Tuesday , February 19 2019
ಕೇಳ್ರಪ್ಪೋ ಕೇಳಿ
Home / Gulf News (page 5)

Gulf News

ಗಾಯಗೊಂಡ ಗಿಡುಗನಿಗೆ ಸಿಕ್ತು ಪುನರ್ಜನ್ಮ

ರಾಹುಲ್ ರೋಷನ್ ಸಿಕ್ವೇರಾ, ಗಲ್ಫ್ ಬ್ಯುರೋ ಶಾರ್ಜಾ : ಇಲ್ಲಿನ ಕಲ್ಬಾ ಸಿಟಿಯಲ್ಲಿ ಗಾಯಗೊಂಡಿದ್ದ ಗಿಡುಗ ಮರುಜನ್ಮ ಪಡೆದುಕೊಂಡಿದೆ. ಜನರು ಮತ್ತು ಪರಿಸರ ಹಾಗೂ ಸಂಕ್ಷಿತ ಪ್ರದೇಶಗಳ ಪ್ರಾಧಿಕಾರ (ಇಪಿಎಎ)ಈ ಹಕ್ಕಿಯನ್ನು ರಕ್ಷಿಸಿ ಹೊಸ ಜೀವನ ನೀಡಿದ್ದಾರೆ. ಗಾಯಗೊಂಡ ಗಿಡುಗನಿಗೆ ಚಿಕಿತ್ಸೆ ಕೊಡಿಸಿದ ಇಪಿಎಎ ಇದನ್ನು ಕಲ್ಬಾ ಪರ್ವತ ಪ್ರದೇಶದಲ್ಲಿ ಕೊಂಡು ಹೋಗಿ ಬಿಟ್ಟಿದೆ. ಈ ಮೂಲಕ ಉತ್ತಮ ಕಾರ್ಯ ಮಾಡಿ ಸಮಾಜಕ್ಕೂ ಮಾದರಿ ಆಗಿದೆ. ಹಾರುವುದಕ್ಕೂ ಹಾಗದೆ, ಚಲಿಸುವುದಕ್ಕೂ …

Read More »

ಸೌದಿ ಮೂಲದ ಮಗು ಕೇರಳದ ಸ್ವಿಮಿಂಗ್ ಪೂಲ್​ನಲ್ಲಿ ಸಾವು…!

ರಾಹುಲ್​ ರೋಷನ್​ ಸಿಕ್ವೇರಾ, ಗಲ್ಫ್ ಬ್ಯುರೋ ಸೌದಿ ಅರೇಬಿಯಾ : ಕುಟುಂಬದೊಂದಿಗೆ ಕೇರಳ ಪ್ರವಾಸ ಬಂದಿದ್ದ ಸೌದಿ ಮೂಲದ ನಾಲ್ಕು ವರ್ಷದ ಕಂದ ದುರ್ಮರಣಕ್ಕೀಡಾಗಿದೆ. ಸ್ವಿಮಿಂಗ್​ ಪೂಲ್​ನಲ್ಲಿ ಈ ಮಗು ಸಾವಿಗೀಡಾಗಿದೆ. ಇಲ್ಲಿನ ಪ್ರವಾಸಿ ತಾಣದ ಕುಮಾರಾಕೋಮ್​​ನ ರೆಸಾರ್ಟ್​ನಲ್ಲಿ ಈ ದುರ್ಘಟನೆ ಸಂಭವಿಸಿದೆ. ಕೊಟ್ಟಾಯಂನ ಮೆಡಿಕಲ್​ ಕಾಲೇಜು ಆಸ್ಪತ್ರೆಯಲ್ಲಿ ಮಗುವಿನ ಮರಣೋತ್ತರ ಪರೀಕ್ಷೆ ನಡೆದಿದೆ. ಗುರುವಾರ ಸಂಜೆ ಈ ದುರ್ಘಟನೆ ಸಂಭವಿಸಿದ್ದು, ಸಾವಿಗೆ ನಿಖರ ಕಾರಣದ ಬಗ್ಗೆ ತನಿಖೆ ನಡೆಯುತ್ತಿದೆ. …

