Monday , February 18 2019
ಕೇಳ್ರಪ್ಪೋ ಕೇಳಿ
Home / News NOW (page 10)

News NOW

ಉಡುಪಿ ರೌಂಡ್ಸ್ : ಶನಿವಾರದ ಸುದ್ದಿ ಗುಚ್ಛ

ಅಧಿಕಾರಿ ಶಿಖಾ, ಸಚಿವ ಹೆಗಡೆ ವಿರುದ್ಧ ವಾಗ್ದಾಳಿ : ಶಾಲೆಗಳ ಕಳಪೆ ಫಲಿತಾಂಶ ಬಂದರೆ ಅನುದಾನ ಕಟ್ ಎಂಬ ಸರ್ಕಾರದ ಸುತ್ತೋಲೆ ವಿಚಾರದಲ್ಲಿ ಎಂಎಲ್‍ಸಿ ಭೋಜೇಗೌಡ ಐಎಎಸ್ ಅಧಿಕಾರಿಗಳ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಉಡುಪಿಯಲ್ಲಿ ಮಾತನಾಡಿದ ಅವರು ಸುತ್ತೋಲೆ ಹೊರಡಿಸುವ ಮೊದಲು ಜನಪ್ರತಿನಿಧಿಗಳ ಸಲಹೆ ಕೇಳಿ ಎಂದೂ ಐಎಎಸ್ ಅಧಿಕಾರಿ ಶಿಖಾ ವಿರುದ್ಧ ಭೋಜೇಗೌಡ ಆಕ್ರೋಶ ವ್ಯಕ್ತಪಡಿಸಿದರು. ಇನ್ನು, ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ವಿರುದ್ಧವೂ ವಾಗ್ದಾಳಿ ನಡೆಸಿದ …

Read More »

ಮುಂದುವರಿದ ಹಾಸ್ಟೆಲ್ ಹೊರಗುತ್ತಿಗೆ ನೌಕರರ ಪ್ರತಿಭಟನೆ : ತಿರುಗಿಯೂ ನೋಡದ ಸಮಾಜ ಕಲ್ಯಾಣ ಇಲಾಖೆ

ಬೆಂಗಳೂರು : ಸರ್ಕಾರದ ನಿಯಮದಿಂದ ಬೀದಿಪಾಲಾದ ಐನೂರಕ್ಕೂ ಹೆಚ್ಚು ಬಡ ಮಧ್ಯಮವರ್ಗದ ನಾನಾ ಜಿಲ್ಲೆಯ ಮಹಿಳೆಯರು ಫ್ರೀಡಂ ಪಾರ್ಕ್ ನಲ್ಲಿ ಅಹೋರಾತ್ರಿ ಧರಣಿ ನಡೆಸುತ್ತಿದ್ದಾರೆ. ಆದರೆ, ಇವರ ಪ್ರತಿಭಟನೆಗೆ ಸಮಾಜ ಇಲಾಖೆ ಕಿಂಚಿತ್ತೂ ಸ್ಪಂದಿಸಿಲ್ಲ. ಸರ್ಕಾರಿ ಹಾಸ್ಟೆಲ್ ಹೊರಗುತ್ತಿಗೆ ನೌಕರರನ್ನು ಏಕಾಏಕಿ ತೆಗೆದುಹಾಕುತ್ತಿದ್ದಾರೆ. ಇದರಿಂದ ಐದು ಸಾವಿರಕ್ಕೂ ಹೆಚ್ಚು ಬಡ ನೌಕರರು ಬೀದಿಪಾಲಾಗುತ್ತಿದ್ದಾರೆ. ಹಾಗಾಗಿ ಕೆಲಸದಿಂದ ತೆಗಿದು ಹಾಕುತ್ತಿರುವುದನ್ನು ನಿಲ್ಲಿಸಿ, ಜೊತೆಗೆ ನಿವೃತ್ತಿ ವಯಸ್ಸು ತಲುಪುವವರೆಗೆ ಸೇವಾ ಭದ್ರತೆ ನೀಡಬೇಕೆಂಬುದು …

Read More »

