Monday , January 22 2018
Home / Film News (page 33)

Film News

ಡಿಡಿಎಲ್‍ಜೆ ಟ್ರೈನ್ ಸ್ಟಂಟ್ ಮಾಡಲು ಹೋದ ರಣವೀರ್ : ಮುಂದೇನಾಯ್ತು ನೋಡಿ…

ಮುಂಬೈ : ಶಾರೂಖ್ ಮತ್ತು ಕಾಜೋಲ್ ಅಭಿನಯದ `ದಿಲ್ ವಾಲೇ ದುಲ್ಹಾನಿಯ ಲೇಜಾಯೆಂಗೆ’ ಚಿತ್ರದ ಕ್ಲೈಮ್ಯಾಕ್ಸ್ ಸೀನ್ ಇಂದಿಗೂ ಫೇಮಸ್. ರೈಲಿನ ಆ ಕೊನೆಯ ದೃಶ್ಯಗಳು ಚಿತ್ರ ನಿರ್ದೇಶಕರಿಗೆ ಒಂದು ಮಾರ್ಗ ಹಾಕಿಕೊಟ್ಟಿತ್ತು. ಇದರಿಂದ ಪ್ರಭಾವಿತರಾದ ಹಲವು ನಿರ್ದೇಶಕರು ಈ ದೃಶ್ಯವನ್ನು ಬೇರೆ ಬೇರೆ ಚಿತ್ರದಲ್ಲಿ ವಿಭಿನ್ನವಾಗಿ ನೀಡಿದ್ದಾರೆ. ಈ ದೃಶ್ಯವನ್ನು ಬಾಲಿವುಡ್ ನಟ ರಣವೀರ್ ಸಿಂಗ್ ಕೂಡಾ ಮಾಡಲು ಹೋಗಿದ್ದಾರೆ. ರಣವೀರ್ ತುಂಬಾ ಚೆನ್ನಾಗಿಯೇ ಹಾಸ್ಯಭರಿತವಾಗಿ ಈ ದೃಶ್ಯವನ್ನು …

Read More »

ಪಾಕಿಸ್ತಾನದಲ್ಲಿ ಶಾರೂಖ್ `ರಾಯಿಸ್’ ಚಿತ್ರ ಬ್ಯಾನ್

ಮುಂಬೈ : ಬಾಲಿವುಡ್ ನಟ ಶಾರೂಖ್ ಖಾನ್ ಅಭಿನಯದ `ರಾಯಿಸ್’ ಚಿತ್ರಕ್ಕೆ ಪಾಕಿಸ್ತಾನದಲ್ಲಿ ನಿರ್ಬಂಧ ಹೇರಲಾಗಿದೆ. ಭಾನುವಾರ ಪಾಕಿಸ್ತಾನದಲ್ಲಿ ಈ ಚಿತ್ರ ಬಿಡುಗಡೆ ಆಗಬೇಕಾಗಿತ್ತು. ಆದರೆ, ಸೋಮವಾರ ನಿರ್ಬಂಧದ ಆದೇಶ ಹೊರಬಿದ್ದಿದೆ. ಈ ಚಿತ್ರದಲ್ಲಿ ಮುಸ್ಲಿಮರನ್ನು ಕೆಟ್ಟದಾಗಿ ಚಿತ್ರಿಸಲಾಗಿದೆ ಎಂಬ ಕಾರಣಕ್ಕೆ ಪಾಕಿಸ್ತಾನದಲ್ಲಿ ಈ ಚಿತ್ರಕ್ಕೆ ನಿರ್ಬಂಧ ಹೇರಲಾಗಿದೆ ಎಂದು ಗೊತ್ತಾಗಿದೆ.

Read More »

