Tuesday , October 16 2018
ಕೇಳ್ರಪ್ಪೋ ಕೇಳಿ
Home / Film News (page 4)

Film News

ಶಾಹಿದ್ ಮೀರಾ ರಜಪೂತ್‍ಗೆ ಮನೆಗೆ ಹೊಸ ಅತಿಥಿ ಆಗಮನ…

ಮುಂಬೈ : ಬಾಲಿವುಡ್ ನಟ ಶಾಹಿದ್ ಕಪೂರ್ ಮತ್ತು ಮೀರಾ ರಜಪೂತ್ ದಂಪತಿ ಸಂಭ್ರಮದಲ್ಲಿದ್ದಾರೆ. ಈ ತಾರಾ ದಂಪತಿ ಮನೆಗೆ ಹೊಸ ಅತಿಥಿ ಆಗಮನವಾಗಿದೆ. ಮುದ್ದಾದ ಗಂಡು ಮಗುವಿಗೆ ಮೀರಾ ಜನ್ಮ ನೀಡಿದ್ದಾರೆ. ಹೀಗಾಗಿ, ಶಾಹಿದ್ ಮತ್ತು ಮೀರಾ ಕುಟುಂಬದಲ್ಲಿ ಸಂತಸ ಮನೆ ಮಾಡಿದೆ. ಈ ಮೂಲಕ ಶಾಹಿದ್ ಎರಡು ಮಕ್ಕಳ ತಂದೆಯಾಗಿದ್ದಾರೆ. ಹಿಂದುಜಾ ಆಸ್ಪತ್ರೆಯಲ್ಲಿ ಮೀರಾಗೆ ಹೆರಿಗೆ ಆಗಿದ್ದು, ತಾಯಿ ಮಗು ಇಬ್ಬರೂ ಆರೋಗ್ಯವಾಗಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

Read More »

ಪುಟಾಣಿಗಳೊಂದಿಗೆ ಚಾಲೆಂಜಿಂಗ್ ಸ್ಟಾರ್ ಖುಷಿ…

ಬೆಂಗಳೂರು : ಚಾಲೆಂಜಿಂಗ್ ಸ್ಟಾರ್ ದರ್ಶನ್‍ಗೆ ಕಾಡು, ಪ್ರಾಣಿಗಳೆಂದರೆ ಪಂಚಪ್ರಾಣ… ಹೀಗಾಗಿ, ಎಷ್ಟೇ ಬ್ಯುಸಿ ಇದ್ದರೂ ದಚ್ಚು ಸ್ವಚ್ಛ ಪರಿಸರದಲ್ಲಿ ಸುಂದರ ಕ್ಷಣಗಳನ್ನು ಅನುಭವಿಸುತ್ತಾರೆ. ಈ ಮೂಲಕ ನೆಮ್ಮದಿ ಕಾಣುತ್ತಾರೆ. ಈಗಲೂ ಅಷ್ಟೇ ದರ್ಶನ್ ತಮ್ಮ ಸ್ನೇಹಿತರೊಂದಿಗೆ ಅರಣ್ಯದಲ್ಲಿ ಒಂದು ರೌಂಡ್ಸ್ ಹಾಕಿದ್ದಾರೆ. ಕಬಿನಿ ಜಲಾಶಯಕ್ಕೆ ಭೇಟಿ ನೀಡಿದ ದರ್ಶನ್ ಅಲ್ಲಿನ ಸುತ್ತಮುತ್ತಲಿನ ಪ್ರದೇಶವನ್ನು ತಮ್ಮ ಕ್ಯಾಮೆರಾದಲ್ಲಿ ಸೆರೆ ಹಿಡಿದ್ದಾರೆ. ಜೊತೆಗೆ, ಬಣ್ಣಿಸಲೇ ಸಾಧ್ಯವಿಲ್ಲದ ಮಧುರ ಕ್ಷಣಗಳನ್ನು ಕಾಡಿನ ಸ್ವಚ್ಛ …

Read More »

ಅಲಿಯಾಗೆ ಭಾವಿ ಮಾವನಿಂದ ಗ್ರೀನ್‍ಸಿಗ್ನಲ್…?

