Monday , January 21 2019
ಕೇಳ್ರಪ್ಪೋ ಕೇಳಿ
Home / Film News (page 89)

Film News

ಕರೀನಾ – ಸೈಫ್ ದಂಪತಿಗೆ ಗಂಡು ಮಗು

ಮುಂಬೈ : ಬಾಲಿವುಡ್ ನಟಿ ಕರೀನಾ ಕಪೂರ್ ಖಾನ್ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಕರೀನಾ ಕಪೂರ್ ಅವರ ಸ್ನೇಹಿತ ಕರಣ್ ಜೋಹರ್ ಈ ವಿಷಯವನ್ನು ಮೊದಲು ಬಹಿರಂಗಪಡಿಸಿದ್ದಾರೆ. ಹೊಸ ಅತಿಥಿಯ ಆಗಮನದಿಂದ ಸೈಫ್ ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ. ಮಂಗಳವಾರ ಬೆಳಗ್ಗೆ 7.30ರ ಹೊತ್ತಿಗೆ ಕರೀನಾ ಅವರು ಮುಂಬಯಿನ ಬ್ರೀಜ್ ಕ್ಯಾಂಡಿ ಆಸ್ಪತ್ರೆಯಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಈ ಮಗುವಿಗೆ ತಮ್ಮ ಪ್ರತಿಷ್ಠೆಯ ರಾಜವಂಶಕ್ಕೆ ತಕ್ಕಂತೆ ತೈಮೂರ್ …

Read More »

ವಿಐಪಿ 2 : ಧನುಷ್, ಕಾಜೋಲ್, ಸೌಂದರ್ಯ ಫೋಟೋ ಶೂಟ್

ಚೆನ್ನೈ : ಧನುಷ್ ಅಭಿನಯದ `ವಿಐಪಿ 2’ ಚಿತ್ರದಲ್ಲಿ ಬಾಲಿವುಡ್ ನಟಿ ಕಾಜೋಲ್ ನಟಿಸುತ್ತಿದ್ದಾರೆ. ಈ ಚಿತ್ರದ ಶೂಟಿಂಗ್ ಕಾರ್ಯ ಮೊನ್ನೆ ಆರಂಭವಾಗಿದೆ. ಈ ನಡುವೆ, ಬಿಡುವಿನ ಸಮಯದಲ್ಲಿ ಧನುಷ್, ಕಾಜೋಲ್ ಸೌಂದರ್ಯ ರಜನಿಕಾಂತ್ ಫೋಟೋಗೆ ಪೋಸ್ ಕೊಟ್ಟಿದ್ದಾರೆ. ಕಾಜೋಲ್ 20 ವರ್ಷಗಳ ಬಳಿಕ ತಮಿಳು ಚಿತ್ರರಂಗಕ್ಕೆ ಮರಳಿದ್ದಾರೆ. ರಜನಿಕಾಂತ್ ಪುತ್ರಿ ಸೌಂದರ್ಯ ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ.

Read More »

ಅಮೀರ್ ಖಾನ್‍ಗೆ ರಜನಿಕಾಂತ್, ಚಿರಂಜೀವಿ ಜೊತೆ ನಟಿಸುವಾಸೆ

ಹೈದರಾಬಾದ್ : ಬಾಲಿವುಡ್ ನಟ ಅಮೀರ್ ಖಾನ್ ತನ್ನ ಬಹುದಿನಗಳ ಕನಸನ್ನು ಬಿಚ್ಚಿಟ್ಟಿದ್ದಾರೆ. ದಕ್ಷಿಣ ಭಾರತದ ಸೂಪರ್‍ಸ್ಟಾರ್‍ಗಳಾದ ರಜನಿಕಾಂತ್, ಚಿರಂಜೀವಿ, ಪವನ್ ಕಲ್ಯಾಣ್ ಜೊತೆ ತನಗೆ ನಟಿಸುವ ಆಸೆ ಇದೆ ಎಂದು ಅಮೀರ್ ಹೇಳಿದ್ದಾರೆ. ತಮ್ಮ ಚಿತ್ರ `ದಂಗಾಲ್’ನ ಪ್ರಮೋಷನ್‍ಗೆಂದು ಹೈದರಾಬಾದ್‍ಗೆ ಬಂದಿದ್ದ ಅಮೀರ್ ತನ್ನ ಈ ಮನದಿಂಗಿತವನ್ನು ವ್ಯಕ್ತಪಡಿಸಿದ್ದಾರೆ. ದಕ್ಷಿಣ ಭಾರತದಲ್ಲಿ ಯಾರೊಂದಿಗೆ ನಟಿಸಲು ನೀವು ಇಷ್ಟಪಡುತ್ತೀರಿ ಎಂಬ ಪ್ರಶ್ನೆಗೆ ಉತ್ತರಿಸಿದ ಅಮೀರ್ ಖಾನ್, `ತೆಲುಗು ಚಿತ್ರರಂಗದಲ್ಲಿ ನಾನು ಚಿರಂಜೀವಿ …