Read More »

ಸ್ಟಾಕ್ ಕ್ಲಿಯರೆನ್ಸ್​ನ ದೊಡ್ಡ ಸೇಲ್​ ಇಂದಿನಿಂದ ಶುರು : ಶೇಕಡಾ 80ರಷ್ಟು ರಿಯಾಯಿತಿ ಬೆಲೆಯಲ್ಲಿ ಮಾರಾಟ

ರಾಹುಲ್ ರೋಷನ್ ಸಿಕ್ವೇರಾ, ಗಲ್ಫ್​ ಬ್ಯುರೋ ದುಬೈ : ಇಲ್ಲಿನ ದೊಡ್ಡ ಕ್ಲಿಯರೆನ್ಸ್​ ಸೇಲ್​ನ ಎರಡನೇ ಹಂತ ಇಂದಿನಿಂದ ಶುರುವಾಗಿದೆ. ಈ ಮಾರಾಟ ಮೇಳದಲ್ಲಿ ಶೇ.80ರಷ್ಟು ರಿಯಾಯಿತಿ ದರದಲ್ಲಿ ವಸ್ತುಗಳು ಮಾರಾಟವಾಗುತ್ತಿದೆ. ದುಬೈ ವರ್ಲ್ಡ್​ ಟ್ರೇಡ್ ಸೆಂಟರ್​ನಲ್ಲಿ ಮೂರು ದಿನಗಳ ಕಾಲ ಈ ಮಾರಾಟ ಮೇಳ ನಡೆಯಲಿದೆ. ಬೆಳಗ್ಗೆ 11 ಗಂಟೆಯಿಂದ ರಾತ್ರಿ 10.30ರ ತನಕ ಇಲ್ಲಿ ವ್ಯಾಪಾರ ನಡೆಯಲಿದ್ದು, ವಸ್ತುಗಳನ್ನು ಕೊಳ್ಳಲು ಜನ ಮುಗಿಬಿದ್ದಿದ್ದಾರೆ.

Read More »

ಮಹಿಳೆ ಕಾರು ಚಲಾಯಿಸಿದ ವೀಡಿಯೋ ವೈರಲ್​ : ಮಹಿಳಾ ಡ್ರೈವರ್ ಸೇರಿ ನಾಲ್ವರು ಪೊಲೀಸ್​ ವಶಕ್ಕೆ

ರಾಹುಲ್ ರೋಷನ್ ಸಿಕ್ವೇರಾ, ಗಲ್ಫ್​ ಬ್ಯುರೋ ಮನಾಮ : ಸೌದಿ ಅರೇಬಿಯಾ ಪೊಲೀಸರು ಇಬ್ಬರು ಮಹಿಳೆಯರು ಸೇರಿ ನಾಲ್ವರನ್ನು ತೀವ್ರ ಪ್ರಶ್ನೆಗೆ ಒಳಪಡಿಸಿದ್ದಾರೆ.ಅಲ್ ಖಲೀಫಾದಲ್ಲಿ ಸಮಾಜ ಬಾಹಿರ ವರ್ತನೆ ತೋರಿದ್ದಕ್ಕೆ ಇವರಿಗೆ ಈಗ ಸಂಕಷ್ಟ ಎದುರಾಗಿದೆ. ಮಹಿಳೆಯೊಬ್ಬರು ಪುರುಷರ ಸಾಂಪ್ರದಾಯಿಕ ಧಿರಿಸು ತೊಟ್ಟು, ಮುಖವನ್ನು ಮುಚ್ಚಿಕೊಂಡು ಕಾರು ಓಡಿಸುವ ವೀಡಿಯೋ ಇಲ್ಲಿ ವೈರಲ್ ಆಗಿತ್ತು. ಹೀಗಾಗಿ, ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ. ಈ ಇಬ್ಬರು ಮಹಿಳೆಯರು ಅರಬ್​ನವರೇ ಎಂದು ಗೊತ್ತಾಗಿದೆ. …

