Monday , January 21 2019
ಕೇಳ್ರಪ್ಪೋ ಕೇಳಿ
Home / Mumbai Mail (page 3)

Mumbai Mail

ಹಳಿ ತಪ್ಪಿದ ಮುಂಬೈ ಲೋಕಲ್ ಟ್ರೈನ್​ : ಐವರಿಗೆ ಗಾಯ

ಮುಂಬೈ : ಮೊನ್ನೆಯಷ್ಟೇ ಉತ್ತರ ಪ್ರದೇಶದಲ್ಲಿ ಭೀಕರ ರೈಲು ದುರಂತ ಸಂಭವಿಸಿ 23 ಜನ ಸಾವನ್ನಪ್ಪಿದ್ದರು. ಈ ನೆನಪು ಹಸಿರಿರುವಾಗಲೇ ಇನ್ನೊಂದು ರೈಲು ದುರಂತ ಸಂಭವಿಸಿದೆ. ಮುಂಬೈಯ ಹಾರ್​​​​​​ಬಾರ್​ ಲೇನ್​ನ ಮಾಹಿಮ್ ನಿಲ್ದಾಣದಲ್ಲಿ ಲೋಕಲ್​ ಟ್ರೈನ್ ಹಳಿ ತಪ್ಪಿದ್ದು, ಐವರಿಗೆ ಗಾಯಗಳಾಗಿವೆ. ಬೆಳಗ್ಗೆ ಸುಮಾರು 9.55 ಗಂಟೆಗೆ ಈ ದುರಂತ ಸಂಭವಿಸಿದೆ. 2. Traffic between Wadala-Andheri affected due to derailment of 4 coaches of ADH-CSMT …

Read More »

‘ಲಾಲ್​​​ಬಾಗ್​​​ ಚಾ ರಾಜಾ‘ನಿಗೆ ನಮಿಸಿದ ಜನ : ಸಂಭ್ರಮದ ನಡುವೆ ಸೆಲ್ಫಿ ಖುಷಿ

ಮುಂಬೈ : ಮಹಾರಾಷ್ಟ್ರದಲ್ಲಿ ಗಣೇಶ ಚತುರ್ಥಿಗೆ ವಿಶೇಷ ಮಹತ್ವ. ಇಲ್ಲಿನ ಲಾಲ್​ ಬಾಗ್​ ಚಾ ರಾಜಾ ಗಣೇಶ ಅಂದರೆ ಇಡೀ ರಾಜ್ಯಾದ್ಯಂತ ಪ್ರಸಿದ್ಧಿ. ಇಷ್ಟಾರ್ಥಗಳನ್ನು ಕರುಣಿಸೋ ರಾಜ ಇಲ್ಲಿನ ಗಣೇಶ, ಇಲ್ಲಿನ ಗಣಪನ ದರ್ಶನ ಪಡೆಯಲು ಜನ ಕಿಲೋ ಮೀಟರ್​ ಗಟ್ಟಲೆ ಸಾಲುಗಟ್ಟಿ ನಿಲ್ಲುತ್ತಾರೆ ಎಂಬುದು ಸತ್ಯ… ಕೇಂದ್ರ ಮುಂಬೈ ಭಾಗದ ಅಂಬೇಡ್ಕರ್ ರಸ್ತೆಯಲ್ಲಿರುವ ಲಾಲ್​ಬಾಗ್ ಮಾರುಕಟ್ಟೆ ಸಮೀಪ ಈ ಭವ್ಯ ಮತ್ತು ಆಕರ್ಷಕ ಗಣೇಶನ ವಿಗ್ರಹವನ್ನು ಪ್ರತಿಷ್ಠಾಪಿಸಲಾಗುತ್ತದೆ. ಸುಮಾರು …

Read More »