Read More »

ಸಿಂಬು ಈಗ ಸಂಗೀತ ನಿರ್ದೇಶಕ

ಚೆನ್ನೈ : ತಮಿಳಿನ ನಟ ಸಿಂಬು ಈಗ ಸಂಗೀತ ನಿರ್ದೇಶಕ. ಈಗಾಗಲೇ ಬಿಪ್ ಸಾಂಗ್ ಮೂಲಕ ಕುಖ್ಯಾತಿ ಗಳಿಸಿರುವ ಸಿಂಬು ಹಾಸ್ಯನಟ ಸಂತಾನಂ ಅಭಿನಯದ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡಲಿದ್ದಾರೆ. `ಸಕ್ಕ ಪೊದು ಪೊದು ರಾಜ’ ಚಿತ್ರಕ್ಕೆ ಸಿಂಬು ಸಂಗೀತ ನೀಡಲಿದ್ದಾರೆ. ಈ ಹಿಂದೆ ಸಿಂಬು ಹಲವು ಹಿಟ್ ಗೀತೆಗಳನ್ನು ಹಾಡಿದ್ದಾರೆ. ಆದರೆ, ಇದೇ ಮೊದಲ ಬಾರಿಗೆ ಸಂಗೀತ ನಿರ್ದೇಶನದತ್ತ ಸಿಂಬು ಮನಸ್ಸು ಮಾಡಿದ್ದಾರೆ. 

Read More »

ಪಾಕಿಸ್ತಾನದಲ್ಲಿ ಭಾರತ ಚಿತ್ರಗಳಿಗಿದ್ದ ನಿಷೇಧ ತೆರವು : ಡಿಸೆಂಬರ್ 19ರಿಂದ ಮತ್ತೆ ಪ್ರದರ್ಶನ

ನವದೆಹಲಿ : ಉರಿ ದಾಳಿಯ ಬಳಿಕ ಭಾರತ ಪಾಕಿಸ್ತಾನ ಗಡಿಯಲ್ಲಿ ನಡೆಯುತ್ತಿದ್ದ ಸಂಘರ್ಷದ ಪರಿಣಾಮ ಸ್ಥಗಿತವಾಗಿದ್ದ ಭಾರತೀಯ ಚಿತ್ರ ಪ್ರದರ್ಶನವನ್ನು ಮತ್ತೆ ಆರಂಭಿಸಲು ಪಾಕಿಸ್ತಾನ ನಿರ್ಧರಿಸಿದೆ. ಭಾರತದ ಸಿನೆಮಾಗಳ ಮೇಲೆ ಪಾಕಿಸ್ತಾನದ ವಿತರಕರು ಹೇರಿದ್ದ ಸ್ವಯಂ ನಿಷೇಧವನ್ನು ಅಂತ್ಯಗೊಳಿಸಲು ನಿರ್ಧರಿಸಿದ್ದು, ಡಿಸೆಂಬರ್ 19ರಿಂದ ಎಂದಿನಂತೆ ಭಾರತದ ಚಿತ್ರಗಳು ಪಾಕಿಸ್ತಾನದಲ್ಲೂ ಪ್ರದರ್ಶನವಾಗಲಿದೆ. ಸೆಪ್ಟಂಬರ್ ತಿಂಗಳಲ್ಲಿ ನಡೆದಿದ್ದ ಉರಿ ಉಗ್ರರ ದಾಳಿ ಬಳಿಕ ಬೆಳವಣಿಗೆಯ ಹಿನ್ನೆಲೆಯಲ್ಲಿ ಪಾಕಿಸ್ತಾನದಲ್ಲಿ ಭಾರತದ ಚಿತ್ರ ಪ್ರದರ್ಶನಕ್ಕೆ ವಿತರಕರು …

Read More »

