Monday , January 21 2019
ಕೇಳ್ರಪ್ಪೋ ಕೇಳಿ
Home / Mumbai Mail (page 2)

Mumbai Mail

ಮದುವೆಯಾಗುತ್ತೇನೆಂದು ನಂಬಿಸಿ ದೈಹಿಕ ಸಂಪರ್ಕದ ಆರೋಪ: ಬಿಜೆಪಿ ಕಾರ್ಪೋರೇಟರ್ ವಿರುದ್ಧ ರೇಪ್ ಕೇಸ್

ಥಾಣೆ ; ಕಲ್ಯಾಣ್ ದೊಂಬಿವಿಲಿ ಮುನ್ಸಿಪಲ್ ಕಾರ್ಪೋರೇಷನ್ (ಕೆಡಿಎಮ್ ಸಿ) ಯ ಬಿಜೆಪಿ ಕಾರ್ಪೋರೇಟರ್ ದಯಾ ಗಾಯಕ್ವಾಡ್ ವಿರುದ್ಧ ಅತ್ಯಾಚಾರ ಕೇಸ್ ದಾಖಲಾಗಿದೆ. ಮದುವೆಯಾಗುತ್ತೇನೆ ಎಂದು ನಂಬಿಸಿ ನನ್ನೊಂದಿಗೆ ದೈಹಿಕ ಸಂಪರ್ಕ ಹೊಂದಿ ಈಗ ಮೋಸ ಮಾಡಿದ್ದಾರೆ ಎಂದು ಮಹಿಳೆಯೊಬ್ಬರು ದೂರು ನೀಡಿದ ಹಿನ್ನೆಲೆಯಲ್ಲಿ ಈ ದೂರು ದಾಖಲಾಗಿದೆ. ಥಾಣೆಯ 27 ವರ್ಷದ ಮಹಿಳೆ, ಕಾರ್ಪೋರೇಟರ್ ಗೆ ಈಗಾಗಲೇ ಮದುವೆ ಆಗಿದ್ದರೂ ನನ್ನನ್ನು ವಿವಾಹವಾಗುವುದಾಗಿ ನಂಬಿಸಿ ದೈಹಿಕ ಸಂಪರ್ಕ ಬೆಳೆಸಿದ್ದರು …

Read More »

ಭೂಗತ ಪಾತಕಿ ದಾವೂದ್ ಇಬ್ರಾಹಿಂಗೆ ಬ್ರಿಟನ್​ನಲ್ಲಿ ಶಾಕ್​…!

ಲಂಡನ್‌ : ಭೂಗತ ಪಾತಕಿ ದಾವೂದ್ ಇಬ್ರಾಹಿಂಗೆ ಬ್ರಿಟನ್​ ಸರ್ಕಾರ ದೊಡ್ಡ ಶಾಕ್​ ನೀಡಿದೆ. ಭಾರತದ ಮೋಸ್ಟ್​ ವಾಂಡೆಟ್​ ಅಪರಾಧಿಗೆ ಸೇರಿದ ಸುಮಾರು 6.7 ಬಿಲಿಯನ್​ ಡಾಲರ್​ ಮೌಲ್ಯದ ಆಸ್ತಿಯನ್ನು ಬ್ರಿಟಿಷ್ ಸರ್ಕಾರ ಮುಟ್ಟುಗೋಲು ಹಾಕಿದೆ. ಲಂಡನ್​ನಲ್ಲಿ ದಾವೂದ್​ ಒಡೆತನದ ಆಸ್ತಿ ಇರುವ ಬಗ್ಗೆ ಭಾರತ ಸರ್ಕಾರ 2015ರಲ್ಲಿ ಅಲ್ಲಿನ ಸರ್ಕಾರಕ್ಕೆ ಸಂಪೂರ್ಣ ಮಾಹಿತಿ ನೀಡಿತ್ತು. ದಾವೂದ್ ಇಲ್ಲಿ ಐಷಾರಾಮಿ ಹೊಟೇಲ್ ಮತ್ತು ಹಲವು ಅಪಾರ್ಡ್​ಮೆಂಟ್​ಗಳ ಒಡೆಯನಾಗಿದ್ದ. 1993ರಲ್ಲಿ ಮುಂಬೈಯಲ್ಲಿ ಸರಣಿ …