ಮುಂಬೈ : ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಬಿ ಟೌನ್‍ನ ಪ್ರಣಯ ಪಕ್ಷಿಗಳು ಎಂಬುದು ಹಳೆಯ ಸುದ್ದಿ. ಇವರಿಬ್ಬರ ಮದುವೆಯ ಸಿದ್ಧತೆಗಳೂ ನಡೆಯುತ್ತಿದೆ ಎಂಬುದೂ ಕೂಡಾ ಈ ಹಿಂದೆಯೇ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು. ಇದಕ್ಕೆ ಪೂರಕವೆಂಬಂತೆ ರಣವೀರ್ ತಂದೆ ತಾಯಿಗಳಾದ ನೀತೂ ಮತ್ತು ರಿಶಿ ಕಪೂರ್ ಕೂಡಾ ಅಲಿಯಾ ತಮ್ಮ ಮನೆ ಸೊಸೆ ಆಗಿ ಬರುವುದಕ್ಕೆ ಖುಷಿ ವ್ಯಕ್ತಪಡಿಸಿದ್ದರು. ಅದೂ ಅಲ್ಲದೆ, ನೀತೂ ಮತ್ತು ಆಲಿಯಾ ತುಂಬಾ ಆಪ್ತವಾಗಿದ್ದು, …

Read More »

ಸ್ಯಾಂಡಲ್‍ವುಡ್‍ಗೆ ಬ್ರಿಟಿಷ್ ನಟನ ಭರ್ಜರಿ ಎಂಟ್ರಿ…

ಬೆಂಗಳೂರು : ಬ್ರಿಟಿಷ್ ನಟ ಡ್ಯಾನಿ ಸಪನಿ ಸ್ಯಾಂಡಲ್‍ವುಡ್‍ಗೆ ಎಂಟ್ರಿ ಕೊಟ್ಟಿದ್ದಾರೆ. ತಾರಕಾಸುರ ಚಿತ್ರದ ಮೂಲಕ ಡ್ಯಾನಿ ಕನ್ನಡಕ್ಕೆ ಬಂದಿದ್ದಾರೆ. ತಲಕಾಡು ಸೇರಿದಂತೆ ಹಲವು ಭಾಗಗಳಲ್ಲಿ ಡ್ಯಾನಿ ಈ ಚಿತ್ರದ ಶೂಟಿಂಗ್‍ನಲ್ಲಿ ಪಾಲ್ಗೊಂಡಿದ್ದಾರೆ. ರಥಾವರ ಖ್ಯಾತಿಯ ಚಂದ್ರಶೇಖರ್ ಬಂಡೀಪುರ ತಾರಕಾಸುರ ಚಿತ್ರವನ್ನು ರಚಿಸಿ ನಿರ್ದೇಶನ ಮಾಡುತ್ತಿದ್ದಾರೆ. ವೈಭವ್ ಈ ಚಿತ್ರದ ನಾಯಕನಾಗಿದ್ದಾರೆ. ಇನ್ನು, ಈ ಚಿತ್ರದ ಒಂದು ಹಾಡಿಗೆ ನಟ ಶಿವರಾಜ್‍ಕುಮಾರ್ ಅವರು ಕೂಡಾ ಧ್ವನಿಯಾಗಿದ್ದಾರೆ. ಈ ಹಾಡು ಕೂಡಾ …

Read More »

ಟ್ರೋಲ್ ಮಾಡುತ್ತಿರುವವರಿಗೆ ಸಮೀರ್ ಆಚಾರ್ಯ ಉತ್ತರ…

ಬೆಂಗಳೂರು : ಬಿಗ್‍ಬಾಸ್ ಸ್ಪರ್ಧಿ ಸಮೀರ್ ಆಚಾರ್ಯ ಇತ್ತೀಚಿನ ದಿನಗಳಲ್ಲಿ ಭಾರೀ ಟ್ರೋಲ್‍ಗೆ ಗುರಿಯಾಗಿದ್ದಾರೆ. ಕನ್ನಡದ ಕೋಟ್ಯಾಧಿಪತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಸಮೀರ್ ಆಚಾರ್ಯ ತಮ್ಮ ಪತ್ನಿಗೆ ಹೇಳಿದ್ದ ಮಾತು ಸಖತ್ ಟ್ರೋಲ್ ಆಗುತ್ತಿದೆ. ಸಾಕಷ್ಟು ನೆಟ್ಟಿಗರು ಸಮೀರ್ ಆಚಾರ್ಯರ ಕಾಳೆದಿದ್ದಾರೆ. ಇದೀಗ, ಈ ಎಲ್ಲಾ ಟ್ರೋಲ್, ಆಕ್ಷೇಪಗಳಿಗೆ ಸ್ವತಃ ಸಮೀರ್ ಆಚಾರ್ಯ ಅವರೇ ಉತ್ತರ ಕೊಟ್ಟಿದ್ದಾರೆ. ತಮ್ಮ ಫೇಸ್‍ಬುಕ್‍ನಲ್ಲಿ ವೀಡಿಯೋವನ್ನು ಹಾಕಿರುವ ಸಮೀರ್ ಆಚಾರ್ಯ ತಾನು ಪತ್ನಿಯನ್ನು ಎಷ್ಟು ಪ್ರೀತಿ …

Read More »