ವಿಕ್ರಮ್ `ಸಾಮಿ 2’ ಚಿತ್ರದ ಪೋಸ್ಟರ್ ರಿಲೀಸ್

ಚೆನ್ನೈ : ತಮಿಳಿನ ಖ್ಯಾತನಟ `ಸಾಮಿ 2’ ಚಿತ್ರದ ಪೋಸ್ಟರ್ ರಿಲೀಸ್ ಆಗಿದೆ. ನಿರ್ಮಾಪಕ ಶಿಬು ಥಾಮಿನ್ಸ್ ಈ ಪೋಸ್ಟರ್ ರಿಲೀಸ್ ಮಾಡಿದ್ದಾರೆ. ಹರಿ ಈ ಚಿತ್ರ ನಿರ್ದೇಶನ ಮಾಡುತ್ತಿದ್ದಾರೆ. 2003ರ ಸೂಪರ್ ಹಿಟ್ ಸಾಮಿ ಚಿತ್ರದ ಎರಡನೇ ಭಾಗ ಇದಾಗಿದೆ. ಸಾಮಿ ಚಿತ್ರದಲ್ಲಿ ವಿಕ್ರಮ್ ಖಡಕ್ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಇದು ಜನರಿಗೂ ಸಾಕಷ್ಟು ಇಷ್ಟ ಆಗಿತ್ತು. ಇನ್ನು, ಈ ಹೊಸ ಚಿತ್ರದ ಶೂಟಿಂಗ್ ಏಪ್ರಿಲ್‍ನಿಂದ ಆರಂಭವಾಗುವ …

Read More »

ಸಂಜಯ್ ದತ್ ವಿರುದ್ಧ ನೆರೆಮನೆಯವರಿಂದ ಪೊಲೀಸರಿಗೆ ದೂರು…! : ಯಾಕೆ ಗೊತ್ತಾ…?

ಮುಂಬೈ : ಬಾಲಿವುಡ್ ನಟ ಸಂಜಯ್ ದತ್ ವಿರುದ್ಧ ನೆರೆಮನೆಯವರು ಪೊಲೀಸರಿಗೆ ದೂರು ಕೊಟ್ಟಿದ್ದಾರೆ. ಜೋರು ಮ್ಯೂಸಿಕ್, ತಡರಾತ್ರಿ ಮನೆಯಲ್ಲಿ ನಡೆಯುವ ಪಾರ್ಟಿ, ಸದಾ ಗೌಜಿ ಗದ್ದಲ ಇವೆಲ್ಲಾ ದತ್‍ಗೆ ಸಂಕಷ್ಟ ತಂದೊಡ್ಡಿದೆ. ನೆರೆಮನೆಯ ಹಲವರು ಈಗ ದತ್ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ. ಕಳೆದ 20 ದಿನಗಳಿಂದ ದತ್ ಮನೆಯಲ್ಲಿ ಗೌಜಿ ಗದ್ದಲ ಇನ್ನೂ ಜೋರಾಗಿಯೇ ಇದೆ. ಇದರಿಂದ ನೆರೆ ಮನೆಯವರು ನಿದ್ದೆಗೆಟ್ಟಿದ್ದಾರೆ. ಹೀಗಾಗಿ, ಎರಡು ಬಾರಿ ಪೊಲೀಸರು …

Read More »

ಪವನ್ ಕಲ್ಯಾಣ್ `ಕಟಮರಯುಡು’ ಚಿತ್ರದ ಟೀಸರ್ ರಿಲೀಸ್

ಹೈದರಾಬಾದ್ : ಪವರ್‍ಸ್ಟಾರ್ ಪವನ್ ಕಲ್ಯಾಣ್ ಅಭಿನಯದ ಬಹುನಿರೀಕ್ಷಿತ `ಕಟಮರಯುಡು’ ಚಿತ್ರದ ಟೀಸರ್ ರಿಲೀಸ್ ಆಗಿದೆ. ಪವನ್ ಇಲ್ಲಿ ಜಬರ್‍ದಸ್ತ್ ಲುಕ್‍ನಲ್ಲಿ ಪವನ್ ಕಲ್ಯಾಣ್ ಕಾಣಿಸಿಕೊಂಡಿದ್ದಾರೆ. ಗ್ರಾಮದ ಮುಖಂಡನ ಗೆಟಪ್‍ನಲ್ಲಿ ಪವನ್ ಇಲ್ಲಿ ಮಿಂಚಿದ್ದಾರೆ. ಆನ್‍ಲೈನ್‍ನಲ್ಲಿ ಟೀಸರ್ ರಿಲೀಸ್ ಆದ ಕೆಲವೇ ಕ್ಷಣಗಳಲ್ಲಿ ಸಾಕಷ್ಟು ಅಭಿಮಾನಿಗಳು ಇದನ್ನು ವೀಕ್ಷಿಸಿದ್ದಾರೆ. ತಮಿಳಿನ `ವೀರಂ’ ಚಿತ್ರದ ರಿಮೇಕ್ ಇದು. ಇಲ್ಲಿ ಶೃತಿ ಹಾಸನ್ ಪವನ್ ಕಲ್ಯಾಣ್‍ಗೆ ನಾಯಕಿ ಆಗಿದ್ದಾರೆ.