Read More »

ಟೋಲ್​ನಲ್ಲಿ ಕಾರ್ಡ್​ ಸ್ವೈಪ್​ : 230 ರೂಪಾಯಿ ಬದಲಿಗೆ 87 ಸಾವಿರ ರೂಪಾಯಿ ಕಳೆದುಕೊಂಡ ವ್ಯಕ್ತಿ!

ಮುಂಬೈ : ಇಲ್ಲಿನ ಕಾಲ್​ಪುರ ಟೋಲ್​ ಪ್ಲಾಜಾದಲ್ಲಿ ಕಾರ್ಡ್​ ಸ್ವೈಪ್​ ಮಾಡಿದ ವ್ಯಕ್ತಿಯೊಬ್ಬರು ಭಾರೀ ಮೊತ್ತದ ಹಣ ಕಳೆದುಕೊಂಡಿದ್ದಾರೆ. ಪುಣೆಯ ಸೇಲ್ಸ್​ ಮ್ಯಾನೇಜರ್​ ಆಗಿರುವ ದರ್ಶನ್ ಪಾಟೀಲ್ ಎಂಬುವವರು ಕಾಲ್​ಪುರ ಟೋಲ್​ ಪ್ಲಾಸಾದಲ್ಲಿ 230 ರೂಪಾಯಿ ಹಣಕ್ಕೆ ಕಾಡ್​ ಸ್ವೈಪ್ ಮಾಡಿದ್ದರು. ಆದರೆ, ಹೀಗೆ ಕಾರ್ಡ್​ ಸ್ವೈಪ್ ಮಾಡಿದ ಎರಡು ಗಂಟೆಯ ಬಳಿಕ ಇವರ ಖಾತೆಯಿಂದ 87 ಸಾವಿರ ರೂಪಾಯಿ ಕಳ್ಳತನವಾಗಿದೆ…! ಈ ಬಗ್ಗೆ ತಕ್ಷಣ ಇವರು ಪುಣೆಯ ಹದಾಪ್ಸರ್​ …

Read More »

ಸಾಂಸ್ಕೃತಿಕ ರಾಯಭಾರಿ ತಾರಾ ಎಸ್​ ರಾವ್ ಅವರಿಗೆ ಭಾವಪೂರ್ಣ ಶೃದ್ಧಾಂಜಲಿ

ಮುಂಬೈ : ಇತ್ತೀಚೆಗಷ್ಟೇ ಮುಂಬೈಯಲ್ಲಿ ವಿಧಿವಶರಾಗಿದ್ದ ಸಾಂಸ್ಕೃತಿಕ ರಾಯಭಾರಿ, ಕನ್ನಡತಿ ತಾರಾ ಎಸ್​ ರಾವ್ ಅವರಿಗೆ ಭಾವಪೂರ್ಣ ಶೃದ್ಧಾಂಜಲಿ ಸಲ್ಲಿಸಲಾಯಿತು. ಚೆಂಬೂರ್​ನಲ್ಲಿ ಈ ಶೃದ್ಧಾಂಜಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಸಾಂಸ್ಕೃತಿಕ ಕ್ಷೇತ್ರಕ್ಕೆ ಸಾಕಷ್ಟು ಕೊಡುಗೆ ನೀಡಿದ್ದ ಗೋಕುಲ ಕಲಾಶ್ರೀ, ನೃತ್ಯಗಾರ್ತಿ ತಾರಾ ಎಸ್ ರಾವ್ ಅವರ ಕಾರ್ಯವನ್ನು ಈ ಸಂದರ್ಭದಲ್ಲಿ ಎಲ್ಲರೂ ನೆನೆದರು. ಬಿಎಸ್​ಕೆಬಿ ಅಸೋಸಿಯೇಷನ್ ಮತ್ತು ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್​ನ ಅಧ್ಯಕ್ಷ ಡಾ.ಸುರೇಶ್​ ಎಸ್​ ರಾ​ವ್​ ಕಟೀಲ್​, ಬಾಂಡೂಪ್​ ಸೆಂಟ್ರಲ್ …

