Sunday , June 24 2018
ಕೇಳ್ರಪ್ಪೋ ಕೇಳಿ
Home / Film News (page 30)

Film News

ಇದು ಸಿನೆಮಾದ ಸ್ಕ್ರಿಪ್ಟಾ? : ನಟಿ ಪ್ರಕರಣದ ತನಿಖೆ ವಿಳಂಬಕ್ಕೆ ಪೊಲೀಸರಿಗೆ ಕೇರಳ ಹೈಕೋರ್ಟ್​ ಪ್ರಶ್ನೆ

ತಿರುವನಂತಪುರಂ : ಬಹುಭಾಷಾ ನಟಿಯ ಲೈಂಗಿಕ ಕಿರುಕುಳ ಪ್ರಕರಣದ ತನಿಖೆ ವಿಳಂಬಕ್ಕೆ ಕೇರಳ ಹೈಕೋರ್ಟ್​​ ಪೊಲೀಸರನ್ನು ತೀವ್ರ ತರಾಟೆಗೆ ತೆಗೆದುಕೊಂಡಿದೆ. ಆರು ತಿಂಗಳಿಂದ ತನಿಖೆ ಮಾಡುತ್ತಿದ್ದೀರಿ. ಇದೇನು ಸಿನೆಮಾದ ಸ್ಕ್ರಿಪ್ಟಾ? ಯಾವಾಗ ತನಿಖೆ ಪೂರ್ಣ ಮಾಡುತ್ತೀರಿ ಎಂದು ಹೈಕೋರ್ಟ್​ ಪೊಲೀಸರನ್ನು ಪ್ರಶ್ನಿಸಿದೆ. ನ್ಯಾಯಾಧೀಶ ಪಿ.ಉಬೈದ್​ ನೇತೃತ್ವದ ಪೀಠದಲ್ಲಿ ಈ ವಿಚಾರಣೆ ನಡೆಯುತ್ತಿದ್ದು, ನ್ಯಾಯಾಧೀಶರು ಪ್ರಕರಣದ ವಿಳಂಬಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದಾದ ಬಳಿಕ ನ್ಯಾಯಾಲಯಕ್ಕೆ ಉತ್ತರಿಸಿದ ಡಿಜಿ ಎರಡು ವಾರಗಳಲ್ಲಿ …

Read More »

ಮತ್ತೊಂದು ಟೀಮ್ ಖರೀದಿಸಿದ ಪ್ರೀತಿ ಝಿಂಟಾ…!

ಮುಂಬೈ : ಬಾಲಿವುಡ್ ನಟಿ ಪ್ರೀತಿ ಝಿಂಟಾ ಮತ್ತೊಂದು ಕ್ರಿಕೆಟ್ ಟೀಮ್ ಖರೀದಿಸಿದ್ದಾರೆ. ಐಪಿಎಲ್​ನಲ್ಲಿ ಕಿಂಗ್ಸ್ ಇಲೆವನ್ ಪಂಜಾಬ್​ನ ಒಡತಿಯಾಗಿರುವ ಪ್ರೀತಿ ಈಗ ಸ್ಟೆಲೆನ್ಬೋಸ್ಚ್ ಎಂಬ ಟೀಂನ ಮಾಲಿಕರಿಯಾಗಿದ್ದಾರೆ. ಇದು ದಕ್ಷಿಣ ಆಫ್ರಿಕಾದ ಟಿ20 ಗ್ಲೋಬಲ್​​​​​ ಲೀಗ್​ನ ತಂಡ. ಸುಮಾರು ಮೂರು ಕೋಟಿ ಮೌಲ್ಯಕ್ಕೆ ಈ ತಂಡವನ್ನು ಪ್ರೀತಿ ಖರೀದಿಸಿದ್ದಾರೆ. ದಕ್ಷಿಣ ಆಫ್ರಿಕಾ ತಂಡದ ನಾಯಕ ಫಾಫ್ ಡು ಪ್ಲೆಸಿಸ್ ಪ್ರೀತಿ ತಂಡದ ಕ್ಯಾಪ್ಟನ್​. ದಕ್ಷಿಣ ಆಫ್ರಿಕಾ ಪ್ರಿಮಿಯರ್ ಲೀಗ್​ನಲ್ಲಿ …

Read More »

