Monday , January 22 2018
Home / Film News (page 5)

Film News

ರಣಬೀರ್​​​ಗೆ ಪದೇ ಪದೇ ಕರೆ ಮಾಡುತ್ತಿರುವ ಸಂಜಯ್​ ಪತ್ನಿ…! : ಕಾರಣ ಕೇಳಿದ್ರೆ ನಿಮ್ಗೆ ಶಾಕ್​ ಆಗ್ಬಹುದು, ನಗೂ ಬರಬಹುದು…!

ಮುಂಬೈ : ಬಾಲಿವುಡ್ ನಿರ್ದೇಶಕ ರಾಜ್​ಕುಮಾರ್ ಇರಾನಿ ಬಾಲಿವುಡ್​ ನಟ ಸಂಜಯ್​ ದತ್​ ಜೀವನವನ್ನು ಚಿತ್ರ ಮಾಡುತ್ತಿದ್ದಾರೆ. ರಣಬೀರ್ ಕಪೂರ್​​​​​​ ಸಂಜಯ್​ ದತ್​ ಪಾತ್ರದಲ್ಲಿ ಇಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರಕ್ಕೆ ಸಂಜು ಎಂದು ಹೆಸರೂ ಇಡಲಾಗಿದೆ. 2018 ರ ಬಹುನಿರೀಕ್ಷಿತ ಚಿತ್ರಗಳ ಸಾಲಿನಲ್ಲಿ ಸಂಜು ಕೂಡಾ ಇದೆ. ರಣಬೀರ್ ಕೂಡಾ ಸಂಜಯ್ ಪಾತ್ರಕ್ಕೆ ಸಾಕಷ್ಟು ಬೆವರಳಿಸಿದ್ದಾರೆ. ಆದರೆ, ಈ ಎಲ್ಲದರ ನಡುವೆ ಒಬ್ಬರು ಮಾತ್ರ ಈ ಚಿತ್ರದ ಬಗ್ಗೆ ತುಂಬಾ …

Read More »

ಇದು ಅಕ್ಷಯ್ ಕುಮಾರ್ ಪುತ್ರನ ಗರ್ಲ್​ಫ್ರೆಂಡಾ? : ಕ್ಯಾಮೆರಾ ಕಂಡೊಡನೆ ಓಡಿದ್ದೇಗೆ ಅಕ್ಷಯ್ ಪುತ್ರ ಆರವ್​…?

ಮುಂಬೈ : ಬಾಲಿವುಡ್​​ನ ಆಕ್ಷನ್ ಕಿಂಗ್ ಅಕ್ಷಯ್ ಕುಮಾರ್ ಪುತ್ರ ಮೊನ್ನೆ ರೆಸ್ಟೋರೆಂಟ್  ಬಳಿ ಕಾಣಿಸಿಕೊಂಡಿದ್ದರು. ಜೊತೆಗೆ ಒಂದಷ್ಟು ಫ್ರೆಂಡ್ಸ್​ ಕೂಡಾ ಇದ್ದರು. ಆದರೆ, ಇಷ್ಟು ದಿನ ಅಷ್ಟಾಗಿ ಬಹಿರಂಗವಾಗಿ ಕಾಣಿಸಿಕೊಳ್ಳದ ಅಕ್ಕಿ ಪುತ್ರನನ್ನು ಕಂಡ ಮಾಧ್ಯಮದವರು ಫೋಟೋ ಕ್ಲಿಕ್ಕಿಸಿದ್ದರು. ಕೆಲವರು ವೀಡಿಯೋ ಮಾಡಿದ್ರು. ಇದರಿಂದ ಟೆನ್ಶನ್ ಆದ ಆರವ್​ ತರಾತುರಿಯಲ್ಲಿ ಕಾರು ಸೇರಿಕೊಂಡಿದ್ದರು. ಇಷ್ಟು ಕಸರತ್ತು ಮಾಡಿದರೂ  ಮಾಧ್ಯಮಗಳಲ್ಲಿ ಹೆಡ್​ಲೈನ್​​ ಆಗುವುದನ್ನು ತಪ್ಪಿಸಿಕೊಳ್ಳಲಾಗಲಿಲ್ಲ… ಅಂದು ಸ್ನೇಹಿತರೊಂದಿಗೆ ಅರವ್ ಇಲ್ಲಿಗೆ …

Read More »

‘ಪದ್ಮಾವತಿ’ ಚಿತ್ರದಲ್ಲಿ ದೀಪಿಕಾ ತೊಟ್ಟ ಧಿರಿಸು ಎಷ್ಟು ಕೆ.ಜಿ ಇದೆ…?

