Tuesday , February 19 2019
ಕೇಳ್ರಪ್ಪೋ ಕೇಳಿ
Home / Gulf News (page 4)

Gulf News

ಕತಾರ್​ನಲ್ಲೂ ತೆನೆ ಹಬ್ಬದ ಸಂಭ್ರಮ

ರಾಹುಲ್ ರೋಷನ್ ಸಿಕ್ವೇರಾ, ಗಲ್ಫ್​ ಬ್ಯುರೋ ಕತಾರ್​ : ಕ್ರೈಸ್ತ ಧರ್ಮೀಯರ ಪವಿತ್ರ ತೆನೆ ಹಬ್ಬವನ್ನು ಕತಾರ್ ನಲ್ಲೂ ಸಂಭ್ರಮದಿಂದ ಆಚರಿಸಲಾಯಿತು. ಕತಾರ್​​ನ ಅವರ್ ಲೇಡಿ ಆಫ್​ ರೋಸರಿ ಚರ್ಚ್​ನಲ್ಲಿ ಕೊಂಕಣಿ ಸ್ಪೀಕಿಂಗ್ ಕಮ್ಯೂನಿಟಿ (ಕೆಎಸ್​ಸಿ) ಈ ಹಬ್ಬವನ್ನು ಸಂಭ್ರಮದಿಂದ ಆಚರಿಸಿತು. ಚರ್ಚ್​​ ಆವರಣದಲ್ಲಿರುವ ಲೇಡಿ ಆಫ್​ ಅರೇಬಿಯಾ ಸಭಾಂಗಣದಲ್ಲಿ ಈ ಕಾರ್ಯಕ್ರಮ ನಡೆಯಿತು. ನೂರಾರು ಸಂಖ್ಯೆಯಲ್ಲಿ ಕ್ರೈಸ್ತ ಧರ್ಮಿಯರು ಇಲ್ಲಿ ಪಾಲ್ಗೊಂಡಿದ್ದರು. ಏಸು ಕ್ರಿಸ್ತರ ತಾಯಿ ಮೇರಿ ಮಾತೆಯ …

Read More »

ಯುಎಇನಲ್ಲಿ ಒಂದು ವರ್ಷದಿಂದ ಕೋಮಾದಲ್ಲಿರುವ ಭಾರತೀಯನಿಗೆ ಕೊನೆಗೂ ಸಿಕ್ತು ಕೇರಳದಲ್ಲೊಂದು ನೆಲೆ..

ರಾಹುಲ್ ರೋಷನ್ ಸಿಕ್ವೇರಾ, ಗಲ್ಫ್​ ಬ್ಯುರೋ ದುಬೈ : ಪ್ರದೀಪ್ ಶರ್ಮಾ ಎಂಬ ನತದೃಷ್ಟನಿಗೆ ಈಗ ಹೊಸ ನೆಲೆಯೊಂದು ಸಿಕ್ಕಿದೆ. ಬಿಹಾರದವರಾದ ಇವರಿಗೆ ಕೇರಳದಲ್ಲೊಂದು ಆಸರೆ ದೊರೆತಿದೆ. ಇವರ ಕಷ್ಟ ಕೇಳಿದರೆ ಎಂತವರಿಗೂ ಕಣ್ಣಲ್ಲಿ ನೀರು ಬರುತ್ತದೆ. ಪ್ರದೀಪ್ ಶರ್ಮಾ ವೃತ್ತಿಯಲ್ಲಿ ಬಡಗಿ. ಕೆಲಸವನ್ನರಸಿ ಬಿಹಾರದಿಂದ ಎರಡು ವರ್ಷದ ಹಿಂದೆ ದುಬೈಗೆ ಬಂದಿದ್ದ ಇವರು ಒಂದೇ ವರ್ಷದಲ್ಲಿ ಅಸ್ವಸ್ಥರಾದರು. ಪರಿಣಾಮ, ಕೋಮಾಕ್ಕೆ ಜಾರಿದ ಪ್ರದೀಪ್​ ಶರ್ಮಾ ಒಂದು ವರ್ಷದಿಂದ ರಶೀದ್ …

Read More »