Read More »

ಯುಎಇ ಯಲ್ಲಿರುವ ತಮ್ಮ ಕಾರ್ಮಿಕರ ಸಹಾಯಕ್ಕೆ ಬಂದ ಭಾರತ

ರಾಹುಲ್ ರೋಷನ್ ಸಿಕ್ವೇರಾ, ಗಲ್ಫ್​ ಬ್ಯುರೋ ಅಬು ದುಬೈ : ಸಂಯುಕ್ತ ಅರಬ್​ ರಾಷ್ಟ್ರಗಳಲ್ಲಿ ಕಾರ್ಮಿಕ ನೀತಿಗೆ ಸಂಬಂಧಿಸಿದಂತೆ ಕಾನೂನು ಹೋರಾಟ ನಡೆಸುತ್ತಿರುವ ತನ್ನ ದೇಶದ ಕಾರ್ಮಿಕರ ನೆರವಿಗೆ ಭಾರತ ಬಂದಿದೆ. ಕಾರ್ಮಿಕರ ಕಾನೂನು ಹೋರಾಟಕ್ಕೆ ಹಣಕಾಸಿನ ನೆರವು ನೀಡಲು ಸರ್ಕಾರ ನಿರ್ಧರಿಸಿದೆ. ಈ ಮೂಲಕ ತನ್ನ ನೆಲದ ಜನರ ಸಂಕಷ್ಟಕ್ಕೆ ಧ್ವನಿಯಾಗಲು ಹೊರಟಿದೆ. ಯುಎಇಯಲ್ಲಿರುವ ಭಾರತೀಯ ದೂತವಾಸ ಕಚೇರಿ ಈ ರೀತಿಯ ಆರ್ಥಿಕ ನೆರವು ನೀಡಲಿದೆ. ಬರೀ ಕಾರ್ಮಿಕ …

Read More »

ದುಬೈ ಫುಡ್ ಪಾರ್ಕ್​​ನ ಬ್ಲೂಪ್ರಿಂಟ್ ನೋಡಿದ್ದೀರಾ…?

ರಾಹುಲ್ ರೋಷನ್ ಸಿಕ್ವೇರಾ, ಗಲ್ಫ್ ಬ್ಯುರೋ ದುಬೈ : ಉಪಾಧ್ಯಕ್ಷ ಮತ್ತು ಪ್ರಧಾನ ಮಂತ್ರಿ ಶೇಖ್​ ಮೊಹಮ್ಮದ್​ ಬಿನ್ ರಶೀದ್​ ಅಲ್​ ಮಕ್ಟೋಮ್​​ ಅವರ ಕನಸಿನ ದುಬೈ ಫುಡ್​ ಪಾರ್ಕ್​ ಯೋಜನೆಯ ಸಿದ್ಧತೆಗಳು ಗರಿಗೆದರಿವೆ. ಈ ಯೋಜನೆಯ ನೀಲ ನಕಾಶೆಯನ್ನು ಶೇಖ್ ಮೊಹಮ್ಮದ್ ಅವರು ಅನಾವರಣಗೊಳಿಸಿದ್ದಾರೆ, ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಆಹಾರ ವಲಯಕ್ಕೆಂದು ಮೀಸಲಿಟ್ಟ ಮೊದಲ ತಾಣ ಇದಾಗಲಿದೆ. ಆಹಾರ ಮಾರುಕಟ್ಟೆ, ಆಮದು, ರಫ್ತು ಸೇರಿದಂತೆ ಎಲ್ಲಾ ವ್ಯವಹಾರಕ್ಕೂ ಈ ಫುಡ್ …