ಮುಂಬೈ : ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಈಗ ಪದ್ಮಾವತಿ ಚಿತ್ರದ ಮೂಲಕ ಮತ್ತೆ ಕುತೂಹಲ ಮೂಡಿಸಿದ್ದಾರೆ. ಪದ್ಮಾವತಿ ಚಿತ್ರದ ಭರ್ಜರಿ ಟ್ರೇಲರ್ ಕೂಡಾ ಎಲ್ಲರ ಮನಗೆದ್ದಿದೆ. ಆದರೆ, ಈ ಚಿತ್ರದಲ್ಲಿ ದೀಪಿಕಾ ಧರಿಸಿರುವ ಭಾರ ಎಷ್ಟು ಎಂಬ ಚರ್ಚೆ ಈಗ ಶುರುವಾಗಿದೆ. ಪ್ರಾಚೀನ ಕತೆಯನ್ನು ಚಿತ್ರವಾಗಿಸುವಾಗ ಎದುರಾಗುವಂತಹ ಸಮಸ್ಯೆಗಳೇನು ಎಂಬುದಕ್ಕೂ ಈ ಚರ್ಚೆ ಒಂದು ಉತ್ತರವಾಗಿದೆ… ಬಾಲಿವುಡ್​ನ ಖ್ಯಾತ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ಪದ್ಮಾವತಿ ಚಿತ್ರದ …

Read More »

2.0 ಚಿತ್ರದಲ್ಲಿ ಆಮಿ ಜಾಕ್ಸನ್ ಪಾತ್ರ ರಿವೀಲ್​​…

ಚೆನ್ನೈ : ಸೂಪರ್​ ಸ್ಟಾರ್ ರಜನಿಕಾಂತ್ ಅಭಿನಯದ 2.0 ಚಿತ್ರ ಈಗಾಗಲೇ ಸಾಕಷ್ಟು ನಿರೀಕ್ಷೆ ಮೂಡಿಸಿದೆ. ಈ ಚಿತ್ರದಲ್ಲಿ ಆಮಿ ಜಾಕ್ಸನ್ ನಾಯಕಿಯಾಗಿದ್ದಾರೆ. ಆದರೆ, ಆಮಿಯ ಪಾತ್ರ ಯಾವುದು ಎಂಬ ಕುತೂಹಲ ಎಲ್ಲರಿಗೂ ಇತ್ತು. ಆದರೆ, ಈಗ ಈ ಕುತೂಹಲಕ್ಕೆ ಉತ್ತರ ಸಿಕ್ಕಿದೆ. #2point0 song shoot starts today pic.twitter.com/n2rT4WSh5q — Shankar Shanmugham (@shankarshanmugh) October 11, 2017 ಆಮಿ ಈ ಚಿತ್ರದಲ್ಲಿ ರೋಬೋಟ್ ಪಾತ್ರವನ್ನೇ ಮಾಡಲಿದ್ದಾರೆ. …

Read More »

‘ಅಮ್ಮೇರ್ ಪೊಲೀಸಾ’ ಚಿತ್ರದ ಶೂಟಿಂಗ್ ಶುರು

ಮಂಗಳೂರು : ಕೋಸ್ಟಲ್​ವುಡ್​​ನ ಸ್ಟಾರ್ ಡೈರೆಕ್ಟರ್​ ಕೆ.ಸೂರಜ್ ಶೆಟ್ಟಿ ನಿರ್ದೇಶನದ ‘ಅಮ್ಮೇರ್ ಪೊಲೀಸಾ’ ಚಿತ್ರದ ಶೂಟಿಂಗ್ ಭರದಿಂದ ಸಾಗಿದೆ. ಮುಡಿಪು, ಇರಾ ಸೇರಿದಂತೆ ದಕ್ಷಿಣ ಕನ್ನಡದ ಪ್ರಮುಖ ಜಾಗದಲ್ಲಿ ಚಿತ್ರದ ಶೂಟಿಂಗ್ ಸಾಗುತ್ತಿದೆ. ಇತ್ತೀಚೆಗಷ್ಟೇ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ‘ಅಮ್ಮೇರ್ ಪೊಲೀಸಾ’ ಚಿತ್ರದ ಮುಹೂರ್ತ ನಡೆದಿತ್ತು. ಈ ವೇಳೆ, ಕೋಸ್ಟಲ್​ವುಡ್​ನ ಹಲವು ಗಣ್ಯರು ಉಪಸ್ಥಿತರಿದ್ದರು. ಎಕ್ಕಸಕ, ಪಿಲಿಬೈಲ್ ಯಮುನಕ್ಕ ಚಿತ್ರಗಳ ಬಳಿಕ ‘ಅಮ್ಮೇರ್ ಪೊಲೀಸಾ’ ಚಿತ್ರವನ್ನು ಸೂರಜ್​ ಶೆಟ್ಟಿ …