ಏಕಾಂಕಿಯಾಗಿ ವಿಮಾನ ಚಲಾಯಿಸಿ ದಾಖಲೆ ಬರೆದ ಶಾರ್ಜಾದ 14ರ ಪೋರ

ರಾಹುಲ್ ರೋಷನ್ ಸಿಕ್ವೇರಾ, ಗಲ್ಫ್ ಬ್ಯುರೋ ಶಾರ್ಜಾ : ಶಾರ್ಜಾದ 14 ರ ಪೋರ ವಿಮಾನ ಚಲಾಯಿಸಿ ದಾಖಲೆ ಬರೆದಿದ್ದಾನೆ. ದಾಖಲೆಗಿಂತಲೂ ಈ ಹುಡುಗ ಎಲ್ಲರನ್ನು ನಿಬ್ಬೆರಗಾಗಿಸಿದ್ದಾನೆ. ಆಗಸ್ಟ್ 30 ರಂದು ಮನ್ಸೂರ್ ಎಂಬ ಈ ಬಾಲಕ ವಿಮಾನ ಚಲಾಯಿಸಿ ಎಲ್ಲರ ಮೆಚ್ಚುಗೆಗೆ ಪಾತ್ರನಾಗಿದ್ದಾನೆ. ಈ ಮೂಲಕ ವಿಶ್ವದಲ್ಲಿಯೇ ಅತೀ ಕಿರಿಯ ಪೈಲಟ್ ಎಂಬ ಕೀರ್ತಿಗೂ ಮನ್ಸೂರ್ ಪಾತ್ರನಾಗಿದ್ದಾನೆ. ಶಾರ್ಜಾದ ಡಿಪಿಎಸ್ನ ವಿದ್ಯಾರ್ಥಿ ಮನ್ಸೂರ್ ಅನೀಸ್​ಗೆ ಚಿಕ್ಕಂದಿನಿಂದಲೂ ಈ ಬಗ್ಗೆ …

Read More »

ಈ ವಾರಾಂತ್ಯದಲ್ಲಿ ಹಲವು ಭಾಗದಲ್ಲಿ ವ್ಯಾಪಕ ಮಳೆ…?

ರಾಹುಲ್ ರೋಷನ್ ಸಿಕ್ವೇರಾ, ಗಲ್ಫ್ ಬ್ಯುರೋ ದುಬೈ : ಬಿಸಿಲಿನ ತಾಪಮಾನದಿಂದ ಕಂಗೆಟ್ಟಿರುವ ಯುಎಇ ಜನರಿಗೆ ಕೊಂಚ ನೆಮ್ಮದಿ ನೀಡುವ ಸುದ್ದಿ ಬಂದಿದೆ. ಈ ವಾರಾಂತ್ಯದಲ್ಲಿ ದೇಶದ ಕೆಲ ಭಾಗದಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಅಲ್ಲದೆ, ಬೆಳಗ್ಗೆ ಮತ್ತು ಸಂಜೆಯ ವೇಳೆಗೆ ಕಡಿಮೆ ತಾಪಮಾನ ಇರುವುದಾಗಿಯೂ ಇಲಾಖೆ ತಿಳಿಸಿದೆ. ಆದರೆ, ಸದ್ಯದ ಸ್ಥಿತಿಯಲ್ಲಿ ಬಿಸಿಲು, ಧೂಳಿನ ಕಾಟ ಹಾಗೆಯೇ ಇರಲಿದೆ. ಈಗಾಗಲೇ ಕೆಲವು …

Read More »

ಹೊಟೇಲ್​​ನಲ್ಲಿ ಸಾಮೂಹಿಕ ಆತ್ಮಹತ್ಯೆ; ಕಟ್ಟಡದಿಂದ ಹಾರಿದ ವ್ಯಕ್ತಿ – ಕಾರು ಜಖಂ: ಮೂವರ ಸಾವು, ಇಬ್ಬರು ಬಚಾವ್‘

ರಾಹುಲ್​ ರೋಷನ್ ಸಿಕ್ವೇರಾ, ಗಲ್ಫ್ ಬ್ಯುರೋ ಶಾರ್ಜಾ :  ಆಗಸ್ಟ್​ 29 ರಂದು ಇಲ್ಲಿನ ಹೊಟೇಲ್​​ನಲ್ಲಿ ನಡೆದಿದ್ದ ಮೂವರ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಅಂತಿಮ ನಿರ್ಧಾರಕ್ಕೆ ಬಂದಿದ್ದಾರೆ. ಇವರೆಲ್ಲಾ ಆತ್ಮಹತ್ಯೆ ಮಾಡಿಕೊಂಡಿರುವ ದೃಢವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಓರ್ವ ವ್ಯಕ್ತಿ ಹೊಟೇಲ್​ ಕಟ್ಟಡದಿಂದ ಹಾರಿ ಪ್ರಾಣ ಬಿಟ್ಟಿದ್ದರೆ, ಮತ್ತಿಬ್ಬರು ಕೋಣೆಯಲ್ಲಿ ರಕ್ತದ ಮಡುವಿನಲ್ಲಿ ಬಿದ್ದಿದ್ದರು. ಓರ್ವ ಪುರುಷ, ಓರ್ವ ಮಹಿಳೆ ಮತ್ತು ಓರ್ವ ಯುವಕ ಸಾವನ್ನಪ್ಪಿರುವವರು. ಇವರೊಂದಿಗೆ ಇಬ್ಬರು …

