Wednesday , March 27 2019
ಕೇಳ್ರಪ್ಪೋ ಕೇಳಿ
Home / Film News (page 90)

Film News

1 ಕೆಜಿ ಹೆರಾಯಿನ್‍ನನ್ನು ಶೂ ಒಳಗಿಟ್ಟುಕೊಂಡು ವಿಮಾನದಲ್ಲಿ ಹೋಗಿದ್ದರು ಸಂಜಯ್ ದತ್…! : ಇಲ್ಲಿದೆ ದತ್ ಮಾದಕ ವ್ಯಸನಿಯಾದ ಕತೆ

ಮುಂಬೈ : ಬಾಲಿವುಡ್ ನಟ ಸಂಜಯ್ ದತ್ ಜೀವನ ಯಾವುದೇ ಚಿತ್ರದ ಕತೆಗಿಂತ ಭಿನ್ನವಾಗಿಲ್ಲ. ಹೀಗಾಗಿಯೇ, ರಾಜ್‍ಕುಮಾರ್ ಇರಾನಿ ದತ್ ಜೀವನ ಕತೆಯನ್ನೇ ಚಿತ್ರ ಮಾಡಲು ಹೊರಟಿದ್ದಾರೆ…! ಜೈಲು ಜೀವನ, ಹೆತ್ತವರ ಅಗಲಿಕೆ, ಸಂಕಷ್ಟದ ದಿನಗಳು ಮತ್ತು ಮಾದಕ ವ್ಯಸನ… ಹೀಗೆ ಒಂದು ಕಾಲದಲ್ಲಿ ಏನೇನೋ ಆಗಿದ್ದ ದತ್ ಈಗ ಗಟ್ಟಿ ಮನುಷ್ಯ ಆಗಿದ್ದಾರೆ… ಇವೆಲ್ಲಾ ಅಂಶಗಳು ಇರಾನಿ ಚಿತ್ರದಲ್ಲಿ ಇರಬಹುದು… ಸಂಜಯ್ ಬಹಳ ಚಿಕ್ಕ ವಯಸ್ಸಿನಲ್ಲೇ ಮಾದಕ ವ್ಯಸನಿಯಾಗಿದ್ದರು. …

Read More »

ಜಯ ಆಪ್ತೆ ಶಶಿಕಲಾ ಬಗ್ಗೆ ಚಿತ್ರ ಮಾಡಲಿದ್ದಾರೆ ರಾಮ್‍ಗೋಪಾಲ್ ವರ್ಮಾ

ಮುಂಬೈ : ರಾಮ್‍ಗೋಪಾಲ್ ವರ್ಮಾ ರಾಜಕೀಯ ಮತ್ತು ಗ್ಯಾಂಗ್‍ಸ್ಟಾರ್‍ಗಳ ಚಿತ್ರ ಮಾಡುವುದರಲ್ಲಿ ಎಕ್ಸ್‍ಪರ್ಟ್. ಇದೀಗ ರಾಮ್‍ಗೋಪಾಲ್ ವರ್ಮಾಗೆ ತನ್ನ ಮುಂದಿನ ಚಿತ್ರಕ್ಕೆ ಕತೆ ಸಿಕ್ಕಿದೆ. ಈ ಬಾರಿ ರಾಮ್‍ಗೋಪಾಲ್ ಹೆಕ್ಕಿರುವುದು ತಮಿಳುನಾಡಿನ ದಿವಂಗತ ಮುಖ್ಯಮಂತ್ರಿ ಜಯಲಲಿತಾ ಆಪ್ತೆ ಶಶಿಕಲಾ ಬಗ್ಗೆ. ಚಿತ್ರದ ಹೆಸರು ಕೂಡಾ `ಶಶಿಕಲಾ’ ಎಂದೇ ಇಡಲು ಇವರು ನಿರ್ಧರಿಸಿದ್ದಾರೆ. ಗುರುವಾರ ರಾತ್ರಿ ರಾಮ್‍ಗೋಪಾಲ್ ಈ ಚಿತ್ರವನ್ನು ಘೋಷಣೆ ಮಾಡಿದ್ದಾರೆ. ಇದೊಂದು ಫಿಕ್ಷನ್ ಚಿತ್ರ ಎಂದು ಹೇಳಿರುವ ರಾಮ್‍ಗೋಪಾಲ್, …

Read More »