Read More »

‘ಮೈ ನೇಮ್ ಇಸ್ ಅಣ್ಣಪ್ಪ’ ಚಿತ್ರಕ್ಕೆ ಮುಹೂರ್ತ

ಮಂಗಳೂರು : ತುಳುವಿನ ‘ಮೈ ನೇಮ್ ಇಸ್ ಅಣ್ಣಪ್ಪ’ ಚಿತ್ರದ ಮುಹೂರ್ತ ಕಟೀಲು ಶ್ರೀದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನಡೆದಿದೆ. ಅಕ್ಟೋಬರ್ 6 ರಂದು ಈ ಚಿತ್ರ ಸೆಟ್ಟೇರಿದೆ. ಮಯೂರ್ ಶೆಟ್ಟಿ ನಿರ್ದೇಶನದ ಈ ಚಿತ್ರವನ್ನು ರೋಹನ್ ಶೆಟ್ಟಿ ನಿರ್ಮಾಣ ಮಾಡುತ್ತಿದ್ದಾರೆ. ಮುಹೂರ್ತದ ಸಂದರ್ಭದಲ್ಲಿ ಚಿತ್ರತಂಡ ಮತ್ತು ಹಲವು ಗಣ್ಯರು ಉಪಸ್ಥಿತರಿದ್ದರು. ಮಂಜು ರೈ, ಶುಭಾ ಶೆಟ್ಟಿ, ನವೀನ್ ಡಿ ಪಡೀಲ್, ಭೋಜರಾಜ್ ವಾಮಂಜೂರ್​, ಅರವಿಂದ ಬೋಳಾರ್​, ಸತೀಶ್​ ಬಂದಲೆ, ರಂಗಾಯಣ ರಘು, …

Read More »

ವೈರಲ್ ಆಯ್ತು ಖ್ಯಾತ ನಟಿಯ ಮದುವೆ ಡ್ಯಾನ್ಸ್

ಚೆನ್ನೈ : ತಮಿಳು ಫಿಲಂ ಇಂಡಸ್ಟ್ರಿಯಲ್ಲಿ ಒಂದಷ್ಟು ಹೆಸರು ಮಾಡಿರುವ ನಟಿ ಅಶ್ವತಿ ವಾರಿಯರ್​ ಮದುವೆ ಡ್ಯಾನ್ಸ್ ಈಗ ಸಖತ್ ವೈರಲ್ ಆಗಿದೆ. ಅಶ್ವತಿ ಅಭಿಷೇಕ್ ಉಣ್ಣಿಕೃಷ್ಣನ್​ರನ್ನು ವರಿಸಿದ್ದಾರೆ. ಈ ಮದುವೆ ಸಂದರ್ಭದಲ್ಲಿ ಸತಿ ಪತಿಗಳು ಸ್ನೇಹಿತರೊಂದಿಗೆ ಸಖತ್​​ ಸ್ಟೆಪ್ಸ್ ಹಾಕಿದ್ದಾರೆ. ‘ಐ ಆಮ್​ ಎ ಮಲ್ಲು’ ಎಂಬ ಹಾಡಿಗೆ ಇವರು ಕುಣಿದಿದ್ದು, ಇದೀಗ ವೈರಲ್ ಆಗಿದೆ. ಕಳೆದ ವರ್ಷ ಸಾಮಾಜಿಕ ಜಾಲತಾಣದಲ್ಲಿ ಈ ಹಾಡು ತುಂಬಾ ಹಿಟ್ ಆಗಿತ್ತು. …

Read More »

