Monday , February 18 2019
ಕೇಳ್ರಪ್ಪೋ ಕೇಳಿ
Home / Film News / Tollywood

Tollywood

Behave yourself : ನಿರೂಪಕಿಗೆ ಸೂಚ್ಯವಾಗಿ ಎಚ್ಚರಿಕೆ ನೀಡಿದ ನಾಗಾರ್ಜುನ

ಹೈದರಾಬಾದ್ : ಟಾಲಿವುಡ್​ನ ಖ್ಯಾತ ನಟ ಅಕ್ಕಿನೇನಿ ನಾಗಾರ್ಜುನ ಮತ್ತು ಸೊಸೆ ಸಮಂತಾ ತಮ್ಮ ‘ರಾಜು ಗಾರಿ ಗಾದಿ 2’ ಚಿತ್ರದ ರಿಲೀಸ್ ಖುಷಿಯಲ್ಲಿ ಇದ್ದಾರೆ. ಆದರೆ, ಈ ಚಿತ್ರದ ಪ್ರಮೋಷನ್​ ವೇಳೆ ಮಾಧ್ಯಮವೊಂದರ ಸಂದರ್ಶನದಲ್ಲಿ ಇವರಿಬ್ಬರು ಭಾಗವಹಿಸಿದ್ದರು. ಇವರನ್ನು ಸಂದರ್ಶನ ಮಾಡಿದ್ದು ಖ್ಯಾತ ನಿರೂಪಕಿ ಶ್ಯಾಮಲ. ಚೆನ್ನಾಗಿ ಸಾಗುತ್ತಿದ್ದ ಸಂದರ್ಶನದ ವೇಳೆ ನಿರೂಪಕಿ ಒಂದು ಕಿರಿಕ್ ಪ್ರಶ್ನೆ ಕೇಳಿದ್ದು, ನಾಗಾರ್ಜುನರನ್ನು ಸ್ವಲ್ಪ ಕಸಿವಿಸಿಗೊಳಿಸಿತ್ತು. ಹೀಗಾಗಿ, ನಗುನಗುತ್ತಲೇ ನಾಗಾರ್ಜುನ ನಿರೂಪಕಿಗೆ …

Read More »

ಬಾಹುಬಲಿ ಬಳಿಕ ಅನುಷ್ಕಾ ಶೆಟ್ಟಿ ಅಭಿನಯಿಸುತ್ತಿರುವ ಚಿತ್ರ ಇದು

ಹೈದರಾಬಾದ್ : ಬಾಹುಬಲಿ ಸರಣಿಯ ಬಳಿಕ ನಟಿ ಅನುಷ್ಕಾ ಶೆಟ್ಟಿ ಏನು ಮಾಡುತ್ತಿದ್ದಾರೆ…? ಇಂತಹದ್ದೊಂದು ಪ್ರಶ್ನೆ ಹಲವರನ್ನು ಕಾಡಿತ್ತು. ಇದಕ್ಕೆ ಸರಿಯಾಗಿ ಬಾಹುಬಲಿ ಬಳಿಕ ಅನುಷ್ಕಾ ಯಾವೊಂದು ಹೊಸ ಚಿತ್ರಗಳನ್ನೂ ಒಪ್ಪಿಕೊಂಡಿರಲಿಲ್ಲ. ಆದರೆ, ಅನುಷ್ಕಾ ಸದ್ದಿಲ್ಲದೆ ಈಗ ಒಂದು ಚಿತ್ರವನ್ನು ಮುಗಿಸಿದ್ದಾರೆ. ಭಾಗಮತಿ ಎಂಬ ಟೈಟಲ್ನ ಚಿತ್ರ ಅದು. ಬಹಳ ಹಿಂದೆಯೇ ಶುರು ಮಾಡಿದ್ದ ಈ ಚಿತ್ರ ಈಗ ಪೂರ್ಣಗೊಂಡಿದೆ. ಭಾಗಮತಿ ಚಿತ್ರದ ಶೂಟಿಂಗ್ ಮುಗಿಸಿರುವ ಅನುಷ್ಕಾ ಈಗ ಹೊಸ …

Read More »

ರಾಜಮೌಳಿ ಮುಂದಿನ ಪ್ರಾಜೆಕ್ಟ್​ ತುಂಬಾ ಸಿಂಪಲ್​…!