ಮೋಡಿ ಮಾಡುತ್ತಿದೆ ಶಾರೂಖ್​ – ಗೌರಿ ಖಾನ್​ ಹಳೇ ಫೋಟೋ

ಮುಂಬೈ : ಲವ್, ಬ್ರೇಕ್​ ಅಪ್​ ಬಾಲಿವುಡ್​ನಲ್ಲಿ ಇತ್ತೀಚಿನ ದಿನಗಳಲ್ಲಿ ಕಾಮನ್​. ಆದರೆ, ಇಂತಹ ಪರಿಸ್ಥಿತಿಯಲ್ಲೂ ಕೆಲವೊಂದು ಜೋಡಿ ಮಾದರಿ ಜೀವನ ನಡೆಸುತ್ತಿದೆ. ಅದರಲ್ಲಿ ಶಾರೂಖ್ ಖಾನ್ ಮತ್ತು ಗೌರಿ ದಂಪತಿ ಕೂಡಾ ಒಬ್ಬರು. 1991ರಲ್ಲಿ ಇವರಿಬ್ಬರು ಮದುವೆಯಾಗಿದ್ದರು. ಇವರ ಸುಖದಾಂಪತ್ಯ ಈಗಲೂ ಅದೇ ಖುಷಿಯಲ್ಲಿ ಸಾಗುತ್ತಿದೆ. ದಂಪತಿಯ ಪ್ರೀತಿಗೆ ಎಲ್ಲರೂ ಮೆಚ್ಚಿಕೊಂಡಿದ್ದಾರೆ. ಈ ನಡುವೆ, ಗೌರಿ ಖಾನ್ ತಮ್ಮ ಹಳೆಯ ದಿನಗಳನ್ನು ಮತ್ತೆ ನೆನಪಿಸಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಹಳೇ …

Read More »

ಸೋನು ಸೂದ್​ ಹೈಫೈ ಲೈಫ್​ ಹೇಗಿದೆ ಗೊತ್ತಾ…?

ಮುಂಬೈ : ಸೋನು ಸೂದ್​​​ ಬಾಲಿವುಡ್​​​​​​ ಸೇರಿದಂತೆ ಹಲವು ಚಿತ್ರರಂಗದ ಗಮನ ಸೆಳೆದವರು. ತನ್ನ ಅಭಿನಯದ ಮೂಲಕವೇ ಹೆಸರು ಗಳಿಸಿದವರು ಇವರು. ಪ್ರತಿಭೆ ಇವರಿಗೆ ಖ್ಯಾತಿ ಮತ್ತು ಸಂಪತ್ತು ಎರಡನ್ನೂ ಕೊಟ್ಟಿದೆ. ಆ ನಿಟ್ಟಿನಲ್ಲಿ ಸೂದ್​ ತುಂಬಾ ಅದೃಷ್ಟವಂತ. ಹೀಗಾಗಿ, ಐಷಾರಾಮಿ ಜೀವನವನ್ನು ಸೂದ್ ನಡೆಸುತ್ತಿದ್ದಾರೆ. ಈ ಫೋಟೋ ನೋಡಿ. ಇದು ವಿಮಾನದ ಬಿಸಿನೆಸ್ ಕ್ಲಾಸ್​​​​​ನಲ್ಲಿ ಸೂದ್ ಪ್ರಯಾಣಿಸುತ್ತಿರುವ ದೃಶ್ಯ. ಈ ಚಿತ್ರದಲ್ಲಿ ಒಂದು ದೊಡ್ಡ ಟಿವಿ ಜೊತೆಗೆ ಇಂಟರ್​ನೆಟ್​ …

Read More »

‘ಮದುವೆ ಅಂದರೇನೆ ದೊಡ್ಡ ಪ್ರಾಬ್ಲಂ…!’

ಮುಂಬೈ : ಕಂಗನಾ ರಾಣಾವತ್​ ವಿವಾದಗಳಿಂದಲೇ ಹೆಸರು ಮಾಡಿದಾಕೆ. ಕೇರಫ್​ ಕಾಂಟ್ರವರ್ಸಿ ಈಕೆ. ಏನಾದರೊಂದು ಹೇಳಿಕೆ ಕೊಟ್ಟು ಸದಾ ಸುದ್ದಿಯಲ್ಲಿ ಇರುತ್ತಾರೆ ಕಂಗನಾ. ಇಂತಹ ಕಂಗನಾ ಈಗ ಮದುವೆ ಬಗ್ಗೆಯೂ ಮಾತನಾಡಿದ್ದಾರೆ… ಯಾರ್ರೀ ಮದುವೆಯಾಗ್ತಾರೆ. ಮದ್ವೆ ಅಂದ್ರೇನೆ ದೊಡ್ಡ ಪ್ರಾಬ್ಲಂ ಅನ್ನೋ ಅರ್ಥದಲ್ಲಿ ಕಂಗನಾ ಮಾತನಾಡಿ ಅಚ್ಚರಿ ಮೂಡಿಸಿದ್ದಾರೆ… ಬಾಲಿವುಡ್​ ನಟಿ ಕಂಗನಾ ಒಂದಾ ಅಭಿನಯದ ಮೂಲಕ ಸುದ್ದಿಯಾಗ್ತಾರೆ, ಇಲ್ಲಾ ವಿವಾದದ ಮೂಲಕ ಸುದ್ದಿಯಲ್ಲಿರುತ್ತಾರೆ… ಪ್ರತಿಭೆ ಮತ್ತು ವಿವಾದ ಎರಡನ್ನೂ …