ತಲಾ 57 : ಇಂಟರ್‍ನೆಟ್‍ನಲ್ಲಿ ಗಮನ ಸೆಳೆದಿದೆ ಅಜಿತ್ ಸ್ಟಂಟ್

ಚೆನ್ನೈ : ತಮಿಳಿನ ಖ್ಯಾತ ನಟ ಅಜಿತ್ ಮುಂದಿನ ಚಿತ್ರ `ತಲಾ 57′. ಶಿವ ಈ ಚಿತ್ರದ ನಿರ್ದೇಶಕ. ಇದೊಂದು ಹೈವೋಲ್ಟೇಜ್ ಆಕ್ಷನ್ ಚಿತ್ರ. ಅಜಿತ್ ಅಭಿಮಾನಿಗಳು ಈ ಚಿತ್ರವನ್ನು ಕಾತರದಿಂದ ಎದುರು ನೋಡುತ್ತಿದ್ದಾರೆ. ಇನ್ನು, ಈ ಚಿತ್ರದ ಸ್ಟಂಟ್ ಸೀನ್‍ಗೆ ಜನ ಫಿದಾ ಆಗಿದ್ದಾರೆ. ಅಜಿತ್ ಬೈಕ್ ಸ್ಟಂಟ್ ಹಾಲಿವುಡ್‍ನವರ ಗಮನ ಸೆಳೆದಿದೆ. ಬಗ್ಲೇರಿಯಾದಲ್ಲಿ ಈ ಸ್ಟಂಟ್ ಶೂಟಿಂಗ್ ಮಾಡಲಾಗಿದೆ. ಇನ್ನು, ನಟ ಅಜಿತ್ ಸ್ವತಃ ತಾನೇ ಸ್ಟಂಟ್ …

Read More »

ನೋಟು ನಿಷೇಧ ಉತ್ತಮ ನಡೆ, ಇದನ್ನು ಎಲ್ಲರೂ ಬೆಂಬಲಿಸಬೇಕು : ಅಮೀರ್ ಖಾನ್

ಮುಂಬೈ: 500, 1000 ರೂಪಾಯಿ ನೋಟು ನಿಷೇಧ ಮಾಡಿರುವ ಪ್ರಧಾನಿ ನರೇಂದ್ರ ಮೋದಿ ನಡೆ ಸ್ವಾಗತಾರ್ಹ. ಇದನ್ನು ದೇಶದ ಜನ ಬೆಂಬಲಿಸಬೇಕು ಎಂದು ಬಾಲಿವುಡ್ ನಟ ಅಮೀರ್ ಖಾನ್ ಪುನರುಚ್ಛರಿಸಿದ್ದಾರೆ. ಪ್ರಧಾನಿ ಒಳ್ಳೆಯ ಹೆಜ್ಜೆಯನ್ನೇ ಇಟ್ಟಿದ್ದಾರೆ. ಆದರೆ, ಜನರು ಇದರಿಂದ ಕೊಂಚ ಕಷ್ಟ ಅನುಭವಿಸುತ್ತಿದ್ದಾರೆ ನಿಜ. ಇದರ ಬಗ್ಗೆ ನನಗೆ ಬೇಸರವಿದೆ. ಆದರೆ, ಈ ಹೆಜ್ಜೆ ಉತ್ತಮವಾಗಿದ್ದು, ಎಲ್ಲರೂ ಇದನ್ನು ಬೆಂಬಲಿಸಬೇಕು ಎಂಬುದು ಅಮೀರ್ ಮಾತು. `ನೋಟು ನಿಷೇಧದಿಂದ ನನ್ನ …

Read More »

ರಣಬೀರ್ ಕಪೂರ್ ಈಗ ಸಂಜಯ್ ದತ್…! : ಆದರೆ, ದತ್‍ಗೆ ಕಪೂರ್ ಭೇಟಿಯಾಗುವುದು ಇಷ್ಟ ಇಲ್ಲ!

ಮುಂಬೈ : ಬಾಲಿವುಡ್ ನಟ ಸಂಜಯ್ ದತ್ ಜೀವನಕತೆ ಚಿತ್ರವಾಗಿ ಬರುತ್ತಿದೆ. ರಾಜ್‍ಕುಮಾರ್ ಇರಾನಿ ದತ್ ಜೀವನ ಕತೆಯನ್ನು ತೆರೆಗೆ ತರುತ್ತಿದ್ದಾರೆ. ಸ್ಕ್ರೀನ್‍ನಲ್ಲಿ ಸಂಜಯ್ ದತ್ ಪಾತ್ರದಲ್ಲಿ ಮಿಂಚಲಿರುವವರು ರಣಬೀರ್ ಕಪೂರ್. ಆದರೆ, ಸಂಜೂ ಯಾಕೋ ಸ್ವಲ್ಪ ನೊಂದಿದ್ದಾರೆ ಅಂತ ಕಾಣ್ತದೆ. ಯಾಕೆಂದರೆ, ರಣಬೀರ್ ದತ್‍ರನ್ನು ಭೇಟಿಯಾಗಲು ಬಯಸಿದರೂ ದತ್ ಯಾಕೋ ಸಮಯ ಕೊಡುತ್ತಿಲ್ಲ… ತಮ್ಮ ಚಿತ್ರದ ಬಗ್ಗೆ ದತ್ ಯಾಕೋ ಸ್ವಲ್ಪ ಕನ್‍ಫ್ಯೂಸ್ ಆದಾಗಿದೆ. ಈ ಬಗ್ಗೆ ಸಂಜೂನೇ …