Read More »

ಸಿಕ್ಸ್ ಪ್ಯಾಕ್‍ನಲ್ಲಿ ಅಜಿತ್

ಚೆನ್ನೈ: ಕಾಲಿವುಡ್ ನಟ ಅಜಿತ್ ಸಿಕ್ಸ್ ಪ್ಯಾಕ್‍ನಲ್ಲಿ ಮಿಂಚಿದ್ದಾರೆ. ರೋಮಾಂಚಕಾರಿ ಸಾಹಸ ಪ್ರಧಾನ `ವಿವೇಗಂ’ ಚಿತ್ರದಲ್ಲಿ ಅಜಿತ್ ಜಬರ್‍ದಸ್ತ್ ಲುಕ್‍ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರದ ಪೋಸ್ಟರನ್ನು ಅಜಿತ್ ತನ್ನ ಅಭಿಮಾನಿಗಳಿಗಾಗಿ ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದ್ದಾರೆ. ಈ ಚಿತ್ರದಲ್ಲಿ ಕಾಜೋಲ್ ಅಗರವಾಲ್ ಮತ್ತು ಅಕ್ಷರ ಹಾಸನ್ ವಿಶೇಷ ಪಾತ್ರದಲ್ಲಿ ನಟಿಸಿದ್ದಾರೆ.

Read More »

ಒಂದೇ ಚಿತ್ರದಲ್ಲಿ ಅಣ್ಣ ತಮ್ಮ : ತೆರೆ ಮೇಲೆ ಮಿಂಚಲಿದ್ದಾರೆ ಚಿರಂಜೀವಿ, ಪವನ್ ಕಲ್ಯಾಣ್

ಹೈದರಾಬಾದ್: ಟಾಲಿವುಡ್ ಅಣ್ಣ ತಮ್ಮ ಒಂದೇ ಚಿತ್ರದಲ್ಲಿ ಮಿಂಚಲಿದ್ದಾರೆ. ಮೆಗಾಸ್ಟಾರ್ ಚಿರಂಜೀವಿ ಮತ್ತು ಪವರ್ ಸ್ಟಾರ್ ಪವನ್ ಕಲ್ಯಾಣ್ ಸಿನೆಮಾವೊಂದರಲ್ಲಿ ಸ್ಕ್ರೀನ್ ಹಂಚಿಕೊಳ್ಳಲಿದ್ದಾರೆ. ತ್ರಿವಿಕ್ರಮ್ ಶ್ರೀನಿವಾಸ್ ಈ ಚಿತ್ರವನ್ನು ನಿರ್ದೇಶನ ಮಾಡಲಿದ್ದಾರೆ. ಈ ಹಿಂದೆ ಚಿರಂಜೀವಿ ಅಭಿನಯದ `ಶಂಕರ್ ದಾದಾ ಜಿಂದಾಬಾದ್’ ಸಿನೆಮಾದಲ್ಲಿ ಪವನ್ ಕಲ್ಯಾಣ್ ಅತಿಥಿ ಪಾತ್ರದಲ್ಲಿ ಮಿಂಚಿದ್ದರು. ಚಿರು ಮತ್ತು ಪವನ್ ಟಾಲಿವುಡ್‍ನಲ್ಲಿ ದೊಡ್ಡ ಹೆಸರು ಮಾಡಿದ್ದಾರೆ. ಇಬ್ಬರಿಗೂ ಪ್ರತ್ಯೇಕವಾಗಿ ಅಪಾರ ಅಭಿಮಾನಿ ಬಳಗವಿದೆ. ಪ್ರತ್ಯೇಕ ಪಕ್ಷಕಟ್ಟಿ …

Read More »