ಜನರಿಗೆ ವಂಚನೆ : ಮಲಯಾಳಂ ನಟಿ ಬಂಧನ

ತಿರುವನಂತಪುರಂ: ಮಲಯಾಳಂನ ಖ್ಯಾತ ನಟಿ ಧನ್ಯ ಮೇರಿ ವರ್ಗೀಸ್ ಈಗ ಪೊಲೀಸರ ಅತಿಥಿ. ವಂಚನೆ ಆರೋಪದಲ್ಲಿ ಧನ್ಯರನ್ನು ಪೊಲೀಸರು ಬಂಧಿಸಿದ್ದಾರೆ. ಧನ್ಯ ತನ್ನ ಪತಿ ಜೊತೆ ಸೇರಿ ಸ್ಯಾಮ್ಸನ್ ಆ್ಯಂಡ್ ಸನ್ಸ್ ಎಂಬ ರಿಯಲ್ ಎಸ್ಟ್ರೇಲ್ ಕಂಪೆನಿ ನಡೆಸುತ್ತಿದ್ದರು. ಆದರೆ, ಈ ಕಂಪೆನಿಯಿಂದ ತಮಗೆ ವಂಚನೆ ಆಗಿದೆ ಎಂದು ಆರೋಪಿಸಿ 50ಕ್ಕೂ ಹೆಚ್ಚು ಜನರು ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸರು ಧನ್ಯ ಸೇರಿ ಮೂವರನ್ನು ಬಂಧಿಸಿದ್ದಾರೆ. ಧನ್ಯ, ಅವರ …

Read More »

20 ವರ್ಷಗಳ ಬಳಿಕ ಕಾಜೋಲ್ ತಮಿಳಿಗೆ : ಧನುಷ್ `ವಿಐಪಿ 2’ ಚಿತ್ರದಲ್ಲಿ ನಟನೆ

ಮುಂಬೈ : ತಮಿಳು ನಟ ಧನುಷ್ ಅಭಿನಯದ `ವಿಐಪಿ 2’ ಚಿತ್ರದಲ್ಲಿ ಬಾಲಿವುಡ್ ನಟಿ ಕಾಜೋಲ್ ನಟಿಸುತ್ತಿದ್ದಾರೆ. ಸರಿ ಸುಮಾರು 20 ವರ್ಷಗಳ ಬಳಿಕ ಕಾಜೋಲ್ ತಮಿಳು ಚಿತ್ರರಂಗಕ್ಕೆ ಮರಳುತ್ತಿದ್ದಾರೆ. ಧನುಷ್ ಅಭಿನಯದ `ವೆಲ್ಲಾ ಇಲ್ಲ ಪಟ್ಟಧಾರಿ’ ಚಿತ್ರದ ಎರಡನೇ ಭಾಗವೇ ವಿಐಪಿ 2. ಮೊನ್ನೆಯಷ್ಟೇ ಈ ಚಿತ್ರ ಲಾಂಚ್ ಆಗಿದ್ದು, ಸೂಪರ್ ಸ್ಟಾರ್ ರಜನಿಕಾಂತ್ ಚಿತ್ರಕ್ಕೆ ಚಾಲನೆ ಕೊಟ್ಟಿದ್ದಾರೆ. ಇದೇ ಮೊದಲ ಬಾರಿಗೆ ಕಾಜೋಲ್ ಧನುಷ್ ಜೊತೆ ನಟಿಸುತ್ತಿದ್ದಾರೆ. …

Read More »

ಮಕ್ಕಳಿಗಾಗಿ ಒಂದಾದ ಹೃತಿಕ್ ಸುಸೈನೆ : ಪಾರ್ಟಿಯಲ್ಲಿ ಜೊತೆಯಾದ ಮಾಜಿ ದಂಪತಿ

ಮುಂಬೈ : ಬಾಲಿವುಡ್ ನಟ ಹೃತಿಕ್ ರೋಷನ್ ಮತ್ತು ಅವರ ವಿಚ್ಚೇದಿತ ಪತ್ನಿ ಸುಸೈನೆ ಮತ್ತೆ ಒಂದಾಗಿದ್ದಾರೆ. ಈ ಬಾರಿ ಇವರು ಒಂದಾಗಿದ್ದು ಮಕ್ಕಳಿಗಾಗಿ. ಮಕ್ಕಳಿಗಾಗಿ ಹೃತಿಕ್ ಮತ್ತು ಸುಸೈನೆ ಪಾರ್ಟಿಯಲ್ಲಿ ಜೊತೆಯಾಗಿದ್ದಾರೆ. ಅಲ್ಲದೆ, ತಮ್ಮಿಬ್ಬರು ಮಕ್ಕಳಾದ ಹರೇಹನ್ ಮತ್ತು ಹರೇಧನ್ ಜೊತೆ ಇವರಿಬ್ಬರು ಕೆಲಕಾಲ ಕಳೆದಿದ್ದಾರೆ. ಮುಂಬೈನ ಹೊರವಲಯದ ರೆಸ್ಟೋರೆಂಟ್‍ನಲ್ಲಿ ಇವರು ಮಕ್ಕಳೊಂದಿಗೆ ಊಟ ಮಾಡಿದರು. ಪ್ರೀತಿಸಿ ವಿವಾಹವಾಗಿದ್ದ ಈ ಜೋಡಿ 2013ರಲ್ಲಿ ಪರಸ್ಪರ ದೂರವಾಗಿದ್ದರು.