ಹೈದರಾಬಾದ್​ : ಬಾಹುಬಲಿ ನಿರ್ದೇಶಕ ರಾಜಮೌಳಿ ಈಗ ತಮ್ಮ ಮುಂದಿನ ಪ್ರಾಜೆಕ್ಟ್​ನಲ್ಲಿ ತೊಡಗಿದ್ದಾರೆ. ರಾಜಮೌಳಿ ನೆಕ್ಸ್ಟ್​ ಪ್ರಾಜೆಕ್ಟ್​ ಒಂದು ಸೋಷಿಯಲ್ ಡ್ರಾಮಾವಂತೆ. ಈ ಚಿತ್ರಕ್ಕೆ ಇನ್ನೂ ಹೆಸರಿಡಲಾಗಿಲ್ಲ. ಚಿತ್ರದಲ್ಲಿ ಯಾರೆಲ್ಲಾ ಇರುತ್ತಾರೆ ಎಂಬುದಿನ್ನೂ ಅಂತಿಮವಾಗಿಲ್ಲ. ಆದರೆ. ತುಂಬಾ ವಿಭಿನ್ನ ಚಿತ್ರವೊಂದನ್ನು ಮಾಡುವುದಕ್ಕೆ ರಾಜಮೌಳಿ ಈಗ ಮನಸ್ಸು ಮಾಡಿದ್ದಾರೆ. ಸ್ಟಾರ್​ ಡೈರೆಕ್ಟರ್​ ತಲೆಯಲ್ಲಿ ಈ ಕುರಿತ ಹಲವು ಯೋಚನೆಗಳು ಸುಳಿದಾಡುತ್ತಿವೆ… ಎಸ್​.ಎಸ್​.ರಾಜಮೌಳಿ ದಕ್ಷಿಣ ಭಾರತದ ಖ್ಯಾತ ನಿರ್ದೇಶಕ… ಬಾಹುಬಲಿ ಚಿತ್ರದ ಮೂಲಕ …

Read More »

ಎನ್​ಟಿಆರ್​ ಪಾತ್ರಕ್ಕೆ ಪ್ರಕಾಶ್​ ರೈ, ಲಕ್ಷ್ಮಿ ಪಾರ್ವತಿ ಪಾತ್ರದಲ್ಲಿ ರೋಜಾ…?

ಹೈದರಾಬಾದ್ : ರಾಮ್​ ಗೋಪಾಲ್​ ವರ್ಮಾ… ಟಾಲಿವುಡ್​ನ ಅತ್ಯದ್ಭುತ ನಿರ್ದೇಶಕ… ಹಲವು ಸೂಪರ್​ ಹಿಟ್ ಚಿತ್ರಗಳನ್ನು ಕೊಟ್ಟವರು ಇವರು… ಇಂತಹ ನಿರ್ದೇಶಕ ಇತ್ತೀಚಿನ ದಿನಗಳಲ್ಲಿ ಒಂದು ದೊಡ್ಡ ಬ್ರೇಕ್​ಗೆ ಹೆಣಗಾಡುತ್ತಿದ್ದಾರೆ. ಮಾಡಿದ ಕೆಲ ಚಿತ್ರಗಳು ಬಾಕ್ಸ್​ ಆಫೀಸ್​ನಲ್ಲಿ ಮೇಲೇಳುವುದಕ್ಕೇ ಕೇಳುತ್ತಿಲ್ಲ… ಆದರೆ, ವರ್ಮಾ ಯಾವತ್ತೂ ಸುದ್ದಿಯಲ್ಲಿ ಹಿಂದೆ ಬಿದ್ದಿಲ್ಲ. ಏನಾದರೊಂದು ವಿವಾದ ಮಾಡಿಕೊಂಡು ಸದಾ ಸುದ್ದಿಯಲ್ಲಿರುವ ವ್ಯಕ್ತಿ ವರ್ಮಾ. ವಿವಾದಗಳು ಇವರನ್ನು ಹುಡುಕಿಕೊಂಡು ಬರುತ್ತವಾ? ಅಥವಾ ಇವರೇ ವಿವಾದಗಳನ್ನು ಹುಡುಕಿಕೊಂಡು …