Read More »

ವಾಶಿ ರೈಲ್ವೆ ನಿಲ್ದಾಣದಲ್ಲಿ ಮಗು ಅಪಹರಣ : ಸಿಸಿ ಕ್ಯಾಮೆರಾದಲ್ಲಿ ದೃಶ್ಯ ಸೆರೆ

ಮುಂಬೈ : ನವಿ ಮುಂಬೈನ ವಾಶಿ ರೈಲ್ವೇ ನಿಲ್ದಾಣದಲ್ಲಿ ಮೂರು ವರ್ಷದ ಮಗುವಿನ ಅಪಹರಣ ನಡೆದಿದೆ. ವ್ಯಕ್ತಿಯೊಬ್ಬ ಮಗುವನ್ನು ಕಿಡ್ನ್ಯಾಪ್ ಮಾಡಿದ್ದಾನೆ. ಈ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆ ಆಗಿದೆ. ಮೂರು ವರ್ಷದ ಮಗು ರಘು ಶಿಂಧೆಯನ್ನು ಅಪಹರಿಸಿರುವ ವ್ಯಕ್ತಿ ಪನ್ವೇಲ್ಗೆ ಹೋಗು ರೈಲು ಹತ್ತಿದ್ದಾನೆ. ಇನ್ನು, ಮಗುವಿನ ಪತ್ತೆಗೆ ಪೊಲೀಸರು ಸಾಕಷ್ಟು ಯತ್ನ ಮಾಡುತ್ತಿದ್ದಾರೆ. ಸಿಸಿ ಕ್ಯಾಮೆರಾ ದೃಶ್ಯದ ಸಹಾಯದಿಂದ ಪೊಲೀಸರು ತಮ್ಮ ಕಾರ್ಯಾಚರಣೆಯನ್ನು ಮುಂದುವರಿಸಿದ್ದಾರೆ. ವಾಶಿ ರೈಲ್ವೇ …

Read More »

1993ರ ಮುಂಬೈ ಸರಣಿ ಸ್ಫೋಟ : ಅಬು ಸಲೇಂಗೆ ಜೀವಾವಧಿ, ರಹೀರ್​ಗೆ ಗಲ್ಲು

ಮುಂಬೈ : ದೇಶವನ್ನೇ ತಲ್ಲಣಗೊಳಿಸಿದ್ದ 1993ರ ಮುಂಬೈ ಸರಣಿ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಟಾಡಾ ನ್ಯಾಯಾಲಯದ ತೀರ್ಪು ಹೊರಬಿದ್ದಿದೆ. ಪಾತಕಿ ಅಬು ಸಲೇಂ ಮತ್ತು ಕರಾಮುಲ್ಲಾ ಖಾನ್​ಗೆ ಜೀವಾವಧಿ ಶಿಕ್ಷೆ ಮತ್ತು 2 ಲಕ್ಷ ರೂಪಾಯಿ ದಂಡ ಹಾಗೂ ರಹೀಮ್ ಮರ್ಚೆಂಟ್​ ಮತ್ತು ಫಿರೋಜ್​ ಖಾನ್​ಗೆ ಗಲ್ಲು ಶಿಕ್ಷೆ ವಿಧಿಸಿ ನ್ಯಾಯಾಲಯ ಆದೇಶ ಹೊರಡಿಸಿದೆ. ಇನ್ನು ರಿಯಾದ್ ಸಿದ್ದಿಕಿಗೆ 10 ವರ್ಷ ಜೈಲು ಶಿಕ್ಷೆ ವಿಧಿಸಿ ನ್ಯಾಯಾಲಯ ತೀರ್ಪು …

Read More »

ತಾಯಿಯನ್ನು ಕೊಂದು ಹೃದಯವನ್ನು ಚಟ್ನಿಯೊಂದಿಗೆ ತಿಂದ…!