Read More »

ದಂಗಾಲ್ : ಒಂದೇ ಒಂದು ಕಟ್ ಇಲ್ಲದೆ ಸೆನ್ಸಾರ್ ಸರ್ಟಿಫಿಕೇಟ್ ಪಡೆದ ಅಮೀರ್

ಮುಂಬೈ : ಬಾಲಿವುಡ್ ನಟ ಅಮೀರ್ ಖಾನ್ ದಂಗಾಲ್ ಚಿತ್ರದ ಮೂಲಕ ಮತ್ತೆ ನಿರೀಕ್ಷೆ ಮೂಡಿಸಿದ್ದಾರೆ. ಈ ನಡುವೆ, ಅಮೀರ್ ಮತ್ತೊಂದು ಉತ್ತಮ ಸಾಧನೆ ಮಾಡಿದ್ದಾರೆ. ಒಂದೇ ಒಂದು ಕಟ್ ಇಲ್ಲದೆಯೇ ಅಮೀರ್ ಸೆನ್ಸಾರ್ ಸರ್ಟಿಫಿಕೇಟ್ ಪಡೆದಿದ್ದಾರೆ. ಇದೊಂದು ಫ್ಯಾಮಿಲಿ ಎಂಟಟೈನರ್ ಆಗಿದ್ದು, ಸೆನ್ಸಾರ್ ಮಂಡಳಿ ಕೂಡಾ ಚಿತ್ರವನ್ನು ಮೆಚ್ಚಿದೆ. ಈ ಚಿತ್ರ ಡಿಸೆಂಬರ್ 23ಕ್ಕೆ ರಿಲೀಸ್ ಆಗಲಿದ್ದು, ಅಮೇರಿಕಾದಲ್ಲಿ 21ಕ್ಕೆ ತೆರೆ ಕಾಣಲಿದೆ.

Read More »

ನಟ ದಿಲೀಪ್ ಕುಮಾರ್ ಆಸ್ಪತ್ರೆಯಿಂದ ಡಿಸ್ಜಾರ್ಜ್

ಮುಂಬೈ : ಕಾಲಿನ ತೊಂದರೆಯಿಂದ ಬಳಲುತ್ತಿದ್ದ ನಟ ದಿಲೀಪ್ ಕುಮಾರ್ ಆಸ್ಪತ್ರೆಯಿಂದ ಡಿಸ್ಜಾರ್ಜ್ ಆಗಿದ್ದಾರೆ. ಕಾಲಿನಲ್ಲಿ ಊತ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಹಿರಿಯ ನಟ ದಿಲೀಪ್ ಕುಮಾರ್ ಅವರನ್ನು ಮುಂಬೈನ ಲೀಲಾವತಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕಳೆದ ವಾರ ಇವರನ್ನು ಆಸ್ಪತ್ರೆಗೆ ಸೇರಿಸಲಾಗಿತ್ತು. ಇದೀಗ, ಇವರು ಸಂಪೂರ್ಣ ಗುಣಮುಖರಾಗಿದ್ದು ಮನೆಗೆ ಮರಳಿದ್ದಾರೆ.

Read More »