Read More »

ಮತ್ತೊಮ್ಮೆ ತಂದೆಯಾದ ಪವನ್ ಕಲ್ಯಾಣ್​ : ಮೂರನೇ ಪತ್ನಿಗೆ ಎರಡನೇ ಮಗು ಜನನ…

ಹೈದರಾಬಾದ್​ : ಟಾಲಿವುಡ್​ನ ಪವರ್​​ಸ್ಟಾರ್​​​ ಟಾಲಿವುಡ್​​ ಪವನ್ ಕಲ್ಯಾಣ್​ ಮನೆಯಲ್ಲಿ ಈಗ ಸಂಭ್ರಮವೋ ಸಂಭ್ರಮ… ಪವನ್​ ಮೂರನೇ ಹೆಂಡ್ತಿ ತಾಯಿಯಾಗಿದ್ದಾರೆ… ಈ ಮೂಲಕ ಪವನ್​ ಮತ್ತೊಮ್ಮೆ ತಂದೆಯಾದ ಖುಷಿಯಲ್ಲಿದ್ದಾರೆ… ಪವನ್​ ತನ್ನ ಮುದ್ದಾದ ಗಂಡು ಮಗುವನ್ನು ಆಡಿಸುವ ಫೋಟೋ ಈಗ ವೈರಲ್​ ಆಗಿದೆ… ಮಂಗಳವಾರ ಮುಂಜಾನೆ ಖಾಸಗಿ ಆಸ್ಪತ್ರೆಯಲ್ಲಿ ಪವನ್ ಪತ್ನಿಗೆ ಹೆರಿಗೆಯಾಗಿದ್ದು, ತಾಯಿ ಮಗು ಆರೋಗ್ಯವಾಗಿದ್ದಾರೆ… ರಷ್ಯಾದ ಅನ್ನಾ ಲೆಜ್ನಿವಾ ಪವನ್ ಪತ್ನಿ. ಇಬ್ಬರು ಪತ್ನಿಯರಿಗೆ ವಿಚ್ಛೇದನ ನೀಡಿದ …

Read More »

ಬಾಲಿವುಡ್​ಗೆ ಟಾಲಿವುಡ್ ಪ್ರಿನ್ಸ್ ಮಹೇಶ್​ ಬಾಬು…?

ಹೈದರಾಬಾದ್ : ಟಾಲಿವುಡ್ ಪ್ರಿನ್ಸ್​ ಮಹೇಶ್ ಬಾಬು ಸ್ಪೈಡರ್​ ಮೂಲಕ ಹವಾ ಕ್ರಿಯೇಟ್ ಮಾಡಿದ್ದಾರೆ. ಮೊನ್ನೆ ಬಿಡುಗಡೆಯಾದ ಚಿತ್ರಕ್ಕೆ ಉತ್ತಮ ಸ್ಪಂದನೆ ಸಿಕ್ಕಿದೆ. ತಮಿಳು ಮತ್ತು ತೆಲುಗಿನಲ್ಲಿ ಬಿಡುಗಡೆಯಾದ ಸ್ಪೈಡರ್​​​ ಬಾಕ್ಸ್ ಆಫೀಸ್​ನಲ್ಲೂ ಸೌಂಡ್ ಮಾಡುತ್ತಿದೆ. ದಕ್ಷಿಣ ಭಾರತದ ಖ್ಯಾತ ನಿರ್ದೇಶಕ ಎ.ಆರ್.ಮುರುಘಾದಾಸ್​ ನಿರ್ದೇಶನದ ಚಿತ್ರ ಇದು. ಇದೀಗ ಈ ಸ್ಪೈಡರ್​​ ಬಾಲಿವುಡ್​ಗೆ ರಿಮೇಕ್ ಆಗುತ್ತಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಮಹೇಶ್ ಬಾಬು ಅವರೇ ಬಾಲಿವುಡ್ ಸಿನೆಮಾದಲ್ಲೂ ಇರಲಿದ್ದಾರೆ …