ಮತ್ತೊಮ್ಮೆ ಸೈಕೋಪಾತ್ ಪಾತ್ರದಲ್ಲಿ ನಾನಾ ಪಾಟೇಕರ್

ಮುಂಬೈ : ಸೈಕೋಪಾತ್ ಪಾತ್ರವನ್ನು ಅದ್ಭುತವಾಗಿ ಕೆಲವೇ ಕೆಲವು ನಟರು ಮಾತ್ರ ನಟಿಸಲು ಸಾಧ್ಯ. ಅಂತಹ ಕೆಲವೇ ಕೆಲವು ನಟರಲ್ಲಿ ಬಾಲಿವುಡ್‍ನ ನಾನಾ ಪಾಟೇಕರ್ ಕೂಡಾ ಒಬ್ಬರು. ಈ ಹಿಂದೆ ಪರಿಂದಾ ಮತ್ತು ಅಗ್ನಿಸಾಕ್ಷಿ ಚಿತ್ರಗಳಲ್ಲಿ ನಾನಾ ಮಾಡಿದ್ದ ನಟನೆ ಇಂದಿಗೂ ಎಲ್ಲರೂ ನೆನಪಿಸಿಕೊಳ್ಳುತ್ತಾರೆ. ಇದೀಗ ಮತ್ತೆ ನಾನಾ ಇಂತಹದ್ದೇ ಪಾತ್ರದೊಂದಿಗೆ ಮತ್ತೊಮ್ಮೆ ಬರುತ್ತಿದ್ದಾರೆ. `ವೆಡ್ಡಿಂಗ್ ಆನಿವರ್ಸರಿ’ ಚಿತ್ರದಲ್ಲಿ ನಾನಾ ಇಂತಹ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಚಿತ್ರದ ಟ್ರೇಲರ್ ರಿಲೀಸ್ ಆಗಿದೆ.

Read More »

ನಾನು ಕೀಟಲೆ ಮತ್ತು ಕಿರುಕುಳಕ್ಕೆ ಗುರಿಯಾಗಿದ್ದೆ : ಬಾಲಿವುಡ್ ನಟಿ ಇಲಿಯಾನ

ಮುಂಬೈ : ಚಿತ್ರರಂಗದಲ್ಲಿ ಲೈಂಗಿಕ ಕಿರುಕುಳವೇನು ಹೊಸತಲ್ಲ. ಹಲವು ನಟಿಯರು ಈ ಹಿಂಸೆಯನ್ನು ಅನುಭವಿಸಿದ್ದಾರೆ. ಈಗ ನಟಿ ಇಲಿಯಾನಾ ಕೂಡಾ ತಮಗಾದ ಅನುಭವಗಳನ್ನು ಹೇಳಿಕೊಂಡಿದ್ದಾರೆ. ನಾನು ಕೂಡಾ ಕೀಟಲೆ ಮತ್ತು ಕಿರುಕುಳಕ್ಕೆ ಗುರಿಯಾಗಿದ್ದೆ ಎಂದು ಇಲಿಯಾನ ಹೇಳಿದ್ದಾರೆ. ಅಲ್ಲದೆ, ಇದೊಂದು ಆಘಾತಕಾರಿ ಅನುಭವ ಎಂದೂ ಇವರು ವರ್ಣಿಸಿದ್ದಾರೆ. `ಐ ಆಮ್ ಲೀಕಿಂಗ್ ಮೈ ಎಕ್ಸ್‍ಸ್ ಡರ್ಟಿ ಮೆಸೇಜ್ ಆಂಡ್ ವಾಯ್ಸ್ ನೋಟ್ಸ್ ಬಿಕಾಸ್ ಹಿ ಇಸ್ ಲೆಫ್ಸ್ ಮೀ ನೋ …

Read More »

ನಾಗಚೈತನ್ಯ – ಸಮಂತಾ ನಿಶ್ಚಿತಾರ್ಥ

ಹೈದರಾಬಾದ್ : ಟಾಲಿವುಡ್‍ನ ಸುಂದರ ಜೋಡಿ ನಾಗಚೈತನ್ಯ ಮತ್ತು ಸಮಂತಾ ನಿಶ್ಚಿತಾರ್ಥ ನಡೆದಿದೆ. ಹೈದರಾಬಾದ್‍ನಲ್ಲಿ ಈ ಕಾರ್ಯಕ್ರಮ ನಡೆದಿದೆ. ಈ ನಿಶ್ಚಿತಾರ್ಥದ ಫೋಟೋವನ್ನು ನಾಗಚೈತನ್ಯ ತಂದೆ ನಾಗಾರ್ಜುನ ಟ್ವಿಟರ್‍ನಲ್ಲಿ ಹಾಕಿಕೊಂಡಿದ್ದಾರೆ.

Read More »
error: Content is protected !!