Read More »

ಶಾಪಿಂಗ್ ಮಾಲ್​ನಲ್ಲಿ ಪುಟ್ಟ ಕಂದನಿಗೆ ತಂದೆಯ ಚಿತ್ರಹಿಂಸೆ : ಇಲ್ಲಿದೆ ವೀಡಿಯೋ

ರಾಹುಲ್ ರೋಷನ್ ಸಿಕ್ವೇರಾ, ಗಲ್ಫ್ ಬ್ಯುರೋ ಮನಮಾ : ಇದೊಂದು ಶಾಕಿಂಗ್ ವೀಡಿಯೋ. ಶಾಪಿಂಗ್ ಮಾಲ್​ನಲ್ಲಿ ಹೃದಯಹೀನ ತಂದೆಯೊಬ್ಬ ಪುಟ್ಟ ಕಂದನಿಗೆ ಚಿತ್ರಹಿಂಸೆ ನೀಡಿದ್ದಾನೆ. ಅರಬ್ ಮೂಲದ ಈ ವ್ಯಕ್ತಿಯ ಈ ಪಾಪಕೃತ್ಯ ಈಗ ವೈರಲ್ ಆಗಿದೆ. ಹೀಗಾಗಿ, ಸೌದಿ ಅರೇಬಿಯಾ ಪೊಲೀಸರು ಈತನನ್ನು ಬಂಧಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದ ವೀಡಿಯೋವನ್ನು ನೋಡಿದ ಪೊಲೀಸರು ಸ್ವಯಂ ಪ್ರೇರಿತರಾಗಿ ಈತನನ್ನು ಬಂಧಿಸಿ ಜೈಲಿಗಟ್ಟಿದ್ದಾರೆ. ಕಳೆದ ವಾರ ನಡೆದ ಘಟನೆ ಇದು ಎಂದು …

Read More »

104 ವರ್ಷದ ಹಿರಿಯಜ್ಜಿ ಸೌದಿ ದೊರೆಯ ಅತಿಥಿ

ರಾಹುಲ್​ ರೋಷನ್​ ಸಿಕ್ವೇರಾ, ಗಲ್ಫ್ ಬ್ಯುರೋ ಸೌದಿ ಅರೇಬಿಯಾ : ಈ ಬಾರಿಯ ಹಜ್​ ಯಾತ್ರೆಯಲ್ಲಿ 104 ವರ್ಷದ ಇಂಡೋನೇಷ್ಯಾದ ಅಜ್ಜಿ ಮರಿಯಾಹ್​​​​ ಮಾರ್ಘನಿ ಮೊಹಮ್ಮದ್​​​ ಪಾಲ್ಗೊಳ್ಳುತ್ತಿದ್ದಾರೆ. ಈ ಹಿರಿಯಜ್ಜಿಗೆ ಸೌದಿ ದೊರೆ ಸಲ್ಮಾನ್ ಬಿಗ್ ಅಬ್ದುಲ್​ ಅಜೀಜ್​ ಅಲ್​​​​ ಸೌದ್​​​ ಪ್ರೀತಿಯ ಆದರಾತಿಥ್ಯ ನೀಡುತ್ತಿದ್ದಾರೆ. ಪವಿತ್ರ ಹಜ್​ ಯಾತ್ರೆಗೆ ಬರುವ ಈ ಅಜ್ಜಿ ಸೇರಿದಂತೆ ಅವರೊಂದಿಗೆ ಬರುವವರನ್ನು ತುಂಬಾ ಜಾಗರೂಕತೆ ಮತ್ತು ಪ್ರೀತಿಯಿಂದ ನೋಡಿಕೊಳ್ಳುವಂತೆ ದೊರೆ ಸಲ್ಮಾನ್ ಸೂಚಿಸಿದ್ದಾರೆ. …

Read More »