Read More »

ಮದುವೆಗೆ ಸಿದ್ಧವಾಗುತ್ತಿದ್ದಾರೆ ಸಮಂತಾ : ಇಲ್ಲಿದೆ ಮದುವಣಗಿತ್ತಿಯ ಧಿರಿಸು

ಹೈದರಾಬಾದ್​ : ಟಾಲಿವುಡ್​ನ ಕ್ಯೂಟ್​ ಕಪಲ್ ಸಮಂತಾ ಮತ್ತು ನಾಗಚೈತನ್ಯ ಮದುವೆಗೆ ಸಿದ್ಧವಾಗುತ್ತಿದ್ದಾರೆ. ಈ ಪ್ರೇಮ ಪತಂಗಗಳ ಮದುವೆಗೆ ಇನ್ನು ಎರಡು ವಾರಗಳಷ್ಟೇ ಬಾಕಿ. ನಾಲ್ಕೈದು ವರ್ಷದಿಂದ ಪ್ರೀತಿಯ ಅಲೆಯಲ್ಲಿ ತೇಲುತ್ತಿರುವ ಸಮಂತಾ ಮತ್ತು ನಾಗಚೈತನ್ಯ ಇದೇ ವರ್ಷದ ಜನರಿಯಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಅಕ್ಟೋಬರ್​ 6ಕ್ಕೆ ಇವರಿಬ್ಬರು ದಾಂಪತ್ಯಕ್ಕೆ ಕಾಲಿಡುತ್ತಿದ್ದಾರೆ. If there is one person I know who has all the talent all the …

Read More »

ಬಲ್ಲಾಳದೇವನ ಕ್ಯಾರೆಕ್ಟರ್​​​​​ ಅಭಿನಯಿಸಿ ತೋರಿಸುತ್ತಿದ್ದರು ನಿರ್ದೇಶಕ ರಾಜಮೌಳಿ

ಹೈದರಾಬಾದ್​ : ಬಾಹುಬಲಿ 2 ರಿಲೀಸ್ ಆಗಿ ಐದು ತಿಂಗಳು ಕಳೆದರೂ ಅದರ ಹವಾ ಮಾತ್ರ ಕಡಿಮೆ ಆಗಿಲ್ಲ. ಈಗ ಈ ಚಿತ್ರದ ಕ್ಲೈಮ್ಯಾಕ್ಸ್​ನ ಫೋಟೋ ಒಂದು ಲೀಕ್ ಆಗಿದೆ. ಸ್ವತಃ ಪ್ರಭಾಸ್ ಅವರೇ ಟ್ವಿಟರ್​​ನಲ್ಲಿ ಈ ಫೋಟೋ ಹಾಕಿಕೊಂಡಿದ್ದಾರೆ. ಈ ಫೋಟೋದಲ್ಲಿ ನಿರ್ದೇಶಕ ರಾಜಮೌಳಿ, ಪ್ರಭಾಸ್ ಮತ್ತು ರಾಣಾರನ್ನು ಕಾಣಬಹುದು. ಇಲ್ಲಿ ನಾವು ಸೂಕ್ಷ್ಮವಾಗಿ ನೋಡಿದರೆ ನಿರ್ದೇಶಕ ರಾಜಮೌಳಿ ಅವರು ಪ್ರತೀ ಕ್ಯಾರೆಕ್ಟರ್​ ಅನ್ನು ಎಷ್ಟು ಫೀಲ್ ಮಾಡಿ …