`ಬೆಂಗಳೂರು ಒನ್’ನಲ್ಲಿ ನೋಟು ಎಕ್ಸ್‍ಚೇಂಜ್…? : 410 ಕೋಟಿ ಹಗರಣದ ಆರೋಪ…

ಬೆಂಗಳೂರು : ಇದು ಬೆಂಗಳೂರಿನಲ್ಲಿ ನಡೆದಿದೆ ಎನ್ನಲಾದ ದೊಡ್ಡ ಹಗರಣದ ಆರೋಪ. ಇಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವ ಜಾರ್ಜ್ ವಿರುದ್ಧವೂ ಆರೋಪ ಕೇಳಿ ಬಂದಿದೆ. ಈ ಆರೋಪ ಮಾಡಿದವರು ಬೆಂಗಳೂರು ನಗರ ಬಿಜೆಪಿ ವಕ್ತಾರ ಎನ್‍ಆರ್ ರಮೇಶ್. ಇವತ್ತು ಸುದ್ದಿಗೋಷ್ಠಿ ನಡೆಸಿದ ರಮೇಶ್, ನೋಟ್ ಬ್ಯಾನ್ ಆದ ಬಳಿಕ `ಬೆಂಗಳೂರು ವನ್’ ಕಚೇರಿಯಲ್ಲಿ ಬೃಹತ್ ಮಟ್ಟದ ನೋಟು ಬದಲಾವಣೆ ಮಾಡಲಾಗಿದೆ ಎಂದು ದೂರಿದ್ದಾರೆ.2016ರ ನವೆಂಬರ್ 8 ರಂದು ದೇಶಾದ್ಯಂತ …

Read More »

ಬಿಬಿಎಂಪಿ ರೌಂಡ್ಸ್ : ಪಾಲಿಕೆ ಪ್ರಮುಖ ಸುದ್ದಿಗಳ ಒಂದು ನೋಟ

ಆಯುಕ್ತರಾಗಿ ಮಂಜುನಾಥ್ ಪ್ರಸಾದ್ ಅಧಿಕಾರ : ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಬಿಬಿಎಂಪಿಯಿಂದ ವರ್ಗಾವಣೆಯಾಗಿದ್ದ ಮಂಜುನಾಥ್ ಪ್ರಸಾದ್ ಮತ್ತೆ ಆಯುಕ್ತರ ಸ್ಥಾನಕ್ಕೆ ಮರಳಿದ್ದಾರೆ. ಎರಡನೇ ಬಾರಿಗೆ ಮಂಜುನಾಥ್ ಪ್ರಸಾದ್ ಬಿಬಿಎಂಪಿ ಆಯುಕ್ತರಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಇನ್ನು, ಮಂಜುನಾಥ್ ಪ್ರಸಾದ್ ಅವರ ವರ್ಗಾವಣೆಯಿಂದ ತೆರವಾಗಿದ್ದ ಸ್ಥಾನಕ್ಕೆ ಬಂದಿದ್ದ ಮಹೇಶ್ವರ್ ರಾವ್ ಕೃಷಿ ಇಲಾಖೆಯ ಕಾರ್ಯದರ್ಶಿಯಾಗಿ ವರ್ಗಾವಣೆಗೊಂಡಿದ್ದಾರೆ. ಇನ್ನು, ಬಿಬಿಎಂಪಿ ಕಮಿಷನರ್ ಆಗಿ ಮತ್ತೆ ಅಧಿಕಾರ ಸ್ವೀಕರಿಸಿದ ಮಂಜುನಾಥ್ ಪ್ರಸಾದ್ ಗೆ ಬಿಬಿಎಂಪಿ ಅಧಿಕಾರಿಗಳು …

Read More »

ಜಲಪಾತದಲ್ಲಿ ನೀರುಪಾಲಾಗಿದ್ದ ಯುವಕನ ಶವ ವಾರದ ಬಳಿಕ ಪತ್ತೆ

ಮಡಿಕೇರಿ : ಕೊಡಗು ಜಿಲ್ಲೆ ಸೋಮವಾರ ಪೇಟೆ ತಾಲೂಕಿನ ಮಲ್ಲಳ್ಳಿ ಜಲಪಾತದಲ್ಲಿ ಸೆಲ್ಫಿ ತೆಗೆಯುವ ವೇಳೆ ಕಾಲು ಜಾರಿ ಬಿದ್ದಿದ್ದ ಯುವಕನ ಶವ ಪತ್ತೆಯಾಗಿದೆ. ಮನೋಜ್ ಮೃತ ಯುವಕ. ಜೂನ್ 22ರಂದು ಜಲಪಾತಕ್ಕೆ ಮನೋಜ್ ಸ್ನೇಹಿತರೊಂದಿಗೆ ಬಂದಿದ್ದರು. ಈ ವೇಳೆ, ಜಲಪಾತದ ಸಮೀಪ ಸೆಲ್ಫಿ ತೆಗೆಯುವಾಗ ಆಯತಪ್ಪಿ ಇವರು ಬಿದ್ದಿದ್ದರು. ಅಂದಿನಿಂದ ಇಂದಿನ ತನಕ ಮನೋಜ್‍ಗಾಗಿ ಹುಡುಕಾಟ ನಡೆದಿತ್ತು. ಇದೀಗ ಒಂದು ವಾರದ ಬಳಿಕ ಜಲಪಾತದ 2 ಕಿ.ಮೀ. ದೂರದಲ್ಲಿ …

