Monday , August 20 2018
ಕೇಳ್ರಪ್ಪೋ ಕೇಳಿ
Home / News NOW

News NOW

ಮೂಡಬಿದಿರೆಯಲ್ಲಿ ನಾಪತ್ತೆಯಾದ ಯುವಕನ ಶವ ಪತ್ತೆ : ತಮ್ಮನಿಂದಲೇ ಕೊಲೆಯಾಗಿರುವ ಶಂಕೆ

ಮೂಡಬಿದಿರೆ : ಆಗಸ್ಟ್ 11 ರಿಂದ ನಾಪತ್ತೆಯಾಗಿದ್ದ ಮೂಡಬಿದಿರೆಯ ಸುದರ್ಶನ್ ಜೈನ್ ಎಂಬ ಯುವಕ ಶವವಾಗಿ ಪತ್ತೆಯಾಗಿದ್ದಾರೆ. ಸುದರ್ಶನ್‍ಗೆ 28 ವರ್ಷ ವಯಸ್ಸಾಗಿತ್ತು. ಇಲ್ಲಿನ ಪ್ರಭಾತ್ ಟೆಕ್ಸ್ ಟೈಲ್ಸ್ ನಲ್ಲಿ ಕೆಲಸ ಮಾಡುತ್ತಿದ್ದ ಸುದರ್ಶನ್ ಆಗಸ್ಟ್ 11 ರಿಂದ ನಾಪತ್ತೆಯಾಗಿದ್ದರು. ತಮ್ಮನೊಂದಿಗೆ ಬೈಕ್‍ನಲ್ಲಿ ಹೋಗಿದ್ದ ಸುದರ್ಶನ್ ನಂತರ ನಾಪತ್ತೆಯಾಗಿದ್ದರು. ಬಳಿಕ ತಮ್ಮನ ಬಳಿ ವಿಚಾರಿಸಿದಾಗ ಅಣ್ಣ ಅರ್ಧದಲ್ಲೇ ಬೈಕ್‍ನಿಂದ ಇಳಿದು ಜಗಳ ಮಾಡಿಕೊಂಡು ಹೋಗಿದ್ದಾಗಿ ಹೇಳಿದ್ದ. ಆದರೆ, ಇದೀಗ ಸುದರ್ಶನ್ …

Read More »

ಮಳೆಯಿಂದ ಸಂಕಷ್ಟಕ್ಕೀಡಾಗಿದೆ ಕರುನಾಡ ಸ್ವರ್ಗ : ಇಲ್ಲಿದೆ ಹೆಲ್ಪ್ ಲೈನ್ ನಂಬರ್

ಮಡಿಕೇರಿ : ಕಳೆದ ಮೂರು ದಿನಗಳಿಂದ ಎಡೆಬಿಡದೆ ಸುರಿಯುತ್ತಿರುವ ಭಾರೀ ಮಳೆಗೆ ಕೊಡಗು ಜಿಲ್ಲೆಯ ಬಹುಭಾಗ ತತ್ತರಿಸಿ ಹೋಗಿದೆ. ಕಣ್ಣೆದುರೇ ಮನೆಗಳು ಕುಸಿಯುತ್ತಿವೆ, ಗುಡ್ಡಗಳು ಧರಾಶಯಿ ಆಗುತ್ತಿದೆ. ಸಾಕಷ್ಟು ಬೆಳೆ ನಾಶ ಸಂಭವಿಸಿದೆ. ಬೆಟ್ಟ ಗುಡ್ಟದ ಮೇಲೆ ಕುಳಿತು ಜನ ಸಹಾಯಕ್ಕಾಗಿ ಮೊರೆ ಇಡುತ್ತಿದ್ದಾರೆ. ಕೆಲವರು ಊಟ ನಿದ್ದೆ ಇಲ್ಲದೆ ಪರದಾಡುತ್ತಿದ್ದಾರೆ. ಜಿಲ್ಲೆಯಲ್ಲಿ ಹರಿಯುತ್ತಿದ್ದ ಸಣ್ಣ ಪುಟ್ಟ ನದಿಗಳೂ ಈಗ ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ಹೀಗಾಗಿ, ಈ ನೀರು …

Read More »