Read More »

ಪ್ರಭಾಸ್​ ಇಂಪ್ರೆಸ್ ಮಾಡಿದ ಶೃದ್ಧಾ ಕಪೂರ್​

ಹೈದರಾಬಾದ್​ : ಬಾಲಿವುಡ್ ಬೆಡಗಿ ಶೃದ್ಧಾ ಕಪೂರ್ ಈಗ ಸಾಹೋ ಚಿತ್ರದ ಮೂಲಕ ಸೌತ್ ಇಂಡಿಯಾ ಫಿಲಂ ಲೋಕಕ್ಕೆ ಪರಿಚಯವಾಗುತ್ತಿದ್ದಾರೆ. ಪ್ರಭಾಸ್ ಜೊತೆಗೆ ಶೃದ್ಧಾ ನಟಿಸುತ್ತಿದ್ದಾರೆ. ಈ ಚಿತ್ರದ ಶೂಟಿಂಗ್ ಈಗಾಗಲೇ ಶುರುವಾಗಿದೆ. ಆರಂಭದಿಂದಲೂ ಈ ಚಿತ್ರದ ಮೇಲೆ ಶೃದ್ಧಾಗೆ ಸಖತ್​ ಆಸಕ್ತಿ. ಹೀಗಾಗಿಯೇ, ಇವರು ಕೂಡಾ ಶೂಟಿಂಗ್ ಸೆಟ್​ಗೆ ಬರಲು ಕಾತರಿಸುತ್ತಿದ್ದರು. ಅದರಲ್ಲೂ ನಟ ಪ್ರಭಾ​ ಜೊತೆ ಅಭಿನಯಿಸುತ್ತಿರುವುದರಿಂದ ಶೃದ್ಧಾ ಸಹಜವಾಗಿಯೇ ಎಕ್ಸೈಟ್ ಆಗಿದ್ದರು. ಶೃದ್ಧಾಗೆ ಪ್ರಭಾಸ್ ಕಂಡರೆ …

Read More »

ಅರ್ಜುನ್​ಗೆ ಅರ್ಜುನ್​ ವಿಲನ್​…?!

ಹೈದರಾಬಾದ್​ : ಸೀನಿಯರ್ ಹೀರೋ ಅರ್ಜುನ್ ಸರ್ಜಾ ಇತ್ತೀಚಿನ ದಿನಗಳಲ್ಲಿ ಮೆಲ್ಲನೆ ತಮ್ಮ ಟ್ರೆಂಡ್​ ಬದಲಾಯಿಸಿಕೊಳ್ಳುತ್ತಿದ್ದಾರೆ. ಬೇರೆ ಹೀರೋಗಳ ಚಿತ್ರದಲ್ಲಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳುವ ಮೂಲಕ ಅರ್ಜುನ್ ಗಮನ ಸೆಳೆಯುತ್ತಿದ್ದಾರೆ. ಅರ್ಜುನ್ ಈ ಪ್ರಯತ್ನ ಪ್ರೇಕ್ಷಕರಿಗೂ ಖುಷಿ ಕೊಟ್ಟಿದೆ. ಈಗ ಮತ್ತೊಂದು ಬಾರಿ ಅರ್ಜುನ್​ ಬೇರೆ ನಟನ ಚಿತ್ರದಲ್ಲಿ ಕಾಣಿಸಿಕೊಳ್ಳಲು ರೆಡಿಯಾಗಿದ್ದಾರೆ. ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಅಭಿನಯದ ‘ನಾ ಪೇರು ಸೂರ್ಯ‘ ಚಿತ್ರದಲ್ಲಿ ಅರ್ಜುನ್ ಕಾಣಿಸಿಕೊಳ್ಳಲಿದ್ದಾರಂತೆ. ತಮಿಳು ನಟ …

Read More »
error: Content is protected !!