ಲಿ ಸೂಪರ್ ಹಿಟ್ ಚಿತ್ರಗಳಲ್ಲಿ ನಟಿಸಿದ್ದ ನಟಿ. …

Read More »

ಸ್ಯಾಂಡಲ್‍ವುಡ್‍ಗೆ ಬರುತ್ತಿದ್ದಾರೆ ರಾಣಾ

ಬೆಂಗಳೂರು : ಬಾಹುಬಲಿ ಖ್ಯಾತಿಯ ರಾಣಾ ದಗ್ಗುಬಾಟಿ ಈ ಸ್ಯಾಂಡಲ್‍ವುಡ್‍ಗೆ ಬರುವ ಕ್ಷಣಗಳು ಹತ್ತಿರವಾಗಿದೆ. ಸದ್ಯ ಹರಿದಾಡುತ್ತಿರುವ ಸುದ್ದಿಯನ್ನೇ ನಂಬೋದಾದರೆ ನಿರ್ದೇಶಕ ಎ.ಎಂ.ಆರ್ ರಮೇಶ್ ನಿರ್ದೇಶನದ ಚಿತ್ರದಲ್ಲಿ ನಟಿಸಲು ರಾಣಾ ಒಪ್ಪಿಕೊಂಡಿದ್ದಾರಂತೆ. ಈಗಾಗಲೇ ನೈಜ್ಯ ಕತೆಗಳನ್ನು ಸಿನಿಪರದೆಗೆ ತಂದು ಗೆದ್ದಿರುವ ರಮೇಶ್ ಅವರು ಹೊಸ ಕತೆಯನ್ನು ಸಿದ್ಧಪಡಿಸಿದ್ದು, ಈ ಕತೆ ರಾಣಾಗೆ ಮೆಚ್ಚುಗೆಯಾಗಿದೆಯಂತೆ ಹೇಳಲಾಗುತ್ತಿದೆ. ಎಲ್ಲಾ ಅಂದುಕೊಂಡಂತೆ ನಡೆದರೆ ಜನವರಿ ಹೊತ್ತಿಗೆ ಈ ಚಿತ್ರದ ಶೂಟಿಂಗ್ ಕೂಡಾ ಶುರುವಾಗಲಿದೆ ಎನ್ನಲಾಗಿದೆ. …

Read More »

ಶಿವಣ್ಣ ಜೊತೆ ನಟಿಸುವುದೇ ಒಂದು ದೊಡ್ಡ ಗೌರವ : ವಿವೇಕ್ ಒಬೇರಾಯ್

ಬೆಂಗಳೂರು : ಬಾಲಿವುಡ್ ನಟ ವಿವೇಕ್ ಒಬೇರಾಯ್ ಕನ್ನಡದ `ರುಸ್ತುಂ’ ಚಿತ್ರದಲ್ಲಿ ನಟಿಸುವುದು ಹಳೇ ಸುದ್ದಿ. ಈಗಾಗಲೇ ವಿವೇಕ್ ತಮ್ಮ ಭಾಗದ ಚಿತ್ರೀಕರಣ ಮುಗಿಸಿದ್ದಾರೆ. ಅಲ್ಲದೆ, ಶೂಟಿಂಗ್ ಸೆಟ್‍ನಲ್ಲಿ ಖುಷಿಯಿಂದಲೇ ಕಳೆದಿದ್ದಾರೆ. ಈ ಖುಷಿಯ ಸಂದರ್ಭವನ್ನು ವಿವೇಕ್ ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಅಲ್ಲದೆ, ಇಡೀ ಚಿತ್ರ ತಂಡದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವ ವಿವೇಕ್, ಶಿವಣ್ಣ ಜೊತೆ ತೆರೆ ಹಂಚಿಕೊಳ್ಳುವುದೇ ಒಂದು ದೊಡ್ಡ ಗೌರವ ಎಂದೂ ಹೇಳಿಕೊಂಡಿದ್ದಾರೆ. Great fun …

Read More »

`ಒಂದೇ ಒಂದು ಪೈಸೆ ಸಂಭಾವನೆ ಬೇಡ. ಬಂದ ಲಾಭದಲ್ಲಿ ಪರ್ಸಂಟೇಜ್ ಸಾಕು’

