Monday , January 21 2019
ಕೇಳ್ರಪ್ಪೋ ಕೇಳಿ
Home / Mumbai Mail (page 4)

Mumbai Mail

ಮುಂಬೈ ಪೇಜಾವರ ಮಠದಲ್ಲಿ ಸಂಭ್ರಮದ ಶ್ರೀಕೃಷ್ಣ ಜನ್ಮಾಷ್ಟಮಿ

ಮುಂಬೈ : ಸಂತಾಕ್ರೂಜ್ ಪೂರ್ವ ಪ್ರಭಾತ್​ ಕಾಲೋನಿಯಲ್ಲಿರುವ ಪೇಜಾವರ ಶಾಖಾ ಮಠದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ಸಂಭ್ರಮದಿಂದ ಆಚರಿಸಲಾಯಿತು. ಪೇಜಾವರ ಮಠದ ವಿಶ್ವೇಶತೀರ್ಥ ಶ್ರೀಗಳು ಮತ್ತು ಕಿರಿಯ ಶ್ರೀಗಳಾದ ವಿಶ್ವಪ್ರಸನ್ನ ತೀರ್ಥರ ಮಾರ್ಗದರ್ಶನದಲ್ಲಿ ಜನ್ಮಾಷ್ಟಮಿ ಮತ್ತು ವಿಟ್ಲ ಪಿಂಡಿ ಉತ್ಸವವನ್ನು ಇಲ್ಲಿ ನೆರವೇರಿಸಲಾಯಿತು. ಭಕ್ತರೆಲ್ಲಾ ಸಂಭ್ರಮದಿಂದಲೇ ಮುರಳಿಲೋಲನ ಉತ್ಸವದಲ್ಲಿ ಪಾಲ್ಗೊಂಡರು. ಬೆಳಗ್ಗಿನಿಂದಲೇ ಭಕ್ತರು ದೇವರಿಗೆ ವಿಶೇಷ ಪೂಜೆ ಸಲ್ಲಿಸುವುದು ಕೂಡಾ ಸಾಮಾನ್ಯವಾಗಿತ್ತು. ಸಂಜೆ ಮಠದ ಆವರಣದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳೂ ನಡೆದವು.

Read More »

ಬಾಂಬೆ ಬಂಟ್ಸ್​ ಅಸೋಸಿಯೇಷನ್​​ನಿಂದ ಸಮೂಹ ಭಜನಾ ಸ್ಪರ್ಧೆ

ಮುಂಬೈ : ಬಾಂಬೆ ಬಂಟ್ಸ್​ ಅಸೋಸಿಯೇಷನ್​ನ ಮಹಿಳಾ ವಿಭಾಗ ಸೆಪ್ಟೆಂಬರ್​ 23 ರಂದು ಸಮೂಹ ಭಜನಾ ಸ್ಪರ್ಧೆಯನ್ನು ಏರ್ಪಡಿಸಿದೆ. ಈ ಸ್ಫರ್ಧೆಯಲ್ಲಿ ಮುಂಬೈ ಮತ್ತು ಥಾಣೆ ಜಿಲ್ಲೆಯ ತಂಡಗಳಿಗೆ ಮಾತ್ರ ಭಾಗವಹಿಸುವ ಅವಕಾಶ ನೀಡಲಾಗಿದೆ. ನಿಯಮಗಳು : ತಂಡದಲ್ಲಿ 5 ರಿಂದ 7 ಮಂದಿ ಇರಬೇಕು, ಹಿಮ್ಮೇಳದಲ್ಲಿ ತಬಲಾ, ಹಾರ್ಮೋನಿಯಂ, ತಾಳ ಮಾತ್ರ ಬಳಸಬೇಕು, ಈ ಪರಿಕರಗಳನ್ನು ಆಯೋಜಕರೇ ಒದಗಿಸುತ್ತಾರೆ. ಬೇರೆ ಯಾವುದೇ ಸಂಗೀತ ವಾದ್ಯಗಳನ್ನು ಬಳಸುವಂತಿಲ್ಲ. ಪ್ರತೀ ತಂಡಕ್ಕೂ …