ಬಾಲಿವುಡ್‍ನ `ಕಿರಿಕ್ ಪಾರ್ಟಿ’ ಟೀಮ್ ಸೇರಿದ ಜಾಕ್ವೆಲಿನ್ ಫರ್ನಾಂಡೀಸ್

ಮುಂಬೈ : ಕನ್ನಡದ ಸೂಪರ್ ಹಿಟ್ ಚಿತ್ರ ಕಿರಿಕ್ ಪಾರ್ಟಿ ಪರಭಾಷೆಗೆ ಹೋಗ್ತಿರೋದು ಹಳೇ ವಿಷಯ. ಇದೇ ಚಿತ್ರ ಈಗ ಬಾಲಿವುಡ್‍ನಲ್ಲೂ ಸದ್ದು ಮಾಡಲು ಹೊರಟಿದೆ. ಕಾರ್ತಿಕ್ ಆರ್ಯನ್ ಈ ಚಿತ್ರದ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಕನ್ನಡದಲ್ಲಿ ರಕ್ಷಿತ್ ಶೆಟ್ಟಿ ನಿರ್ವಹಿಸಿದ್ದ ಪಾತ್ರಕ್ಕೆ ಕಾರ್ತಿಕ್ ಜೀವ ತುಂಬಲಿದ್ದಾರೆ. ಆದರೆ, ಕನ್ನಡದಲ್ಲಿ ರಶ್ಮಿಕಾ ಮಂದಣ್ಣ ಮಾಡಿದ್ದ ಪಾತ್ರವನ್ನು ಹಿಂದಿಯಲ್ಲಿ ಯಾರು ಮಾಡ್ತಾರೆ ಎಂಬ ಪ್ರಶ್ನೆ ಇಷ್ಟು ದಿನ ಎಲ್ಲರಲ್ಲೂ ಇತ್ತು. ಈಗ …

Read More »

ಗೊಂಬೆಗಳೊಂದಿಗೆ ಶ್ರೀಯಾ ಮಸ್ತಿ : ಇಲ್ಲಿದೆ ವೀಡಿಯೋ

ಮುಂಬೈ : ಬಣ್ಣದ ಲೋಕದಲ್ಲಿ ಮಿಂಚುತ್ತಿರುವ ಪ್ರತಿಯೊಬ್ಬರು ಇತ್ತೀಚಿನ ದಿನಗಳಲ್ಲಿ ತಮ್ಮ ಬದುಕಿನ ಅಪೂರ್ವ ಕ್ಷಣಗಳಲ್ಲಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಖುಷಿಯ ಸಂದರ್ಭದ ಬಗ್ಗೆ ವೀಡಿಯೋ, ಫೋಟೋ ಅಪ್‍ಲೋಡ್ ಮಾಡ್ತಾರೆ. ಸದ್ಯ ಸೌತ್ ಸಿನೆಮಾ ಬ್ಯೂಟಿ ಶ್ರೀಯಾ ಕೂಡಾ ಹೀಗೆ ತಮ್ಮ ಖುಷಿಯ ದಿನಗಳನ್ನು ಕಳೆಯುತ್ತಿದ್ದು, ಅಂತಹ ವೀಡಿಯೋವೊಂದನ್ನು ಸಾಮಾಜಿಕ ಜಾಲತಾಣಕ್ಕೆ ಅಪ್‍ಲೋಡ್ ಮಾಡಿದ್ದಾರೆ. Memories A post shared by @ shriya_saran1109 on Sep 1, 2018 …

Read More »

ಜಗ್ಗೇಶ್ ಜೊತೆಗಿರುವ ಈ ನಟ ಯಾರು ಅಂತ ಹೇಳ್ತೀರಾ…?

ಬೆಂಗಳೂರು : ನವರಸ ನಾಯಕ ಜಗ್ಗೇಶ್ ತಮ್ಮ ಟ್ವಿಟರ್‍ನಲ್ಲಿ ಹಳೇ ಫೋಟೋವನ್ನು ಶೇರ್ ಮಾಡಿದ್ದಾರೆ. ಸರಿಸುಮಾರು 1984ರಲ್ಲಿ ತೆಗೆದಿರುವ ಫೋಟೋ ಇದು. ಆಗ ಜಗ್ಗೇಶ್ ಅವರ ಪ್ರಿಯತಮೆಯಾಗಿದ್ದ ಪರಿಮಳಾ ಅವರಿಗೆ ಪ್ರೇಮಪತ್ರಗಳನ್ನು ತಲುಪಿಸುತ್ತಿದ್ದವರು ಇದೇ ಹುಡುಗನಂತೆ… ಯಾರು ಗೊತ್ತಾ ಆ ಹುಡುಗ…? ಮತ್ಯಾರು ಅಲ್ಲ. ಜಗ್ಗೇಶ್ ಸಹೋದರ ಖ್ಯಾತ ನಟ ಕೋಮಲ್… ಪರಿಮಳಾ ಅವರೊಂದಿಗೆ ಜಗ್ಗೇಶ್ ಪ್ರೀತಿಗೆ ಬಿದ್ದ ಸಂದರ್ಭದಲ್ಲಿ ಅಣ್ಣನ ಪ್ರೀತಿಗೆ ಸಹಾಯ ಮಾಡಿದ್ದವರು ಇದೇ ಕೋಮಲ್. ಅದನ್ನು …