ನಾಳೆ ಎಲ್ಲಾ ಶಾಲಾ, ಕಾಲೇಜು, ಸರ್ಕಾರಿ ಕಚೇರಿಗಳಿಗೆ ರಜೆ

ಬೆಂಗಳೂರು : ಮಾಜಿ ಪ್ರಧಾನಿ, ದೇಶದ ಅಪ್ರತಿಮ ನಾಯಕ ಅಟಲ್ ಬಿಹಾರಿ ವಾಜಪೇಯಿ ನಿಧನ ಹಿನ್ನೆಲೆಯಲ್ಲಿ ನಾಳೆ ರಾಜ್ಯಾದ್ಯಂತ ಎಲ್ಲಾ ಶಾಲಾ ಕಾಲೇಜು ಮತ್ತು ಸರ್ಕಾರಿ ಕಚೇರಿಗಳಿಗೆ ರಜೆ ಘೋಷಿಸಲಾಗಿದೆ. ಅಲ್ಲದೆ, ಏಳು ದಿನಗಳ ಕಾಲ ಶೋಕಾಚರಣೆಗೂ ಸರ್ಕಾರ ನಿರ್ಧರಿಸಿದೆ. ಈ ಬಗ್ಗೆ ರಾಜ್ಯ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ. ಆದರೆ, ಪ್ರಸ್ತುತ ರಾಜ್ಯದ ಹಲವೆಡೆ ಭಾರೀ ಮಳೆಯಿಂದ ಪ್ರೆವಾಹ ಪರಿಸ್ಥಿತಿ ಇರುವ ಕಾರಣ ತುರ್ತು ಪರಿಸ್ಥಿತಿಯನ್ನು ನಿಭಾಯಿಸುವ ಮತ್ತು …

Read More »

ದೇಶಕಂಡ ಅಪ್ರತಿಮ ನಾಯಕ, ಅಜಾತ ಶತ್ರು ಇನ್ನಿಲ್ಲ

ನವದೆಹಲಿ : ಮಾಜಿ ಪ್ರಧಾನಿ, ಅಜಾತ ಶತ್ರು ಅಟಲ್ ಬಿಹಾರಿ ವಾಜಪೇಯಿ ವಿಧಿವಶರಾಗಿದ್ದಾರೆ. ಏಮ್ಸ್ ಆಸ್ಪತ್ರೆಯಲ್ಲಿ ವಾಜಪೇಯಿ ಕೊನೆಯುಸಿರೆಳೆದಿದ್ದಾರೆ. ಅವರಿಗೆ 93 ವರ್ಷ ಆಗಿತ್ತು. ವಯೋಸಹಜ ಸಮಸ್ಯೆಗಳಿಂದ ಬಳಲುತ್ತಿದ್ದ ವಾಜಪೇಯಿ ಅವರಿಗೆ ಏಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವಾಜಪೇಯಿ ಅವರು ಗುರುವಾರ ಸಂಜೆ 5 ಗಂಟೆ 5 ನಿಮಿಷಕ್ಕೆ ಕೊನೆಯುಸಿರೆಳೆದಿದ್ದಾಗಿ ಏಮ್ಸ್ ಆಸ್ಪತ್ರೆ ವೈದ್ಯರು ಸ್ಪಷ್ಟಪಡಿಸಿದ್ದಾರೆ. ಇನ್ನು, ಹಿರಿಯ ನಾಯಕನ ಅಗಲಿಕೆಗೆ …

Read More »

ಮಡಿಕೇರಿಯಲ್ಲಿ ಮಳೆಯ ರೌದ್ರಾವತಾರ : ಇಲ್ಲಿದೆ ಮನೆ ಬೀಳುವ ಭೀಕರ ದೃಶ್ಯ…!

ಮಡಿಕೇರಿ : ಕೊಡಗಿನಲ್ಲಿ ಮಳೆ ತನ್ನ ರೌದ್ರಾವತಾರ ಮೆರೆಯುತ್ತಿದೆ. ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಅದೆಷ್ಟೋ ಜನ ನಿರಾಶ್ರಿತರಾಗಿದ್ದಾರೆ. ಈ ನಡುವೆ ಹಲವಾರು ಮನೆಗಳು ಧರೆಗುರುಳಿವೆ. ಇದರಲ್ಲಿ ಮುತ್ತಪ್ಪ ದೇವಸ್ಥಾನದ ಬಳಿಕಯದ್ದು ಎನ್ನಲಾದ ಮನೆಯೊಂದು ಕುಸಿಯುವ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ವೀಡಿಯೋ ಕೂಡಾ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಇನ್ನು, ಮಳೆಗೆ ನೂರಾರು ಮಂದಿ ನಾಪತ್ತೆಯಾಗಿದ್ದು, ಹಲವಾರು ಸಾವು ನೋವುಗಳು ಸಂಭವಿಸಿದೆ ಎಂಬ ಸುದ್ದಿಯೂ ಹಬ್ಬಿದೆ. ಈ …

Read More »