Read More »

ಪ್ರತಿಭಾ ಪುರಸ್ಕಾರ, ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ : ಆಗಸ್ಟ್​ 31 ಕೊನೆಯ ದಿನ

ಮುಂಬೈ : ಬಿಲ್ಲವ ಸೇವಾ ಸಂಘ ಕುಂದಾಪುರ ಮುಂಬೈ ವತಿಯಿಂದ ಪ್ರತಿವರ್ಷ ಪ್ರತಿಭಾ ಪುರಸ್ಕಾರ ಮತ್ತು ವಿದ್ಯಾರ್ಥಿ ವೇತನ ನೀಡಲಾಗುತ್ತದೆ. ಈ ಪುರಸ್ಕಾರಕ್ಕೆ ಈ ಬಾರಿಯೂ ಅರ್ಜಿ ಆಹ್ವಾನಿಸಲಾಗಿದೆ. ಮುಂಬೈ ಮತ್ತು ಉಪನಗರದಲ್ಲಿ ನೆಲೆಸಿರುವ ಬಿಲ್ಲವ ಸಂಘದ ಸದಸ್ಯರು ಮತ್ತು ಸದಸ್ಯರ ಮಕ್ಕಳು ಇಲ್ಲಿ ಅರ್ಜಿ ಸಲ್ಲಿಸಬಹುದುದಾಗಿದೆ. ವಿವಿಧ ತರಗತಿಗಳಿಗೆ ಅನುಗುಣವಾಗಿ ಶೇಕಡಾವಾರು ಅಂಕಗಳನ್ನು ಪ್ರತಿಭಾ ಪುರಸ್ಕಾರಕ್ಕೆ ನಿಗದಿ ಮಾಡಲಾಗಿದೆ. ಈ ಅರ್ಜಿ ಸಲ್ಲಿಸಲು ಆಗಸ್ಟ್​ 31 ಕೊನೆ ದಿನವಾಗಿದೆ. …

Read More »

ನದಿಗೆ ಕೈಗಾರಿಕಾ ತ್ಯಾಜ್ಯ : ಮುಂಬೈ ಶ್ವಾನಗಳೆಲ್ಲಾ ನೀಲಿ ನೀಲಿ…!

ನವದೆಹಲಿ : ನವೀ ಮುಂಬೈನ ತಲೋಜಾ ಕೈಗಾರಿಕಾ ಪ್ರದೇಶ ಆಸುಪಾಸಿನ ಬೀದಿ ನಾಯಿಗಳು ನೀಲಿ ಬಣ್ಣಕ್ಕೆ ತಿರುಗುತ್ತಿವೆ. ಜನರಿಗೆ ಇದು ಅಚ್ಚರಿ ಮೂಡಿಸಿದೆ.  ಹೀಗೆ ಶ್ವಾನಗಳು ನೀಲಿ ಬಣ್ಣಕ್ಕೆ ತಿರುಗುವುದು ಯಾಕೆ ಎಂಬ ಪರಿಶೀಲಿಸಿದಾಗ ಅಚ್ಚರಿ ವಿಷಯ ಹೊರಬಿದ್ದಿದೆ. ಇದು ಕೈಗಾರಿಕಾ ತ್ಯಾಜ್ಯದ ಬಳುವಳಿ…! ವಿಷಕಾರಿ ತ್ಯಾಜ್ಯ ನದಿಗೆ ಬಿಡುತ್ತಿರುವ ಪರಿಣಾಮವೇ ಇದು ಎಂಬ ಅಂಶ ಈಗ ಬಯಲಾಗಿದೆ. ಈ ಬೀದಿನಾಯಿಗಳು ಕೈಗಾರಿಕೆಗಳು ತ್ಯಾಜ್ಯ ಬಿಟ್ಟ ನೀರಿನಲ್ಲಿ ಮುಳುಗೇಳುವ ಪರಿಣಾಮ …