ಕೊಲ್ಹಾಪುರ (ಮಹಾರಾಷ್ಟ್ರ) : ಈ ಸುದ್ದಿಯನ್ನು ನಂಬುವುದು ಕಷ್ಟ. ಆದರೆ, ಇಂತಹದ್ದೊಂದು ಘಟನೆ ಆಗಿದ್ದಂತೂ ಸತ್ಯ. ಕಂಠಮಟ್ಟ ಕುಡಿದು ಬಂದ ಮಗನೊಬ್ಬ ತಾಯಿಗೆ ಮನ ಬಂದಂತೆ ಥಳಿಸಿ ಕೊಂದಿದ್ದಾನೆ. ಕೊಂದ ಬಳಿಕ ಆಕೆಯ ಹೃದಯವನ್ನು ಬಗೆದು ಅದನ್ನು ಚಟ್ನಿಯೊಂದಿಗೆ ತಿಂದಿದ್ದಾನೆ. ಇಂತಹ ವಿಲಕ್ಷಣ ಘಟನೆ ನಡೆದಿರುವುದು ಮಹಾರಾಷ್ಟ್ರದ ಕೊಲ್ಹಾಪುರದಲ್ಲಿ. ಆರೋಪಿಯನ್ನು ದಿನಗೂಲಿ ನೌಕರ ಸುನಿಲ್ ಕುಚಕರ್ಣಿ ಎಂದು ಗುರುತಿಸಲಾಗಿದೆ. ಇದೀಗ ಪೊಲೀಸರು ಆರೋಪಿಯನ್ನು ಬಂಧಿಸಿ ಜೈಲಿಗಟ್ಟಿದ್ದಾರೆ. ಮಗನಿಂದಲೇ ಕೊಲೆಯಾದ ನತದೃಷ್ಟ …

Read More »

ಜಡಿ ಮಳೆಗೆ ತೊಯ್ದು ತೊಪ್ಪೆಯಾದ ಮುಂಬೈ : ಹಲವೆಡೆ ಗೋಡೆ ಕುಸಿತ

chirag suvarna, mumbai ಮುಂಬೈ : ಜಡಿ ಮಳೆಗೆ ಮಹಾನಗರ ಮುಂಬೈ ತೊಯ್ದು ತೊಪ್ಪೆಯಾಗಿದೆ. ಕಳೆದ ಎರಡು ದಿನಗಳಿಂದ ಇಲ್ಲಿ ಎಡೆಬಿಡದೆ ಮಳೆ ಸುರಿಯುತ್ತಿದೆ. ಶನಿವಾರ ಮುಂಜಾನೆಯಿಂದ ಶುರುವಾದ ಮಳೆ ಇನ್ನೂ ಸುರಿಯುತ್ತಲೇ ಇದ್ದು, ಮುಂಬೈ ಸೇರಿದಂತೆ ಹಲವೆಡೆಯ ಜನ ಜೀವನ ಅಸ್ತವಸ್ತವಾಗಿದೆ. ಕೊಲಾಬಾದಲ್ಲಿರುವ ಹವಾಮಾನ ಇಲಾಖೆ ನೀಡಿರುವ ಮುನ್ಸೂಚನೆ ಪ್ರಕಾರ ಮುಂದಿನ 24 ಗಂಟೆಗಳ ಕಾಲ ಪರಿಸ್ಥಿತಿ ಇದೇ ರೀತಿ ಇರಲಿದೆ. ಬಳಿಕವೂ ಅಲ್ಲಲ್ಲಿ ಮಳೆಯಾಗಲಿದೆ. ಇನ್ನು, ಈ …

Read More »