Read More »

ನೀವ್​ ಏನೇ ಹೇಳಿ ನಾನು ತಲೆನೇ ಕೆಡಿಸಿಕೊಳ್ಳಲ್ಲ : ಬಿಕಿನಿ ಟ್ರೋಲ್​ಗೆ ತಾಪ್ಸಿ ತಪರಾಕಿ

ಮುಂಬೈ : ನಟಿ ತಾಪ್ಸಿ ಪನ್ನು ಖಡಕ್​ ವ್ಯಕ್ತಿತ್ವದ ಹುಡುಗಿ. ಅನಿಸಿದ್ದನ್ನು ನೇರವಾಗಿ ಹೇಳುವ ಗಟ್ಟಿಗತ್ತಿ ಇವರು. ಇವರು ನಿರ್ವಹಿಸಿದ್ದ ಪಾತ್ರಗಳು ಕೂಡಾ ಬಹುತೇಕ ಅಂತವುಗಳೇ. ಈ ಖಡಕ್ ವ್ಯಕ್ತಿತ್ವದಿಂದ ತಾಪ್ಸಿ ವಿವಾದಕ್ಕೆ ಗುರಿಯಾಗಿದ್ದೂ ಇದೆ. ಸದ್ಯ  ತಾಪ್ಸಿ ಜುಡ್ವ 2 ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದ ಹಾಡಿನಲ್ಲಿ ಬಿಕಿನಿಯಲ್ಲೂ ಕಾಣಿಸಿಕೊಂಡಿದ್ದಾರೆ. ಆದರೆ, ತಾಪ್ಸಿಯ ಬಿಕಿನಿ ಅವತಾರ ಟ್ವಿಟರ್​ನಲ್ಲಿ ಅವರ ಅಭಿಮಾನಿಗಳ ಕೆಂಗಣ್ಣಿಗೂ ಗುರಿಯಾಗಿದೆ. ಆದರೆ, ಈ ಟೀಕೆಗೆ ಗೋಲಿ …

Read More »

ಕಣ್ ಕಣ್ಣ ಸಲುಗೆ… : ವಿರಾಟ್ ಅನುಷ್ಕಾ ರೊಮ್ಯಾಂಟಿಕ್​ ಫೋಟೋ : ಕೊಹ್ಲಿಯ ಅಭಿಮಾನಿ ಯುವತಿಯರಿಗೆ ಹೊಟ್ಟೆಯುರಿ ಪಕ್ಕಾ!

ಮುಂಬೈ : ಕ್ರಿಕೆಟಿಗ ವಿರಾಟ್ ಕೊಹ್ಲಿ ಮತ್ತು ನಟಿ ಅನುಷ್ಕಾ ಶರ್ಮಾ ನಡುವಣ ಪ್ರೀತಿ ಪ್ರೇಮ ಪ್ರಯಣ ಹಳೆಯ ಸುದ್ದಿ. ಬಹಿರಂಗವಾಗಿ ಇವರಿಬ್ಬರು ತಮ್ಮ ಪ್ರೀತಿಯ ಬಗ್ಗೆ ಮಾತನಾಡದೇ ಇದ್ದರೂ ಸಾರ್ವಜನಿಕವಾಗಿ ಒಟ್ಟಾಗಿ ಕಾಣಿಸಿಕೊಳ್ಳುವ ಮೂಲಕ ಈ ಜೋಡಿ ತನ್ನ ಪ್ರೀತಿಯನ್ನು ಸಾರುತ್ತಿದೆ. ಹೀಗಾಗಿ, ಸಹಜವಾಗಿಯೇ ಇವರಿಬ್ಬರ ಫೋಟೋ ವೈರಲ್​ ಆಗುತ್ತವೆ. ಸದ್ಯ ಮತ್ತೊಂದು ಫೋಟೋ ವೈರಲ್ ಆಗಿದ್ದು, ಕೊಂಚ ರೊಮ್ಯಾಂಟಿಕ್ ಆಗಿಯೂ ಇದೆ. ಈ ಫೋಟೋ ನೋಡಿದಾಗ ವಿರಾಟ್​​​​​ …

Read More »

ಸ್ಮಾರ್ಟ್​ ರೇಷನ್ ಕಾರ್ಡ್​​​​​ನಲ್ಲಿ ಕಾಜಲ್ ಅಗರ್​ವಾಲ್​ ಫೋಟೋ ಕಂಡು ಮಹಿಳೆ ತಬ್ಬಿಬ್ಬು…!