Read More »

ಕ್ಯಾಬ್​ ಚಾಲಕರ ಪ್ರಾಮಾಣಿಕತೆ, ಸೇವಾ ಮನೋಭಾವಕ್ಕೆ ಹೃದಯಸ್ಪರ್ಶಿ ಗೌರವ

ರಾಹುಲ್ ರೋಷನ್​ ಸಿಕ್ವೇರಾ, ಗಲ್ಫ್ ಬ್ಯುರೋ ದುಬೈ : ಒಳ್ಳೆಯ ಕೆಲಸ ಮಾಡಿದಾಗ ಶಹಬ್ಬಾಸ್​ ಹೇಳಲೇಬೇಕು. ಈ ಮೆಚ್ಚುಗೆಯ ನುಡಿ ಇನ್ನಷ್ಟು ಒಳ್ಳೆಯ ಕೆಲಸಕ್ಕೆ ಪ್ರೇರಣೆಯಾಗುತ್ತದೆ. ಅಂತೆಯೇ ಇಲ್ಲಿನ ರೋಡ್​ ಆಂಡ್​ ಟ್ರಾನ್ಸ್​ಪೋರ್ಟ್​ ಅಥಾರಿಟಿ (ಆರ್​ಟಿಎ)ಇಬ್ಬರು ಕ್ಯಾಬ್​ ಡ್ರೈವರ್​ಗಳನ್ನು ಗೌರವಿಸಿದೆ. ಇದರಲ್ಲಿ ಒಬ್ಬರು ತನ್ನ ಕ್ಯಾಬ್​ನಲ್ಲಿ ಪ್ರಯಾಣಿಕರೊಬ್ಬರು ಬಿಟ್ಟು ಹೋಗಿದ್ದ ಹಣ ಮತ್ತು ವಸ್ತುಗಳನ್ನು ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದರೆ, ಮತ್ತೊಬ್ಬರು ಉತ್ತಮ ನಡುವಳಿಕೆಯಿಂದ ವಿಕಲಚೇತನ ವೃದ್ಧರೊಬ್ಬರಿಂದ ಮೆಚ್ಚುಗೆ ಗಳಿಸಿದವರು. ಈ …

Read More »

ಕೆಫೀನ್​ಯುಕ್ತ ಪಾನೀಯ ಒಳ್ಳೆಯದಲ್ಲ : ಯುಎಇ ವಾಹನ ಚಾಲಕರಿಗೆ ತಜ್ಞರ ಸಲಹೆ

ರಾಹುಲ್ ರೋಷನ್​ ಸಿಕ್ವೇರಾ, ಗಲ್ಫ್ ಬ್ಯುರೋ ದುಬೈ : ಸಂಯುಕ್ತ ಅರಬ್​ ರಾಷ್ಟ್ರಗಳಲ್ಲಿ ಕಾರು ಅಪಘಾತ ಎನ್ನುವುದು ಸಾಮಾನ್ಯ ಎಂಬಂತಾಗಿದೆ. ಅದರಲ್ಲೂ ಬಹುತೇಕ ಅಪಘಾತಗಳು ಮನುಷ್ಯನ ತಪ್ಪಿನಿಂದಲೇ ಆಗಿರುತ್ತವೆ. ವಾಹನ ಚಾಲನೆ ಮಾಡುವಾಗ ತುಂಬಾ ಎಚ್ಚರಿಕೆಯಿಂದ ಮತ್ತು ಜಾಗರೂಕತೆಯಿಂದ ಇರುವುದಕ್ಕೆ ಕೆಲವರು ಕೆಫೀನ್​ಯುಕ್ತ ಪಾನೀಯಗಳನ್ನು ಕುಡಿಯುತ್ತಾರೆ. ಆದರೆ, ಈಗ ಇದೇ ಕಂಟಕವಾಗುವ ಸಾಧ್ಯತೆಯೂ ಇದೆ ಎಂದು ತಜ್ಞರು ಅಭಿಪ್ರಾಯಪಡುತ್ತಿದ್ದಾರೆ. ಇತ್ತೀಚೆಗೆ ನಡೆಸಿದ ಅಧ್ಯಯನವೊಂದರಲ್ಲಿ ಇದು ಬಯಲಾಗಿದೆ. ಇಲ್ಲಿ ಸುಮಾರು ಸಾವಿರಕ್ಕೂ …