ಬಿಲ್ಡರ್ ಮೂಗಿಗೆ ಹೊಡೆದ ಹಾಸ್ಯ ನಟ ಸಂತಾನಂ ವಿರುದ್ಧ ಕೇಸ್​

ಚೆನ್ನೈ : ತಮಿಳಿನ ಖ್ಯಾತ ಹಾಸ್ಯ ನಟ ಸಂತಾನಂ ವಿರುದ್ಧ ಪ್ರಕರಣ ದಾಖಲಾಗಿದೆ. ಅಲ್ಲದೆ, ಇವರ ಜೊತೆ ಜಗಳ ಮಾಡಿರುವ ಬಿಲ್ಡರ್ ಷಣ್ಮುಗಸುಂದರಂ ವಿರುದ್ಧವೂ ದೂರು ದಾಖಲಿಸಿಕೊಳ್ಳಲಾಗಿದೆ. ಇಬ್ಬರು ಪರಸ್ಪರ ಹೊಡೆದಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ವಲಸರಾವಕ್ಕಂ ಪೊಲೀಸ್ ಠಾಣೆಯಲ್ಲಿ ಈ ದೂರು ದಾಖಲಾಗಿದೆ.​​ ಕಲ್ಯಾಣ ಮಂಟಪ ನಿರ್ಮಾಣ ವಿಚಾರದಲ್ಲಿ ಈ ಗಲಾಟೆ ನಡೆದಿದೆ. ಏನಿದು ಪ್ರಕರಣ? : ನಟ ಸಂತಾನಂ ಕಲ್ಯಾಣ ಮಂಟಪ ನಿರ್ಮಾಣ ಮಾಡುವ ಸಲುವಾಗಿ ಬಿಲ್ಡರ್​​ ಷಣ್ಮುಗ …

Read More »

ಎನ್​ಟಿಆರ್​ ಪಾತ್ರಕ್ಕೆ ಪ್ರಕಾಶ್​ ರೈ, ಲಕ್ಷ್ಮಿ ಪಾರ್ವತಿ ಪಾತ್ರದಲ್ಲಿ ರೋಜಾ…?

ಹೈದರಾಬಾದ್ : ರಾಮ್​ ಗೋಪಾಲ್​ ವರ್ಮಾ… ಟಾಲಿವುಡ್​ನ ಅತ್ಯದ್ಭುತ ನಿರ್ದೇಶಕ… ಹಲವು ಸೂಪರ್​ ಹಿಟ್ ಚಿತ್ರಗಳನ್ನು ಕೊಟ್ಟವರು ಇವರು… ಇಂತಹ ನಿರ್ದೇಶಕ ಇತ್ತೀಚಿನ ದಿನಗಳಲ್ಲಿ ಒಂದು ದೊಡ್ಡ ಬ್ರೇಕ್​ಗೆ ಹೆಣಗಾಡುತ್ತಿದ್ದಾರೆ. ಮಾಡಿದ ಕೆಲ ಚಿತ್ರಗಳು ಬಾಕ್ಸ್​ ಆಫೀಸ್​ನಲ್ಲಿ ಮೇಲೇಳುವುದಕ್ಕೇ ಕೇಳುತ್ತಿಲ್ಲ… ಆದರೆ, ವರ್ಮಾ ಯಾವತ್ತೂ ಸುದ್ದಿಯಲ್ಲಿ ಹಿಂದೆ ಬಿದ್ದಿಲ್ಲ. ಏನಾದರೊಂದು ವಿವಾದ ಮಾಡಿಕೊಂಡು ಸದಾ ಸುದ್ದಿಯಲ್ಲಿರುವ ವ್ಯಕ್ತಿ ವರ್ಮಾ. ವಿವಾದಗಳು ಇವರನ್ನು ಹುಡುಕಿಕೊಂಡು ಬರುತ್ತವಾ? ಅಥವಾ ಇವರೇ ವಿವಾದಗಳನ್ನು ಹುಡುಕಿಕೊಂಡು …

Read More »

75ರ ಖುಷಿಯಲ್ಲಿ ಬಾಲಿವುಡ್​​​​​​​​​​ ಷೆಹನ್​ ಷಾ

ಮುಂಬೈ : ಅಮಿತಾಭ್​ ಬಚ್ಚನ್​​… ಈ ಹೆಸರು ಕೇಳಿದ ತಕ್ಷಣ ಅಗಾಧ ಪ್ರತಿಭೆಯೊಂದು ಕಣ್ಣ ಮುಂದೆ ಸುಳಿದು ಹೋಗುತ್ತದೆ… ನೀಳಕಾಯ, ಅಪೂರ್ವ ಧ್ವನಿ ಅದು ಅಮಿತಾಭ್​ ಸಂಪತ್ತು… ಈ ಸಂಪತ್ತಿಗೆ ಇನ್ನಷ್ಟು ಬೆಲೆ ತಂದು ಕೊಟ್ಟದ್ದು ಪ್ರತಿಭೆ ಮತ್ತು ಶೃದ್ಧೆ, ಸಾಧಿಸುವ ಛಲ… ಭಾರತೀಯ ಚಿತ್ರರಂಗ ಕಂಡ ಮಹಾನ್ ನಟ ಇವರು. ಇಂತಹ ಅಮಿತಾಭ್ ಈಗ 75ನೇ ವಸಂತದ ಖುಷಿಯಲ್ಲಿದ್ದಾರೆ. 1942 ರ ಅಕ್ಟೋಬರ್​ 11 ಅಮಿತಾಭ್​ ಜನ್ಮ ದಿನ. …

Read More »
error: Content is protected !!