ಬಾಲಿವುಡ್ ಸೆಲೆಬ್ರಿಟಿಗಳಿಗೆ ಡ್ರಗ್ಸ್ ಪೂರೈಕೆ : ಓರ್ವನ ಬಂಧನ

ಮುಂಬೈ : ಬಾಲಿವುಡ್ ಸೆಲೆಬ್ರಿಟಿಗಳಿಗೆ ಮಾದಕ ದ್ರವ್ಯ ಪೂರೈಕೆ ಮಾಡುತ್ತಿದ್ದ ಆರೋಪದಲ್ಲಿ ಆಂಟಿ ನಾರ್ಕೋಟಿಕ್ಸ್ ಸೆಲ್ನ ಅಧಿಕಾರಿಗಳು ಓರ್ವನನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ನವ ಮುಂಬೈ ನಿವಾಸಿ 42 ವರ್ಷದ ವಿವೇಕ್ ಲೂಲಾ ಅಲಿಯಾಸ್ ವಿಕಿ ಎಂದು ಗುರುತಿಸಲಾಗಿದೆ. ಸುಮಾರು 1.12 ಲಕ್ಷ ಮೌಲ್ಯದ ವಿವಿಧ ಬಗೆಯ ಮಾದಕ ವಸ್ತುಗಳನ್ನು ಈತನಿಂದ ವಶಪಡಿಸಿಕೊಳ್ಳಲಾಗಿದೆ. ಕಳೆದ ಮೂರು ತಿಂಗಳಿನಿಂದ ಪೊಲೀಸರು ಈತನ ಮೇಲೆ ಕಣ್ಣಿಟ್ಟಿದ್ದರು. ಅಲ್ಲದೆ, ಮಾದಕ ದ್ರವ್ಯ ಕೇಸ್ನಲ್ಲಿ ಬಂಧನಕ್ಕೊಳಗಾದ …

Read More »

ಕ್ಲಿನಿಕ್​ಗೆ ಬರುತ್ತಿದ್ದ ಮಹಿಳೆಯ ಅತ್ಯಾಚಾರ : ಥಾಣೆಯಲ್ಲಿ ವೈದ್ಯ ಅರೆಸ್ಟ್

ಥಾಣೆ : ತನ್ನ ಕ್ಲಿನಿಕ್​ಗೆ ಬರುತ್ತಿದ್ದ ಮಹಿಳೆಯನ್ನು ಅತ್ಯಾಚಾರ ಮಾಡಿದ ಆರೋಪಕ್ಕೆ ಥಾಣೆಯ ವೈದ್ಯನೊಬ್ಬ ಗುರಿಯಾಗಿದ್ದಾನೆ  ಮತ್ತು ಆರೋಪಕ್ಕೊಳಗಾಗಿರುವ ವೈದ್ಯನನ್ನು ಕ್ರೈಂ ಬ್ರಾಂಚ್​ ಪೊಲೀಸರು ಬಂಧಿಸಿದ್ದಾರೆ. ನೌಪಡ ಪ್ರದೇಶದಲ್ಲಿ ಕ್ಲಿನಿಕ್ ನಡೆಸುತ್ತಿದ್ದ ಸರ್ಜರಿ ಸ್ಪೆಷಲಿಸ್ಟ್​ ವೈದ್ಯರಿಗೆ ಸಹಾಯಕನಾಗಿದ್ದ ಈತ ಈ ಕೃತ್ಯವೆಸಗಿದ್ದಾನೆ. ಕಳೆದ 10 ವರ್ಷದಿಂದ ಈ ವೈದ್ಯ ಇಲ್ಲಿ ಪ್ರಾಕ್ಟಿಸ್ ಮಾಡುತ್ತಿದ್ದಾನೆ ಎಂದು ಗೊತ್ತಾಗಿದೆ. ದಾರಾವಿಯ 21 ವರ್ಷದ ಗೃಹಿಣಿ ಈತನಿದ್ದ ಕ್ಲಿನಿಕ್​ಗೆ ಪರೀಕ್ಷೆಗೆ ಬರುತ್ತಿದ್ದರು. ಮೊನ್ನೆ ಈತ …

Read More »

ಒಂಭತ್ತು ದಿನಕ್ಕೆ 2.08 ಕೋಟಿ…! : ನವರಾತ್ರಿಯ ಒಂದು ದಿನಕ್ಕೆ ಫಾಲ್ಗುಣಿ ಪಾಠಕ್​​ ಗಳಿಸುವ ಹಣ ಎಷ್ಟು ಲಕ್ಷ ಗೊತ್ತಾ..?