ಬೆಂಗಳೂರಿನಲ್ಲಿ ಭೂಕಂಪ ಆಗಿಲ್ಲ… : ಯಾರೂ ಭಯಪಡಬೇಕಾಗಿಲ್ಲ

ಬೆಂಗಳೂರು : ರಾಜಧಾನಿಯ ಹಲವೆಡೆ ಭಾರೀ ಸದ್ದು ಕೇಳಿ ಬಂದಿದೆ. ಹೀಗಾಗಿ, ಜನರೆಲ್ಲಾ ಇದು ಭೂಕಂಪ ಅಂತ ಭಯಭೀತರಾಗಿದ್ದರು. ಆದರೆ, ಇದು ಭೂಕಂಪ ಅಲ್ಲ ಎಂದು ಭೂಗರ್ಭ ವಿಜ್ಞಾನಿಗಳು ಸ್ಪಷ್ಟಪಡಿಸಿದ್ದಾರೆ. ಜಯನಗರ, ಶ್ರೀನಗರ, ರಾಜರಾಜೇಶ್ವರಿ ನಗರ ಸೇರಿದಂತೆ ಹಲವು ಕಡೆ ಈ ಸದ್ದು ಕೇಳಿ ಬಂದಿದೆ. ಇದು ಗಾಳಿಯ ಸ್ಥಾನಪಲ್ಲಟದಿಂದ ಹೀಗೆ ಸದ್ದು ಕೇಳಿ ಬಂದಿರಬಹುದು ಎಂದು ಭೂಗರ್ಭ ತಜ್ಞರು ಹೇಳಿದ್ದಾರೆ. ಬಂಡೆ ಒಡೆಯಲು ಬಳಸುವ ಸ್ಫೋಟಕದಿಂದ ಬರುವಂತಹ ಸದ್ದು …

Read More »

ವಾಸಕ್ಕೆ ಯೋಗ್ಯವಾದ ನಗರಗಳ ಪಟ್ಟಿ : ಟಾಪ್ 50ಯಲ್ಲಿ ಸ್ಥಾನ ಪಡೆದ ಮಂಗಳೂರು

ನವದೆಹಲಿ : ದೇಶದಲ್ಲಿ ವಾಸಕ್ಕೆ ಅತ್ಯಂತ ಯೋಗ್ಯವಾದ ನಗರಗಳ ಪಟ್ಟಿಯನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ ಟಾಪ್ 50ಯಲ್ಲಿ ಮಂಗಳೂರು ಸ್ಥಾನ ಪಡೆದಿದೆ. 41 ನೇ ಸ್ಥಾನ ಪಡೆದು ಟಾಪ್ 50 ಪಟ್ಟಿಯಲ್ಲಿ ಸ್ಥಾನ ಪಡೆದ ಕರ್ನಾಟಕ ಏಕೈಕ ಜಿಲ್ಲೆ ಮಂಗಳೂರು ಆಗಿದೆ. ಇನ್ನು, ಕರ್ನಾಟಕದ ರಾಜಧಾನಿ, ಐಟಿ ಹಬ್ ಬೆಂಗಳೂರು ಈ ಪಟ್ಟಿಯಲ್ಲಿ 58ನೇ ಸ್ಥಾನ ಪಡೆದುಕೊಂಡಿದೆ. ಪಟ್ಟಿಯಲ್ಲಿ ಮಹಾರಾಷ್ಟ್ರದ ಪುಣೆ, ನವ ಮುಂಬೈ ಮತ್ತು …

Read More »

ವಿಮಾನದಲ್ಲಿ ಬಾಲಕ ಅಸ್ವಸ್ಥ : ಟೇಕಾಫ್ ಆದ ಒಂದೇ ಗಂಟೆಯಲ್ಲಿ ಮತ್ತೆ ಬಜ್ಪೆಯಲ್ಲಿ ಇಳಿದ ಫ್ಲೈಟ್

ಮಂಗಳೂರು : ಬಜ್ಪೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಅಬುಧಾಬಿಗೆ ಹೊರಟ್ಟಿದ್ದ ಜೆಟ್ ಏರ್‍ವೇಸ್ ಫ್ಲೈಟ್ ಪ್ರಯಾಣ ಆರಂಭಿಸಿದ ಒಂದೇ ಗಂಟೆಯಲ್ಲಿ ಮತ್ತೆ ವಿಮಾನ ನಿಲ್ದಾಣಕ್ಕೆ ಬಂದ ಘಟನೆ ಸೋಮವಾರ ನಡೆದಿದೆ. ಪ್ರಯಾಣದ ವೇಳೆ ಬಾಲಕ ಅಸ್ವಸ್ಥಗೊಂಡ ಹಿನ್ನೆಲೆಯಲ್ಲಿ ಫ್ಲೈಟ್ ಮಂಗಳೂರು ವಿಮಾನ ನಿಲ್ದಾಣದಲ್ಲಿ ಮತ್ತೆ ಇಳಿದಿದೆ. ಬೆಳಗ್ಗೆ 4.30ಕ್ಕೆ ಈ ಫ್ಲೈಟ್ ಅಬುಧಾಬಿಗೆ ಪ್ರಯಾಣ ಬೆಳೆಸಿತ್ತು. ಈ ವೇಳೆ, ಬಾಲಕನೊಬ್ಬ ತೀವ್ರ ಅಸ್ವಸ್ಥಗೊಂಡಿದ್ದ. ಹೀಗಾಗಿ, ಪ್ಲೈಲಟ್ ವಿಮಾನವನ್ನು ಮಂಗಳೂರು ವಿಮಾನ …