Read More »

ನಯನತಾರಾ ಚಿತ್ರಕ್ಕೆ ಆರ್ಥಿಕ ಸಂಕಷ್ಟ : ಬೆಳಗ್ಗೆ, ಮಧ್ಯಾಹ್ನದ ಶೋ ಕ್ಯಾನ್ಸಲ್…!

ಚೆನ್ನೈ : ಲೇಡಿ ಸೂಪರ್ ಸ್ಟಾರ್ ನಯನತಾರಾ ಅಭಿನಯದ ಬಹುನಿರೀಕ್ಷಿತ `ಇಮೈಕ್ಕಾ ನೋಡಿಗಲ್’ ಚಿತ್ರಕ್ಕೆ ಈಗ ಆರ್ಥಿಕ ಸಂಕಷ್ಟ ಎದುರಾಗಿದೆ. ಗುರುವಾರ ಈ ಚಿತ್ರ ರಿಲೀಸ್ ಆಗಬೇಕಾಗಿತ್ತು. ಎಲ್ಲಾ ಅಭಿಮಾನಿಗಳು ಮೊದಲೇ ಟಿಕೆಟ್ ಬುಕ್ ಮಾಡಿದ್ದರು. ಆದರೆ, ಕೊನೆಯ ಕ್ಷಣದಲ್ಲಿ ಚಿತ್ರದ ಶೋ ಕ್ಯಾನ್ಸಲ್ ಆಗಿದೆ. ತಮಿಳುನಾಡಿನಾದ್ಯಂತ ಬೆಳಗ್ಗೆ ಮತ್ತು ಮಧ್ಯಾಹ್ನದ ಎಲ್ಲಾ ಶೋಗಳು ರದ್ದಾಗಿದೆ. ಇದಕ್ಕೆ ಕಾರಣ ನಿರ್ಮಾಪಕರು ಮತ್ತು ಹಂಚಿಕೆದಾರರ ನಡುವಣ ಆರ್ಥಿಕ ಕಚ್ಚಾಟ. ನಾರ್ತ್ ಆರ್ಕಡ್, …

Read More »

ಡೈನಾಮಿಕ್ ನಿರ್ದೇಶಕಿ ವಿಧಿವಶ

ಹೈದರಾಬಾದ್ : ಹಿರಿಯ ಬರಹಗಾರ್ತಿ, ನಿರ್ದೇಶಕಿ ಬಿ.ಜಯಾ ವಿಧಿವಶರಾಗಿದ್ದಾರೆ. ಗುರುವಾರ ರಾತ್ರಿ 11 ಗಂಟೆ ಸುಮಾರಿಗೆ ಇವರು ಕೊನೆಯುಸಿರೆಳೆದಿದ್ದಾರೆ. ಹೃದಯಾಘಾತದಿಂದ ಹೈದರಾಬಾದ್‍ನ ಶ್ರೀನಗರದ ಕಾಲೋನಿಯಲ್ಲಿರೋ ನಿವಾಸದಲ್ಲಿ ಇವರು ನಿಧನರಾಗಿದ್ದಾರೆ. ಟಾಲಿವುಡ್‍ನ ಹಲವು ಸೂಪರ್‍ಹಿಟ್ ಚಿತ್ರಗಳನ್ನು ನಿರ್ದೇಶಿಸಿದ್ದ ಖ್ಯಾತಿ ಇವರದ್ದು. 2003ರಲ್ಲಿ `ಚಂಟಿಗಡು’ ಚಿತ್ರದ ಮೂಲಕ ಇವರು ನಿರ್ದೇಶಕಿಯಾಗಿ ಗಮನ ಸೆಳೆದಿದ್ದರು. ಈ ಚಿತ್ರ ಸೂಪರ್ ಹಿಟ್ ಆದ ಬಳಿಕ ಟಾಲಿವುಡ್‍ನ ಡೈನಾಮಿಕ್ ನಿರ್ದೇಶಕಿ ಎಂಬ ಖ್ಯಾತಿಗೆ ಇವರು ಪಾತ್ರರಾಗಿದ್ದರು. ಇದಾದ …

Read More »
error: Content is protected !!