ಮುಂಬೈ : ಈಗೀಗ ನಾಯಕರ ಸಂಭಾವನೆಯದ್ದೇ ದೊಡ್ಡ ಸಮಸ್ಯೆ. ಬಹುತೇಕ ನಾಯಕ ನಟರ ಸಂಭಾವನೆಯ ಕಾರಣದಿಂದಲೇ ಹಲವು ಪ್ರಾಜೆಕ್ಟ್‍ಗಳು ನಿಂತಂತಹ ಉದಾಹರಣೆಗಳೂ ಇವೆ. ಅದೂ ಅಲ್ಲದೆ, ಸಕ್ಸಸ್ ರೇಟ್ ಕೂಡಾ ಈಗೀಗ ಕಡಿಮೆ ಆಗುತ್ತಿದೆ. ಸ್ಟಾರ್ ನಟರಾದ ಚಿರಂಜೀವಿ, ರಜನಿಕಾಂತ್ ಮತ್ತು ಅಮಿತಾಭ್ ಬಚ್ಚನ್‍ರಂತವರು ಸಂಭಾವನೆಯ ಜೊತೆಗೆ ಅವರ ಹೆಸರಿನ ಕಾರಣಕ್ಕೆ ಚಿತ್ರ ಹಿಟ್ ಮಾಡಿ ಕೊಡುವುದರಿಂದ ಪರ್ಸಂಟೇಜ್ ಕೂಡಾ ಪಡೆಯುತ್ತಿದ್ದಾರೆ. ಅದೂ ಅಲ್ಲದೆ, ಇತ್ತೀಚಿನ ದಿನಗಳಲ್ಲಿ ನವನಟರೇ 20-30 …

Read More »

ಇನಿಯನೊಂದಿಗೆ ತಾಪ್ಸಿ ರೌಂಡ್ಸ್…

ಮುಂಬೈ : ನಟಿ ತಾಪ್ಸಿ ಪೊನ್ನು ಡ್ಯಾನೀಶ್ ಬ್ಯಾಡ್ಮಿಂಟನ್ ತಾರೆ ಮಥಿಯಾಸ್ ಬೋ ಜೊತೆಗೆ ಪ್ರೀತಿಗೆ ಬಿದ್ದಿದ್ದಾರೆ. ಬಹಳ ವರ್ಷದಿಂದ ಇವರಿಬ್ಬರು ಪ್ರೇಮಲೋಕದಲ್ಲಿ ವಿಹರಿಸುತ್ತಿದ್ದಾರೆ. ಸಮಯ ಸಿಕ್ಕಾಗಲ್ಲೆಲ್ಲಾ ಈ ಪ್ರೇಮಪತಂಗಗಳು ಜೊತೆಯಾಗಿ ಸುತ್ತಾಡುತ್ತವೆ. ಇತ್ತೀಚೆಗೆ ಮುಂಬೈನ ರೆಸ್ಟೋರೆಂಟ್‍ನಲ್ಲಿ ಊಟಕ್ಕೆ ಬಂದಿದ್ದ ಸಂದರ್ಭದಲ್ಲಿ ತಾಪ್ಸಿ ಮತ್ತು ಅವರ ಪ್ರಿಯಕರ ಅಭಿಮಾನಿಗಳ ಕಣ್ಣಿಗೆ ಬಿದ್ದಿದ್ದಾರೆ. ಈ ಇಬ್ಬರ ಫೋಟೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

Read More »

ವೆಬ್ ಸೀರೀಸ್‍ನಲ್ಲಿ ಸ್ವಯಂ ಘೋಷಿತ ದೇವಮಹಿಳೆ ರಾಧೆ ಮಾ…! : ಇಲ್ಲಿದೆ ಟ್ರೇಲರ್

ಮುಂಬೈ : ಸ್ವಯಂ ಘೋಷಿತ ದೇವ ಮಹಿಳೆ ರಾಧೆ ಮಾ ಈಗ ವೆಬ್ ಸೀರೀಸ್ ಮೂಲಕ ಬಣ್ಣದ ಲೋಕಕ್ಕೆ ಬಂದಿದ್ದಾರೆ. ಈ ಸರಣಿಯಲ್ಲಿ ರಾಧೆ ಮಾ ತನ್ನದೇ ಪಾತ್ರವನ್ನು ಮಾಡುತ್ತಿದ್ದಾರೆ. ಈ ವೆಬ್ ಸೀರೀಸ್‍ಗೆ `ರಾಧೆ ಮಾ’ ಎಂದೇ ಹೆಸರಿಡಲಾಗಿದೆ. ಇದೊಂದು ಕಾಮಿಡಿ ಸೀರೀಸ್ ಆಗಿದ್ದು, ರಾಧೆ ಮಾ ತನ್ನ ಭಕ್ತರಿಗೆ ಸರಿದಾರಿಯನ್ನು ತೋರುವ ಮಾರ್ಗದರ್ಶಿ ಪಾತ್ರವನ್ನು ಇವರು ಇಲ್ಲಿ ನಿರ್ವಹಿಸಿದ್ದಾರೆ. ಈ ಸೀರೀಸ್‍ನ ಟ್ರೇಲರ್ ಈಗ ಬಹಿರಂಗವಾಗಿದ್ದು, ಸಾಕಷ್ಟು …

Read More »