ಈದ್​ಗೆ ಗುಡ್​ನ್ಯೂಸ್​ : ದುಬೈನಲ್ಲಿ ನಾಲ್ಕು ದಿನ ಪಾರ್ಕಿಂಗ್​ ಫ್ರೀ…

ರಾಹುಲ್​ ರೋಷನ್​ ಸಿಕ್ವೇರಾ, ಗಲ್ಫ್ ಬ್ಯುರೋ ದುಬೈ : ಈದ್​ ಹಬ್ಬದ ರಜಾ ದಿನಗಳಲ್ಲಿ ದುಬೈ ನಾಗರಿಕರಿಗೆ ಒಂದು ಸಂತಸದ ಸುದ್ದಿ ಬಂದಿದೆ. ನಾಲ್ಕು ದಿನದ ರಜಾ ಅವಧಿಯಲ್ಲಿ ದುಬೈನ ಎಲ್ಲಾ ಪಾರ್ಕಿಂಗ್​ ಝೋನ್​ಗಳಲ್ಲಿ ಶುಲ್ಕ ಕೊಡಬೇಕಾಗಿಲ್ಲ. ಮಲ್ಟಿ ಲೆವೆಲ್​ ಪಾರ್ಕಿಂಗ್ ಲಾಟ್​ಗಳನ್ನು ಬಿಟ್ಟು ಬಾಕಿ ಎಲ್ಲಾ ಕಡೆ ಈ ನಾಲ್ಕು ದಿನ ಪಾರ್ಕಿಂಗ್ ಸಂಪೂರ್ಣ ಉಚಿತ ಎಂದು ದುಬೈ ರೋಡ್ ಮತ್ತು ಟ್ರಾನ್ಸ್​ಪೋರ್ಟ್​ ಅಥಾರಿಟಿ(ಆರ್​ಎಟಿ) ತಿಳಿಸಿದೆ. ಈದ್​ ಹಬ್ಬದ …

Read More »

ಅಲ್​​ ಫಯಾ- ಶೇಹ್​ ಶೋಯಬ್​ ರೋಡ್​ನಲ್ಲಿ ಸ್ಪೀಡ್​ ಲಿಮಿಟ್​ ಕಡಿತ

ರಾಹುಲ್ ರೋಷನ್​ ಸಿಕ್ವೇರಾ, ಗಲ್ಫ್​ಬ್ಯುರೋ ಅಬು ದುಬೈ : ಅಲ್​​ ಫಯಾ- ಶೇಹ್​ ಶೋಯಬ್​ ರೋಡ್​ನಲ್ಲಿ ಪೊಲೀಸರು ವೇಗಮಿತಿಯನ್ನು ಇಳಿಸಿದ್ದಾರೆ. ಇದುವರೆಗೆ  ಗಂಟೆಗೆ 100 ಕಿಲೋ ಮೀಟರ್​​​​ ಇದ್ದ ವೇಗವನ್ನು 80 ಕಿಲೋ ಮೀಟರ್​ಗೆ ಕಡಿತಗೊಳಿಸಲಾಗಿದೆ. ರಸ್ತೆ ಸುರಕ್ಷತೆಯ ದೃಷ್ಟಿಯಿಂದ ಅಬು ದುಬೈ ಪೊಲೀಸರು ಈ ನಿರ್ಧಾರ ಕೈಗೊಂಡಿದ್ದಾರೆ. ಸೆಪ್ಟೆಂಬರ್ 1 ರಿಂದ ಈ ಹೊಸ ನೀತಿ ಜಾರಿಗೆ ಬರಲಿದೆ. قررت شرطة أبوظبي، تعديل سرعات ضبط الرادار …

Read More »

ಕಾರಿನೊಳಗೆ ಸಿಲುಕಿಕೊಂಡ ಎರಡು ವರ್ಷದ ಮಗು…!

ರಾಹುಲ್ ರೋಷನ್ ಸಿಕ್ವೇರಾ, ಗಲ್ಫ್​ ಬ್ಯುರೋ ಅಜ್ಮಾನ್​ : ಪೋಷಕರು ತಮ್ಮ ಕಾರಿನಲ್ಲಿ ಬಿಟ್ಟು ಹೋಗಿದ್ದ ಎರಡು ವರ್ಷದ ಮಗು ಹೊರಬರಲಾರದೆ ಕಾರಿನೊಳಗೇ ಸಿಲುಕಿಕೊಂಡ ಘಟನೆ ಅಲ್​ ರೌದಾ ಪ್ರದೇಶದಲ್ಲಿ ನಡೆದಿದೆ. ಭಾನುವಾರ ರಾತ್ರಿ ಸುಮಾರು 11.55ಕ್ಕೆ ಈ ಘಟನೆ ನಡೆದಿದ್ದು, ಸುದ್ದಿ ತಿಳಿದ ತಕ್ಷಣ ಸ್ಥಳಕ್ಕೆ ಆಗಮಿಸಿದ ರಕ್ಷಣಾ ತಂಡ ಮಗುವನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದೆ. ಸಕಾಲದಲ್ಲಿ ಸ್ಥಳಕ್ಕೆ ಆಗಮಿಸಿದ ಅಗ್ನಿ ಶಾಮಕ ದಳ ಕಾರಿನ ಬಾಗಿಲನ್ನು ಒಡೆದು ಮಗುವನ್ನು …

Read More »
error: Content is protected !!