Read More »

ಮರಣರೂಪಿ ಮಳೆ… : ಕಾಂಪೌಂಡ್ ಗೋಡೆ ಕುಸಿದು ವಿದ್ಯಾರ್ಥಿನಿ ಸಾವು

ಉಡುಪಿ : ಕರಾವಳಿಯಲ್ಲಿ ಮಳೆ ಮರಣರೂಪಿಯಾಗ್ತಿದೆ. ಭೀಕರ ಮಳೆಯಿಂದಾಗಿ ದೇವಸ್ಥಾನದ ಆವರಣದ ಗೋಡೆ ಕುಸಿದು ವಿದ್ಯಾರ್ಥಿನಿಯೊಬ್ಬರು ಕೊನೆಯುಸಿರೆಳೆದ ದಾರುಣ ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ನಾವುಂದದಲ್ಲಿ ಈ ಘಟನೆ ನಡೆದಿದೆ. ಮಂಗಳೂರು ವಿಶ್ವವಿದ್ಯಾನಿಲಯದ ಎಂಎಸ್‍ಸಿ ವಿದ್ಯಾರ್ಥಿನಿ ಧನ್ಯಾ ಮೃತ ವಿದ್ಯಾರ್ಥಿನಿ. ಧನ್ಯಾನಾವುಂದ ನಿವಾಸಿಗಳಾದ ಚಂದ್ರಶೇಖರ್ ಶೆಟ್ಟಿ ಮತ್ತು ಹೇಮಾ ದಂಪತಿಯ ಮೂರನೇ ಪುತ್ರಿ. ಧನ್ಯಾ ಮನೆಯ ಬಳಿ ಇರುವ ನಂದಿಕೇಶ್ವರ (ಜಟ್ಟಿಗೇಶ್ವರ) ದೇವಸ್ಥಾನಕ್ಕೆ ಹೋಗಿದ್ದರು. ಈ ವೇಳೆ, ದೇವಸ್ಥಾನದ ಬಳಿ …

Read More »

ಛೀ… ಪಾಪಿಗಳು… ಸೇಡಿಗೆ ಕುದುರೆ ಕತ್ತು ಕೊಯ್ದ ಕಟುಕರು…!

ಚೆನ್ನೈ : ಮಾಲಿಕನ ಮೇಲಿನ ಸಿಟ್ಟಿನಿಂದ ಕುದುರೆಯ ಕತ್ತು ಕೊಯ್ದು ಮೂವರು ಕ್ರೌರ್ಯ ಮೆರೆದ ಘಟನೆ ತಮಿಳುನಾಡಿನಲ್ಲಿ ನಡೆದಿದೆ. ಪೊಲೀಸ್ ರೇಸ್​ನಲ್ಲಿದ್ದು ನಿವೃತ್ತಿಯಾದ ಮತ್ತು ಮರೀನಾ ಬೀಚ್​ನಲ್ಲಿ ಜನರಿಗೆ ಸವಾರಿ ಮಾಡಿಸುತ್ತಿದ್ದ 10 ವರ್ಷದ ಕುದುರೆಯ ಕತ್ತು ಕೊಯ್ಯಲಾಗಿದೆ. ಮೂವರು ಯುವಕರು ಈ ಕೃತ್ಯವೆಸಗಿದ್ದಾರೆ. ಈ ಮೂವರಲ್ಲಿ ಒಬ್ಬನ ವಿರುದ್ಧ ಕುದುರೆ ಮಾಲಿಕ ಪೊಲೀಸರಿಗೆ ಮಾಹಿತಿ ನೀಡಿದ್ದ ಎಂಬ ಸಿಟ್ಟಿನಲ್ಲಿ ಇವರು ಈ ಕೃತ್ಯವೆಸಗಿದ್ದಾರೆ ಎನ್ನಲಾಗಿದೆ. ಈ ಪ್ರಕರಣ ಸಂಬಂಧ …

Read More »

ವ್ಯಾಯಾಮದ ಪೋಸ್…, ಬಲ್ಬು ಕದ್ದು ಎಸ್ಕೇಪ್…!