ಮುಂಬೈ ಗಣೇಶೋತ್ಸವ : ಕಾನೂನು ಉಲ್ಲಂಘನೆಯಾದರೆ ಈ ನಂಬರ್​ಗೆ ದೂರು ನೀಡಿ

ಮುಂಬೈ : ಮಹಾನಗರಿ ಮುಂಬೈಯಲ್ಲಿ ಗಣೇಶೋತ್ಸವ ಸಂಭ್ರಮ ಮೇರೆ ಮೀರಿದೆ. ಆದರೆ, ಈ ಸಂಭ್ರಮದ ನಡುವೆ ಕೆಲವೊಂದು ಸಲ ಕಾನೂನು ಉಲ್ಲಂಘನೆಯಾಗುತ್ತದೆ. ಹೀಗಾಗಿ, ಇಂತಹ ಸಂದರ್ಭದಲ್ಲಿ ದೂರು ನೀಡುವುದಕ್ಕೋಸ್ಕರ ಜನರಿಗಾಗಿ ಬೃಹನ್​ ಮುಂಬೈ ಮುನ್ಸಿಪಲ್​ ಕಾರ್ಪೋರೇಷನ್​​ ಟೋಲ್​ ಫ್ರಿ ನಂಬರ್​ ಕೊಟ್ಟಿದೆ. ಎಲ್ಲಾ 24 ವಾರ್ಡ್​​ನ ಜನರು ಈ ನಂಬರ್​ಗೆ ಕರೆ ಮಾಡಿ, ಶಬ್ದ ಮಾಲಿನ್ಯ ಅಥವಾ ಇನ್ನಾವುದೇ ಕಾನೂನು ಉಲ್ಲಂಘನೆ ಬಗ್ಗೆ ದೂರು ನೀಡಬಹುದು. ಟೋಲ್​ ಫ್ರೀ ನಂಬರ್ …

Read More »

40 ಕೆಜಿ ತೂಕದ ಆಭರಣದಿಂದ ಕಂಗೊಳ್ಳಿಸುತ್ತಿರುವ ದಗ್ಡು ಶೇಟ್​ ಹಲ್ವಾಯಿ ಗಣಪತಿ…!

ಪುಣೆ : ಇಲ್ಲಿನ ಪುರಾಣ ಪ್ರಸಿದ್ಧ ಶ್ರೀಮದ್​ ದಗ್ಡು ಶೇಟ್ ಹಲ್ವಾಯಿ ಗಣಪತಿ ಈ ಬಾರಿ ಅದ್ಧೂರಿ ಆಭರಣಗಳಿಂದ ಕಂಗೊಳಿಸುತ್ತಿದೆ. ಭಾರತದ ಪ್ರಸಿದ್ಧ ಆಭರಣ ತಯಾರಿಕಾ ಸಂಸ್ಥೆ ಪಿಎನ್​ಜಿ ಜ್ಯುಲೆವರ್ಸ್​​ ಇಲ್ಲಿ ಗಣಪತಿ ಉತ್ಸವಕ್ಕೆ ಇನ್ನಷ್ಟು ಕಳೆ ತಂದಿದೆ. ಇಲ್ಲಿನ ಗಣಪತಿಗಾಗಿಯೇ ಜ್ಯುವೆಲರ್ಸ್​​​ ಅಪರೂಪದ ಆಭರಣಗಳನ್ನು ವಿನ್ಯಾಸಗೊಳಿಸಿದೆ. ಪಿಎನ್​ಜಿ ಜ್ಯುವಲರ್ಸ್​ ಆರಂಭವಾದಾಗಿನಿಂದಲೂ ಇಲ್ಲಿನ ಗಣೇಶೋತ್ಸವದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದೆ. ಈ ಬಾರಿ ಮಾಸ್ಟರ್ ಪೀಸ್ ಆಗುವಂತಹ ಆಭರಣವನ್ನು ದೇವರಿಗಾಗಿಯೇ ತಯಾರಿಸಿಕೊಟ್ಟಿದೆ ಈ …

Read More »
error: Content is protected !!