Read More »

ಯುಟ್ಯೂಬ್​ಗೆ ವೀಡಿಯೋ ಅಪ್​ಲೋಡ್​ : ಯುವತಿ ಸೇರಿ ನಾಲ್ವರ ಬಂಧನ

ರಾಹುಲ್ ರೋಷನ್ ಸಿಕ್ವೇರಾ, ಗಲ್ಫ್ ಬ್ಯುರೋ ಅಬು ದುಬೈ : ಕಾನೂನಿಗೆ ವಿರುದ್ಧವಾದ ವೀಡಿಯೋವನ್ನು ಯುಟ್ಯೂಬ್​ಗೆ ಅಪ್​ಲೋಡ್​​ ಮಾಡಿದ ಆರೋಪದಲ್ಲಿ ಅಬು ದುಬೈ ಪೊಲೀಸರು ಒಬ್ಬಳು ಯುವತಿ ಸೇರಿ ನಾಲ್ವರನ್ನು ಬಂಧಿಸಿದ್ದಾರೆ. ಅಲ್ಲದೆ, ವಿಚಾರಣೆಗಾಗಿ ಏಳು ದಿನಗಳ ಕಾಲ ಈ ನಾಲ್ವರನ್ನು ಪೊಲೀಸರು ತಮ್ಮ ವಶಕ್ಕೆ ಪಡೆದಿದ್ದಾರೆ. #شرطة_أبوظبي تحذر من عواقب السلوكيات الطائشة المسيئة للمجتمع pic.twitter.com/Sbd3iulHJ2 — شرطة أبوظبي (@ADPoliceHQ) August 20, 2017 …

Read More »

ನೆತ್ತಿ ಸುಡುವ ಬಿಸಿಲಿನ ದಿನಗಳು ದೂರ… : ಯುಎಇ ತಾಪಮಾನ ಶೀಘ್ರ ಇಳಿಕೆ…?

ರಾಹುಲ್ ರೋಷನ್ ಸಿಕ್ವೇರಾ, ಗಲ್ಫ್ ಬ್ಯುರೋ ದುಬೈ : ಬಿಸಿಲಿನ ತಾಪಮಾನದಿಂದ ಕಂಗೆಟ್ಟಿದ್ದ ಯುಎಇ ಜನರಿಗೆ ಒಂದು ಖುಷಿಯ ಸುದ್ದಿ.. ಮುಂದಿನ ಕೆಲವು ದಿನಗಳಲ್ಲಿ ಇಲ್ಲಿನ ತಾಪಮಾನ ಇಳಿಕೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇಷ್ಟು ದಿನ ಗರಿಷ್ಟ 50 ಡಿಗ್ರಿ ಸೆಲ್ಸಿಯಸ್​​ನಷ್ಟು ತಾಪಮಾನ ಇಲ್ಲಿ ಕೆಲವು ಭಾಗದಲ್ಲಿ ದಾಖಲಾಗಿತ್ತು. ಸದ್ಯ ಹವಾಮಾನ ಇಲಾಖೆ ನೀಡಿರುವ ಮಾಹಿತಿ ಪ್ರಕಾರ, ಈ ಗುರುವಾರದ ನಂತರ ಮೋಡಗಳಲ್ಲಿ ಗಣನೀಯ ಬದಲಾವಣೆ ಆಗಲಿದೆಯಂತೆ. …

Read More »
error: Content is protected !!