ಮುಂಬೈ : ಇನ್ನೇನಿದ್ದರು ಹಬ್ಬಗಳ ಸರದಿ. ಹೀಗಾಗಿ, ನಮ್ಮ ಡಾಂದಿಯಾ ಕ್ವೀನ್​​ ಫಾಲ್ಕುಣಿ ಪಾಠಕ್​​ ನವರಾತ್ರಿ ವೇಳೆ ಭರ್ಜರಿ ಪ್ರದರ್ಶನ ನೀಡಲು ಸಜ್ಜಾಗಿದ್ದಾರೆ. ಮತ್ತೊಮ್ಮೆ ಬೋರಿವಿಲಿಯಲ್ಲಿ ಫಾಲ್ಕುಣಿ ತಮ್ಮ ಪ್ರದರ್ಶನ ನೀಡಲಿದ್ದಾರೆ. ಸಪ್ಟೆಂಬರ್ 21ರಿಂದ ಆರಂಭವಾಗುವ ನವರಾತ್ರಿಯ ಒಂಭತ್ತು ದಿನಗಳ ಕಾಲವೂ ಇವರು ಇಲ್ಲಿ ಪ್ರದರ್ಶನ ನೀಡಲಿದ್ದು, ಇವರ ಸಂಭಾವನೆ ಕೇಳಿದರೇನೆ ತಲೆ ತಿರುಗಿ ಹೋಗುತ್ತದೆ. ಈ ಒಂಭತ್ತು ದಿನಗಳ ಕಾಲ ಇಲ್ಲಿ ಪ್ರದರ್ಶನ ನೀಡಿದ್ದಕ್ಕೆ ಆಯೋಜಕರು ಫಾಲ್ಕುಣಿಗೆ ನೀಡಬೇಕಾದ …

Read More »

ಪುಣೆ ಕನ್ನಡ ಸಂಘ : ಆಗಸ್ಟ್​ 20 ರಂದು ಕವಿಗೋಷ್ಟಿ

ಪುಣೆ : ಇಲ್ಲಿನ ಪುಣೆ ಕನ್ನಡ ಸಂಘ ಕವಿಗೋಷ್ಠಿಗೆ ಸಿದ್ಧತೆ ಮಾಡಿಕೊಳ್ಳುತ್ತಿದೆ. ಕನ್ನಡ ಸಂಘದ ಸಾಂಸ್ಕೃತಿಕ ಸಮಿತಿ ಆಗಸ್ಟ್​ 20 ರಂದು ಕವಿಗೋಷ್ಠಿ ನಡೆಸಲು ನಿರ್ಧರಿಸಿದೆ. ಡಾ.ಕಲ್ಮಾಡಿ ಕನ್ನಡ ಮಾಧ್ಯಮ ಹೆಸ್ಕೂಲ್​ ಸಭಾಂಗಣದಲ್ಲಿ ಸಂಜೆ 6 ಗಂಟೆಗೆ ಈ ಕವಿಗೋಷ್ಠಿ ನಡೆಯಲಿದೆ. ಪುಣೆ ಕನ್ನಡ ಸಂಘದ ಅಧ್ಯಕ್ಷ ಕುಶಲ್ ಹೆಗ್ಡೆ ಕವಿಗೋಷ್ಠಿ ಉದ್ಘಾಟಿಸಲಿದ್ದು, ಮಹೇಶ್ ಹೆಗ್ಡೆ ಅಧ್ಯಕ್ಷತೆ ವಹಿಸಲಿದ್ದಾರೆ.