ಸೇಲಂ : ತಮಿಳಿನಲ್ಲಿ ಕಂದಾಯ ಇಲಾಖೆ ಮಾಡುತ್ತಿರುವ ಅವಾಂತರಕ್ಕೆ ಹಲವರು ಕಷ್ಟ ಅನುಭವಿಸುತ್ತಿದ್ದಾರೆ. ಕಂದಾಯ ಇಲಾಖೆ ರೇಷನ್ ಕಾರ್ಡ್​​ನ ಜಾಗಕ್ಕೆ ಸ್ಮಾರ್ಟ್ ಕಾರ್ಡ್​​ ನೀಡುತ್ತಿದೆ. ಈ ಸ್ಮಾರ್ಟ್​ ರೇಷನ್ ಕಾರ್ಡ್​​​​ಗಳಲ್ಲಿ ಸಾಕಷ್ಟು ಅವಾಂತರ ಆಗುತ್ತಿದೆ. ಕೆಲವರ ಹೆಸರು ಬದಲಾಗಿದ್ದರೆ, ಕೆಲವರ ವಿಳಾಸ ಏನೇನೋ ಇರುತ್ತದೆ. ತಂದೆಯ ಜಾಗದಲ್ಲಿ ಮಗನ ಹೆಸರು ಇರುತ್ತದೆ. ಹೀಗೆ ಇಲಾಖೆಯ ನಾನಾ ಯಡವಟ್ಟುಗಳಿಂದ ಜನ ಕಷ್ಟ ಅನುಭವಿಸುತ್ತಿದ್ದಾರೆ. ಇದೇ ರೀತಿಯ ಎಡವಟ್ಟಿನಿಂದ ಮಹಿಳೆಯೊಬ್ಬರು ತಬ್ಬಿಬ್ಬಾಗಿದ್ದಾರೆ. ಸೇಲಂನ …

Read More »

ಅನಿಲ್ ಕಪೂರ್​ ರೀತಿ ಕಾಣುವ ಇವರು ಯಾರು…? ನಟ ಅಲ್ಲ, ನಟಿ…!!!

ಮುಂಬೈ : ಬಾಲಿವುಡ್ ನಿರ್ದೇಶಕ ಫರಾಖಾನ್ ಇತ್ತೀಚೆಗೆ ತಮ್ಮ ಸಾಮಾಜಿಕ ಜಾಲತಾಣದಲ್ಲಿ ನಟ ಅನಿಲ್ ಕಪೂರ್​ರನ್ನು ಹೋಲುವ ವ್ಯಕ್ತಿಯೊಬ್ಬರ ಫೋಟೋ ಹಾಕಿದ್ದರು. ಮತ್ತು ಇದು ಯಾರು ಅಂತ ಗೆಸ್ ಮಾಡಿ ಎಂದೂ ಫರಾ ಅದಕ್ಕೆ ಕ್ಯಾಪ್ಶನ್ ಕೂಡಾ ಹಾಕಿದ್ದರು. ಈ ಫೋಟೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್ ಆಗಿದೆ. GUESS WHO?? #lipsingbattle is just going bonkers!! A post shared by Farah Khan Kunder …

Read More »

ತಮಿಳಿನ ಈ ಖ್ಯಾತ ನಟ ಯಾರು ಅಂತ ಗುರುತಿಸುತ್ತೀರಾ…?

ಚೆನ್ನೈ : ಕಾಲಿವುಡ್​ನಲ್ಲಿ ವಿಜಯ್​ ಸೇತುಪತಿ ಒಳ್ಳೆಯ ಕಲಾವಿದ. ಇತ್ತೀಚಿನ ದಿನಗಳಲ್ಲಿ ಹಲವು ಪ್ರಯೋಗಾತ್ಮಕ ಚಿತ್ರದಲ್ಲಿ ಅಭಿನಯಿಸಿದ ಗೆದ್ದವರು ವಿಜಯ್​ ಸೇತುಪತಿ. ಪಾತ್ರಕ್ಕೆ ಸಂಪೂರ್ಣ ಶರಣಾಗುವ ವಿಜಯ್​ ಕೆಲಸದ ವೈಖರಿಯೇ ಅದ್ಭುತ. ಮಾಧವನ್​ ಜೊತೆಗಿನ ವಿಕ್ರಮ್ ವೇದ ಚಿತ್ರದ ಸಕ್ಸಸ್ ಬಳಿಕ ವಿಜಯ್​ ಸೇತುಪತಿ ‘ಸೂಪರ್ ಡಿಲೆಕ್ಸ್​’ ಎಂಬ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರಕ್ಕೆ ಈ ಹಿಂದೆ ಅನೀತಿ ಕಥೈಗಲ್​ ಎಂದು ಹೆಸರಿಡಲಾಗಿತ್ತು. Shilpa of #SuperDeluxe pic.twitter.com/sD8FV2Ck9O — …

Read More »
error: Content is protected !!