Read More »

ಆಗಸ್ಟ್​ 14 ರಂದು ಕೋಟಿ ಚೆನ್ನಯ ಯಕ್ಷಗಾನ

ಬಾಯಂದರ್​ : ಆಗಸ್ಟ್​ 14 ರಂದು ಮೀರಾ ಬಾಯಂದರ್​ನ ಸೆವೆನ್​ ಸ್ಕ್ವೇರ್​​​ ಅಕಾಡೆಮಿ ಸ್ಕೂಲ್​ ಮೈದಾನದಲ್ಲಿ ಕೋಟಿ ಚೆನ್ನಯ್ಯ ತುಳು ಯಕ್ಷಗಾನ ಬಯಲಾಟ ನಡೆಯಲಿದೆ. ಮೀರಾ ಬಾಯಂದರ್​ನ ಬಿಜೆಪಿ ದಕ್ಷಿಣ ಭಾರತೀಯ ಘಟಕದ ಆಶ್ರಯದಲ್ಲಿ ಯಕ್ಷಗಾನವನ್ನು ಆಯೋಜಿಸಲಾಗಿದೆ. ಯಕ್ಷಗಾನದ ಪ್ರಬುದ್ಧ ಕಲಾವಿದರೆಲ್ಲಾ ಇಲ್ಲಿ ಪ್ರದರ್ಶನ ನೀಡಲಿದ್ದಾರೆ. ಆಗಸ್ಟ್​ 14 ರ ಸಂಜೆ 4.30ಕ್ಕೆ ಯಕ್ಷಗಾನ ಪ್ರದರ್ಶನ ನಡೆಯಲಿದೆ. ಶ್ರೀಗೀತಾಂಬಿಕಾ ಕೃಪಾ ಪೋಷಿತ ಯಕ್ಷಗಾನ ಮಂಡಳಿ ಅಸಲ್ಪಾ, ಘಾಟ್​ಕೋಪರ್​ ಹಾಗೂ ಕನ್ನಡ …

Read More »

ರಾತ್ರಿ ವೇಳೆ ಮೆಟ್ರೋ 3 ಕಾಮಗಾರಿ ನಡೆಸಬೇಡಿ: ಎಂಎಂಆರ್​ಸಿಎಲ್​ಗೆ ಹೈಕೋರ್ಟ್​ ನಿರ್ದೇಶನ

ಮುಂಬೈ : ಮೆಟ್ರೋ 3ರ ಕಾಮಗಾರಿಯನ್ನು ರಾತ್ರಿ ಹೊತ್ತು ನಡೆಸದಂತೆ ಮುಂಬೈ ಮೆಟ್ರೋ ರೈಲು ನಿಗಮಕ್ಕೆ ಬಾಂಬೆ ಹೈಕೋರ್ಟ್​ ನಿರ್ದೇಶನ ನೀಡಿದೆ. ಎರಡು ವಾರಗಳ ಕಾಲ ರಾತ್ರಿ 10 ರಿಂದ ಬೆಳಗ್ಗೆ 6 ಗಂಟೆಯ ವರೆಗೆ ಕಾಮಗಾರಿ ಸೇರಿದಂತೆ ಯಾವುದೇ ಚಟುವಟಿಕೆ ಮಾಡದಂತೆ ಮೆಟ್ರೋ ನಿಗಮಕ್ಕೆ ಮುಖ್ಯ ನ್ಯಾಯಮೂರ್ತಿ ಮಂಜುಳಾ ಚೆಲ್ಲೂರು ಮತ್ತು ನ್ಯಾಯಮೂರ್ತಿ ಎನ್​.ಎಂ.ಜಾಮ್ದಾರ್​ ಅವರನ್ನೊಳಗೊಂಡ ಪೀಠ ತನ್ನ ಆದೇಶದಲ್ಲಿ ಹೇಳಿದೆ. ಇನ್ನು, ಈ ಸಂಬಂಧ ಮಹಾರಾಷ್ಟ್ರ ಪರಿಸರ …