Read More »

ಚಿರಂಜೀವಿ `ಶತಕರ್ಣಿ’ಯಂತಹ ಚಿತ್ರ ಮಾಡಲಿ : ಮೆಗಾಸ್ಟಾರ್‍ಗೆ ರಾಮ್‍ಗೋಪಾಲ್ ವರ್ಮಾ ಸಲಹೆ

ಹೈದರಾಬಾದ್ : ಮೆಗಾಸ್ಟಾರ್ ಚಿರಂಜೀವಿಗೆ ನಿರ್ದೇಶಕ ರಾಮ್‍ಗೋಪಾಲ್ ವರ್ಮಾ ಸಲಹೆ ನೀಡಿದ್ದಾರೆ. ಬಾಲಕೃಷ್ಣ ಅಭಿನಯದ `ಗೌತಮಿಪುತ್ರ ಶತಕರ್ಣಿ’ಯಂತಹ ಚಿತ್ರವನ್ನು ಚಿರಂಜೀವಿ ಮಾಡಬೇಕು ಎನ್ನುವುದು ರಾಮ್ ಮಾತು. ಮೆಗಾಸ್ಟಾರ್ ಚಿರಂಜೀವಿ ಅವರ ಅಪ್ಪಟ ಅಭಿಮಾನಿಗಳು, ಚಿರು ಗೌತಮಿಪುತ್ರ ಶತಕರ್ಣಿ, ಬಾಹುಬಲಿಯಂತಹ ಚಿತ್ರಗಳನ್ನು ಮಾಡಬೇಕು ಎಂದು ಬಯಸುತ್ತಾರೆ. ಈ ಮೂಲಕ ಚಿರಂಜೀವಿ ತೆಲುಗು ಚಿತ್ರರಂಗವನ್ನು ಇನ್ನೊಂದು ಘಟ್ಟಕ್ಕೆ ಕೊಂಡೊಯ್ಯಬೇಕು ಎಂಬುದು ರಾಮ್‍ಗೋಪಾಲ್ ಸಲಹೆ. ಅಲ್ಲದೆ, ಚಿರು ಅಪ್ಪಟ ಅಭಿಮಾನಿಗಳು ಇವರಿಗೆ ಇದೇ ರೀತಿ …

Read More »

ಶಾರೂಖ್, ಅಮೀರ್, ಸೈಫ್ ಹಿಂದೂ ಧರ್ಮ ಸ್ವೀಕರಿಸದಿದ್ದರೆ ಕಿಡ್ನ್ಯಾಪ್ ಮಾಡಿ ಮತಾಂತರ ಮಾಡುತ್ತೇನೆ : ಸ್ವಾಮಿ ಓಂ ವೀಡಿಯೋ

ಮುಂಬೈ : ಸ್ವಾಮಿ ಓಂ ಬಿಗ್‍ಬಾಸ್ 10ರ ಕುಖ್ಯಾತ ಸ್ಪರ್ಧಿ. ಯಾಕೆಂದರೆ, ಸ್ವಾಮಿ ಓಂ ಹಿನ್ನೆಲೆಯೇ ಅಂತಹದ್ದು. ಬರೀ ವಿವಾದಗಳಿಂದಲೇ ಸುದ್ದಿಯಾದವರು ಇವರು. ರಾಷ್ಟ್ರೀಯ ಸುದ್ದಿ ವಾಹಿನಿಯಲ್ಲಿ ಮಹಿಳೆ ಮೇಲೆ ಹಲ್ಲೆ ಮಾಡಿದ್ದು ಇವರೇ, ಸೈಕಲ್ ಕದ್ದ ಆರೋಪದಲ್ಲಿ ಸ್ವತಃ ತಮ್ಮನಿಂದಲೇ ಪೊಲೀಸ್ ಠಾಣೆಗೆ ದೂರು ಸಲ್ಲಿಕೆಯಾಗಿದ್ದು ಕೂಡಾ ಇದೇ ವ್ಯಕ್ತಿಯ ಮೇಲೆಯೇ… ಹೀಗಾಗಿ, ವಿವಾದಗಳೇ ಸ್ವಾಮಿ ಓಂ ಬದುಕು. ಇದೀಗ ಇದೇ ಸ್ವಾಮಿ ಓಂ ಬಾಲಿವುಡ್ ಕಲಾವಿದರಾದ ಶಾರೂಖ್ …

Read More »
error: Content is protected !!