ಮನಿಷಾ ಬದುಕಿಗೆ ಅಕ್ಷರ ರೂಪ : ಇಲ್ಲಿದೆ ಪುಸ್ತಕದ ಪುಟ…

ಮುಂಬೈ : ಬಾಲಿವುಡ್ ನಟಿ, ಕ್ಯಾನ್ಸರ್ ಗೆದ್ದು ಬದುಕುತ್ತಿರುವ ಸಾಧಕಿ ಮನಿಷಾ ಕೊಯಿರಾಲ ಈಗ ತಮ್ಮ ಜೀವನದ ಅನುಭವಕ್ಕೆ ಅಕ್ಷರ ರೂಪ ಕೊಡುತ್ತಿದ್ದಾರೆ. ಹೀಗಾಗಿ, ಈ ಪುಸ್ತಕಕ್ಕೆ `ದಿ ಬುಕ್ ಆಫ್ ಅನ್‍ಟೋಲ್ಡ್ ಸ್ಟೋರೀಸ್’ ಎಂದು ಹೆಸರಿಟ್ಟಿದ್ದಾರೆ. ಈ ಬಗ್ಗೆ ಮನಿಷಾ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. Thank you #penguinindia @gurveenchadha for encouraging me to tell stories.. #untoldstories .my first book.. hopefully many …

Read More »

ಸೆಲ್ಫಿಗೆ ಮುಗಿಬಿದ್ದ ಫೀಮೇಲ್ ಫ್ಯಾನ್ಸ್… : ರಣವೀರ್ ಸ್ಥಿತಿ ಅಯ್ಯೋ ಪಾಪ… : ಇಲ್ಲಿದೆ ವೀಡಿಯೋ

ಮುಂಬೈ : ಸೆಲ್ಫಿ ಅನ್ನೋದು ಈಗೊಂದು ಲೈಫ್‍ನ ಅವಿಭಾಜ್ಯ ಅಂಗವಾಗಿದೆ ಹೋಗಿದೆ. ಅದರಲ್ಲೂ ಸೆಲೆಬ್ರಿಟಿಗಳನ್ನು ಕಂಡರಂತೂ ಕೇಳೋದೇ ಬೇಡ. ಎಲ್ಲರೂ ಸೆಲ್ಫಿಗೆ ಮುಗಿಬೀಳ್ತಾರೆ. ಈಗ ಬಾಲಿವುಡ್ ನಟ ರಣಬೀರ್ ಸಿಂಗ್‍ಗೆ ಇಂತಹದ್ದೊಂದು ಅನುಭವ ಆಗಿದೆ. ಈ ಅನುಭವ ಬಹುಶಃ ರಣವೀರ್‍ಗೆ ಖುಷಿಗಿಂತ ಸಂಕಟ ಕೊಟ್ಟದ್ದೇ ಹೆಚ್ಚೇನೋ… Ranveer Singh At JACK & JONES Store | Ranveer Singh Out For Shopping A post shared by …

Read More »

`ಗೀತಾ ಗೋವಿಂದಮ್’ ಗಾಗಿ 8 ತಿಂಗಳು ನಾಯಕಿಯನ್ನು ಹುಡುಕಿದ್ದರಂತೆ ಡೈರೆಕ್ಟರ್…!

ಹೈದರಾಬಾದ್ : ಟಾಲಿವುಡ್‍ನಲ್ಲಿ ಈಗ `ಗೀತಾ ಗೋವಿಂದಂ’ ಚಿತ್ರ ಸಾಕಷ್ಟು ನಿರೀಕ್ಷೆ ಮೂಡಿಸಿದೆ. ಕನ್ನಡದ ಸುಂದರಿ ರಶ್ಮಿಕಾ ಮಂದಣ್ಣ ಈ ಚಿತ್ರದಲ್ಲಿ ನಾಯಕಿಯಾಗಿ ಅಭಿನಯಿಸುತ್ತಿದ್ದು, ಈಗಾಗಲೇ ಟಾಲಿವುಡ್ ಸಿನಿಪ್ರಿಯರಿಗೆ ರಶ್ಮಿಕಾ ಹತ್ತಿರವಾಗಿದ್ದಾರೆ. ವಿಜಯ್ ದೇವರಕೊಂಡ ಕೂಡಾ ಗಮನ ಸೆಳೆದಿದ್ದಾರೆ. ಆದರೆ, ಇತ್ತೀಚಿಗೆ ಈ ಚಿತ್ರದ ಬಗ್ಗೆ ಇಂಟ್ರೆಸ್ಟಿಂಗ್ ವಿಷಯವನ್ನು ನಿರ್ದೇಶಕ ಪರಶುರಾಮ್ ಬಿಚ್ಚಿಟ್ಟಿದ್ದಾರೆ. ಪರಶುರಾಮ್ ಅವರು ಅತ್ಯಂತ ಸೂಕ್ಷ್ಮ ನಿರ್ದೇಶಕ. ಇವರು ಸೆಲೆಕ್ಟೆಡ್ ಸಿನೆಮಾ ಮಾಡಿ ಗಮನ ಸೆಳೆದವರು. ಇದೇ ಸೂತ್ರದಿಂದ …

Read More »
error: Content is protected !!