Read More »

ಆಗಸ್ಟ್​ 20ಕ್ಕೆ ಗೋರೆವಾಂವ್​​ನಲ್ಲಿ ಅರೆಮರ್ಲೆರ್​ ಚಿತ್ರ ಪ್ರದರ್ಶನ

ಮುಂಬೈ : ಕೋಸ್ಟಲ್​ವುಡ್​ನಲ್ಲಿ ಸಾಕಷ್ಟು ಮೆಚ್ಚುಗೆ ಗಳಿಸಿ ಮುನ್ನಡೆಯುತ್ತಿರುವ ಅರೆ ಮರ್ಲೆರ್ ಚಿತ್ರ ಮುಂಬೈಯಲ್ಲೂ ಪ್ರದರ್ಶನಗೊಳ್ಳಲು ಸಜ್ಜಾಗಿದೆ. ಆಗಸ್ಟ್​ 20 ರಂದು ಗೋರೇಗಾಂವ್​​​ನ ಪಶ್ಚಿಮದ ಟೋಪಿವಾಲ ಚಿತ್ರಮಂದಿರಲ್ಲಿ ಅರೆ ಮರ್ಲೆರ್ ಪ್ರದರ್ಶನಗೊಳ್ಳಲಿದೆ. ಆಗಸ್ಟ್​ 20 ರಂದು ಬೆಳಗ್ಗೆ 9 ಗಂಟೆಯಿಂದ ಚಿತ್ರ ಪ್ರದರ್ಶನ ಆರಂಭಗೊಳ್ಳಲಿದೆ. ಅರ್ಜುನ್ ಕಾಪಿಕಾಡ್​ ನಾಯಕನಾಗಿ ನಟಿಸಿರುವ ಈ ಚಿತ್ರದಲ್ಲಿ ಕೋಸ್ಟಲ್​ವುಡ್​ನ ಪ್ರಮುಖ ಕಲಾವಿದರೆಲ್ಲಾ ಅಭಿನಯಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಕಾರ್ಯಕ್ರಮದ ವ್ಯವಸ್ಥಾಪಕರಾದ ಸುರೇಶ್ ಕಡಂದಲೆ : 9867276638 …

Read More »

ದಹಿಹಂಡಿ ಆಚರಣೆಯಲ್ಲಿ ದುರಂತ : ಇಬ್ಬರ ಸಾವು

ಮುಂಬೈ : ಶ್ರೀಕೃಷ್ಣ ಜನ್ಮಾಷ್ಟಮಿ ಅಂಗವಾಗಿ ದಹಿಹಂಡಿ(ಮೊಸರು ಕುಡಿಕೆ) ಆಚರಣೆ ಸಂದರ್ಭದಲ್ಲಿ ದುರಂತ ಸಂಭವಿಸಿದೆ. ಪ್ರತ್ಯೇಕ ಪ್ರಕರಣದಲ್ಲಿ ಇಬ್ಬರು ಕೊನೆಯುಸಿರೆಳೆದಿದ್ದಾರೆ. ಅಲ್ಲದೆ, ನಗರದ ವಿವಿದೆಡೆ ಸುಮಾರು 117 ರಷ್ಟು ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಐರೋಲಿಯಲ್ಲಿ ಪಿರಾಮಿಡ್​​​ ರಚನೆ ವೇಳೆ ವಿದ್ಯುತ್​ ಸ್ಪರ್ಶವಾಗಿ ವ್ಯಕ್ತಿಯೊಬ್ಬರು ಕೊನೆಯುಸಿರೆಳೆದಿದ್ದಾರೆ. ಮೃತರನ್ನು ಜಯೇಶ್​ ಸರ್ತಿ ಎಂದು ಗುರುತಿಸಲಾಗಿದೆ. ಇನ್ನು, ಪುಣೆಯ ಫಡ್ಕೆಹಾಡ್​ ಚೌಕ್​ನಲ್ಲಿ ದಹಿಹಂಡಿ ಆಚರಣೆ ಮುಗಿಸಿ ಮನೆಗೆ ಮರಳುತ್ತಿದ್ದ ಯುವಕರೊಬ್ಬರು ಹೃದಯಾಘಾತದಿಂದ …

Read More »

ಮಹಾರಾಷ್ಟ್ರದಲ್ಲಿ ಎತ್ತಿನಗಾಡಿ ಓಟದ ಸ್ಪರ್ಧೆಗೆ ಬ್ರೇಕ್​​…?