Read More »

ಮೊಗವೀರ ವ್ಯವಸ್ಥಾಪಕ ಮಂಡಳಿಯ 116ನೇ ಸಂಸ್ಥಾಪನಾ ದಿನಾಚರಣೆ

ಮುಂಬೈ: ಮಹಾರಾಷ್ಟ್ರದ ಮುಂಬೈನಲ್ಲಿರುವ ಫೋರ್ಟ್​ ಪರಿಸರದಲ್ಲಿ ಇರುವ ಮೊಗವೀರ ವ್ಯವಸ್ಥಾಪಕ ಮಂಡಳಿಗೆ ಈಗ 115ನೇ ವಸಂತ ತುಂಬಿದ ಸಂಭ್ರಮ. ಆಗಸ್ಟ್​ 9 ರಂದು ಮಂಡಳಿಯ 116ನೇ ಸಂಸ್ಥಾಪನಾ ದಿನವನ್ನು ಆಚರಿಸಲಾಯಿತು. 1902ರ ಆಗಸ್ಟ್‌ 9ರಂದು ದಿ| ಕಾಡಿಪಟ್ಣ ಚಂದು ಮಾಸ್ತರ್‌ ಅವರ ನೇತೃತ್ವದಲ್ಲಿ ಮೊಗವೀರ ವ್ಯವಸ್ಥಾಪಕ ಮಂಡಳಿ ಸ್ಥಾಪನೆಗೊಂಡಿತ್ತು. ಅಂದಿನಿಂದ ಇಂದಿನವರೆಗೆ ಈ ಮಂಡಳಿ ವಿವಿಧ ಸಮಾಜಿಕ ಕಾರ್ಯಗಳ ಮೂಲಕ ಗಮನ ಸೆಳೆದಿದೆ. ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಮತ್ತು ಸಾಹಿತ್ಯಕ …

Read More »

ಪಿಎಚ್​ಡಿ ಸೀಟು ನೀಡಲು ಮಂಚಕ್ಕೆ ಕರೆದ ಪ್ರೊಫೆಸರ್​ ಬಂಧನ

ಪುಣೆ : ಪಿಎಚ್​​ಡಿ ಸೀಟು ಕೇಳಿದ ಇರಾನಿ ಮಹಿಳೆಯನ್ನು ಮಂಚಕ್ಕೆ ಕರೆದ ಪ್ರೊಫೆಸರ್​​ನನ್ನು ಪುಣೆ ಪೊಲೀಸರು ಬಂಧಿಸಿದ್ದಾರೆ. 31 ವರ್ಷದ ಇರಾನಿ ವಿದ್ಯಾರ್ಥಿನಿ 50 ವರ್ಷದ ಪ್ರೊಫೆಸರ್​ನಿಂದ ತನಗಾದ ಅನ್ಯಾಯದ ಬಗ್ಗೆ ಪೊಲೀಸರಿಗೆ ದೂರು ನೀಡಿದ ಬಳಿಕ ಪೊಲೀಸರು ಪ್ರತಿಷ್ಠಿತ ಕಾಲೇಜಿನ ಈ ಪ್ರೊಫೆಸರ್​​ ಅನ್ನು ಬಂಧಿಸಿದ್ದಾರೆ. ಬಂಧಿತ ಪ್ರೊಫೆಸರ್​ಗೆ ಎರಡು ದಿನಗಳ ಕಾಲ ಪೊಲೀಸ್ ಕಸ್ಟಡಿ ವಿಧಿಸಲಾಗಿದೆ, ಈ ಪ್ರೊಫೆಸರ್ ತನ್ನ ಬಳಿ ಲೈಂಗಿಕ ತೃಷೆ ತೀರಿಸುವಂತೆ ಕೇಳಿಕೊಂಡದ್ದೇ …