Read More »

`ಈಗಲ್ಲ… 5 ವರ್ಷದ ಬಳಿಕವಷ್ಟೇ ಮದುವೆ ಯೋಚನೆ…’

ಹೈದರಾಬಾದ್ : ಸದ್ಯ ದಾಂಪತ್ಯ ಜೀವನಕ್ಕೆ ಕಾಲಿಡುವ ಯಾವ ಯೋಚನೆಯೂ ಇಲ್ಲ ಎಂದು ಒಲಿಂಪಿಕ್ಸ್ ನಲ್ಲಿ ಬೆಳ್ಳಿ ಪದಕ ಗೆದ್ದಿದ್ದ ಬಾಡ್ಮಿಂಟನ್ ತಾರೆ ಪಿ.ವಿ.ಸಿಂಧು ಸ್ಪಷ್ಟಪಡಿಸಿದ್ದಾರೆ. `ಸದ್ಯದ ವರೆಗೆ ಮದುವೆ ಯೋಚನೆ ಇಲ್ಲ. ನಾನು ನನ್ನ ಕ್ರೀಡಾ ಸಾಧನೆಯಲ್ಲಿ ಇನ್ನಷ್ಟು ಸಾಧನೆ ಮಾಡಬೇಕಾಗಿದೆ. ಹೀಗಾಗಿ, ಮದುವೆ ಯೋಚನೆ ಏನಿದ್ದರೂ ಐದು ವರ್ಷದ ನಂತರ’ ಎಂದು ಸಿಂಧು ಹೇಳಿದ್ದಾರೆ. ಅಲ್ಲದೆ, ಮುಂದಿನ ಒಲಿಂಪಿಕ್ಸ್ ನಲ್ಲಿ ಚಿನ್ನದ ಪದಕಕ್ಕೆ ಮುತ್ತಿಕ್ಕುವುದೇ ನನ್ನ ಗುರಿ …

Read More »

ಮೈಸೂರು ಹಾಸ್ಟೆಲ್‍ಗೆ ನುಗ್ಗಿ ಕಾಟ : ಬಂಟ್ವಾಳದಲ್ಲಿ ಆರೋಪಿ ಬಂಧನ

ಮಂಗಳೂರು : ಜುಲೈ 20 ರಂದು ಮೈಸೂರಿನ ದೇವರಾಜ ಪೊಲೀಸ್ ಠಾಣಾ ವ್ಯಾಪ್ತಿಯ ಕೆ.ಆರ್.ಆಸ್ಪತ್ರೆ ಆವರಣದಲ್ಲಿದ್ದ ವಿದ್ಯಾರ್ಥಿನಿಯರ ಹಾಸ್ಟೆಲ್‍ಗೆ ನುಗ್ಗಿ ಕಾಟ ಕೊಟ್ಟಿದ್ದ ಆರೋಪಿ ಕೊನೆಗೂ ಸೆರೆಯಾಗಿದ್ದಾನೆ. ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಆರೋಪಿ ಸೆರೆ ಸಿಕ್ಕಿದ್ದಾನೆ. ಬಂಧಿತ ಆರೋಪಿಯನ್ನು ಬಂಟ್ವಾಳ ತಾಲೂಕು ಮಣಿ ನಾಲ್ಕೂರು ಗ್ರಾಮದ ನಿವಾಸಿ ಮಹಮ್ಮದ್ ಅಲ್ತಾಫ್ ಎಂದು ಗುರುತಿಸಲಾಗಿದೆ. ಆರೋಪಿ ಜುಲೈ 20 ರಂದು ಮಧ್ಯರಾತ್ರಿ ಹಾಸ್ಟೆಲ್‍ಗೆ ನುಗ್ಗಿ ವಿದ್ಯಾರ್ಥಿನಿಯರಿಗೆ …

Read More »
error: Content is protected !!