ಕೊಯಮತ್ತೂರು : ಕೆಲವರು ಕದಿಯಲು ಏನೆಲ್ಲಾ ಪ್ಲ್ಯಾನ್ ಮಾಡ್ತಾರೆ ಅಂತ ಹೇಳೋದಕ್ಕೇ ಸಾಧ್ಯ ಇಲ್ಲ. ಇದು ಕೂಡಾ ಅಂತಹದ್ದೇ ಒಂದು ಘಟನೆ. ತಮಿಳುನಾಡಿನಲ್ಲಿ ಕೊಯಮತ್ತೂರಿನ ಅಂಗಡಿ ಮುಂದೆ ಹಾಕಿದ್ದ ಸಿಸಿ ಕ್ಯಾಮೆರಾದಲ್ಲಿ ಈ ದೃಶ್ಯವೊಂದು ಸೆರೆಯಾಗಿದೆ. ಚೇರನ್ ಮಾನಗರ್‍ನ ಅಂಗಡಿ ಮುಂದೆ ಬಂದು ವ್ಯಾಯಾಮ ಮಾಡ್ತಿದ್ದ ವ್ಯಕ್ತಿ ಯಾರೂ ಇಲ್ಲದ್ದನ್ನು ಗಮನಿಸಿ ಸಿಎಫ್‍ಎಲ್ ಬಲ್ಪ್ ಕದಿಯುತ್ತಿದ್ದ. ಈ ದೃಶ್ಯ ಅಲ್ಲೇ ಹಾಕಿದ್ದ ಸಿಸಿಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಈ ವೀಡಿಯೋ ಈಗ ವೈರಲ್ …

Read More »

ಬೈಕ್ ಸವಾರನ ಮೇಲೆ ಕಾಡಾನೆ ದಾಳಿ… : ಬೈಕ್ ಜಖಂ…

ಮಡಿಕೇರಿ : ಮಂಜಿನಗರಿಯಲ್ಲಿ ಕಾಡಾನೆಗಳ ಸಮಸ್ಯೆ ಜೋರಾಗಿದೆ. ಇಲ್ಲಿನ ಮಾಯಮುಡಿಯಲ್ಲಿ ಬೈಕ್ ಸವಾರನ ಮೇಲೆ ಕಾಡಾನೆ ದಾಳಿ ಮಾಡಿದೆ. ಇದರಿಂದ ಬೈಕ್ ಸವಾರ ಮಜೀದ್ ಎಂಬುವವರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಕೊಕ್ಕಲೆಮಾಡ ಮುತ್ತಣ್ಣ ಎಂಬುವವರ ತೋಟದಲ್ಲಿ ಈ ಘಟನೆ ನಡೆದಿದೆ. ಮಜೀದ್ ಅವರು ಗೋಣಿಕೊಪ್ಪದಿಂದ ಪೊನ್ನಪ್ಪಸಂತೆಗೆ ಹೋಗುತ್ತಿದ್ದಾಗ ಈ ಘಟನೆ ನಡೆದಿದ್ದು, ಆನೆ ದಾಳಿಗೆ ಬೈಕ್ ಜಖಂ ಆಗಿದೆ.

Read More »

ಆರನೇ ಫ್ಲೋರ್​ನಿಂದ ಬಿದ್ದ ಬಾಲಕಿ : ತಲೆದಿಂಬಿನ ಸಹಾಯದಿಂದ ರಕ್ಷಿಸಿದ ಯುವಕ…! : ಇಲ್ಲಿದೆ ವೀಡಿಯೋ

ಚೀಜಿಂಗ್ : ಇದು ಎದೆಯೇ ಧಗ್ ಎನ್ನುವಂತಹ ದೃಶ್ಯ… ಈ ಘಟನೆ ನಡೆದಿರೋದು ಬೀಜಿಂಗ್​ನಲ್ಲಿ. ಆರು ಏಳು ವರ್ಷದ ಹುಡುಗಿಯೊಬ್ಬಳು ತಮ್ಮ ಮನೆಯಿದ್ದ ಆರನೇ ಮಹಡಿಯಿಂದ ಕೆಳಗೆ ಬಿದ್ದಿದ್ದಳು. ಹೀಗೆ ಬಿದ್ದ ಬಾಲಕಿ ಕೆಳಗಿನ ಮನೆಯ ಬಾಲ್ಕನಿಯಲ್ಲಿ ಸಿಕ್ಕಿಬಿದ್ದಿದ್ದಳು. ಅದೃಷ್ಟವಶಾತ್ ಈ ಹುಡುಗಿಯನ್ನು ನೋಡಿದ್ದು ಕೆಳಗಿನ ಮನೆಯ ಯುವಕ. ಹೀಗಾಗಿ, ತಕ್ಷಣ ಫೆನ್ಸಿಂಗ್ ಮೂಲಕ ತಲೆದಿಂಬು ಅನ್ನು ಕೊಂಡು ಹೋಗಿ ಬಾಲಕಿಯನ್ನು ಹಿಡಿದಿಟ್ಟುಕೊಂಡರು. ನಂತರ ರಕ್ಷಣಾ ಪಡೆಗಳಿಗೆ ವಿಷಯ ತಿಳಿಸಲಾಯ್ತು. …

Read More »
error: Content is protected !!