ಮುಂಬೈ : ಮಹಾರಾಷ್ಟ್ರದಲ್ಲಿ ಎತ್ತಿನ ಗಾಡಿ ಓಟದ ಸ್ಪರ್ಧೆಗೆ ಸದ್ಯಕ್ಕೆ ಬ್ರೇಕ್ ಬಿದ್ದಿದೆ. ರಾಜ್ಯದಲ್ಲಿ ಪ್ರಾಣಿಗಳ ಮೇಲಿನ ಕ್ರೌರ್ಯವನ್ನು ತಡೆಯುವ ಕಾಯ್ದೆಗೆ ತಿದ್ದುಪತಿ ಮಾಡಿ ನಿಯಮವನ್ನು ಪ್ರಕಟಿಸುವ ತನಕ ಎತ್ತಿನಗಾಡಿ ಓಟಕ್ಕೆ ಅನುಮತಿ ನೀಡಬಾರದು ಎಂದು ಬಾಂಬೆ ಹೈಕೋರ್ಟ್​ ಆದೇಶಿಸಿದೆ. ಎತ್ತಿನ ಗಾಡಿ ಓಟದ ಸ್ಪರ್ಧೆಗೆ ಅನುಮತಿ ನೀಡಿರುವುದನ್ನು ವಿರೋಧಿಸಿ ಪುಣೆಯ ಅಜಯ್​ ಮರಾಠೆ ಹೈಕೋರ್ಟ್​ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ …

Read More »

 ಈ ಅಧಿಕಾರಿ ಸಂಪಾದಿಸಿದ್ದು 15 ಕೋಟಿಯಷ್ಟು ಅಕ್ರಮ ಆಸ್ತಿ…!

ಮುಂಬೈ : ಭ್ರಷ್ಟಾಚಾರ ಆರೋಪದಲ್ಲಿ ಬಂಧಿಸಲ್ಪಟ್ಟ ಮುಂಬೈ ಮೆಟ್ರೋ ಪಾಲಿಟನ್​ ವಲಯ ಉಕ್ಕು ಹಾಗೂ ಸ್ಟೀಲ್​ ಮಾರುಕಟ್ಟೆ ಸಮಿತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವಿಕಾಸ್​ ರಸಲ್​ ಅಕ್ರಮ ಆಸ್ತಿ ವಿವರ ಕೇಳಿದರೇನೇ ತಲೆ ತಿರುಗುತ್ತದೆ. ರಾಜ್ಯ ಸರ್ಕಾರದ ಈ ಹಿರಿಯ ಅಧಿಕಾರಿ ಅಕ್ರಮವಾಗಿ 15 ಕೋಟಿಯಷ್ಟು ಆಸ್ತಿ ಸಂಪಾದನೆ ಮಾಡಿದ್ದಾಗಿ ತನಿಖಾಧಿಕಾರಿಗಳು ತಿಳಿಸಿದ್ದಾರೆ. ಕಳೆದ ತಿಂಗಳು ವಿಮಾನ ನಿಲ್ದಾಣದಲ್ಲಿ ವಿಕಾಸ್​ ರಸಲ್​ 65 ಲಕ್ಷ ರೂಪಾಯಿ ನಗದು ಹಣದೊಂದಿಗೆ ಸಿಕ್ಕಿಬಿದ್ದಿರು. …

Read More »
error: Content is protected !!