Read More »

ಪೇಜಾವರ ಮಠದ ಮುಂಬೈ ಶಾಖೆಯಲ್ಲಿ ಶ್ರೀಕೃಷ್ಣ ಜನ್ಮಷ್ಟಾಮಿ

ಮುಂಬೈ : ದೇಶದೆಲ್ಲೆಡೆ ಕೃಷ್ಣ ಜನ್ಮಾಷ್ಟಮಿ ಸಂಭ್ರಮದ ಸಿದ್ಧತೆ ಗರಿಗೆದರಿದೆ. ವಾಣಿಜ್ಯ ನಗರಿ ಮುಂಬೈಯಲ್ಲೂ ಈ ಸಂಭ್ರಮ ಮೇರೆ ಮೇರಲಿದೆ. ಪೇಜಾವರ ಮಠದ ಮುಂಬೈ ಶಾಖೆಯಲ್ಲೂ ಶ್ರೀಕೃಷ್ಣ ಜನ್ಮಾಷ್ಟಮಿಯ ಸಿದ್ಧತೆಗಳು ಭರ್ಜರಿಯಾಗಿಯೇ ನಡೆಯುತ್ತಿದೆ, ಆಗಸ್ಟ್ 14 ಮತ್ತು 15 ರಂದು ಸಾಂತಾಕ್ರೂಜ್​ ಪೂರ್ವದಲ್ಲಿರುವ ಪೇಜಾವರ ಮಠದ ಮುಂಬೈ ಶಾಖೆಯಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಮತ್ತು ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಆಗಸ್ಟ್​ 14ರಂದು ಸಂಜೆ 7ರಿಂದ ಶ್ರೀಕೃಷ್ಣ ಪ್ರತಿಷ್ಠಾನ ಮುಂಬಯಿಯ ಸಂಸ್ಥಾಪಕ …

Read More »

ಆಗಸ್ಟ್​ 15ಕ್ಕೆ ಮದಿಪು ಚಿತ್ರ ಪ್ರದರ್ಶನ

ಮುಂಬೈ : ರಾಷ್ಟ್ರ ಮತ್ತು ರಾಜ್ಯ ಪ್ರಶಸ್ತಿ ಪಡೆದ ತುಳು ಚಲನಚಿತ್ರ ಮದಿಪು ಆಗಸ್ಟ್​ 15 ರಂದು ಮುಂಬೈಯಲ್ಲಿ ಪ್ರದರ್ಶನಗೊಳ್ಳಲಿದೆ. ಸಯನ್​ನ ಪಿವಿಆರ್​ ಸಿನೆಮಾದಲ್ಲಿ ಮದಿಪು ಪ್ರದರ್ಶನ ಏರ್ಪಡಿಸಲಾಗಿದೆ. ವಿಕಾಸ್ ಭಾರತ್​ ಟ್ರಸ್ಟ್​​ನ ಪ್ರಯೋಜಕತ್ವದಲ್ಲಿ ಬಡರೋಗಿಗಳ ಸಹಾಯಾರ್ಥವಾಗಿ ಈ ಪ್ರದರ್ಶನ ಏರ್ಪಡಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಚೇತನ್ ಮುಂಡಾಡಿ ನಿರ್ದೇಶನದ ಮದಿಪು ಚಿತ್ರವನ್ನು ಸಂದೀಪ್​ ಕುಮಾರ್ ನಂದಳಿಕೆ ನಿರ್ಮಾಣ ಮಾಡಿದ್ದರು. ಆಗಸ್ಟ್​ 15ರ ಮಂಗಳವಾರ ಬೆಳಗ್ಗೆ 8.45ಕ್ಕೆ ಕಾರ್ಯಕ್ರಮ ಆರಂಭವಾಗಲಿದ್ದು, …

Read More »
error: Content is protected !!