ರಜನಿ 2.0 ಚಿತ್ರದ ಸೆಟ್ ವಾರ್ಧಾ ಚಂಡಮಾರುತಕ್ಕೆ ಹಾಳು

ಚೆನ್ನೈ : ತಮಿಳುನಾಡು ಮತ್ತು ಆಂಧ್ರ ಪ್ರದೇಶದಲ್ಲಿ ಮೊನ್ನೆ ವಾರ್ಧಾ ಚಂಡಮಾರುತ ತುಂಬಾ ಅವಾಂತರ ಸೃಷ್ಟಿಸಿತ್ತು. ಇದರ ಬಿಸಿ ಸೂಪರ್‍ಸ್ಟಾರ್ ರಜನಿಕಾಂತ್ ಅವರಿಗೂ ತಟ್ಟಿದೆ. ರಜನಿಕಾಂತ್ ಅಭಿನಯದ ಶಂಕರ್ ನಿರ್ದೇಶನದ `2.0’ ಚಿತ್ರದ ಸೆಟ್ ಚಂಡಮಾರುತದಿಂದ ಸಂಪೂರ್ಣ ಹಾಳಾಗಿದೆಯಂತೆ. ಅಂಬತೂರಿನ ಐಟಿ ಪಾರ್ಕ್‍ನಲ್ಲಿ ಚಿತ್ರಕ್ಕಾಗಿ ಸೆಟ್ ನಿರ್ಮಿಸಲಾಗಿತ್ತು. ಈ ಹಿಂದೆ ಕೂಡಾ ಇಲ್ಲಿ ಅನೇಕ ಚಿತ್ರಗಳ ಶೂಟಿಂಗ್ ನಡೆದಿತ್ತು. ಇಲ್ಲಿ ಗುಪ್ತಚರ ಸಂಶೋಧನಾ ಕೇಂದ್ರದ ಸೆಟ್ ಇಲ್ಲಿ ನಿರ್ಮಾಣ ಮಾಡಲಾಗಿತ್ತು. …

Read More »

ಧನುಷ್ ಅಭಿನಯದ `ವಿಐಪಿ 2’ ಲಾಂಚ್ ಮಾಡಿದ ರಜನಿಕಾಂತ್

ಚೆನ್ನೈ : `ವೆಲ ಇಲ್ಲ ಪಟ್ಟಧಾರಿ’(ವಿಐಪಿ) ಎಂಬ ಸೂಪರ್ ಹಿಟ್ ಚಿತ್ರದ ಮೂಲಕ ಧನುಷ್ ಮತ್ತೊಮ್ಮೆ ವಿಐಪಿ ಆಗಿದ್ದಾರೆ. `ವಿಐಪಿ 2’ ಚಿತ್ರ ಲಾಂಚ್ ಆಗಿದೆ. ಅಳಿಯನ ಚಿತ್ರವನ್ನು ಸೂಪರ್‍ಸ್ಟಾರ್ ರಜನಿಕಾಂತ್ ಲಾಂಚ್ ಮಾಡಿದ್ದಾರೆ. ರಜನಿಕಾಂತ್ ಪುತ್ರಿ ಸೌಂದರ್ಯ ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಚಿತ್ರದ ಲಾಂಚ್ ಸಂದರ್ಭದಲ್ಲಿ ನಿರ್ಮಾಪಕ ಕಲೈಪುಲಿ ಎಸ್ ತಾನು, ರಜನಿಕಾಂತ್ ಪತ್ನಿ ಲತಾ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಈ ಖುಷಿಯನ್ನು ಧನುಷ್ ಟ್ವಿಟರ್‍ನಲ್ಲಿ ಹಂಚಿಕೊಂಡಿದ್ದಾರೆ. …

Read More »

ನಟಿ ಮೀರಾ ಜಾಸ್ಮಿನ್ ದಾಂಪತ್ಯದಲ್ಲಿ ಬಿರುಕು…?

ತಿರುವನಂತಪುರಂ : ಮಲಯಾಲಂ ನಟಿ ಮೀರಾ ಜಾಸ್ಮಿನ್ ದಾಂಪತ್ಯದಲ್ಲಿ ಬಿರುಕುಂಟಾಗಿದೆ ಎಂಬ ಸುದ್ದಿ ಕೇಳಿ ಬಂದಿದೆ. ಪತಿ ಅನಿಲ್ ಜಾನ್ ಟಿಟ್ಯೂಸ್‍ರಿಂದ ವಿಚ್ಚೇದನ ಪಡೆಯಲು ಮೀರಾ ಬಯಸಿದ್ದಾರೆ ಎಂದು ಹೇಳಲಾಗುತ್ತಿದೆ. 2014ರಲ್ಲಿ ಮೀರಾ ಅನಿಲ್‍ರನ್ನು ವಿವಾಹವಾಗಿದ್ದರು. ಮದುವೆ ಬಳಿಕ ಮೀರಾ ದುಬೈನಲ್ಲಿ ವಾಸವಾಗಿದ್ದರು. ವಿವಾಹದ ನಂತರ ಮೀರಾ ಚಿತ್ರರಂಗದಿಂದ ದೂರ ಉಳಿದಿದ್ದರು. ಆದರೆ, ಈ ವರ್ಷ `10 ಕಲ್ಪನಾಕಲ್’ ಎಂಬ ಚಿತ್ರದ ಮೂಲಕ ಮತ್ತೆ ಮೀರಾ ಬಣ್ಣ ಹಚ್ಚಿದ್ದರು. ಅದೂ …

Read More »
error: Content is protected !!